ವಿಷಯಕ್ಕೆ ಹೋಗು

ಸದಸ್ಯ:Sachin143621/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
      ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನವರು. ಇವರು ಜೂನ್ 1954 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಶಿವಮೂರ್ತಿ ಶಾಸ್ತ್ರಿ, ಉತ್ಕೃಷ್ಟ ವೀರಶೈವ ಪಂಡಿತರು ಮತ್ತು ಮೈಸೂರು ಹಿಂದಿನ ಮಹಾರಾಜ ಅಡಿಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ  ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ ಹಾಗೂ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ " ಆರ್ಟ್ಸ್ ಅಂಡ್ ಎಸ್ತೆಟಿಕ್ಸ್  ಸ್ಕೂಲ್"ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಮೇರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸ್ತುತ ಜರ್ಮನಿಯ ಬರ್ಲಿನ್ನಲ್ಲಿರುವ " ರವಿಂದ್ರನಾಥ ಟ್ಯಾಗೋರ್ ಕೇಂದ್ರ " ದ ನಿರ್ದೇಶಕರಾಗಿದ್ದಾರೆ.
       ಮಳೆಬಿದ್ದ ನೆಲದಲ್ಲಿ , ಅಣುಕ್ಷಣಚರಿತೆ, ಸೂರ್ಯಜಲ, ನವಿಲು ನಾಗರ , ಮಳೆಯ ಮಂಟಪ ಇವರ ಪ್ರಮುಖ ಕವನ ಸಂಕಲನಗಳು. ಮಹಾಚೈತ್ರ, ಮಂಟೇಸ್ವಾಮಿ ಕಥಾ ಪ್ರಸಂಗ, ಸುಲ್ತಾನ್ ಟಿಪ್ಪು , ಮಾದಾರಿ ಮಾದಯ್ಯ , ಸಿಳಪ್ಪದಿಗಾರಂ ಪ್ರಸಿದ್ಧ ನಾಟಕಗಳು. ಮಲ್ಲಮ್ಮನ ಮನೆಹೋಟ್ಲು , ಷೇಕ್ಸ್ಪಿಯರ್ ಸ್ವಪ್ನನೌಕೆ, ಮರೆತುಹೋದ ದೊಮ್ಬರಾಕೆ ಅನುವಾದಿತ ಕೃತಿಗಳು. ಮೊದಲ ಕಟ್ಟಿನ ಗದ್ಯ , ಸಾಹಿತ್ಯ ಮತ್ತು ರಂಗಭೂಮಿ ಇವರ ವಿಮರ್ಶೆಗಳು.
       ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿದೆ. 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು.