ವಿಷಯಕ್ಕೆ ಹೋಗು

ಸದಸ್ಯ:Sandrashanthis/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ನಾಪ್‍ಡೀಲ್

ಸ್ನಾಪ್‍ಡೀಲ್ ಗ್ರಾಹಕರಿಗೂ ಮತ್ತು ವ್ಯಾಪಾರಿಗಳಿಗೂ ನಡುವೆ ನೇರವಾಗಿ ನಡೆಯುವ ವ್ಯಾಪಾರ ವಹಿವಾಟು ತಾಣವಾಗಿದೆ.ಈ ತಾಣವು ಹೊಸ ದಿಲ್ಲಿಯಲ್ಲಿ ನೆಲೆ ಗೊಂಡಿದೆ.ಈ ಸಂಸ್ಥೆಯನ್ನು ಪ್ರಾರಂಭಿಸಿದವರು ಕುನಾಲ್ ಬಾಯಿ, ವಾರ್‍‍‍‍‍‍‍ಟೋನ್ ವಿಶ್ವವಿದ್ಯಾಲಯದ ಪದವಿದರ ಮತ್ತು ರೊಹಿತ್ ಬನ್ಸಾಲ್, ಐಐಟಿ ಡಿಲ್ಲಿಯ ವಿದ್ಯಾರ್ಥಿ.

Snapdeal-logo

ಇತಿಹಾಸ

[ಬದಲಾಯಿಸಿ]

ಸ್ನಾಪ್‍ಡೀಲ್ ಸಂಸ್ಥೆಯು ನಾಲ್ಕನೇ ಫೆಬ್ರವರಿ ೨೦೧೦ರಲ್ಲಿ ಅನುದಿನದ ಅವಶ್ಯಕತೆಗಳನ್ನು ಇಡೇರಿಸಲೇಂದು ಪ್ರಾರಂಭಿಸಿದರು. ಈ ಸಂಸ್ಥೆಯೂ ಸೆಪ್ಟೆಂಬರ್ ೨೦೧೧ರಲ್ಲಿ ಆನ್‍ಲೈನ್ ಮಾರುಕಟ್ಟೆಯಾಗಿ ವಿಸ್ತರಿಸಲಾಯಿತು. ಸ್ನಾಪ್‍ಡೀಲ್ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಗ್ರಾಹಕರಿಗೆ ೧ ಕೋಟಿಗೂ ಹೆಚ್ಚು ವಿವಿಧ ವಿಭಾಗಗಳಲ್ಲಿ ಉತ್ಪನ್ನಗಳನ್ನು ನೀಡುತ್ತದೆ. ೧ ಲಕ್ಷ ಮಾರಾಟಗಾರರನ್ನು ಹಡಗಿನ ಸರಕುಗಳಿಂದ ಅವಿಕೃತವಾಗಿ ೫ ಸಾವಿರ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟನ್ನು ಭಾರತದಲ್ಲಿ ನಡೆಸುತ್ತದೆ. ಮಾರ್ಚ್ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ನಟ ಅಮೀರ್ ಖಾನ್‍ರನ್ನು ತಮ್ಮ ಸಂಸ್ಥೆಯ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡು ತಮ್ಮ ಸಂಸ್ಥೆಯ ಪ್ರಚಾರಕ್ಕಾಗಿ ಉಪಯೋಗಿಸಿಕೊಂಡರು.

Kunal Bahl - SBI-Snapdeal MoU Signing Ceremony - Kolkata 2015-05-21 0657

ನಿಧಿಗಳು

[ಬದಲಾಯಿಸಿ]
  • ಮೊದಲನೇ ಸುತ್ತು:

ಸ್ನಾಪ್‍ಡೀಲ್ ಸಂಸ್ಥೆಯೂ ಜನವರಿ ೨೦೧೧ ರಲ್ಲಿ ೧.೨ ಕೋಟಿ ಡಾಲರ್‍ಗಳನ್ನು ನೆಕ್ಸಸ್ ವೆಂಚರ್ ಪಾರ್ಟನರ್ಸ್ ಮತ್ತು ಇಂಡೊ ಯು.ಎಸ್ ವೆಂಚರ್ ಪಾರ್ಟನರ್ಸ್ ರವರಿಂದ ಸಂಗ್ರಹಿಸಿದರು.

  • ಎರಡನೇ ಸುತ್ತು:

ಜುಲೈ ೨೦೧೧ ರಲ್ಲಿ ೪.೫ ಕೋಟಿ ಡಾಲರ್‍ಗಳನ್ನು ಬೆಸ್ಸೆಮೆರ್ ವೆಂಚರ್ ಪಾರ್ಟನರ್ಸ್ ರವರಿಂದ ಹಾಗೂ ನೆಕ್ಸಸ್ ವೆಂಚರ್ ಪಾರ್ಟನರ್ಸ್ ಮತ್ತು ಇಂಡೊ ಯು.ಎಸ್ ವೆಂಚರ್ ಪಾರ್ಟನರ್ಸ್ ರವರಿಂದ ಸಂಗ್ರಹಿಸಿದರು.

  • ಮೂರನೇ ಸುತ್ತು:

ಸ್ನಾಪ್‍ಡೀಲ್ ಸಂಸ್ಥೆಯೂ ಮತ್ತೆ ತನ್ನ ಮೂರನೇ ಸುತ್ತಿನಲ್ಲಿ ಸುಮಾರು ೫ ಕೋಟಿ ಡಾಲರ್‍ಗಳನ್ನು ಇ-ಬೇ ರವರಿಂದ ಮತ್ತು ಬೆಸ್ಸೆಮೆರ್ ವೆಂಚರ್ ಪಾರ್ಟನರ್ಸ್, ನೆಕ್ಸಸ್ ವೆಂಚರ್ ಪಾರ್ಟನರ್ಸ್ ಮತ್ತು ಇಂಡೊ ಯು.ಎಸ್ ವೆಂಚರ್ ಪಾರ್ಟನರ್ಸ್ ರವರಿಂದ ಸಂಗ್ರಹಿಸಿದರು.

  • ನಾಲ್ಕನೇ ಸುತ್ತು:

ಸ್ನಾಪ್‍ಡೀಲ್ ಸಂಸ್ಥೆಯೂ ನಾಲ್ಕನೇ ಸುತ್ತಿನಲ್ಲಿ ದೊಡ್ಡ ನಿಧಿಯಾದ ೧೩.೩ ಕೋಟಿ ಡಾಲರ್‍ಗಳನ್ನು ಫೆಬ್ರವರಿ ೨೦೧೪ ರಲ್ಲಿ ಇ-ಬೇ ರವರಿಂದ ಮತ್ತು ಬೆಸ್ಸೆಮೆರ್ ವೆಂಚರ್ ಪಾರ್ಟನರ್ಸ್, ಕಲಾರಿ ಕ್ಯಾಪಿಟಲ್, ಇಂಟೆಲ್ ಕ್ಯಾಪಿಟಲ್, ಸಾಮಾ ಕ್ಯಾಪಿಟಲ್ ನೆಕ್ಸಸ್ ವೆಂಚರ್ ಪಾರ್ಟನರ್ಸ್ ಮತ್ತು ಇಂಡೊ ಯು.ಎಸ್ ವೆಂಚರ್ ಪಾರ್ಟನರ್ಸ್ ರವರಿಂದ ಸಂಗ್ರಹಿಸಿದರು.

  • ಐದನೇ ಸುತ್ತು:

ಸ್ನಾಪ್‍ಡೀಲ್ ಸಂಸ್ಥೆಯೂ ಐದನೇ ಸುತ್ತಿನಲ್ಲಿ ದೊಡ್ಡ ನಿಧಿಯಾದ ೧೦.೫ ಕೋಟಿ ಡಾಲರ್‍ಗಳನ್ನು ಮೇ ೨೦೧೪ ರಲ್ಲಿ ಹೂಡಿಕೆದಾರರಾದ ಬ್ಲ್ಯಾಕ್ರಾಕ್, ಟೆಮಾಸೆಕ್ ಹೋಲ್ಡಿಂಗ್ಸ್[], ಪ್ರೇಮ್ಜಿ ಇನ್ವೆಸ್ಟ್ ಮತ್ತು ಇತರರೊಂದಿಗೆ ಸೇರಿ ಸಂಸ್ಥೆಯ ಬ೦ಡವಾಲವನ್ನು ೧,೦೦೦,೦೦೦,೦೦೦ ಡಾಲರ್‍ಗಳನ್ನು ಸಂಗ್ರಹಿಸಿದರು.

  • ಆರನೇ ಸುತ್ತು:

ಸ್ನಾಪ್‍ಡೀಲ್ ಸಂಸ್ಥೆಯೂ ಆರನೇ ಸುತ್ತಿನಲ್ಲಿ ದೊಡ್ಡ ನಿಧಿಯಾದ ೬೪.೭ ಕೋಟಿ ಡಾಲರ್‍ಗಳನ್ನು ಅಕ್ಟೋಬರ್ ೨೦೧೪ ರಲ್ಲಿ ಸಾಫ್ಟ್ ಬ್ಯಾಂಕ್ ರವರಿಂದ ಸಂಗ್ರಹಿಸಿತು. ಈ ಮೊತ್ತವನ್ನು ಹೂಡಿಕೆಯಾಗಿ ನೀಡಿದರಿಂದ ಸಾಫ್ಟ್ ಬ್ಯಾಂಕ್[] ರವರೇ ಸ್ನಾಪ್‍ಡೀಲ್ ಸಂಸ್ಥೆಯ ಪ್ರಧಾನ ಹೂಡಿಕೆದಾರರಾದರು.

  • ಏಳನೇ ಸುತ್ತು:

೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಆಲಿಬಾಬ ಗ್ರೂಪ್[], ಫಾಕ್ಸ್ಕಾನ್ ಮತ್ತು ಸಾಫ್ಟ್ ಬ್ಯಾಂಕ್ ರವರಿಂದ ೫೦.೫ ಕೋಟಿ ಡಾಲರ್‍ಗಳನ್ನು ಸಂಗ್ರಹಿಸಿತು.

  • ಹನ್ನೊಂದನೇ ಸುತ್ತು:

ಹನ್ನೊಂದನೇ ಸುತ್ತಿನಲ್ಲಿ ಈ ಜಗತ್ತಿನಲ್ಲೇ ದೊಡ್ಡದಾದ ಪಿಂಚಣಿ ನಿಧಿಗಳು, ಒಂಟಾರಿಯೊ ಶಿಕ್ಷಕರ ಪಿಂಚಣಿ ಯೋಜನೆ, ಸಿಂಗಪುರ್- ಆದಾರಿತ ಹೂಡಿಕೆದಾರರಾದ ಎನ್ಟಿಟಿ ಬ್ರದರ್ ಫಾರ್ಚೂನ್ ಅಪೆರಲ್, ಮುಂತಾದ ಹೂಡಿಕೆದಾರರಾದ ಸಂಘ ಸಂಸ್ಥೆಗಳನ್ನು ಒಳಗೊಂಡು ಆನ್‍ಲೈನ್ ಮಾರುಕಟ್ಟೆಯಲ್ಲಿ ಪ್ರಧಾನ ಮಾರುಕಟ್ಟೆ ಸಂಸ್ಥೆಯಾಗಿ ಸ್ನಾಪ್‍ಡೀಲ್ ಸಂಸ್ಥೆಯೂ ವಿಜೃಂಭಿಸಲು ಆರಂಭವಾಯಿತು. ಇತ್ತೀಚಿನ ಹೂಡಿಕೆ ಎಂದರೇ ಜಾಸ್ಪರ್ ಇನ್ಫೊಟೆಕ್ ಕಂಪನಿಯವರು ಮಾಡಿದ ೨೦ ಕೋಟಿ.

ಸ್ವಾದೀನಗಳು

[ಬದಲಾಯಿಸಿ]
  • ೨ ಜೂನ್ ೨೦೧೧ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಗ್ರಾಬ್‍ಆನ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಏಪ್ರಿಲ್ ೨೦೧೨ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಈಸ್ಪೋರ್ಟ್ಸ್‍ಬಯ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಮೇ ೨೦೧೩ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಶಾಪೋ.ಇನ್ ಅನ್ನು ಸ್ವಾದೀನ ಪಡೆಯಿತು.
  • ಏಪ್ರಿಲ್ ೨೦೧೪ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ದೋಸ್ಟಾನ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ದಿಸೆಂಬರ್ ೨೦೧೪ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ವಿಶ್‍ಪಿಕರ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಫೆಬ್ರವರಿ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಎಕ್ಸ್ಕ್ಲೂಸಿವ್‍ಲಿ.ಇನ್ ಅನ್ನು ಸ್ವಾದೀನ ಪಡೆಯಿತು.
  • ಮಾರ್ಚ್ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಗೋಜಾವಾಸ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಮಾರ್ಚ್ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಯುನಿಕಾಮರ್ಸ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಏಪ್ರಿಲ್ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ಫ್ರೀಚಾರ್ಜ್.ಕಾಂ ಅನ್ನು ಸ್ವಾದೀನ ಪಡೆಯಿತು.
  • ಸೆಪ್‍ಟೆಂಬರ್ ೨೦೧೫ ರಲ್ಲಿ ಸ್ನಾಪ್‍ಡೀಲ್ ಸಂಸ್ಥೆಯೂ ರೆಡೂಸ್ಡ್ ದಾಟಾ- ಜಾಹಿರಾತು ತಾಣವನ್ನು ಸ್ವಾದೀನ ಪಡೆಯಿತು.

ವಾದ-ವಿವಾದ

[ಬದಲಾಯಿಸಿ]
  • ಸ್ನಾಪ್‍ಡೀಲ್ ಸಂಸ್ಥೆಯೂ ನಟ ಅಮೀರ್ ಖಾನ್‍ ಅವರ ಹೇಳಿಕೆಯ ವಿರುದ್ದ ಠೀಕೆಯ ಸುರಿಮಳೆಯನ್ನು ಗಳಿಸಿತ್ತು.
  • ಸ್ನಾಪ್‍ಡೀಲ್ ಸಂಸ್ಥೆಯೂ ತಮ್ಮ ನಕಲಿ ಕೊಳುವಿಕೆಯ ಬಗ್ಗೆ ಅನೇಕ ವಾದ ವಿವಾದಗಳನ್ನು,ವಿಮರ್ಶೆಯನ್ನು ಎದುರಿಸಬೇಕಾಯಿತ್ತು.
  • ಮನುಷ್ಯ ಮೊಬೈಲ್ ಫೋನ್ಗೆ ಆದೇಶಿಸಿದರೆ,ಅವನಿಗೆ ಕಲ್ಲುಗಳನ್ನು ಮೂಟೆ ಪಂಟುಗಳಲ್ಲಿ ಕಳುಹಿಸುತಾರೆ.

ವಿಲೀನ

[ಬದಲಾಯಿಸಿ]

೨೦೧೬ ಇಸ್ವಿಯಲ್ಲಿ ಸ್ನಾಪ್ಡೀಲ್ ಸಂಸ್ಥೆಯೂ ಫಿಲ್ಪ್ಕಾರ್ಟ್ ಮತ್ತು ಆಮೆಜ಼ಾನ್ ಜೊತೆ ವಿಲೀನವಾಗುವವರೆಂಬ ವದಂತಿಯಿದೆ. ಆದರೇ ಆ ವಿಷಯವೂ ಇನ್ನೂ ಧೃಡೀಕೃತವಾಗಿಲ್ಲ.

ಪ್ರಶಸ್ತಿಗಳು ಮತ್ತು ಮಾನ್ಯತೆ

[ಬದಲಾಯಿಸಿ]
  • ಈ ವರ್ಷದ ಇ-ಚಿಲ್ಲರೇ ವ್ಯಾಪಾರಸ್ತರು ಮತ್ತು ಅತ್ಯುತ್ತಮ ಜಾಹಿರಾತುದಾರರು ಎಂಬ ಬಿರುದನ್ನು ೨೦೧೨ ರಲ್ಲಿ ಪಡೆದಿದ್ದಾರೆ.
  • ಭಾರತದ ಇ-ಚಿಲ್ಲರೇ ವ್ಯಾಪಾರರೆಂಬ ಬಿರುದನ್ನು ಉಪಸಂಸ್ಥೆ ಭಾರತ ಎಂಬುವವರಿಂದ ಫೆಬ್ರವರಿ ೨೦೧೨ ರಲ್ಲಿ ಪಡೆದಿದ್ದಾರೆ.
  • ೨೦೧೧ ರಲ್ಲಿ ರೆಡ್-ಹೆರ್ರಿಂಗ್ ಏಷ್ಯ ಎಂಬ ಬಿರುದನ್ನು ಸಾಧಿಸಿದ್ದಾರೆ.
  • ಇ-ವಾಣಿಜ್ಯ ತಾಣ ಎಂಬ ಬಿರುದನ್ನು ಜನವರಿ ೨೦೧೨ ರಲ್ಲಿ ಮುಂಬೈ ಪಟ್ಟಣದಲ್ಲಿ ಗೆದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Temasek_Holdings
  2. https://en.wikipedia.org/wiki/SoftBank_Group
  3. http://www.alibabagroup.com/en/about/overview