ಸದಸ್ಯ:RB GURUBASAVARAJ/ನನ್ನ ಪ್ರಯೋಗಪುಟ೩
ಹಿತೇಶ್ ಕುಮಾರಿ
[ಬದಲಾಯಿಸಿ]ಹಿತೇಶ್ ಕುಮಾರಿ (ಜನನ 18 ಮಾರ್ಚ್ 1942) ಅವರು ಉತ್ತರ ಪ್ರದೇಶದ ಹಿಂದುಳಿದ ನಾಯಕರಾಗಿದ್ದರು. ಅವರು [[ಲೋಧಿ|ಲೋಧಿ ಜಾತಿಗೆ ಸೇರಿದರಾಗಿದ್ದರು. ಅವರು 1985 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೧] ಅನ್ನು ಪ್ರತಿನಿಧಿಸಿ, ಬುಲಂದ್ ಶಹರ್ ಜಿಲ್ಲೆಯ ದೇಬಾಯ್ ಕ್ಷೇತ್ರಕ್ಕೆ ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 1988 ರಲ್ಲಿ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಎನ್.ಡಿ ತಿವಾರಿಯವರು ಹಿತೇಶ್ ಕುಮಾರಿ ಅವರನ್ನು ಜಲಸಂಪನ್ಮೂಲ ಖಾತೆಯ ಸಚಿವರನ್ನಾಗಿ ಆಯ್ಕೆಮಾಡಿದರು.
ಹಿತೇಶ್ ಕುಮಾರಿ ಅವರು ಬುಲಂದ್ ಶಹರ್ ಜಿಲ್ಲೆಯ ಎರಡನೇ ಮಹಿಳಾ ಶಾಸಕರಾಗಿದ್ದರು ಮತ್ತು ಜಿಲ್ಲೆಯ ಮೊದಲ ಮಹಿಳಾ ಸಚಿವರಾಗಿದ್ದರು. ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡರು. ನಂತರ ಅವರು 2007 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು. 2015 ರಲ್ಲಿ ಸಮಾಜವಾದಿ ಪಕ್ಷದ ಮಹಿಳಾ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2021 ರಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಯಾದವ್ [೨] ಅವರು ಹಿತೇಶ್ ಕುಮಾರಿಯವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಿದರು.