ಶ್ಲೋಕ
ಗೋಚರ
ಶ್ಲೋಕವು (श्लोक - ಇದರ ಮೂಲ ಶ್ರು - ಅಕ್ಷರಶಃ ಇದರ ಅರ್ಥ 'ಕೇಳು'[೧][೨]) ವೈದಿಕ ಅನುಷ್ಟುಭ್ ಛಂದಸ್ಸಿನಿಂದ ಜನಿಸಿದ ಪದ್ಯಪಂಕ್ತಿಯ ಒಂದು ವರ್ಗ. ಇದು ಭಾರತೀಯ ಮಹಾಕಾವ್ಯ ಪದ್ಯಕ್ಕೆ ಆಧಾರವಾಗಿದೆ, ಮತ್ತು ಇದನ್ನು ಸರ್ವಶ್ರೇಷ್ಠ ಭಾರತೀಯ ಪದ್ಯರೂಪವೆಂದು ಪರಿಗಣಿಸಬಹುದು. ಇದು ಶಾಸ್ತ್ರೀಯ ಸಂಸ್ಕೃತ ಕಾವ್ಯದಲ್ಲಿ ಯಾವುದೇ ಇತರ ಛಂದಸ್ಸಿಗಿಂತ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಮಹಾಭಾರತ ಮತ್ತು ರಾಮಾಯಣಗಳನ್ನು ಬಹುತೇಕ ಕೇವಲ ಶ್ಲೋಕಗಳಲ್ಲಿ ಬರೆಯಲಾಗಿದೆ. ಈ ಪದ್ಯರೂಪವನ್ನು ರಾಮಾಯಣದ ಲೇಖಕನಾದ ವಾಲ್ಮೀಕಿಯು, ಪ್ರೀತಿಯಲ್ಲಿದ್ದ ಎರಡು ಪಕ್ಷಿಗಳಲ್ಲಿ ಒಂದನ್ನು ಒಬ್ಬ ಬೇಡನು ಹೊಡೆದಿದ್ದನು ನೋಡಿ, ಅನೈಚ್ಛಿಕವಾಗಿ ರಚಿಸಿದನು ಎಂಬುದು ಸಾಂಪ್ರದಾಯಿಕ ಅಭಿಪ್ರಾಯವಾಗಿದೆ.[೩] ಶ್ಲೋಕವನ್ನು ದ್ವಿಪದಿಯಾಗಿ ಕಾಣಲಾಗುತ್ತದೆ. ೧೬ ಪದಾಂಶಗಳ ಪ್ರತಿಯೊಂದು ಅರ್ಧಪಾದವು ಎಂಟು ಪದಾಂಶಗಳ ಎರಡು ಪಾದಗಳನ್ನು ಹೊಂದಿರುತ್ತದೆ, ಮತ್ತು ಪಠ್ಯ ರೂಪ ಅಥವಾ ಹಲವಾರು ವಿಪುಲ ರೂಪಗಳಲ್ಲಿ ಒಂದನ್ನು ತೆಗೆದುಕೊಳ್ಳಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Sanskrit Slokas With Meaning in Hindi
- ↑ Macdonell, Arthur A., A Sanskrit Grammar for Students, Appendix II, p. 232 (Oxford University Press, 3rd edition, 1927).
- ↑ Monier Monier-Williams (1923). A Sanskrit-English Dictionary. Oxford University Press. pp. 1029–1030.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Shloka, Shuroka (Japanese) Dictionary of Buddhism
- [೧] To read Akshara slokams in Malayalam
- [೨] Link to Malayalam Aksharaslokam