ವಿಷಯಕ್ಕೆ ಹೋಗು

ಸದಸ್ಯ:Preethivaradhya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪ್ಪಿಟ್ಟು

[ಬದಲಾಯಿಸಿ]

'ಉಪ್ಪಿಟ್ಟು' ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ್ತಾರೆ. ಇದನ್ನು ಸವಿಯುವಾಗ ಕೇಸರಿ ಬಾತ್ ಅನ್ನು ಜೊತೆಗೆ ಸೇಸೇರಿಸುವುದು ಒಂದು ಸುಂದರವಾದ ಸಂಯೋಜನೆ ಎನ್ನಬಹುದು. ಇದರ ತಯಾರಿಯಲ್ಲಿ ಬಳಸುವ ಕ್ಯಾರೆಟ್, ಕ್ಯಾಪ್ಸಿಕಮ್, ಬಟಾಣಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಇದರ ರುಚಿಯನ್ನು ಹೆಚ್ಚಿಸುತ್ತವೆ. ಆದ್ರೆ ನಾವಿಂದು ಅವರೇಕಾಳು ಹಾಕಿ ಮಾಡುವ ಮಸಾಲೆ ಉಪ್ಪಿಟ್ಟಿನ ಬಗ್ಗೆ ತಿಳಿದುಕೊಳ್ಳೋಣ. ಅವರೇ ಕಾಳು ಉಪ್ಪಿಟ್ಟು ಬೇರೆಲ್ಲಾ ಉಪ್ಪಿಟ್ಟಿಗಿಂತ ಹುಡಿಹುಡಿಯಾಗಿ ರುಚಿ ರುಚಿಯಾಗಿ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾದ್ರೆ ಈ ಅವರೇ ಕಾಳು ಉಪ್ಪಿಟ್ಟು ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಅವರೆಕಾಳು ಉಪ್ಪಿಟ್ಟಿನ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ಅವರೆಕಾಳು ಉಪ್ಪಿಟ್ಟ ಮಾಡಲು ಬೇಕಾಗುವ ಪದಾರ್ಥಗಳು

  • ರವಾ -1 ಗ್ಲಾಸ್
  • ಲಿಮಾ ಬೀನ್ಸ್ - 1 ಕಪ್
  • ಈರುಳ್ಳಿ - 2
  • ಟೊಮೇಟೊ - 1
  • ಕ್ಯಾರೆಟ್ - 1
  • ಶುಂಠಿ -1/2
  • ಇಂಚು ಬೆಳ್ಳುಳ್ಳಿ - 2
  • ಹಸಿರು ಮೆಣಸಿನಕಾಯಿ - 4
  • ಪುದೀನ ಎಲೆಗಳು - 2ಟೀಸ್ಪೂನ್
  • ಕೊತ್ತಂಬರಿ ಸೊಪ್ಪು - 2 tbs
  • ತೆಂಗಿನಕಾಯಿ
  • ಜೀರಿಗೆ - 1/4
  • ಟೀಸ್ಪೂನ್ ಸಾಸಿವೆ - 1/4
  • ಮಸಾಲಾ ಪುಡಿ - 1/4
  • ಟೀಸ್ಪೂನ್ ಪಲಾವ್ ಎಲೆಗಳು - 2
  • ಏಲಕ್ಕಿ-2
  • ಲವಂಗ-4
  • ದಾಲ್ಚಿನ್ನಿ - 2 ಪೀಸ್
  • ಕರಿಬೇವಿನ ಎಲೆಗಳು
  • ಸೋಂಕಾಳು
  • ಅಡುಗೆ ಎಣ್ಣೆ
  • ರುಚಿಗೆ ಉಪ್ಪು

ಅವರೆಕಾಳು ಉಪ್ಪಿಟ್ಟ ಮಾಡುವ ವಿಧಾನ

ಒಂದು ಲೋಟದಲ್ಲಿ ಉಪ್ಪಿಟ್ಟು ರವೆ ತೆಗೆದುಕೊಂಡು ಅದನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 5 ನಿಮಿಷ ಹುರಿದರೆ ಸಾಕು. ಇನ್ನೊಂದು ಕಡೆ ಶುಂಠಿ, ಏಲಕ್ಕಿ, ಮೆಣಸಿನ ಕಾಯಿ, ಬೆಳ್ಳುಳ್ಳಿ, ಪುದೀನ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾವಿವೆ, ಜೀರಿಗೆ, ಪಲಾವ್, ಎಲೆ, ಚಕ್ರಮೊಗ್ಗು ಹಾಗೂ ಎಲ್ಲ ಮಸಾಲೆ ವಸ್ತು ಹಾಕಿ ಫ್ರೈ ಮಾಡಿ. ಬಳಿಕ ಇದಕ್ಕೆ ಈರುಳ್ಳಿ, ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಬಳಿಕ ಹಸಿ ಅವರೆಕಾಳು, ಉಪ್ಪು ಹಾಕಿ ಪ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ರುಬ್ಬಿಕೊಂಡ ಮಸಾಲೆ ಹಾಕಿ 3 ನಿಮಿಷ ಫ್ರೈ ಮಾಡಿ.

ಇದಾದ ಮೇಲೆ ಟೊಮೆಟೋ, ಗರಂ ಮಸಾಲಾ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ರವೆ ತೆಗೆದುಕೊಂಡ ಕಪ್‌ನಲ್ಲಿಯೇ 2ರಷ್ಟು ನೀರು ಹಾಕಿಕೊಳ್ಳಿ. ಈ ನೀರು ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಇದಕ್ಕೆ ಹುರಿದಿಟ್ಟುಕೊಂಡ ರವೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಮಿಕ್ಸ್ ಮಾಡಿ ಬಳಿಕ ಮುಚ್ಚಳ ಮುಚ್ಚಿ ಬಿಡಿ. ಮಧ್ಯದಲ್ಲಿ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಉಪ್ಪಿಟ್ಟು ಸವಿಯಲು ರೆಡಿಯಾಗುತ್ತದೆ.