ಸದಸ್ಯ:Sajjedevaraju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೊಬಳಿಯ ಸಜ್ಜೆಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ್ದು, ತುಮಕೂರಿನಲ್ಲಿ ವಾಸಿಸುತ್ತಿದ್ದೇನೆ.

ಇಂಡೋ-ಆರ್ಯನ್ ಭಾಷೆಗಳಲ್ಲಿ ಪ್ರಾದೇಶಿಕ ಭಿನ್ನತೆಯ ವೈವಿಧ್ಯತೆ ಈ ಮಧ್ಯೆ ಇಂಡೋ-ಆರ್ಯನ್ ಭಾಷೆಗಳಲ್ಲಿ ಪ್ರಾದೇಶಿಕ ಭಿನ್ನತೆಯಿಂದಾಗಿ ಉಂಟಾಗಿರುವ ವೈವಿಧ್ಯ ಮೂರು ತೆರನಾಗಿದೆ; 1 ಉದೀಚ್ಯ, 2 ಮಧ್ಯದೇಶ ಮತ್ತು 3 ಪ್ರಾಚ್ಯ. ಉದೀಚ್ಯದಲ್ಲಿ ಧ್ವನಿಸಾಂಪ್ರದಾಯಿಕತೆ ಹೆಚ್ಚು. ಪ್ರಾಚ್ಯದಲ್ಲಿ ಧ್ವನಿ ನಾಶ ಹೆಚ್ಚಾಗಿ ಕಂಡುಬರುತ್ತದೆ. ಮೂರ್ಧನ್ಯ ಧ್ವನಿಗಳು ಈ ಗುಂಪಿನ ಭಾಷೆಯ ಒಂದು ವೈಶಿಷ್ಟ್ಯ. ದ್ರಾವಿಡ ಭಾಷೆಗಳ ಪ್ರಭಾವವೇ ಇರಲಿ, ಮತ್ತೇನೇ ಇರಲಿ, ಲ್ + ತ್ (ಹ್) (ಟ್ (ಹ್), ಲ್+ದ್(ಹ್)-> ಡ್(ಹ್), ಲ್+ನ್->ಣ್ ಆಗುವುದನ್ನು ಕಾಣುತ್ತೇವೆ. ಶಬ್ದಾಂತ್ಯ ವ್ಯಂಜನಗಳು ಲೋಪವಾಗುತ್ತವೆ (ವಿದ್ಯುತ್->ವಿಜ್ಜು). ಸ್ವರಮಧ್ಯಸ್ಪರ್ಶ (ಸ್ಟಾಪ್) ಧ್ವನಿ ಘರ್ಷಧ್ವನಿಯಂತೆ ಉಚ್ಚರಿಸಲ್ಪಡುತ್ತವೆ (ಟಿಚಿಜi) (ನದಿ) -> ಓಚಿಜi, ಚಿಣi (ಅತಿ) - ಂಜi). ಮಧ್ಯ ಇಂಡೋ-ಆರ್ಯನ್ನಿನಲ್ಲಿ ಸಮರೂಪಧಾರಣೆ (ಅಸಿಮಿಲೇಷನ್) ಒಂದು ಮಹತ್ತ್ವದ ಅಂಶ. ಈ ಅಂಶವೇ ಪೂರ್ವಘಟ್ಟದಿಂದ ಮಧ್ಯಘಟ್ಟವನ್ನು ಬೇರ್ಪಡಿಸುವ ಮಹತ್ತ್ವದ ಸಾಧನ. ಈ ಸಮರೂಪಧಾರಣೆ ವ್ಯಂಜನದ್ವಿತ್ವಾಕ್ಷರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ (ಅದ್-> ಉತ್ತುಮ್, ಲಭ್-> ಲಬ್ದುಮ್ ಎರಡೂ ಕಡೆಗಳಲ್ಲಿ - ತ ಪ್ರತ್ಯಯವಿದೆ). ಅನುನಾಸಿಕಗಳು ಹಿಂದಿನ ಸ್ಪರ್ಶಧ್ವನಿಯೊಡನೆ ಸಮರೂಪಧಾರಣೆ ಮಾಡುತ್ತವೆ (ಅಗ್ನಿಸ್ಕಂಧಾನಿ-> ಅಗ್ನಿಕಂಧನಿ, ಆತ್ಮ->ಅತ್ತ :: ಅಶೋಕನ ಶಾಸನಗಳು).