ಸದಸ್ಯ:Sahanasana v/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊರ್ಕು ಭಾಷೆಯು ಒಂದು ಬುಡಕಟ್ಟಿನ ಭಾಷೆಯಾಗಿದ್ದು, ಮಧ್ಯಭಾರತದ ಕೋರ್ಕು ಬುಡಕಟ್ಟಿನವರು ಬಳಸುವ ಭಾಷೆಯೆಂದು ಗುರುತಿಸಲಾಗಿದೆ.[೧] ಈ ಭಾಷೆಯು ದ್ರಾವಿಡರಾದ ಗೊಂಡಿ ಜನರಲ್ಲಿ ಪ್ರತ್ಯೇಕಿಸಲಾಗಿದೆ.

ಬರವಣಿಗೆ[ಬದಲಾಯಿಸಿ]

ಕೊರ್ಕು ಭಾಷೆಯ ಬರವಣಿಗೆ ದೇವನಾಗರಿ ಲಿಪಿಯ ಬಲಾಬೋದ ಶೈಲಿಯಲ್ಲಿದೆ, ಇದನ್ನು ಮರಾಠಿ ಬರೆಯುವಲ್ಲಿಯೂ ಬಳಸಲಾಗುತ್ತದೆ.

ಅಂಕಿ ಅಂಶ[ಬದಲಾಯಿಸಿ]

ಕೊರ್ಕು ಸಂಪ್ರದಾಯದ ಗ್ರಾಮಗಳಲ್ಲಿ ವಾಸಿಸುವ ನಿಹಾಲಿ ಜನರೊಂದಿಗೆ ಈ ಭಾಷೆ ನಿಕಟ ಸಂಬಂಧವನ್ನು ಹೊಂದಿದೆ, [೨] ಕೊರ್ಕು ಭಾಷೆಯನ್ನು 200000 ಜನರು ಮಾತನಾಡಲು ಬಳಸುತ್ತಾರೆ ಎಂಬ ಅಂದಾಜಿದೆ.

ಭಾಷೆಯ ಪರ್ಯಾಯ ನಾಮಗಳು[ಬದಲಾಯಿಸಿ]

  1. ಬೊಂದೆಯ
  2. ಬೊಪಿಚಿ
  3. ಕೊರ್ಕಿ
  4. ಕುರಿ
  5. ರಮೆಕೆರ
  6. ಕುರ್ಕು

ಬಳಕೆಯಲ್ಲಿರುವ ಪ್ರದೇಶಗಳು[ಬದಲಾಯಿಸಿ]

ಮುಖ್ಯವಾಗಿ ದಕ್ಷಿಣ ಮಧ್ಯಪ್ರದೇಶದ ನಾಲ್ಕು ಭಾಗಗಳಾದ,ಖಂದ್ವ,ಹಾರದ,ಬೆತುಲ್, ಹೊಶಂಗಬಾದ್ ಹಾಗೂ ಮಹಾರಾಷ್ಟ್ರ ರಾಜ್ಯದ ನಾಲ್ಕು ಜೆಲ್ಲೆಗಳದ ರಾಜೂರ, ಚಂದ್ರಪುರ ಜಿಲ್ಲೆಯ ಕೊರ್ಪನ ಮತ್ತು ಮನಿಕ್ಗರ್ಹ್ ಗುಡ್ಡ ಪ್ರದೇಶಗಳಲ್ಲಿ ಹಾಗೂ ಅಮರಾವತಿ,ಬುಲ್ದನ,ಅಕೋಲಾ ಭಾಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಕೊರ್ಕು ಭಾಷೆಯನ್ನು ಕ್ಷೀಣಿಸುತ್ತಿರುವ ಸಂಖ್ಯೆಯ ಗ್ರಾಮಗಳಲ್ಲಿ ಮಾತನಾಡಲಾಗುತ್ತಿದ್ದು ಕಾಲಕ್ರಮೇಣ ಹಿಂದಿ ಭಾಷೆಯಾಗಿ ಬದಲಾಗುತ್ತಿದೆ. ಈ ಕಾರಣಗಳಿಂದ ಯುನೆಸ್ಕೊ ಸಂಸ್ಥೆಯು ಕೊರ್ಕು ಭಾಷೆಯನ್ನು ಅಳಿವಿನಂಚಿನಲ್ಲಿರುವ ದುರ್ಬಲ ಭಾಷೆಯೆಂದು ವರ್ಗೀಕರಿಸೆದೆ. ಕೋರ್ಕು ಭಾಷೆಯ ಉಲ್ಲೇಖವನ್ನು ಮೆಲ್ಗಾಟ್ ಉಪವಿಭಾಗದಲ್ಲಿ ಕಾಣಬಹುದಾಗಿದೆ. 570000 ಕೊರ್ಕು ಭಾಷೆಯನ್ನು ಮಾತನಾಡುವ ಸ್ಥಳೀಯ ಭಾಷಿಕರು ಇದ್ದಾರೆ ಎಂಬ ಅಂಕಿ ಅಂಶಗಳು ಕಂಡುಬರುತ್ತವೆ.

ಉಲ್ಲೆಖಗಳು[ಬದಲಾಯಿಸಿ]

  1. http://www.censusindia.gov.in/2011Census/Language_MTs.html
  2. https://www.ethnologue.com/language/nll

https://www.ethnologue.com/language/kfq