ಸದಸ್ಯ:Sajjedevaraju/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಮಕೂರು ವಿಶ್ವವಿದ್ಯಾನಿಲಯ[೧][೨]

ತುಮಕೂರು ವಿಶ್ವವಿದ್ಯಾನಿಲಯ 2004ರಲ್ಲಿ ಸ್ಥಾಪನೆಯಾಗಿ ದೇಶದ ಅತ್ಯಂತ ಕಿರಿಯ ವಿಶ್ವವಿದ್ಯಾನಿಲಯಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆಯಲ್ಲದೇ ರಾಷ್ಟ್ರಮಟ್ಟದ ಹೆಸರಾಂತ ಉನ್ನತ ಶಿಕ್ಷಣ ಕಲಿಕಾ ಸಂಸ್ಥೆಗಳ ಜೊತೆಗೆ ಗುರುತಿಸಿಕೊಂಡಿದೆ. ಇದೊಂದು ರಾಜ್ಯ ವಿಶ್ವವಿದ್ಯಾನಿಲಯವಾಗಿದ್ದು ಗ್ರಾಮೀಣ ಹಿನ್ನೆಲೆಯಿಂದಲೇ ಬರುವ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯವನ್ನು ಪೂರೈಸುವುದಕ್ಕಾಗಿ ಸ್ಥಾಪಿತವಾಗಿದೆ.

ಪ್ರಾರಂಭ[ಬದಲಾಯಿಸಿ]

ಆರಂಭವಾದಾಗಿನಿಂದಲೂ ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ಸಾಧನೆಗಳಲ್ಲಿ ಅಸಾಧಾರಣ ಬೆಳವಣಿಗೆಯನ್ನು ಕಾಣುತ್ತಲೇ ಬಂದಿದೆ. ಹದಿಮೂರು ವರ್ಷಗಳ ಕಡಿಮೆ ಅವಧಿಯಲ್ಲೇ ಯುಜಿಸಿ ಕಾಯ್ದೆ 1956ರ 12 (ಬಿ) ಹಾಗೂ ನ್ಯಾಕ್ ಮಾನ್ಯತೆಯಲ್ಲಿ ‘ಬಿ’ ಶ್ರೇಣಿಯನ್ನು ಪಡೆಯುವುದರ ಜೊತೆಗೆ ಯುಜಿಸಿಯಿಂದ ರಾಷ್ಟ್ರೀಯ ಉತ್ಕøಷ್ಟತಾ ಸಂಸ್ಥೆಯಾಗಿ ಗುರುತಿಸಿಕೊಳ್ಳುವುದರಲ್ಲೂ ಯಶಸ್ವಿಯಾಗಿದೆ.

ಉನ್ನತ ಶಿಕ್ಷಣ[ಬದಲಾಯಿಸಿ]

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಈಚೆಗೆ ಬಿಡುಗಡೆ ಮಾಡಿರುವ ವಿಶ್ವವಿದ್ಯಾನಿಲಯಗಳ ಮೌಲ್ಯಾಂಕನ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು 3-ಸ್ಟಾರ್ ಶ್ರೇಣಿಯನ್ನು ಪಡೆದಿದ್ದು, ಉತ್ತಮ ಗುಣಮಟ್ಟದ ವಿಶ್ವವಿದ್ಯಾನಿಲಯ ಎಂಬ ಮಾನ್ಯತೆ ಪಡೆದಿದೆ. ಜ್ಞಾನ ಸೃಷ್ಟಿ, ಜ್ಞಾನ ಪ್ರಸರಣೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆ ಎಂಬ ಮೂರು ಸ್ಥೂಲ ವರ್ಗಗಗಳಲ್ಲಿ, ಸಂಶೋಧನೆ, ನಾವೀನ್ಯತೆ, ಬೋಧನೆ ಮತ್ತು ಉದ್ಯೋಗಾವಕಾಶ, ಮೂಲಸೌಕರ್ಯ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪರಿಣಾಮ ಎಂಬ ಐದು ಕ್ಷೇತ್ರಗಳಲ್ಲಿ ವಿಶ್ವವಿದ್ಯಾನಿಲಯದ ಸಾಧನೆಗಳನ್ನು ಪರಿಗಣಿಸಿ ಈ ಮೌಲ್ಯಾಂಕನ ಮಾಡಲಾಗಿದೆ.

ಸ್ನಾತಕೋತ್ತರ ಅಧ್ಯಯನ[ಬದಲಾಯಿಸಿ]

ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯಗಳಲ್ಲಿನ ಹದಿನೇಳು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗಗಳು;http://www.uni-mysore.ac.in/

ಘಟಕ[ಬದಲಾಯಿಸಿ]

ಎರಡು ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜುಗಳು; ಹಾಗೂ ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದ ಎಂಬತ್ತಾರಕ್ಕೂ ಹೆಚ್ಚಿನ ಕಾಲೇಜುಗಳು ಸೇರಿ ಸಮಸ್ತ ತುಮಕೂರು ವಿಶ್ವವಿದ್ಯಾನಿಲಯವನ್ನು ರೂಪಿಸಿವೆ.

ಅಧ್ಯಾಪಕ ವರ್ಗ[ಬದಲಾಯಿಸಿ]

ಉನ್ನತ ಗುಣಮಟ್ಟದ ಅಧ್ಯಾಪಕ ವರ್ಗ ವಿದ್ವತ್ ಪರಿಶೀಲಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಹಾಗೂ ಇತರೆ ಮಾಧ್ಯಮಗಳಲ್ಲಿ ನಿಯತವಾಗಿ ವೈಜ್ಞಾನಿಕ ಮತ್ತು ಸಂಶೋಧನ ಪ್ರಬಂಧಗಳನ್ನು ಪ್ರಕಟಿಸುತ್ತಿರುವುದರ ಜೊತೆಗೆ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಾಧನೆ ಹಿಗ್ಗುತ್ತಲೇ ಇರುವುದಕ್ಕೆ ನಿರಂತರ ಸಾಕ್ಷಿಯಾಗಿದೆ.

ಸೂಕ್ತ ಸ್ಥಳ[ಬದಲಾಯಿಸಿ]

ಒಟ್ಟಾರೆಯಾಗಿ ನಿಮ್ಮ ಉನ್ನತ ಶಿಕ್ಷಣದ ಎರಡು ವರ್ಷಗಳಿಗೆ ತುಮಕೂರು ವಿಶ್ವವಿದ್ಯಾನಿಲಯ ಸೂಕ್ತ ಸ್ಥಳವಾಗಿದೆ.

  1. ಎಲ್ಲ ನಿಕಾಯಗಳಲ್ಲೂ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡುತ್ತಿದೆ.[೩]
    1. ವಿಶ್ವವಿದ್ಯಾನಿಲಯದ ಸಂಶೋಧನ ಹಿರಿಮೆಯಲ್ಲಿ 62 ಸಂಶೋಧನ ಕಾರ್ಯಯೋಜನೆಗಳಿದ್ದು ಇವು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಇದೆ.
      1. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‍ಟಿ), ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನ ಮಂಡಳಿ (ಎಸ್‍ಇಆರ್‍ಬಿ), ಯುಜಿಸಿ, ಐಸಿಎಸ್‍ಎಸ್‍ಆರ್, ಐಸಿಎಚ್‍ಆರ್,
        1. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ (ವಿಜಿಎಸ್‍ಟಿ), ಮತ್ತು ಬ್ರಿಟಿಷ್ ಕೌನ್ಸಿಲ್ ಮೊದಲಾದ ಏಜನ್ಸಿಗಳ ಆರ್ಥಿಕ ನೆರವು ಪಡೆದಿವೆ.
  • ವಿಶ್ವವಿದ್ಯಾನಿಲಯದ ಪ್ರಕಟಣಾ ವಿಭಾಗವಾದ ಪ್ರಸಾರಾಂಗವಿದೆ.
  • ಇದುವರೆಗೆ ಅನೇಕ ಸಂಶೋಧನಾಧಾರಿತ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ
  • ವಿಶ್ವವಿದ್ಯಾನಿಲಯದ ಸುದ್ದಿಪತ್ರಿಕೆ ಹಾಗೂ ಮಾನವಿಕ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಗ್ಮಟ
  • ಕನ್ನಡ ಸಾಂಸ್ಕøತಿಕ ಅಧ್ಯಯನಕ್ಕೆ ಸಂಬಂಧಿಸಿದ ಲೋಕಜ್ಞಾನ ವೆಂಬ ಎರಡು ವಿದ್ವತ್ ಪರಿಶೀಲಿತ ನಿಯತಕಾಲಿಕಗಳನ್ನೂ ಹೊರತರುತ್ತಿದೆ.

ತುಮಕೂರು

ಉಲ್ಲೇಖಗಳು[ಬದಲಾಯಿಸಿ]

  1. http://tumkuruniversity.ac.in/index.php?/aboutus
  2. https://www.prajavani.net/district/tumakuru/wikipedia-671880.html
  3. http://ksoumysore.karnataka.gov.in/Documents/kannada%20prospectus%20%20Ph.d.pdf