ಸದಸ್ಯ:Samsheera 97/sandbox
ಈ ಮರದ ತೌರೂರು ದಕ್ಷಿಣ ಅಮೇರಿಕ. ಈ ಹಣ್ಣಿನ ಮರವನ್ನು ಕ್ರಿ.ಶ.೧೬೨೬ಕ್ಕೆ ಮೊದಲೆ ಭಾರತಕ್ಕೆ ಪೋರ್ಚುಗೀಸರು ತಂದರೆಂದು ತಿಳಿದು ಬರುತ್ತದೆ. ಜನಪ್ರಿಯವಾದ ಫಲವೃಕ್ಷವನ್ನು ರಾಜ್ಯದಲ್ಲೆಲ್ಲಾ ಬೆಳೆಯಲಾಗುತ್ತದೆ. ಪಪ್ಪಾಯ ಸದಾ ಹಸಿರಾಗಿರುವ ಒಂದು ಸಣ್ಣಮರ. ಈ ಮರವು ಹೆಣ್ಣು, ಗಂಡು ಮತ್ತು ದ್ವಿಲಿಂಗಿ ಎಂಬ ಮೂರು ಬಗೆಯ ಹೂಗಳನ್ನು ಬಿಡುತ್ತದೆ.ಪರಂಗಿಯಲ್ಲಿ ಹಲವಾರು ತಳಿಗಳಿವೆ.ಅವುಗಳಲ್ಲಿ ವಾಷಿಂಗ್ ಟನ್, ಹನಿಡ್ಯೂ ಅಥವಾ ಕೂರ್ಗ್ ಹನಿಡ್ಯೂ ಮುಖ್ಯವಾದವುಗಳು.
ಹವಾಗುಣ
[ಬದಲಾಯಿಸಿ]ಇದು ಶುಷ್ಕ ವಾತವರಣ ಮತ್ತು ಹೆಚ್ಚು ಉಷ್ಣತೆಯಲ್ಲಿ ಚೆನ್ನಾಗಿ ಬೆಳೆಯಬಲ್ಲದು. ಮಣ್ಣು ಇದನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮದ್ಯಮ ಕಪ್ಪು ಮಣ್ಣು ಮತ್ತು ಕೆಂಪು ಗೋಡು ಮಣ್ಣು . ಈ ಬೆಳೆಗೆ ಸೂಕ್ತ.
ಉಪಯೋಗಳು
[ಬದಲಾಯಿಸಿ]೧. ಪರಂಗಿಯ ಎಲೆಯನ್ನು ಹೆಂಚಿನ ಮೇಲೆ ಅಥವಾ ಕೆಂಡದ ಮೇಲೆ ಬಾಡಿಸಿ ಬಾವು ಅಥವಾ ನೋವಿರುವ ಕಡೆ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ೨. ಪರಂಗಿಕಾಯಿಯ ಹಾಲನ್ನು ಹಚ್ಚುವುದರಿಂದ ನವೆ,ಕಜ್ಜಿ, ಮತ್ತು ಹುಳುಕಡ್ದಿ ಗುಣವಾಗುತ್ತದೆ.