ಸದಸ್ಯ:Sandhya T Nayak/ನನ್ನ ಪ್ರಯೋಗಪುಟ
ಕಾರ್ನಾಡ್ ರೋಂಟ್‌ಗೇನ್
[ಬದಲಾಯಿಸಿ]ಎಕ್ಸ್ ರೇ ಎಂಬ ಪದದ ಪರಿಚಯವಿಲ್ಲದವರು ಈ ಕಾಲದಲ್ಲಿ ಯಾರೊಬ್ಬರು ಇರಲಾರರು. ಇದರಿಂದ ಪರೀಕ್ಷಗೆ ಒಳಗಾದವರು ವಿರಳವೆಂದೆ ಹೇಳಬಹುದು. ಆದರೆ ಎಕ್ಸ್ ರೇ ಕಿರಣಗಳ ಸ್ವರೂಪವೇನೆಂಬುದನ್ನು ಅರಿತವರು ಬಹಳಷ್ಟು ಮಂದಿ ಇದ್ದಂತ್ತಿಲ್ಲ. ನೂರು ವರ್ಷಗಳ ಹಿಂದೆ ವಿಜ್ಞಾನಿಗಳೆನೆಸಿದವರಿಗೆ ಅದರ ಅಸ್ತಿತ್ವ ಗೊತ್ತಿರಲಿಲ್ಲ. ವಿಧ್ಯುತ್- ಅಯಸ್ಕಾಂತಿಕ ಪ್ರಕಾಶದಿಂದ ಉದ್ಭವಿಸುವ ಈ ಕಿರಣಗಳನ್ನು ಕಂಡು ಹಿಡಿದು ಅಪಾರ ಗೌರವ ಮನ್ನಣೆಗೊಳಿಸಿದವರು ಜರ್ಮನಿಯ ಕಾರ್ನಾಡ್ ರೋಂಟ್‌ಗೇನ್ [ ೧೮೪೫-೧೯೨೩]. ಜಗತ್ತು ಸೃಷ್ಟಿಯಾದಾಗಿನಿಂದ ಪ್ರಕಟವಾದ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಇದೊಂದು ಅತ್ಯಂತ ಮಹತ್ವದ ಶೋಧನೆಯಾಗಿದೆ. ವೈದ್ಯರು ಈಗ ರೋಗ ನಿದಾನಕ್ಕಾಗಿ ಬಳಸುವ ಸಾಧನ ಸಲಕರಣೆಗಳಲ್ಲಿ ಶೇಕಡ ೫೦ ಕ್ಕಿಂತ ಹೆಚ್ಚು ಎಕ್ಸ್ ರೇ ಗೆ ಸಂಭAದಿಸಿದ ಸಲಕರಣೆಯಿಂದಾಗುತ್ತದೆ. ವೈಜ್ಞಾನಿಕ ಹಾಗೂ ಕೈಗಾರಿಕ ವಲಯಗಳಲ್ಲು ಅದರ ಪಾತ್ರ ಹಿರಿದು.
ಹುಟ್ಟು ಮತ್ತು ಬಾಲ್ಯ
[ಬದಲಾಯಿಸಿ]ಕಾರ್ನಾಡ್ ರೋಂಟ್‌ಗೇನ್ ಜನಿಸಿದ್ದು ರ‍್ಹೆöÊನ್ ಪ್ರಾಂತ್ಯದ ಲೆನೆಪ್ ಎಂಬ ಹಳ್ಳಿಯಲ್ಲಿ [೧೮೪೫]. ತಂದೆ ಜವಳಿ ವ್ಯಾಪರಸ್ಥ. ಕಾರಣಾಂತರದಿAದ ಅವನ ಕುಟುಂಬದವರು ನೆರೆಯ ಹಾಲೆಂಡ್ ದೇಶಕ್ಕೆ ವಲಸೆ ಹೋಗಬೇಕಾಯಿತು. ಬಾಲ್ಯದ ದಿನಗಳಲ್ಲಿ ಕಾರ್ನಾಡ್ ಸ್ವಲ್ಪ ಪುಂಡಾಟಿಕೆಯವನೆAಬ ಅಭಿಪ್ರಾಯ ಮೂಡಿಸಿದ್ದ. ಕೆಲವು ಅಹಿತಕರ ಘಟನೆಗಳಿಗೆ ಕಾರಣನಾಗಿ ಅವನನ್ನು ಪ್ರೌಢಶಾಲೆಯಿಂದ ವಜ ಮಾಡಿದ್ದರು. ಅವನಿದ್ದ ಊರಿನ ಯುಟ್ರೆಕ್ ವಿಶ್ವ ವಿದ್ಯಾಲಯದವರು ಅವನಿಗೆ ಪ್ರವೇಶವನ್ನು ನಿರಾಕರಿಸಿದ್ದರು. ಅದರಿಂದ ಸ್ವಿಟ್ಸರ್‌ಲೇಂಡಿನ ಜೂರಿಕ್ ವಿಶ್ವ ವಿದ್ಯಾಲಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಬೇಕಾಯಿತು. ಗಣಿತ ಮತ್ತು ಭೌತ ಶಾಸ್ತçಗಳು ಕಾರ್ನಾಡ್ ಪದವಿಗಾಗಿ ಆರಿಸಿಕೊಂಡ ವಿಷಯಗಳು. ಅನಿಲಗಳ ವಿಷಯದಲ್ಲಿ ಕಾರ್ನಾಡ್ ತಯಾರಿಸಿದ್ದ ಪ್ರೌಢ ಪ್ರಭಂದಕ್ಕೆ ಡಾಕ್ಟರೇಟ್ ದೊರೆಯಿತು.
ಜರ್ಮನಿಯಲ್ಲಿ ಪ್ರಯೋಗಗಳು
[ಬದಲಾಯಿಸಿ]ನಂತರ ಜರ್ಮನಿಗೆ ಹಿಂತಿರುಗಿ ವೂಜ್‌ಬರ್ಗ್ ವಿಶ್ವ ವಿದ್ಯಾಲಯದಲ್ಲಿ ಬೋಧಕ/ ಸಂಶೋಧಕರಾಗಿ ಕಾರ್ಯಪ್ರವತ್ರರಾದರು. ಹಲವು ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಒಳ್ಳೆಯ ಪ್ರತಿಭಾವಂತನೆAದು ಹೆಸರು ಗಳಿಸಿದರು. ಇನ್ನು ಕೆಲವೇ ವರ್ಷಗಳಲ್ಲಿ ಪ್ರಾಧ್ಯಪಕ ಹುದ್ದೆಯು ಅವರದಾಯಿತು. ಅವರ ವಿದ್ವತ್ತನರಿತ ಹಲವಾರು ವಿಶ್ವ ವಿದ್ಯಾಲಯದಿಂದ ಪ್ರಾಧ್ಯಪಕ ಸ್ಥಾನವನ್ನು ಅಲಂಕರಿಸಲು ಆಹ್ವಾನಗಳು ಬರುತ್ತಿದ್ದವು. ಅವಗಳಲ್ಲಿ ಹಿಂದೆ ಅವರನ್ನು ವಿದ್ಯಾರ್ಥಿಯನ್ನಾಗಿ ಸೇರಿಸಿಕೊಳ್ಳಲು ನಿರಾಕರಿಸಿದ್ದ ಯೂರ್ಟಿಕ್ ವಿಶ್ವ ವಿದ್ಯಾಲಯದಿಂದಿಲೂ ಬೇಡಿಕೆ ಬಂದಿತ್ತೆAದರೆ ರೋಂಟ್‌ಗೇನ್‌ಗೆ ಆಗಿದ್ದ ಸ್ಥಾನಮಾನಗಳ ಅರಿವಾಗಬಹುದು. ಆದರೆ ವೂಜ್‌ಬರ್ಗ್ನಲ್ಲಿ ಹಿತಕರ ಪರಿಸರ ಮತ್ತು ಸೌಕರ್ಯಗಳು ಇದ್ದುದ್ದರಿಂದ ಅವರು ಅಲ್ಲೆ ಮುಂದುವರೆದರು. ಒಂದು ಸಲ ರೋಂಟ್‌ಗೇನ್- ೮ ನವೇಂಬರ್ ೧೮೯೫ ರ ವಿಲಿಯಮ್ ಕ್ರೂಕ್‌ನ ನಿರ್ವಾತ ಕೊಳವೆ ಮೂ¯ಕ ವಿಧ್ಯತ್ ಪ್ರವಾಹವನ್ನು ಹರಿಸುವ ಪ್ರಯೋಗದಲ್ಲಿ ನಿರತರಾಗಿದ್ದರು. ಪ್ರಯೋಗ ಕತ್ತಲಲ್ಲಿ ನಡೆಯಬೇಕಾದುದ್ದರಿಂದ ಬಾಗಿಲು ಕಿಟಕಿಯನ್ನು ಮುಚ್ಚಿದರು. ಕಿಟಕಿಗೆ ಕಪ್ಪು ಪರದೆಯನ್ನು ನೇತು ಹಾಕಿದ್ದರು. ಕಿಟಕಿಯಲ್ಲಿ ವಿಧ್ಯುತ್ ಹರಿಯಲಾರಂಬಿಸಿದಾಕ್ಷಣ ಸುಮಾರು ಎರಡು ಮೀಟರ್ ದೂರದಲ್ಲಿ ಕಿಟಕಿಗೆ ನೇತು ಹಾಕಿದ್ದ ಪರದೇ ಪ್ರಕಾಶಮಾನವಾಗಿ ಬೆಳಗಲಾರಂಭಿಸಿತು. ವಿಧ್ಯುತ್ ಹರಿವನ್ನು ಸ್ಥಗಿತಗೊಳಿಸಿದರೆ ಪರದೆಯ ಹೊಳಪು ಸಹಾ ಮಾಯಾವಾಗುತ್ತಿತ್ತು. ಇನ್ನಾವುದೊ ಒಂದು ಪ್ರಯೋಗಾರ್ಥವಾಗಿ ಆ ಪರದೆಗೆ ಬೇರಿಯಂ, ಪ್ಲಾಟಿನೊ- ಸಯನೈಡ್‌ನ್ನು ಹಿಂದೆ ಲೇಪಿಸಲಾಗಿತ್ತು. ಯಾವುದೋ ಅಗೋಚರ ಕಿರಣಗಳು ಪರದೆಗೆ ಲೇಪಿಸಿದ್ದ ಬೇರಿಯಂನ್ನು ತಲುಪಿದಾಗ ಅವು ಪ್ರತಿಫಲವಾಗಿ ಹೊಳಪು ಕಾಣಿಸಿಕೊಳ್ಳುತ್ತದೆಂಬುದು ಅವರ ಅಂದಾಜಾಯಿತು. ಅವು ಪ್ರತಿಫಲಿತವಾಗಿ ಹೊಳಪು ಕಾಣಿಸಿಕೊಳ್ಳುತೆ ಎಂಬುದು ಅವರ ಅಂದಾಜಾಯಿತು. ಕೊಳವೆ ಮತ್ತು ಕಿಟಕಿಯ ಪರದೆಯ ನಡುವೆ ದಪ್ಪ ಗಾತ್ರದ ಮರದ ಹಲಗೆ ಪುಸ್ತಕ ಇತ್ಯಾದಿಗಳನ್ನು ಅಡ್ಡಲಾಗಿ ಇರಿಸಿ ವಿಧ್ಯುತ್ ಹಾಯಿಸಿದಾಗಲೂ ಪರದೆಯಲ್ಲಿ ಹೊಳಪು ಪ್ರತಿಫಲಿತವಾಗುದನ್ನು ತಡೆಯಲಾಗಲಿಲ್ಲ. ಆಶ್ಚರ್ಯದಿಂದ ಭಾವವೇಶಕ್ಕೊಳಗಾದ ರೋಂಟ್‌ಗೇನ್ ತಮ್ಮ ಪತ್ನಿಯನ್ನು ಕರೆದು ವಿಸ್ಮಯವನ್ನು ಪ್ರದರ್ಶಿಸಿದಲ್ಲದೇ, ಆಕೆಯ ಹ್ತವನ್ನು ಅಡ್ಡಲಾಗಿಟ್ಟು ಪ್ರಯೋಗ ನಡೆಸಿದಾಗ, ಹಸ್ತ ಮತ್ತು ಬೆರಳಿನ ಮೂಳೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಮೃದುವಾದ ಮಾಂಸಖAಡದ ಭಾಗಗಳು ಗೋಚರಿಸುತ್ತಿರಲಿಲ್ಲ. ತಮಗರಿವಿಲ್ಲದೆ, ಪ್ರಕಟವಾದ ಈ ಹೊಸ ಶೋಧನೆಯಿಂದ ಮುಂದಾಗಬಹುದಾದ ಅಪಾರ ಸಾಧ್ಯತೆಗಳು ಅವರ ಸ್ಮೃತಿ ಪಟಲದಲ್ಲಿ ಹಾಯ್ದು ಹೋದವು. ದೀಪವನ್ನು ಉಜ್ಜಿದಾಗ ಪ್ರಕಟವಾಗುತ್ತಿದ್ದ ಅಲ್ಲಾವುದ್ದೀನ್‌ನ ಮಾಯಾಲೋಕವೇ ಅವರ ಮುಂದೆ ತೆರೆದುಕೊಂಡAತಾಯಿತು. ಆಕಸ್ಮಿಕವಾಗಿ ತಮಗೆ ಕಂಡುಬAದ ಈ ಅಗೋಚರ ರಶ್ಮಿಗಳ ಸ್ವಭಾವದ ಪರಿಚಯವಾಗದಿದ್ದರಿಂದ ಅವುಗಳಿಗೆ ‘ಎಕ್ಸ್ ಕಿರಣ’ ಗಳೆಂದು ನಾಮಕರಣ ಮಾಡಿದರು. ಮುಂದೆ ಒಂದೇ ತಿಂಗಳಲ್ಲಿ [೨೩ ಜನವರಿ ೧೮೯೬] ತಮ್ಮ ವಿಸ್ಮಯಕಾರಿ ಶೋಧನೆಯ ವಿವರಗಳನ್ನು ವಿಜ್ಞಾನಿಗಳ ಸಮ್ಮೇಳನವೊಂದರಲ್ಲಿ ವಿವರಿಸಿದಾಗ, ಅವರೆಲ್ಲ ಅತ್ಯಾಶ್ಚರ್ಯಪಟ್ಟು ಹರ್ಷೋದ್ಗಾರ ಮಾಡಿದರು. ಜರ್ಮನಿಯಲ್ಲಿ ಎಕ್ಸ್ ರೇ ಸಂಶೋಧನೆ ಪ್ರಕಟವಾದ ಒಂದೇ ತಿಂಗಳಲ್ಲಿ ಇಂಗ್ಲಾö್ಯAಡ್, ಅಮೇರಿಕಗಳಲ್ಲಿ ಅವುಗಳ ವಿಷಯ ಪ್ರಚಾರಕ್ಕೆ ಬಂದವು. ಎಕ್ಸ್ ರೇ ಗಳಿಗೆ ಅಪಾರದರ್ಶಕ ಬೇರಿಯಂ ನಂತಹ ಸಾಮಾಗ್ರಿಗಳನ್ನು ಮಾರ್ನೆಲಯಾಗಿ ಬಳಿಸಿಕೊಂಡು ಇಡೀ ಜೀರ್ಣಾಂಗ ಮಂಡಲ, ಮೂತ್ರಾಂಗಮAಡಲ, ಪಿತ್ತನಾಳ, ಪಿತ್ತಕೋಶ ಮುಂತಾದ ಅವಯವಗಳೊಳಗೆ ಮುಂತಾದ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯಾವಾಯಿತು. ಮಾನವ ಶರೀರದಲ್ಲಿ ಎಕ್ಸ್ ರೇ ಗಳು ಎಟುಕಲಾದ ತಾಣಗಳೆ ಇಲ್ಲದಂತಾಯಿತು. ಕೈಗಾರಿಕ ಕ್ಷೇತ್ರದಲ್ಲಿ ಅದರ ಬಳಕೆ ಗಣನೆಗೆ ನಿಲುಕಲಾರದಷ್ಟು ಸಾಧ್ಯೆಗಳನ್ನು ಅನಾವರಣಗೊಳಿಸಿತ್ತು. ಇತೀಚಿನ ವೈಜ್ಞಾನಿಕ ಕೊಡುಗೆಗಳಾದ ಸಿ. ಓ ಸ್ಕಾö್ಯನರ್, ಅಲ್ಟಾçಸೌಂಡ್ ನಂತಹ ಉಪಕರಣಗಳ ಆವಿಷ್ಕಾರಕ್ಕೆ ಎಕ್ಸ್ ರೇ ತತ್ವವೇ ಮೂಲಧಾರ. ಪ್ರಪಂಚದ ಹಲವು ಕಡೆಗಳಿಂದ ಗೌರವ ಬಹುಮಾನಗಳು ಅವರಿಗೆ ದೊರಕಿದ್ದರು ಅವರೊಬ್ಬ ಸಾಮಾನ್ಯರಂತೆ ಜೀವನ ನಡೆಸಿದರು. ಅಂತಿಮ ದಿನಗಳಲ್ಲಿ ಅವರು ಆರ್ಥಿಕವಾಗಿ ದುರ್ಬಲಗೊಂಡು ಜೀವನ ನಡೆಸುವುದೇ ಕಷ್ಠಕರವಾಗುತ್ತಂತೆ.
ನಿಧನ
[ಬದಲಾಯಿಸಿ]ಎಕ್ಸ್ ರೇ ವಿಕಿರಣಗಳಿಂದುAಟಾಗುವ ಅಪಾಯಗಳ ಬಗೆಗೆ ಹೆಚ್ಚಿನ ಅರಿವಿಲ್ಲದ ಮೊದಲ ವರ್ಷಗಳಲ್ಲಿ ಬಹಳ ಸಮಯ ಎಕ್ಸ್ ರೇ ಗಳ ಸಂಶೋದನೆಗಳಲ್ಲಿ ತೊಡಗೊರುತ್ತಿದ್ದ ಕಾರ್ನಾಡ್ ರೋಂಟ್‌ಗೇನ್ ವಿಕಿರಣದ ದುಷ್ಪರಿಣಾಮಗಳಲ್ಲಿ ಒಂದಾದ ಲ್ಯುಕೇಮಿಯದಿಂದ ನರಳಿ ತನ್ನ ೭೮ನೇ ವರ್ಷದಲ್ಲಿ [೧೯೨೩] ಅಸುನೀಗಿದರು.