ಸದಸ್ಯ:Rashmitha1610531/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ. ಜಯಪ್ರಕಾಶ ನಾರಾಯಣ ನಗರ ಜೆ.ಪಿ.ನಗರ ಎಂದು ಜನಪ್ರಿಯವಾಗಿದೆ. ಇದು ಒಂದು ಜನಪ್ರಿಯ ವಸತಿ ಪ್ರದೇಶ. ಇದು ಬೆಂಗಳೂರು ನಗರದ ದಕ್ಷಿಣದಲ್ಲಿದ್ದು ಜಯನಗರ, ಬನಶಂಕರಿ, ಬನ್ನೇರುಘಟ್ಟ ಮತ್ತು ಬಿ.ಟಿ.ಎಂ ಲೇಔಟ್ ನಂತಹ ಪ್ರದಾನ ವಸತಿ ಪ್ರದೇಶಗಳಿಗೆ ಸಾಮೀಪ್ಯದಲ್ಲಿದೆ.ಜೆ ಪಿ ನಗರವು ಹಿಂದಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗ್ಗಡೆಯವರ ಕಾಲದಲ್ಲಿ ರಚನೆಯಾಯಿತ . ಜೆ.ಪಿ.ನಗರವು ಜಯನಗರ ಹಾಗೂ ಬನಶಂಕರಿಯ ಮುಂದುವರಿದ ವಾಸದ ಪ್ರದೇಶವೆಂದು ಹೆಸರಾಗಿದೆ.ಜೆ ಪಿ ನಗರವು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ್ದು ಇದು ಸ್ವತಂತ್ರವಾಗಿ ವಾಸಿಸುವ ಸಣ್ಣ ಪ್ರಮಾಣದ ವಾಸದ ಕಟ್ಟಡಗಳನ್ನು ಹಾಗೂ ವಿಶಾಲವಾದ ರಸ್ತೆಗಳನ್ನು ಒಳಗೊಂಡಿದೆ.ಜೆ.ಪಿ.ನಗರವು ಜಯನಗರ ಹಾಗೂ ಬನಶಂಕರಿಯ ಮುಂದುವರಿದ ವಾಸದ ಪ್ರದೇಶವೆಂದು ಹೆಸರಾಗಿದೆ . ಇಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ಸಂಖ್ಯೆಗೆ ಅನುಗುಣವಾಗಿ ವಾಣಿಜ್ಯ , ಸೂಕ್ಷ್ಮ ಮಾರುಕಟ್ಟೆಅನ್ನು ನಿರ್ಮಿಸಲಾಯಿತು .ಜೆ.ಪಿ.ನಗರವು ಸುಮಾರು ೨೫೦೦ ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದ್ದು , ಒಂಬತ್ತು ಹಂತಗಳಾಗಿ ವಿಂಗಡಿಸಲಾಗಿದೆ.[೧]

ಗ್ರಂಥಾಲಯ

ನಗರದ ನಿವಾಸಿಗಳು[ಬದಲಾಯಿಸಿ]

ಇಲ್ಲಿ ವಿಶಾಲವಾದ ಉದ್ಯಾನವನ , ಅಗಲವಾದ ರಸ್ತೆಗಳು ಮತ್ತು ಬೆಂಗಳೂರು ಜಲಮಂಡಳಿಯಿಂದ ನೀರು ಸರಬರಾಜು ಮಾಡಲಾಗಿದೆ. ಜೆ.ಪಿ.ನಗರದಲ್ಲಿ ಪ್ರಮುಖ ನಟರು ಮತ್ತು ಕಲಾವಿದರಾದ ಡಾ.ಅಂಬರೀಶ್ , ಗಿರೀಶ್ ಕಾರ್ನಾಡ , ಸುದೀಪ್ , ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಹಿಂದಿನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗು ಕ್ರಿಕೆಟಿಗರಾದ ಜಾವ್ಗಲ್ ಶ್ರೀನಾಥ್ ಮತ್ತು ಗುಂಡಪ್ಪ ವಿಶ್ವನಾಥ್ ಹಾಗು ಮುಂತಾದವರ ನೆಲೆವೀಡಾಗಿದೆ.ಪ್ರಸಿದ್ದ ಅರವಿಂದ ಆಶ್ರಮದ ಶಾಖೆಯು ಜೆ.ಪಿ.ನಗರದಲ್ಲಿದ್ದು , ಅರವಿಂದ ಆಶ್ರಮದ ಮುಖ್ಯ ಆಶ್ರಮವು ಪುದುಚರಿಯಲ್ಲಿದೆ.ಜೆ.ಪಿ.ನಗರುವು ಹಲವು ವಿದ್ಯಾಸಂಸ್ಥೆಗಳನ್ನು ಒಳಗೊಂಡಿದ್ದು ಅವುಗಳಲ್ಲಿ ವಪ್ರಮುಖವೆಂದರೆ ಆರ್.ವಿ.ದಂತ ವಿದ್ಯಾಲಯ , ನಾರಾಯಣ ಇ-ಟೆಕ್ನೋ ಸ್ಕೂಲ್, ವಾಸವಿ ವಿದ್ಯಾ ಸಂಸ್ಥೆಗಳು , ಕಾರ್ಮಲ್ ಕಾನ್ವೆಂಟ್ , ಬ್ರಿಗೇಡ್ ಸ್ಕೂಲ್ ,ಸೆಂಟ್ ಮಾರ್ಕ್ ಸ್ಕೂಲ್ ಹಾಗು ಮುಂತಾದವು.ಜೆ.ಪಿ.ನಗರ ೨ನೇ ಹಂತದಲ್ಲಿ ರಂಗಶಂಕರ ಎಂಬ ಸಬಾಂಗಣ ಇದ್ದು , ಇದು ೨೦೦೪ನೇ ಇಸವಿಯಲ್ಲಿ ಪ್ರಾರಂಭವಾಯಿತು.ಇದನ್ನು ಹೆಸರಾಂತ ನಟ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ತಮ್ಮ ಪತಿಯ ಜ್ಞಾಪಕಾರ್ಥವಾಗಿ ನಿರ್ಮಿಸಿದ್ದಾರೆ.[೨]


ಜೆ.ಪಿ.ನಗರ

ಸ್ಥಳಗಳು[ಬದಲಾಯಿಸಿ]

ರಂಗಶಂಕರನನ್ನು ನಿರ್ಮಿಸುವುದು ಶಂಕರನಾಗ್ ರವರ ಕನಸಾಗಿತ್ತು. ಇದನ್ನು ಅವರ ಜ್ಞಾಪಕಾರ್ಥವಾಗಿ ಅವರ ನಿಧನದ ನಂತರ ಸಂಕೇತ್ ಟ್ರಸ್ಟ್ ಹಾಗೂ ಶಂಕರ ನಾಗ್ ರವರ ಸ್ನೇಹಿತರು ಸೇರಿ ನಿರ್ಮಿಸಿದರು.ರಂಗಶಂಕರವನ್ನು ನಿರ್ಮಿಸಲು ಸಣ್ಣ ಕೊಡುಗೆಗಳನ್ನು ಜನಸಾಮಾನ್ಯರಿಂದ ಹಾಗೂ ಬೃಹತ್ ಕೊಡುಗೆಗಳನ್ನು ಉದ್ಯಮಿಗಳ್ಂದ ಸ್ವೀಕರಿಸಲಾಯಿತು.ರಂಗಶಂಕರ ಕಟ್ಟಡದ ವಾಸ್ತುಶಿಲ್ಪಿ ಶಾರುಖ್ ಮಿಸ್ತ್ರಿ ರವರು ಕಟ್ಟಡವನ್ನು ನಾಜೂಕಾಗಿ ವಿನ್ಯಾಸಗೊಳಿಸಿದ್ದಾರೆ. ಸರಕ್ಕಿ ಕೆರೆ , ಪುಟ್ಟೇನಹಲಳ್ಳಿ ಕೆರೆ , ಛುನ್ಛುಗಟ್ಟ ಕೆರೆ ಇವುಗಳು ಜೆ ಪಿ ನಗರದಲ್ಲಿ ಪ್ರಮುಖವಾಗಿ ಕಂಡು ಬರುವ ಕೆರೆಗಳು.ಜೆ ಪಿ ನಗರದಲ್ಲಿ ಬಹಳ ಒಳ್ಳೆಯ ಉದ್ಯಾನವನಗಳು ಕಂಡು ಬರುತ್ತದೆ. ಜೆ ಪಿ ನಗರದ ಒಂದೊಂದು ಹಂತದಲ್ಲಿ ಒಂದು ಉದ್ಯಾನವಾದರು ಇದ್ದೇ ಇದೆ.ಬಹಳ ಜನಪ್ರಿಯವಾದ ಮಿನಿ ಫಾರೆಸ್ಟ್ ಸುಮಾರು ಒಂದು ಕಿಲೋಮೀಟರ್ ನಷ್ಟು ದೊಡ್ಡದಾಗಿರುವ ಉದ್ಯಾನವನವು ಸಹ ಇರುವುದು ಜೆ ಪಿ ನಗರದಲ್ಲಿ.ನಂದಿನಿ , ಟಕೊ ಬೆಲ್ , ಕೆ.ಎಫ್.ಸಿ , ಮೆಕ್ ಡೊನಲ್ಡ್ ಸ್ , ಕಬಾಬ್ ಮ್ಯಾಜಿಕ್ , ಸ್ಟಾರ್ ಬಕ್ಸ್ , ಕೆಫೆ ಕಾಫಿ ಡೇ , ಇಂಚರ , ಮ್ಯಾಂಗೊ ಟ್ರೀಸ್ , ಫಿಜ಼ಾ ಹಟ್ ಮುಂತಾದ ತಿನಿಸುಗಳು ಸಹ ಸಿಗುತ್ತದೆ.ರಾಜಶೇಕರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ , ವಾಸನ್ ಕಣ್ಣಿನ ಆಸ್ಪತ್ರೆ , ರಾಜಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ , ಗ್ರೀನ್ ಸಿಟಿ ಆಸ್ಪತ್ರೆಗಳು ಮತ್ತು ಮುಂತಾದ ಆಸ್ಪತ್ರೆಗಳು ಕಂಡು ಬರುತ್ತದೆ. ಮ್


ಉಲ್ಲೇಖನಗಳು[ಬದಲಾಯಿಸಿ]

  1. http://www.prajavani.net/news/article/2016/12/28/462142.html
  2. http://hareraama.in/news/ramakatha-kareyole-jayanagara/