ಸದಸ್ಯ:Rachanasis12/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಸಾಹಿತ್ಯ ಲೋಕದಲ್ಲಿ, 'ಎನ್ನೆಸ್ಸೆಲ್,' ಎಂದೇ ಮನೆಮಾತಾಗಿರುವ 'ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ'ರು, ’ಭಾವಗೀತೆ ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳನ್ನು ರಚಿಸಿದ್ದಾರೆ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ಬಳಿಕ ಕಾಲೇಜಿನಲ್ಲಿ ಅಧ್ಯಾಪಕರಾದರು. ಅವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಸಮರ್ಥವಾಗಿ ಕೃತಿರಚನೆ ಮಾಡಬಲ್ಲವರಾಗಿದ್ದಾರೆ.ಶಿವಮೊಗ್ಗದಲ್ಲಿ 'ಇಂಟರ್ ಮೀಡಿಯೆಟ್ ಮುಗಿಸಿ', ಕನ್ನಡ ’ಎಂ.ಎ. ಆನರ್ಸ್ ಪದವಿ’ ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿಯನ್ನು ಹೊ೦ಧಿದ್ದಾರೆ. ’ತೀನಂಶ್ರೀ’ಅವರ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ ಅಧ್ಯಾಪಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿಯ ಡೀನ್ ಆದರು. ಮೈಸೂರು ವಿಶ್ವವಿದ್ಯಾಲಯದ ’ಪಿ ಎಚ್ ಡಿ’ ಪದವಿಗೆ ’ಆಧುನಿಕ ಕನ್ನಡ ಕಾವ್ಯ’ ಕುರಿತು ಪ್ರಬಂಧ ಸಾದರಪಡಿಸಿದರು. 'ತೀನಂಶ್ರೀ', 'ಸಿಡಿಎನ್', 'ಡಿಎಲ್ಎನ್', 'ಶ್ರೀಕಂಠ ಶಾಸ್ತ್ರಿ' ಮೊದಲಾದ ಶ್ರೇಷ್ಟ ಮಟ್ಟದ ಆಚಾರ್ಯರ ಚಿಂತನ ಧಾರೆಯಿಂದ ಪ್ರಭಾವಿತರಾಗಿದ್ದರು. 'ಹಳೆಗನ್ನಡ ಕಾ’ಶಿಶುಸಾಹಿತ್ಯ’ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ’ಎನ್.ಸಿ.ಆರ್.ಟಿ’ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ’ಮೃಚ್ಛಕಟಿಕ’, ’ಇಸ್ಪೀಟ್ ರಾಜ್ಯ’, ’ಟ್ವೆಲ್ಫ್ತ್ ನೈಟ್’, ಮತ್ತು ’ಭಾರತೀಯ ’ಗ್ರಂಥ ಸಂಪಾದನಾ ಪರಿಚಯ’, ’ಕನ್ನಡ ಮಾತು’ ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ.ವ್ಯ'ಗಳನ್ನು 'ನವೀನ ಸಾಹಿತ್ಯ'ದೊಂದಿಗೆ ಸಮನಾಗಿ ಜೀರ್ಣಿಸಿಕೊಂಡರು. ಇಂಗ್ಲೀಷ್ ಮತ್ತು ಸಂಸ್ಕೃತಸಾಹಿತ್ಯದಲ್ಲೂ ಅವರ ಅಧ್ಯಯನ ಪುಟಗೊಂಡಿದೆ. ’ಶಿಶುಸಾಹಿತ್ಯ’ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ’ಎನ್.ಸಿ.ಆರ್.ಟಿ’ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ’ಮೃಚ್ಛಕಟಿಕ’, ’ಇಸ್ಪೀಟ್ ರಾಜ್ಯ’, ’ಟ್ವೆಲ್ಫ್ತ್ ನೈಟ್’, ಮತ್ತು ’ಭಾರತೀಯ ’ಗ್ರಂಥ ಸಂಪಾದನಾ ಪರಿಚಯ’, ’ಕನ್ನಡ ಮಾತು’ ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ. ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ. ಸ್ವಲ್ಪಕಾಲ ಸುಗಮ ಸಂಗೀತದ ಮಾಧುರ್ಯತೆ ಎಲ್ಲೋ ತನ್ನ ಇರುವಿಕೆಯನ್ನು ಕಡಿಮೆಮಾಡಿಕೊಂಡಿತೇನೋ ಎನ್ನುವ ಭಾವನೆ ಕಂಡಾಗ 'ಎನ್ನೆಸ್ಸೆಲ್' ರ ’ಭಾವಗೀತೆ’ಗಳು ಮರಳಿ’ ಜನರೆಲ್ಲರ ಬಾಯಿನಲ್ಲಿ ಗುನುಗುಟ್ಟುವಂತಾಯಿತು. ’ಶಿವಮೊಗ್ಗ ಸುಬ್ಬಣ್ಣ’, ’ಸಿ.ಅಶ್ವಥ್’, ’ಮೈಸೂರು ಅನಂತಸ್ವಾಮಿ’, ’ಎಚ್.ಕೆ.ನಾರಾಯಣ’ ಮೊದಲಾದವರು, ಅನೇಕ 'ಸುಗಮ ಸಂಗೀತ ಗಾಯಕರು’, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಡಾ. ಲಕ್ಷ್ಮೀನಾರಾಯಣ ಭಟ್ಟರು, ಇಂತಹ ಹಲವಾರು 'ಧ್ವನಿ ಸುರಳಿ'ಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆಯನ್ನು ಮಾಡಿದ್ದಾರೆ. ಅವುಗಳ ವಿವರಗಳು ಕೆಳಗೆ ಕಂಡಂತಿವೆ : ’ದೀಪಿಕಾ’ ’ಭಾವಸಂಗಮ’ ’ನೀಲಾಂಜನ’ ’ಬಾರೋ ವಸಂತ’ ’ಕವಿತಾ’ ’ಮಾಧುರಿ’ ’ಮಂದಾರ’ ’ಬಂದೆ ಬರತಾವ ಕಾಲ’ ’ಅರುಣ ಗೀತೆ, ’ಊರ ಹೊರಗೆ, ’ಕವನ’ ’ಬಿಡುಗಡೆ’ ’ಇದಲ್ಲ ತಕ್ಕ ಗಳಿಗೆ’ ’ಅವತಾರ’ ’ಹಿರಿಯರು’ ’ಕೃತಜ್ಞತೆ’ ’ಪ್ರೀತಿ’ ’ಸವಾರಿ’ ’ಸೀಮಂತಿನಿ’ ’ಮಗನಿಗೊಂದು ಪತ್ರ’ ’ಮೊದಲಾದವು ಅವರ ಸಮರ್ಥ ಕವನಗಳು.