ಸದಸ್ಯ:R Thippeswamy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಮಹಿಳಾ ಅಯೋಗವು ಒಂದು ಬಾರತ ಸರ್ಕಾರದ ಶಾಸನ ಬದ್ದ ಅಂಗವಾಗಿದೆ.ಇದು ಸಾಮಾನ್ಯವಾಗಿ ಮಹಿಳೆಯರ ಮೇಲೆ ಪ್ರಭಾವ ಬೀರುವ ಎಲ್ಲಾ ನೀತಿ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ.೧೯೯೦ ರ ರಾಷ್ಟ್ರೀಯ ಮಹಿಳಾ ಅಯೋಗ ಕಾಯ್ಡೆಯಡಿಯಲ್ಲಿ ಈ ಅಯೋಗವನ್ನು ಜನವರಿ ೧೯೯೨ ರಂದು ಜಾರಿಗೆ ತರಲಾಯಿತು. ಇದರ ಪ್ರಥಮ ಅಧ್ಯಕ್ಷರು ಜಯಂತಿ ಪಟ್ನಾಯಕ್, ಪ್ರಸ್ತುತ ೨೦೧೭ ರಿಂದ ರೇಖಾ ಶರ್ಮ ರವರು ಅಧ್ಯಕ್ಷರಾಗಿದ್ದಾರೆ.

ಉದ್ದೇಶಗಳು ಭಾರತದಲ್ಲಿ ಮಹಿಳೆಯರ ಹಕ್ಕುಗಳನ್ನು ಪ್ರತಿನಿಧಿಸುವುದು, ಅವರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಧ್ವನಿಗೂಡಿಸುವುದು, ಅವರ ಅಭಿಯಾನದ ವಿಷಯಗಳು, ವರದಕ್ಷಿಣೆ, ರಾಜಕೀಯ,ಧರ್ಮ,ಉದ್ಯೋಗಗಳಲ್ಲಿ ಮಹಿಳೆಯರಿಗಾಗಿ ಸಮಾನ ಪ್ರಾತಿನಿಧ್ಯವನ್ನು ಮತ್ತು ಮಹಿಳಾ ಕಾರ್ಮಿಕರನ್ನು ಶೋಷಣೆ ಮಾಡುವುದನ್ನು ತಪ್ಪಿಸುವುದು. ಈ ಅಯೋಗವು ನಿಯಮಿತವಾಗಿ ರಾಷ್ಟ್ರ ಮಹಿಳಾ ಎಂಬ ಮಾಸಿಕ ಸುದ್ದಿ ಪತ್ರಿಕೆಯನ್ನು ಇಂಗ್ಲಿಷ್ ಮತ್ತು ಹಿಂದಿ ಎರಡು ಭಾಷೆಯಲ್ಲಿ ಪ್ರಕಟಿಸುತ್ತದೆ.

ವಿವಾದಗಳು ಡಿಸೆಂಬರ್ 2006 ಮತ್ತು ಜನವರಿ 2007 ರಲ್ಲಿ, ಭಾರತೀಯ ಪೀನಲ್ ಕೋಡ್ನ ಸೆಕ್ಷನ್ 497 ವನ್ನು ವ್ಯಭಿಚಾರದ ಹೆಂಡತಿಯರನ್ನು ತಮ್ಮ ಗಂಡಂದಿರು ಸಮಾನವಾಗಿ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಬದಲಾಯಿಸಬಾರದು ಎಂಬ ಒತ್ತಾಯದ ಮೇರೆಗೆ NCW ಒಂದು ಸಣ್ಣ ವಿವಾದದ ಮಧ್ಯದಲ್ಲಿ ಕಂಡುಬಂತು.