ಸದಸ್ಯ:Princeps linguae/ಪ್ರಮೇಯಶ್ಲೋಕ
ಗೋಚರ
ಪ್ರಮೇಯಶ್ಲೋಕ ಎಂದರೆ ದ್ವೈತಮತದ ಪ್ರಮುಖ ದಾರ್ಶನಿಕ ಶ್ರೀ ವ್ಯಾಸತೀರ್ಥರಿಂದ ರಚಿಸಿರುವ ಒಂದು ಶ್ಲೋಕ. ಈ ಶ್ಲೋಕವು ಶ್ರೀ ಮಧ್ವಾಚಾರ್ಯರು ಸಂಸ್ಥಾಪಿಸಿದ್ದ ದ್ವೈತವೇದಾಂತದ ಒಂಬತ್ತು ಮೂಲ ತತ್ತ್ವಗಳನ್ನು ವರ್ಣಿಸುತ್ತದೆ. [೧]
ಶ್ಲೋಕದ ಒಳಪಿಡಿ
[ಬದಲಾಯಿಸಿ]ಸಂಸ್ಕೃತದಲ್ಲಿ ರಚಿಸಿರುವ ಈ ಶ್ಲೋಕವನ್ನು ಕನ್ನಡಲಿಪಿಯಲ್ಲಿ ಕೆಳಗೆ ಕೊಡಲಾಗಿದೆ:
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾ ನೀಚೋಚ್ಚಭಾವಂ ಗತಾಃ |
ಮುಕ್ತಿರ್ನೈಜ ಸುಖಾನುಭೂತಿರಮಲ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||
ದೇವನಾಗರಿಯಲ್ಲಿ:
श्रीमन्मध्वमते हरिः परतरः सत्यं
जीवगणा हरेरनुचराः नीचोच्चभावं गताः
मुक्तिर्नैजसुखानुभूतिरमला भक्तिश्च तत्साधनम्
प्रमाणमखिलाम्नायैकवेद्यो हरिः
ಈ ಶ್ಲೋಕವನ್ನು ಅಕ್ಷರಶಃ ಹೀಗೆ ಕನ್ನಡಿಸಬಹುದು:
- ಹರಿಃ ಪರತರಃ (ಹರಿ ಸರ್ವೋತ್ತಮ)
- ಸತ್ಯಂ ಜಗತ್ (ಜಗತ್ತು ಸತ್ಯ)
- ತತ್ತ್ವತೋ ಭೇದಃ (ಭೇದ ನಿಜವಾಗಲು ಇದೆ)
- ಜೀವಗಣಾಃ ಹರೇರನುಚರಾಃ (ಜೀವಿಗಳ ಗಣಗಳು ಹರಿಯ ಅನಚರಗಳು)
- ನೀಚೋಚ್ಚ ಭಾವಂಗತಾಃ (ಕೆಳಗಿನ ಹಾಗೂ ಮೇಲಿನ ಸ್ಥಿತಿಗಳಿಗೆ ಹೋಗುತ್ತಿವೆ)
- ಮುಕ್ತಿರ್ನೈಜಸುಖಾನುಭೂತಿಃ (ಮುಕ್ತಿ ತನ್ನದೇ ಸುಖದ ಅನುಭವ)
- ಅಮಲಾ ಭಕ್ತಿಶ್ಚ ತತ್ಸಾಧನಮ್ (ಮತ್ತು ಅಮತ ಭಕ್ತಿ ಅದರ ಸಾಧನೆ)
- ಹ್ಯಕ್ಷಾದಿತ್ರಿತ್ಯಂ ಪ್ರಮಾಣಮ್ (ಪ್ರತ್ಯಕ್ಷದಿಂದ ಪ್ರಾರಂಭವಾಗುವ ತ್ರಯವು ಪ್ರಮಾಣವಾಗಿದೆ)
- ಅಖಿಲಾನಾಯೈಕವೇದ್ಯೋ ಹರಿಃ (ಎಲ್ಲಾ ಆಗಮಗಳಿಂದ ಒಂದೇ ತಿಳಿಯಬೇಕಾದುದು ಹರಿ)
ಉಲ್ಲೇಖಗಳು
[ಬದಲಾಯಿಸಿ][[ವರ್ಗ:ದ್ವೈತ]] [[ವರ್ಗ:ಹಿಂದೂ ಧರ್ಮ]] [[ವರ್ಗ:ಹಿಂದೂ ಧರ್ಮದ ಇತಿಹಾಸ]]