ಸದಸ್ಯ:Rakshith.sharma1910109/ನನ್ನ ಪ್ರಯೋಗಪುಟ
ಗಂಗೂರು ಆನ್ಜೆನೆಯ ದೆವಸ್ಥಾನ
[ಬದಲಾಯಿಸಿ]=== ಇತಿಹಾಸ ===
ಗಂಗೂರು ಆಂಜನೇಯ ಅಥವ ಉದ್ದಂಜನೇಯ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಭದ್ರಾವಥಿ ತಾಲುಕಿನ ಗಂಗೂರೆಂಬ ಹಳ್ಳಿಯಲ್ಲಿದೆ. ಈ ಸ್ಥಳ ಭದ್ರವಥಿಯಿಂದ ೮ ಕಿ.ಮಿ ಮತ್ತು ಶಿವಮೊಗ್ಗದಿಂದ ೨೫ ಕಿ.ಮಿ ದೂರವಿದೆ. ಇಲ್ಲಿಯ ವಿಶೇಷತೆಯೆನೆಂದರೆ, ಈ ದೇವಸ್ಥಾನದಲ್ಲಿ ಯಾವ ರೀತಿಯ ಪ್ರಥಿಮೆ ಇಲ್ಲ. ಪ್ರಥಿಮೆಯ ಸ್ಥಳದಲ್ಲಿ ಒಂದು ೮ ಅಡಿ ಉದ್ದ ಬಂಡೆ ಕಲ್ಲು ಇದೆ. ಆ ಬಂಡೆಕಲ್ಲಿನ ಮೇಲೆ ಆಂಜನೇಯ ದೇವರ ಆಕಾರದಂತೆ ಒಂದು ಆಕಾರವಿದೆ. ಆ ಆಕಾರವನ್ನು ಕೆಲವೊಬ್ಬರು ಶಿಲ್ಪಿಗಳು ಕೆತ್ತನೆ ಮಾಡಿದಾರೆಂದು ಹೇಳುತ್ತಾರೆ. ಆದರೆ ಅದು ಕೆತ್ತನೆ ಅಲ್ಲವೆಂದು ಹೀಳಲಿಕೆ ಏನು ಸಾಕ್ಶಿಯೆಂದರೆ, ಆ ಬಂಡೆಕಲ್ಲಿನ ಮೀಲೆ ಇರುವ ಆಂಜನೇಯ ದೇವರ ಆಕರ ಕಲ್ಲಿನ ಮೇಲೆ ಉಬ್ಬು ಬಂದ ಹಾಗೆ ಇದೆ, ಮುದ್ರಿಸಿದಾಗ ಕಲ್ಲಿನ ಒಳ ಭಾಗದಲ್ಲಿ ಹೋದಂತೆ ಇಲ್ಲ. ಅಲ್ಲಿನ ಹಿರಿಯರ ಮತ್ತು ಸಾಮಾನ್ಯ ಜನರ ಏನು ಅನಿಸಿಕೆಯೆಂದರೆ ಆ ಆಂಜನೇಯ ದೇವರ ಮುದ್ರಣ ಹೊಂದಿರುವ ಬಂಡೆಕಲ್ಲು ಭೂಮಿಯಿಂದ ಬೆಳದಿ ಬಂದಿದೆ. ಇದಕ್ಕೆ ಸಾಕ್ಷಿ ಏನೆಂದರೆ ಅಲ್ಲಿಯ ಜನರು ಅಳತೆಯನ್ನು ಪ್ರತಿ ವರ್ಷವೂ ನೂಡುತ್ತಿದ್ದಾರೆ. ಆ ಬಂಡೆಕಲ್ಲು ಸಿಕ್ಕಿದ್ದು ಸುಮಾರು ೧೯೮೨ರಲ್ಲಿ. ಸಿಕ್ಕಿದ್ದಾಗ ಅದು ೬.೫ ಅಡಿ ಎತ್ತೆರವಿತ್ತು. ಇವತ್ತು ಅದು ಸುಮಾರು ೮ ಅಡಿ ಎತ್ತರವಿದೆ. ಆ ಕಲ್ಲು ಪ್ರತಿ ವರ್ಷ ೧.೫ ಸೆ.ಮಿ ಉದ್ದವಾಗುತಿದ್ದೆ.
ಇಲ್ಲಿಯ ಮತ್ತೊಂದು ಪ್ರಸ್ಸಿದ್ಧ ನಂಬಿಕೆಯೇನೆಂದರೆ, ಮಹಭಾರತ ಯುದ್ಧ ಮುನ್ನ ಶ್ರಿಕೃಶ್ನರು ಭೀಮನಿಗೆ ಆಂಜನೆಯ ದೇವರ ಆಶೀರ್ವಾದವನ್ನು ಪಡೆಯಲು ಗಂಗೂರಿಗೆ ಕಳುಹಿಸಿದರು. ಭೀಮ ತಪಸ್ಸ್ಯೆ ಮಾಡಿ ಮುಗಿಸಿದಾಗ ಆಂಜೆನೇಯ ದೇವರು ಪ್ರಕಟಿಸಿ ಆಶಿರ್ವಾದವನ್ನು ನೀಡಿ ನಿಂತ ಸ್ಥಾನದಲೇ ಭೂಮಿಯೊಳಗೆ ಪ್ರವೇಶಿಸಿದರು. ಅವರು ಪ್ರವೆಶಿಸಿದ ಸ್ಥಾನದಲೇ ಆ ಬಂಡೆಕಲ್ಲು ಬೆಳೆಯುತಿದ್ದೆ. ಯಾವತ್ತು ಈ ಕಲ್ಲು ಬೆಳೆಯಲು ನಿಲ್ಲತ್ತೂ, ಅವತ್ತಿನಿಂದ ಈ ಭೂಮಿಯ ವಿನಾಶ ಶುರುವಾಗುತದ್ದೆಯೆಂದು, ಮತ್ತು ಕಲಿಯುಗದ ಮಹಭಾರತ ಶುರುವಾಗುತದ್ದೆಯೆಂಬ ನಂಬಿಕೆಯೂ ಇಲ್ಲಿಯ ಜನರಿಗಿದೆ.
ಬೆಳವನಿಗೆಗಳು
[ಬದಲಾಯಿಸಿ]ಗಂಗೂರಿನ ಇತಿಹಾಸವು ಎಶ್ಟು ಖ್ಯಾತಿವೆತ್ತವಾಗಿದಿಯೂ ಅಶ್ಟೇ ಪ್ರಸಿದ್ಧ ಇದು ಪ್ರಸ್ತುತದಲ್ಲಿದೆ. ೨೦೧೩ರರವರೆಗೆ ಗಂಗೂರು ಹಳ್ಳಿಯ ಬಗ್ಗೆ ಅಲ್ಲಿಯ ಜನರನ್ನು ಬಿಟ್ಟು ಆಚೆ ಅಷ್ಟು ಜನರಿಗೆ ಗೊತ್ತಿರಲಿಲ್ಲ. ಅಲ್ಲಿ ಒಂದು ಬಂಡೆಕಲ್ಲು ಮಾತ್ರವಿತ್ತು ಅಕ್ಕ ಪಕ್ಕ ಯಾವ ಕಟ್ಟೆಯೂ ಇರಲಿಲ್ಲ. ಮೇಲೆ ಮಳೆ, ಬಿಸಿಲಿನಿಂದ ಆಶ್ರಯವೂ ಇರಲಿಲ್ಲ. ಒಂದು ಸಾಮಾನ್ಯ ಕಲ್ಲು ಇದ್ದಹಾಗೆ ರಸ್ತೆಯ ಮೂಲೆಯಲ್ಲಿ ನಿಂತಿತ್ತು. ಆ ಕಚ್ಛಾ ರಸ್ಥೆಯನ್ನು ಬಳಸುವ ಒಂದು ನಾಲ್ಕು ಜನರು ನಿಂತು ನಮಸ್ಕಾರ ಮಾಡಿ ಮುಂದೋಗುತಿದ್ದರು. ಆ ಕಲ್ಲಿಗೆ ಪ್ರತಿದಿನವೂ ಯಾರಾದರೊಬ್ಬರು ಕುಂಕುಮ, ಅರಿಶಿಣ ಹಾಕಿ ಊದಿನ ಬತ್ತಿ ಹಚ್ಛಿ ಪೂಜೆ ಮಾಡಿ ಹೂಗುವರು. ಒಬ್ಬ ಶಾಶ್ವತಾವಾಗಿ ಯಾವ ಪೂಜಾರಿಯೂ ಇರಲಿಲ್ಲ. ಯಾವಾಗಲೂವೊಮ್ಮೆ ಸಂದರ್ಶಕರು ಬಂದು ದರ್ಶನೆ ಮಡಿ ಪೂಜೆಯಾಗದಿದ್ದರೆ ಪೂಜೆ ಮಾಡಿ ಹೋಗುತ್ತಿದ್ದರು. ಆದರೆ ಸಮಯ ಕಳದಹಾಗೆ ಈ ಬಂಡೆಕಲ್ಲಿನ ಸುದ್ಧಿ ಅಕ್ಕಪಕ್ಕ ಊರಿನ ಜನರಿಗೆ ತಿಳಿಯಿರತು. ಸಂದರ್ಶಕರು ಶಾಮ್ಖ್ಃಐಏ ಹೆಚ್ಚುವಾಗುತ ಬಂತು. ಮಾತು ಹರಡಿದಂತೆ ಅಕ್ಕ ಪಕ್ಕದ ಜಿಲ್ಲೆ, ತಾಲೂಕಿನ ಜನರೂ ಬಂದು ದರ್ಶನೆಮಾಡಿ ಹೂಗುತಿದ್ದರು. ಬಂದ ಜನರು ಆ ಸ್ಥಳದ ಅನ್ನನ್ಯನತೆಯಿಂದ ಪ್ರಭಾವಿತವಾಗಿ ಅಲ್ಲಿಗೆ ಮತ್ತೆ ಮತ್ತೆ ಬರಲು ಶುರು ಮ್ಮಡಿದರು. ಕೆಲವು ದಾನಿ ಭಕ್ತರು ಆ ಬಂಡೆಕಲ್ಲಿಗೆ ಏನಾದರು ಆಶ್ರೆಯ ಇರಿಲಿಯನ್ತ ನಾಲ್ಕು ಗೂಡೆ ಮತ್ತು ಒಂದು ಛಾವಣಿಯನ್ನು ಕಟ್ಟಿಸಿದರು. ಸಂದರ್ಶಕರ ಸಂಖ್ಯೆ ಹೆಚ್ಛು ಆದಂಗೆ ದಾನ ಧರ್ಮ ಮಾಡುವರ ಸಂಖ್ಯೆಯೂ ಬೆಳೆಯಿತ ಹೂಯಿತು. ದಾನಿಗಳಿಗೆ ದಾನ ನೀದುವ ಮಾಧ್ಯಮ ಇರಲಿಲ್ಲ. ಅದ್ದಕಂದು ಅಕ್ಕ ಪಕ್ಕದ ಹಳ್ಳಿಯ ಹಿರಿಯರು 'ಗಂಗೂರು ಉದ್ದಾಂಜೆನೇಯ ದೇವಸ್ಥಾನ ಸಂಸ್ಥೆ'ಯೆಂದು ಒಂದು ಸಂಸ್ಥೆ ಸ್ಥಾಪಿಸಿ ಅದನ್ನು ನೂಂದಣಿಸಿ ಅದರ ಮೂಲಕ ದಾನವನ್ನು ಪಡೆಯಲು ಶುರುಮಡಿದರು. ಬಹಳಶ್ಟು ಕಡೆಗಳಿಂದ ದಾನ ಬರಲು ಶುರುವಾಯಿತು. ಅದೆಲ್ಲಾ ದಾನದ ಹಣವನ್ನು ಹಣವನ್ನು ಆ ಸಂಸ್ಥೆ ಪ್ರಾಮಣಿಕವಾಗಿ ಉಪಯೊಗಿಸಿ ಡೆವಸ್ಥಾನದ ಕಟ್ಟಡವನ್ನು ಸುಧಾರಿಸಲು ಉಪಯೊಗಿಸಿದರು. ಶಾಶ್ವತವಾಗಿ ಮೂರು ಜನ ಪೂಜಾರಿಯರನ್ನು ನಿಯೂಜಿಸಿದರು.
ವರ್ತಮಾನ
[ಬದಲಾಯಿಸಿ]ಇವತ್ತಿನ ಸಮಯದಲ್ಲಿ ಆ ದೆವಸ್ಥಾನದ ಜನಪ್ರಿಯತೆಯಿಂದ ಒಮ್ಮೆ ಇಡೀ ವರ್ಶದಲ್ಲಿ ಬರುತ್ತಿದ್ದಶ್ಟು ಜನರು ಒಂದೇ ದಿನದಲ್ಲಿ ಬರುತ್ತಿದ್ದಾರೆ. ಪ್ರತಿದಿನವೂ ಯಾರದರು ಸ್ವಯಂಸೇವಕರು ಪ್ರಸದವನ್ನು ಮಾಡಿಸಿ ಹಂಚ್ಚುತ್ತಾರೆ. ಅಲ್ಲಿಯಿರುವ ಮಂಗಳ ಸೇವೆಯನ್ನೂ ಮಾಡಿಲಿಕೆಂದು ಭಕ್ತತು ಬರುತ್ತಾರೆ. ಅಶ್ಟೇಯಲ್ಲ ೨೦೧೭ರರಿಂದ ಪ್ರತೀ ವರ್ಶವೂ ೪ ದಿಸ ಗಂಗೂರು ಜಾತ್ರೆಯೆ೦ದು ಜಾತ್ರೆ ಯನ್ನು ಮಾಡುತ್ತಾರೆ. ಅದನ್ನು ನೂಡಲಿಕ್ಕೆಂದು ಇಡೀ ಕರ್ನಟಕದಿಂದಲೇ ಜನ ಬರುತ್ತಾರೆ. ಇಶ್ಟು ಕಡಿಮೆ ಸಮಯದಲ್ಲಿ ಯಾವ ಪ್ರಥಿಮೆಯೂ ಇಲ್ಲದಿದ್ದ ಈ ದೆವಸ್ಥಾನದ ಕೀರ್ತಿ ದೂರ ದೂರದಲ್ಲಿ ಹರಡಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಿಂದ ಅಲ್ಲಿಯ ಜನರಿಗೆ ಜೀವನೋಪಯ ಸಿಕ್ಕಿದೆ. ಈ ವರ ಆಂಜೆನೇಯ ದೇವರು ಗಂಗೂರಿನ ಜನರ ಇಶ್ಟು ವರ್ಶದ ಭಕ್ತಿಯ ಫಲವಾಗಿ ನೀಡಿದಾರೆಂದೂ ಹೇಳಬಹುದು.