ಸದಸ್ಯ:Saniyar708/ನನ್ನ ಪ್ರಯೋಗಪುಟ2
ಹಾಡುವಳ್ಳಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಪುರಾತನ ಜೈನ ಬಸದಿಗಳಲ್ಲೊಂದು.
ಆವರಣ
[ಬದಲಾಯಿಸಿ]ಸುಂದರ ಚಂದ್ರಕಾಂತ ಶಿಲೆಯು ಬಿಳಿವರ್ಣದಿಂದ ಕಂಗೊಳಿಸುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಬಿಂಬದ ಈ ಬಸದಿಯು ದೀರ್ಘ ಆಯತಾಕಾರದಲ್ಲಿ ಪೂರ್ವ ಪಶ್ಚಿಮವಾಗಿ ನಿರ್ಮಿತವಾಗಿದೆ. ಈ ಜಿನಬಿಂಬದ ಮೊಣಕಾಲಿಗಿಂತ ಕೆಳಗಿನ ಭಾಗವು ಮಣ್ಣಿನ ಕೊಳೆಯಿಂದ ಕೂಡಿರುವುದರಿಂದ ಈ ಬಿಂಬವು ಭಿನ್ನವಾಗಿರುವಂತೆ ಕಾಣುತ್ತದೆ. ಇದು ಸುಮಾರು ಮೂರು ಅಡಿ ಎತ್ತರ ಖಡ್ಗಾಸನ ಭಂಗಿಯಲ್ಲಿದೆ. ಈ ಜಿನಬಿಂಬಕ್ಕೆ ಪ್ರಭಾವಳಿ ಇಲ್ಲ. ಒಂದು ಸಾಧಾರಣ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಯಕ್ಷ ಯಕ್ಷಿಯರ ಮೂರ್ತಿಗಳೂ ಇಲ್ಲ. ಪಾಣಿಪೀಠದ ಮೇಲೆ ಚಂದ್ರ ಲಾಂಛನವಿದೆ.[೧]
ಗರ್ಭಗೃಹದ ವಿನ್ಯಾಸ
[ಬದಲಾಯಿಸಿ]ಈ ಮೂರ್ತಿ ಇರುವ ಗರ್ಭಗೃಹವನ್ನು ಮುರಕಲ್ಲುಗಳಿಂದ ಚೌಕಾರದಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದ ಪ್ರವೇಶ ದ್ವಾರಕ್ಕೆ ದ್ವಾರಪಾಲಕರ ಮೂರ್ತಿಗಳ ಅಲಂಕಾರಗಳಿಲ್ಲದೆ ಕೇವಲ ಒಂದು ಆಧುನಿಕ ಕಬ್ಬಿಣದ ಗೇಟನ್ನು ಹೊಂದಿದೆ. ಮೇಲ್ಗಡೆಯಲ್ಲಿ ಗೋಪುರದಂತಹ ಒಂದು ಚಿಕ್ಕ ರಚನೆ ಇದ್ದು ಸುತ್ತಮುತ್ತಲೂ ಕಾಡು ಹುಲ್ಲಿನಿಂದ ಆವೃತವಾಗಿದೆ. ಗರ್ಭಗೃಹದ ಸುತ್ತಲೂ ಒಳಗಿನ ಪ್ರದಕ್ಷಿಣಾ ಪಥವಿದೆ.
ಸದ್ಯದ ಸ್ಥಿತಿ
[ಬದಲಾಯಿಸಿ]ಶುಕನಾಸಿಯ ಅರ್ಧಭಾಗದವರೆಗೆ ಗರ್ಭಗೃಹವನ್ನು ಆವರಿಸಿರುವ ಮುರಕಲ್ಲಿನ ಗೋಡೆಯು ಪ್ರರ್ಥಾನ ಮಂಟಪದವರೆಗೆ ಮುಂದುವರೆದಿದೆ. ಅದಕ್ಕಿಂತ ಎದುರಿನ ಪ್ರರ್ಥಾನ ಮಂಟಪವು ಧೀರ್ಘ ಆಯತಾಕಾರವನ್ನು ಹೊಂದಿದೆ. ಇದಕ್ಕೆ ಗೋಡೆಗಳಿಲ್ಲ, ಅಸ್ತಿವಾರ ಮಾತ್ರ ಗೋಚರಿಸುತ್ತದೆ. ಇಡೀ ಬಸದಿಯನ್ನು ಆವರಿಸಿ ಇನ್ನೊಂದು ಪ್ರದಕ್ಷಿಣಾ ಪಥವಿದೆ. ಈ ಬಸದಿಯನ್ನು ನಿರ್ಮಿಸಿದವರಾರೆಂದು ತಿಳಿದುಬಂದಿರುವುದಿಲ್ಲ. ಇದು ವೀರಮಾಸ್ತಿ ಬಸದಿಯ ಪಕ್ಕದಲ್ಲಿದ್ದು ಹೊರನೋಟಕ್ಕೆ ಆಕರ್ಷಣೀಯವಾಗಿದೆ ಇವುಗಳೆರಡನ್ನು ಪ್ರತ್ಯೇಕಿಸುವ ಪ್ರಾಕಾರಗೋಡೆಗಳಿಲ್ಲ.