ಸದಸ್ಯ:Radhatanaya/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ಇತಿಹಾಸಕಾರರ ಪಂಕ್ತಿಯಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಿದ ಪ್ರೊ. ಷಡಕ್ಷರಪ್ಪ ಶೆಟ್ಟರ್, ಹಳಗನ್ನಡ ಕಾವ್ಯಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದಾರೆ. ಇತಿಹಾಸ, ಸಂಶೋಧನೆ, ಹಾಗೂ ಸಂಶೋಧನಾ ಕ್ಷೇತ್ರದಳ್ಳಿ ದುಡಿದವರು. 

ಮನೆಯ ಪರಿಸರ, ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹಂಪ ಸಾಗರ ಸರೂರ ಎನ್ನವ ದೊಡ್ಡಮನೆತನದಲ್ಲಿ ೧೧, ಡಿಸೆಂಬರ್,೧೯೩೫ ಜನಿಸಿದರು. ತಂದೆ ಅಂದಾನಪ್ಪ ಶೆಟ್ಟರು. ತಾಯಿ ತೋಟಮ್ಮನವರು. ತಾಯಿ ಬಹಳ ಸಂಪ್ರದಾಯಸ್ಥರು. ತಾತ ವೀರಭದ್ರಪ್ಪನವರು ಒಳ್ಳೆಯ ಶ್ರೀಮಂತರಾಗಿದ್ದರು. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟನಡೆಸಿದವರು. ಪಾಳೇಗಾರರ ಹಿನ್ನೆಲೆ, ಅವರು ಮುಂದರಿಸಿ ಭೀಮರಾಯರ ಸಮಕಾಲೀನರು. ಅಜ್ಜಿ ಹುಬ್ಬಳ್ಳಿಯ ವ್ಯಾಪಾರಸ್ಥ ಮನೆತನದ ಹೆಣ್ಣುಮಗಳು. ಶೆಟ್ಟರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸ  ಹಂಪಸಾಗರ ಹಾಗೂ ಹೊಸಪೇಟೆಯಲ್ಲಿ ಜರುಗಿತು. ಕಾಲೇಜ್ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕುವೆಂಪು ಆಗ ಪ್ರಾಂಶುಪಾಲರಾಗಿದ್ದರು ಹೆಸರಾಂತ ಸಿ.ಡಿ ನರಸಿಂಹಯ್ಯ, ಆ.ರಾ.ಮಿತ್ರ,ಹಂಪೆ.ನಾಗರಾಜಯ್ಯ, ಕಮಲಾ ಹಂಪನಾ, ರಾಜೀವ್ ತಾರಾನಾಥ್, ಕಡಿದಾಳ್ ಶಾಮಣ್ಣ, ಜಿ. ರಾಮಕೃಷ್ಣ ಮುಂತಾದವರ ಒಡನಾಟವಿತ್ತು ಹಾನರ್ಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೪ ಚಿನ್ನದ ಪದಕಗಳ ವಿಜೇತರೆಂದು ಹೆಗ್ಗಳಿಕೆ ಗಳಿಸಿದ್ದರು ಮುಂದೆ ಮಹಾರಾಣಿ ಅಮ್ಮಣ್ಣಿಯವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು ೧೯೬೧ ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಿ.ಸಿ.ಪಾವಟೆಯವರ ಕರೆಯ ಮೇರೆಗೆ ಇತಿಹಾಸ ವಿಭಾಗಕ್ಕೆ ಸೇರಿಕೊಂಡರು.

ಸಾಹಿತ್ಯಕೃಷಿ[ಬದಲಾಯಿಸಿ]

ಆಗ ಅವರು ೧೮೮೫-೧೯೪೫ ರವರೆಗೆ ಪ್ರಕಟಿಸಲಾಗಿದ್ದ ಮೈಸೂರಿನ ಪ್ರಾಕ್ತನ ವರದಿಗಳನ್ನು ಸುಲಭವಾಗಿ ಹಾಗಿ ನೇರವಾಗಿ ವಿದ್ಯಾರ್ಥಿಗಳಿಗೆ ದೊರಕುವಂತೆ ತಮ್ಮದೇ ಆದ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ೩ ಸಂಪುಟಗಳಲ್ಲಿ ಹೊರತಂದರು ಹೊಯ್ಸಳ ಶಿಲ್ಪಗಳ ಬಗ್ಗೆ ಅಧ್ಯಯನ ಮಾಡಲು ಶ್ರವಣಬೆಳುಗೊಳಕ್ಕೆ ಹೋದಾಗ, ಚಿಕ್ಕಬೆಟ್ಟದಲ್ಲಿನ ಸಲ್ಲೇಖನ ವ್ರತದ ಆಚರಣೆ ಬಹಳ ಆಸಕ್ತಿ ಮೂಡಿಸಿತು.

ವಿದೇಶದಲ್ಲಿ ಅಧ್ಯಯನ[ಬದಲಾಯಿಸಿ]

ಅದೇ ವೇಳೆಯಲ್ಲಿ ಇಂಗ್ಲೆಂಡ್ ದೇಶದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕರೆಯ ಮೇರೆಗೆ, ಇಂಗ್ಲೆಡ್ ಗೆ ಹೊರಟುಹೋದರು. ಹಾಗೆಯೇ ಅಧ್ಯಯನ ನಿರತರಾಗಿದ್ದ ಶೆಟ್ಟರ ಗಮನೆಕ್ಕೆ ಬಂದದ್ದು, ಅಲ್ಲಿನ ಗ್ರಂಥಾಲಯದಲ್ಲಿ ವಿಶ್ವದ ಮರಣ ಪ್ರಕ್ರಿಯೆಯ ಬಗ್ಗೆ ಭಾರತದ ಯಾವ ಗ್ರಂಥಗಳೂ ಇರಲಿಲ್ಲ. ಶೆಟ್ಟರ್ ತಮ್ಮ ಶ್ರವಣಬೆಳುಗೊಳದ ಅಧ್ಯಯನ, ಮತ್ತು ಸಾಹಿತ್ಯ ಪರಂಪರೆಯ ಓದಿನಿಂದ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದರು. ಆ ಪ್ರಬಂಧಗಳನ್ನು ಪ್ರಕಟಿಸಲು ಬೇಡಿಕಿ ಬಂದಾಗ್ಯೂ ಮಣಿಯದೆ ತಮ್ಮ ತಾಯ್ನಾಡಿಗೆ ವಾಪಸ್ಸಾದರು. 

ಪ್ರಮುಖ ಕೃತಿಗಳು[ಬದಲಾಯಿಸಿ]

  1. ಮೊದಲನೆಯ ಕೃತಿ, Inviting deathರಚಿಸುವಾಗ, ಕ್ರಿ.ಶ ಮೂರರಿಂದ ೧೮ ನೆಯ ಶತಮಾನದ ಜೈನರು ಮರಣಿಸಿದ ವಾಸ್ತವ ಇತಿಹಾಸವನ್ನು ಶ್ರವಣಬೆಳುಗೊಳದಲ್ಲಿರುವ ಸಮಾಧಿ ಬೆಟ್ಟವನ್ನು ಕೇಂದ್ರ ವಾಗಿಸಿಕೊಂಡು ಶಾಸನಗಳನ್ನು ಪ್ರಧಾನ ಆಕಾರಗಳನ್ನಾಗಿಸಿಕೊಂಡರು. 
  2. ಎರಡನೆಯ ಗ್ರಂಥ, Perusing death ಇದು ಮರಣ ಸಿದ್ಧಾಂತದ ತಲಸ್ಪರ್ಶಿ ಶೋಧನೆ ಇದು ಅನೇಕ ಆಕರಗಳನ್ನು : ಸಾಹಿತ್ಯ, ಶಾಸ್ತ್ರಗ್ರಂಥ,ಶಾಸನ, ವಾಸ್ತುಶಿಲ್ಪ,.ಐತಿಹ್ಯ,ಸಮಕಾಲೀನ ಆಚರಣಾ ವಿಧಾನ-ಗಳನ್ನೂ ಆಧರಿಸಿ ಬರೆದದ್ದು. ಇದನ್ನು ಬರೆಯುವಾಗ ಕನ್ನಡ ಜೈನ ಸಾಹಿತ್ಯವನ್ನು ಸಮಗ್ರವಾಗಿ ಬಳಸಿಕೊಂಡರು.

ಕನ್ನಡ ಭಾಷಾನುವಾದ[ಬದಲಾಯಿಸಿ]

ಇವೆರಡು ಕೃತಿಗಳು ಕನ್ನಡ ಭಾಷೆಯಲ್ಲಿ, "ಸಾವನ್ನು ಅರಸಿ" ಮತ್ತು "ಸಾವನ್ನು ಸ್ವಾಗತಿಸಿ" ಎಂದು ಅನುವಾದಗೊಂಡಿವೆ.ಇದಕ್ಕೂ ಮೊದಲು,ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯಕ್ಕೆ "Hoysala temples", ಎಂಬ ಹೆಸರಿನಲ್ಲಿ ಮಂಡಿಸಿದ ಪ್ರಬಂಧ, ೨ ಸಂಪುಟಗಳು ಪ್ರಕಟಗೊಂಡಿವೆ. 

ಹುದ್ದೆಗಳು[ಬದಲಾಯಿಸಿ]

  1. ದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಅಧ್ಯಕ್ಷರಾಗಿ,
  2. ಭೂಪಾಲದ ಇಂದಿರಾ ಗಾಂಧಿ ಮಾನವ ಸಂಗ್ರಹಾಲಯದ ನಿದೇಶಕರಾಗಿ
  3.  ಬೆಂಗಳೂರು ಪ್ರಾದೇಶಿಕ ಕೇಂದ್ರದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ನಿದೇಶಕರಾಗಿ,
  4. ನ್ಯಾಷನಲ್ ಇನ್ಸ್ಟಿ ಟ್ಯೂಟ್ ನ ರಾಧಾಕೃಷ್ಣ ಛೇರ್ ನಲ್ಲಿ ಪ್ರಾಧ್ಯಾಪಕರಾಗಿ ಮಾಡಿದ ಸೇವೆ ಪ್ರಮುಖವಾದುದು. 

[೧]

  1. ಸಹೃದಯಿ, ಸಂಪಾದಕ, ಸಾಪ್ತಾಹಿಕ ಸಂಪದ, ಉದಯವಾಣಿ, ಏನ್. ರವಿಕುಮಾರ್  ಪು.೦೮, ಮಾರ್ಚ್, ೦೮, ೨೦೨೦