ಸದಸ್ಯ:Rashmi P Kashyap
ರಶ್ಮಿ ಕಶ್ಯಪ್ | |
---|---|
Born | ೧೮-೦೭-೧೯೯೭ ಶಿರಸಿ |
Nationality | ಭಾರತಿ |
Education | ಬಿ ಕಾಂಮ್ ಹೊನರ್ಸ್ |
ಜನನ ಮತ್ತು ಕುಟುಂಬ
[ಬದಲಾಯಿಸಿ]ನನ್ನ ಹೆಸರು ರಶ್ಮಿ ಕಶ್ಯಪ್. ನಾನು ಹುಟ್ಟಿದ್ದು ೧೮-೦೭-೧೯೯೭ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಎಂಬ ಒಂದು ಊರಿನಲ್ಲಿ ನಾನು ಹುಟ್ಟಿದ್ದು. ಆದರೆ ನಾನು ಬೆಂಗಳೂರಿನಲ್ಲೇ ಬೆಳೆದದ್ದು. ನನ್ನ ಕುಟುಂಬದಲ್ಲಿ ನಾಲ್ಕು ಜನರಿದ್ದಾರೆ-ನನ್ನ ತಂದೆ, ನನ್ನ ತಾಯಿ, ನನ್ನ ತಮ್ಮ ಮತ್ತು ನಾನು. ನನ್ನ ತಂದೆಯ ಹೆಸರು ಟೀ ಜಿ ಪ್ರಕಾಶ್ ಮತ್ತು ನನ್ನ ತಾಯಿಯ ಹೆಸರು ಯೋಗಶ್ರಿ. ನನ್ನ ತಮ್ಮನ ಹೆಸರು ಶ್ರಿಕಾಂತ್. ನನ್ನ ತಂದೆ ಉದ್ಯಮಿ ಮತ್ತು ನನ್ನ ತಾಯಿ ಗೃಹಿಣಿ. ನನ್ನ ತಮ್ಮ ಪೀಯೂಸಿ ಓದುತಿದ್ದಾನೆ. ನಾವೆಲ್ಲಾ ಒಬ್ಬರಿಗೊಬ್ಬರಿಗೆ ಬೆಂಬಲವನ್ನು ನೀಡುತ್ತೇವೆ. ಇದೇ ನನ್ನ ಕುಟುಂಬದ ಉತ್ತಮ ಗುಣವಾಗಿದೆ.
ಶಿಕ್ಷಣ
[ಬದಲಾಯಿಸಿ]ಮೊದಲು ಹೋಲಿ ಕ್ರೈಸ್ಟ್ ಶಾಲೆಯಲ್ಲಿ ಓದಿದ್ದು. ನಂತರ ನನ್ನ ಶಿಕ್ಷಣವನ್ನು ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯಲ್ಲಿ ಪಡೆದೆ. ಅದಾದಮೆಲೆ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯವನ್ನು ಓದಿದೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂಮ್ ಹೊನರ್ಸ್ ಓದುತ್ತಿದ್ದೇನೆ. ಮುಂದೆ ಎಂ.ಬಿ.ಎ ಮಾಡಬೇಕೆಂದು ಬಯಸಿದ್ದೇನೆ. ಜ್ನಾನವೇ ಸಂಪಾದನೆಗೆ ಮೂಲ, ಆದ್ದರಿಂದ ನಾನು ನನ್ನ ವಿಧ್ಯಾರ್ಥಿ ಜೀವನದಲ್ಲಿ ಬಹಳಷ್ಟು ಜ್ನಾನವನ್ನು ಪಡೆಯಲು ಇಛ್ಚಿಸುತ್ತೇನೆ. ಕಲಿಯುವುದು ಬರೀ ನಾಲ್ಕು ಗೋಡೆಯ ಮಧ್ಯದಲ್ಲಿ ಸೀಮಿತವಾಗಿಲ್ಲ. ನಾನು ಕಾಲೇಜಿನ ಫೆಸ್ಟಿನಲ್ಲಿ ಸ್ವಯಂ ಸೇವಕಳಾಗಿ (volunteer) ಕಲಿತ್ತದ್ದು ಬೇಕಾದಷ್ಟಿದೆ. ಎರಡು ವರ್ಷದ ಎಂ.ಬಿ.ಎ ಮಾಡಿದ ನಂತರ ಪ್ರಗತಿಶೀಲತೆ ಮಾಡಬೇಕೆಂದಿದ್ದೇನೆ. ನಾನು ನನ್ನದೇ ಆದ ಒಂದು ವ್ಯಾಪಾರದ ಕಂಪನಿಯನ್ನು ಶುರು ಮಾಡಬೇಕೆಂದು ಮನಸ್ಸು ಮಾಡಿದ್ದೇನೆ.
ಹವ್ಯಾಸಗಳು
[ಬದಲಾಯಿಸಿ]ನನ್ನ ಆಸಕ್ತಿಗಳು ಛಾಯಾಗ್ರಹಣ, ಫೋಟೋ ಎಡಿಟಿಂಗ್ ಮತ್ತು ಚಿತ್ರ ಬಿಡಿಸುವುದು. ನನಗೆ ಹಾಡುಗಳನ್ನು ಕೇಳಲು, ನೃತ್ಯ ನೋಡಲು, ಕ್ರಿಕೆಟ್ ನೋಡಲು ಮತ್ತು ಸಿನೆಮಾ ನೋಡಲು ಬಹಳ ಇಷ್ಟ. ನನಗೆ ನನ್ನ ಗೆಳೆಯರ ಜೊತೆ ಸಮಯ ಕಳೆಯಲು ಬಹಳ ಇಷ್ಟ. ನಾನು ಅಂತರ್ಮುಖಿಯಾದವಳು. ಆದ್ದರಿಂದ ನಾನು ಬರೀ ನನ್ನ ಒಳ್ಳೆಯ ಗೆಳೆಯರೊಡನೆ ನನ್ನ ಎಲ್ಲಾ ಅಭಿಪ್ರಾಯ ಮತ್ತು ಭಾವನೆಗಳನ್ನು ಹೇಳಿಕೊಳ್ಳುತ್ತೆನೆ. ಈ ಕಾರಣದಿಂದ ನಾನು ನನ್ನ ಸಮಯವನ್ನು ಅವರ ಜೊತೆ ಕಳೆಯಲು ಇಷ್ಟ ಪಡುತ್ತೇನೆ.
ಇತರ ಚಟುವಟಿಕೆಗಳು
[ಬದಲಾಯಿಸಿ]ಸದ್ಯದಲ್ಲಿ ನಾನು ಪಿಯಾನೋ ಬಾರಿಸುವುದನ್ನು ಕಲಿಯುತ್ತಿದ್ದೇನೆ. "ಡಿಜಿಟಲ್ ಮಾರ್ಕೆಟಿಂಗ್" ಎಂಬ ವ್ಯಾಸಂಗವನ್ನೂ ಮಾಡುತ್ತಿದ್ದೇನೆ. ಸಮಾಜ ಸೇವೆಯಾಗಿ ಬಡ ಮಕ್ಕಳಿಗೆ ಗಣಿತ ಕಲಿಸುತ್ತಿದ್ದೇನೆ. ಇಡೀ ದಿನದಲ್ಲಿ ತನ್ನನ್ನು ತಾನು ಯಾವುದಾದರೂ ಒಂದು ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಂಬಿದ್ದೇನೆ. ಸಮಯವನ್ನು ಹಾಳು ಮಾಡದೆ ಅದರ ಸದುಪಯೋಗ ಮಾಡಿಕೊಳ್ಳಬೇಕೆಂಬುವುದು ನನ್ನ ಅಭಿಪ್ರಾಯವಾಗಿದೆ. ಇತ್ತೀಚೆಗೆ ನಾನು ಡ್ರೈವಿಂಗ್ ಸ್ಕೂಲಿಗೆ ಸೇರಿದ್ದೇನೆ. ಡ್ರೈವಿಂಗ್ ಕಲಿಯುವುದುದರಲ್ಲಿ ನನಗೆ ಬಹಳ ಉತ್ಸಾಹವಿದೆ.
ನಾನು ದೇವರಲ್ಲಿ ಬಲವಾಗಿ ನಂಬುತ್ತೇನೆ, ಆದರೆ ಧರ್ಮದಲ್ಲಿ ನಂಬುವುದಿಲ್ಲ. ಎಲ್ಲಾ ಧರ್ಮವೂ ಒಂದೇ ಎಂದು ಹೇಳಲು ಇಷ್ಟ ಪಡುತ್ತೇನೆ. ದೇವರ ಕೃಪೆಯಿಂದ ನಾನು ನನ್ನ ಕನಸ್ಸನ್ನು ಸಾಧಿಸಲು ಮತ್ತು ಗುರಿಯನ್ನು ಮುಟ್ಟಲು ಬಯಸುತ್ತೇನೆ.