ಸದಸ್ಯ:Prashanth Bhavani Shankar/ನನ್ನ ಪ್ರಯೋಗಪುಟ 2

ವಿಕಿಪೀಡಿಯ ಇಂದ
Jump to navigation Jump to search
ಮೇಲಿನ ಚಿತ್ರದಲ್ಲಿ ಒಂದು ಸಾಂಕ್ರಾಮಿಕ ರೋಗ ಒಂದು ಸಮುದಾಯದಲ್ಲಿ ಹೇಗೆ ಕೆಲವೇ ಕೆಲವು ಸೋಂಕಿತರಿಂದ (ಕೆಂಪು ಬಣ್ಣದಲ್ಲಿ ತೋರಿಸಲ್ಪಟ್ಟಿದೆ) ಇತರ ಆರೋಗ್ಯವಂತ ಆದರೆ ಲಸಿಕೆ ಹಾಕಿಸಿಕೊಳ್ಳದವರಿಗೆ ಹರಡುತ್ತದೆ (ನೀಲಿ ಬಣ್ಣದಲ್ಲಿ ತೋರಿಸಲ್ಪಟ್ಟಿದೆ); ಈ ಖಾಯಿಲೆ ಸುಲಭವಾಗಿ ಇಡೀ ಸಮುದಾಯದಲ್ಲಿ ಹರಡುತ್ತದೆ. ಮಧ್ಯದ ಚಿತ್ರದಲ್ಲಿ ಸಮುದಾಯದಲ್ಲಿ ಸ್ವಲ್ಪ ಪ್ರಾಮಾಣದ ಜನರಿಗೆ ಲಸಿಕೆ ಹಾಕಿಸಲಾಗಿದೆ (ಹಳದಿ ಬಣ್ಣದಲ್ಲಿ ತೋರಿಸಲ್ಪಟ್ಟಿದೆ); ಲಸಿಕೆ ಹಾಕಿಸಿಕೊಳ್ಳದವರಿಗೆ ಸೋಂಕು ತಗುಲುತ್ತದೆ, ಹಾಕಿಸಿಕೊಂಡವರಿಗೆ ತಗುಲದು. ಕೆಳಗಿನ ಚಿತ್ರದಲ್ಲಿ, ಸಮುದಾಯದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ; ಲಸಿಕೆ ಹಾಕಿಸಿಕೊಳ್ಳದವರಿಗೂ ಸೇರಿ ಇತರರಿಗೂ ಸೋಂಕು ಅಷ್ಟಾಗಿ ಹರಡದು. ಮೊದಲೆರಡು ಉದಾಹರಣೆಗಳಲ್ಲಿ, ಸಮುದಾಯದಲ್ಲಿ ಲಸಿಕೆ ಹಾಕಿಸಿಕೊಳ್ಳದ ಆರೋಗ್ಯವಂತರು ಅತ್ಯಂತ ಹೆಚ್ಚು ಸೋಂಕಿಗೆ ತುತ್ತಾಗುತ್ತಾರೆ, ಆದರೆ ಕೆಳಗಿನ ಉದಾಹರಣೆಯಲ್ಲಿ ಬರೇ ಕಾಲು ಭಾಗ ಲಸಿಕೆ ಹಾಕಿಸಿಕೊಳ್ಳದ ಆರೋಗ್ಯವಂತರು ಸೋಂಕಿತರಾಗುತ್ತಾರೆ.

ಇದು ಒಂದು ಸಮುದಾಯದಲ್ಲಿ, ಒಂದು ಸಾಂಕ್ರಾಮಿಕ ಖಾಯಿಲೆಯು, ವ್ಯಾಕ್ಸಿನೇಷನ್ ಅಥವಾ ಹಿಂದಿನ ಸೋಂಕುಗಳ ಮೂಲಕ ಹೆಚ್ಚಿನ ಸಂಖ್ಯೆಯ ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಂಡಿದ್ದರೆ, ರೋಗನಿರೋಧಕ ಶಕ್ತಿಯು ಕಡಿಮೆಯಿರುವ ವ್ಯಕ್ತಿಗಳಿಗೂ ಕೂಡ, ಈ ಸಾಂಕ್ರಾಮಿಕ ಖಾಯಿಲೆಯಿಂದ ಸ್ವಲ್ಪ ಮಟ್ಟಿನ ರಕ್ಷಣೆ ಸಿಗುತ್ತದೆ. ಇದನ್ನು ಸಮುದಾಯ ರೋಗರಕ್ಷಣಾ ಎಂದು ಕರೆಯುತ್ತಾರೆ (ಹೆರ್ಡ ಇಮ್ಯುನಿಟಿ-Herd Immunity). ಒಂದು ಸಮುದಾಯದಲ್ಲಿ ಅಧಿಕ ಜನರ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿದ್ದರೆ, ಆಗ ಈ ಜನರು ಸೋಂಕು ಹರಡುವ ಸಂಭವ ಕಡಿಮೆ. ಇದರಿಂದಾಗಿ ಸೋಂಕಿನ ಸರಪಳಿ ಮುರಿಯುವ ಕಾರಣ, ರೋಗ ಹರಡುವ ಪ್ರಮಾಣ ಕಡಿಮೆಯಾಗುತ್ತದೆ ಅಥವಾ ನಿಂತೇ ಹೋಗುತ್ತದೆ. ರೋಗ ಪ್ರತಿರೋಧಕ ಶಕ್ತಿ ಹೊಂದಿದವರ ಪ್ರಮಾಣ ಹೆಚ್ಚಾಗಿದ್ದಾಗ, ಪ್ರತಿರೋಧಕ ಶಕ್ತಿ ಕಡಿಮೆಯಿರುವವರಿಗೆ ಅವರ ಸಂಪರ್ಕವಾದರು ಅದು ಅವರಿಂದ ಹರಡದು. ಆ ಕಾರಣ ಅವರಿಗೆ ಸೋಂಕು ಹರಢುವ ಸಾಧ್ಯತೆ ಕ್ಷೀಣಿಸುತ್ತದೆ ಮತ್ತು ಈ ಮೂಲಕ ಪ್ರತಿರೋಧಕ ಶಕ್ತಿ ಕಡಿಮೆಯಿರುವವರರ ರಕ್ಷಣೆಯಾಗುತ್ತದೆ.

ಲಸಿಕೆಯ ಮೂಲಕ ಒಬ್ಬರು ಈ ಸೋಂಕುಗಳಿಗೆ ರೋಗನಿರೋಧಕ ಶಕ್ತಿಯನ್ನು ಗಳಿಸುತ್ತಾರೆ. ಕೆಲವರಿಗೆ ಅವರ ದೇಹ ಪ್ರಕೃತಿಯಲ್ಲಿ ಇಮ್ಮ್ಯೂನೋ ಡಿಫೀಷಿಯನ್ಸಿ ಅಥವಾ ಇಮ್ಮ್ಯೂನೋ ಸಪ್ಪ್ರೆಸ್ಸೆಂನ್ ಕಾರಣ ರೋಗನಿರೋಧಕ ಶಕ್ತಿ ಅಸಂಭವವಾಗಿರುತ್ತದೆ. ಅಂತಹವರಿಗೆ ಸಮುದಾಯ ರೋಗರಕ್ಷಣಾ ವಿಧಾನವು ಅತ್ಯಂತ ಉಪಕಾರಿಯಾಗಿದೆ. ಒಂದು ಸಮುದಾಯದಲ್ಲಿ ರೋಗನಿರೋಧಕ ಶಕ್ತಿಯಿರುವವರ ಸಂಖ್ಯೆ ಹಚ್ಚಾದರೆ, ಸಮುದಾಯ ರೋಗರಕ್ಷಣಾ ವಿಧಾನವು ಒಂದು ರೋಗವನ್ನು ಹಂತ ಹಂತವಾಗಿ ಕಡಿಮೆ ಮಾಡುವುದರಲ್ಲಿ ಸಫಲವಾಗುತ್ತದೆ. ಹೇಗೆ ವಿಶ್ವದಲ್ಲೆಲ್ಲಾ ಆದಾಗ ಆ ಖಾಯಿಲೆಯು ವಿಶ್ವದಿಂದ ನಿರ್ಮೂಲನವಾಗುತ್ತದೆ. ದಡಾರ ರೋಗದ ಉದಾಹರಣೆ ಇಲ್ಲಿ ಸೂಕ್ತ. ಇದು ನಿರ್ಮೂಲನೆಯಾಗುವುದಕ್ಕೆ ಕಾರಣ ಸಮುದಾಯ ರೋಗರಕ್ಷಣಾ. ಅದರೆ ಇದು ಎಲ್ಲಾ ರೋಗಗಳಿಗೂ ಅನ್ವಯಿಸದು, ಬರೇ ಸೋಂಕಿನಿಂದ ಬರುವ ರೋಗಕ್ಕೆ ಅನ್ವಯಿಸುತ್ತದೆ. ಧನುರ್ವಾತದಂತಹ ರೋಗಗಳಿಗೆ ಇದು ಅನ್ವಯಿಸದು.

ಕಾರಣಗಳು[ಬದಲಾಯಿಸಿ]

ರೋಗ ನಿರೋಧಕ ಶಕ್ತಿಯಿಲ್ಲದವರಿಗೆ ರಕ್ಷಣೆ[ಬದಲಾಯಿಸಿ]

ವಿಕಾಸದ ಒತ್ತಡ[ಬದಲಾಯಿಸಿ]

ಸಿರೊಟೈಪ್ ಬದಲಾವಣೆ[ಬದಲಾಯಿಸಿ]

ರೋಗಗಳ ನಿರ್ಮೂಲನೆ[ಬದಲಾಯಿಸಿ]

ಮೆಕ್ಯಾನಿಕ್ಸ್[ಬದಲಾಯಿಸಿ]

ರೋಗ ನಿರೋಧಕ ಶಕ್ತಿವರ್ಧನೆ[ಬದಲಾಯಿಸಿ]

ವ್ಯಾಕ್ಸಿನೇಷನ್[ಬದಲಾಯಿಸಿ]

ನಿಷ್ಕ್ರಿಯ ರೋಗನಿರೋಧಕ ಶಕ್ತಿ[ಬದಲಾಯಿಸಿ]

ಲಾಭ-ನಷ್ಟದ ಲೆಕ್ಕಾಚಾರ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ದಡಾರಕ್ಕೆ ಸಾಮೂಕಿಕವಾಗಿ ಲಸಿಕೆ ಹಾಕಿಸುವ ಮೊದಲು ಮತ್ತು ನಂತರದ ಚಿತ್ರ.

1930 ರ ದಶಕದಲ್ಲಿ ಎ. ಡಬ್ಲ್ಯೂ ಹೆಡ್ರಿಚ್ ಬಾಲ್ಟಿಮೋರ್ನಲ್ಲಿ ದಡಾರದ ಸಾಂಕ್ರಾಮಿಕ ರೋಗಶಾಸ್ತ್ರದ ಬಗ್ಗೆ ಸಂಶೋಧನೆಯನ್ನು ಪ್ರಕಟಿಸಿದಾಗ ಸಮುದಾಯ ರೋಗರಕ್ಷಣಾ ವಿಧಾನವು ಮೊದಲ ಬಾರಿಗೆ ಗುರುತಿಸಲಾಯಿತು, ಮತ್ತು ಅನೇಕ ಮಕ್ಕಳು ದಡಾರಕ್ಕೆ ರೋಗನಿರೋಧಕವಾಗಿದ್ದ ನಂತರ, ಹೊಸ ಸೋಂಕುಗಳ ಸಂಖ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎಂದು ದೃಡಪತ್ತಿತು. ಈ ಜ್ಞಾನದ ಹೊರತಾಗಿಯೂ, ದಡಾರವನ್ನು ನಿಯಂತ್ರಿಸುವ ಮತ್ತು ತೊಡೆದುಹಾಕುವ ಪ್ರಯತ್ನಗಳು ೧೯೬೦ರ ದಶಕದಲ್ಲಿ ದಡಾರ ಲಸಿಕೆ ಬಳಸಿ ಸಾಮೂಹಿಕ ವ್ಯಾಕ್ಸಿನೇಷನ್ ಪ್ರಾರಂಭವಾಗುವವರೆಗೂ ವಿಫಲವಾದವು. ಸಾಮೂಹಿಕ ವ್ಯಾಕ್ಸಿನೇಷನ್, ರೋಗ ನಿರ್ಮೂಲನೆಯ ಚರ್ಚೆಗಳು ಮತ್ತು ವ್ಯಾಕ್ಸಿನೇಷನ್‌ನ ವೆಚ್ಚ-ಲಾಭದ ವಿಶ್ಲೇಷಣೆಗಳು ನಂತರ herd immunity (ಸಮುದಾಯ ರೋಗರಕ್ಷಣಾ) ಎಂಬ ಪದವನ್ನು ಹೆಚ್ಚು ವ್ಯಾಪಕವಾಗಿ ಬಳಸಲು ಪ್ರಾರಂಭಿಸಲಾಯಿತು. ೧೯೭೦ರ ದಶಕದಲ್ಲಿ, ರೋಗದ ಸಮುದಾಯ ರೋಗರಕ್ಷಣಾ ಮಿತಿಯನ್ನು ಲೆಕ್ಕಹಾಕಲು ಬಳಸುವ ಪ್ರಮೇಯವನ್ನು (theorem) ಅಭಿವೃದ್ಧಿಪಡಿಸಲಾಯಿತು. ೧೯೬೦ ಮತ್ತು ೧೯೭೦ ರ ದಶಕಗಳಲ್ಲಿ ಸಿಡುಬು ನಿರ್ಮೂಲನಾ ಅಭಿಯಾನದ ಸಮಯದಲ್ಲಿ, ಹಿಂಡಿನ ಚುಚ್ಚುಮದ್ದಿನ ಅಭ್ಯಾಸವು (ring vaccination), ಸೋಂಕಿತ ವ್ಯಕ್ತಿಯ ಸುತ್ತ ಇರುವ ಪ್ರತಿಯೊಬ್ಬ ವ್ಯಕ್ತಿಗೆ ರೋಗನಿರೋಧಕ ಚುಚ್ಚುಮದ್ದು ನೀಡಿ ರೋಗ ಹರಡುವಿಕೆಯನ್ನು ತಡೆಗಟ್ಟುವ ಮಾರ್ಗವಾಗಿ ಪ್ರಾರಂಭಿಸವಾಯಿತು (ಸಮುದಾಯ ರೋಗರಕ್ಷಣಾ ಇದರ ಅವಿಭಾಜ್ಯ ಅಂಗವಾಗಿದೆ).

ಸಾಮೂಹಿಕ ಮತ್ತು ರಿಂಗ್ ವಾಕ್ಸಿನೇಷನ್ ಅನ್ನು ಅಳವಡಿಸಿಕೊಂಡಾಗಿನಿಂದ, ಹಿಂಡಿನ ಸಮುದಾಯ ರೋಗರಕ್ಷಣೆಗೆ ಸಂಕೀರ್ಣತೆಗಳು ಮತ್ತು ಸವಾಲುಗಳು ಹುಟ್ಟಿಕೊಂಡಿವೆ. ಸಾಂಕ್ರಾಮಿಕ ಖಾಯಿಲೆಯ ಹರಡುವಿಕೆಯ ಮಾದರಿಯು ಮೂಲತಃ ಹಲವಾರು ಊಹೆಗಳನ್ನು ಮಾಡಿತು. ಅವುಗಳೆಂದರೆ ಇಡೀ ಜನಸಂಖ್ಯೆಯು ಸುಲಭವಾಗಿ ಮತ್ತು ಚೆನ್ನಾಗಿ ಬೆರೆತುಹೋಗಿದೆ, ಅವು ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲ, ಆದ್ದರಿಂದ ಹೆಚ್ಚು ನಿಖರವಾದ ಸಮೀಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ದಶಕಗಳಲ್ಲಿ, ಸಮುದಾಯ ರೋಗರಕ್ಷಣೆಯ ಕಾರಣದಿಂದಾಗಿ ಚಲಾವಣೆಯಲ್ಲಿರುವ ಸೂಕ್ಷ್ಮಾಣುಜೀವಿಗಳ ಪ್ರಬಲವಾದ ಒತ್ತಡವು ಸಮುದಾಯ ರೋಗರಕ್ಷಣೆಯು ವಿಕಸನೀಯ ಒತ್ತಡವಾಗಿ ಕಾರ್ಯನಿರ್ವಹಿಸುವುದರಿಂದ ಅಥವಾ ಒಂದು ಸ್ಟ್ರೈನ್ ವಿರುದ್ಧ ಸಮುದಾಯ ರೋಗರಕ್ಷಣೆಯು ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತೊಂದು ತಳಿ ಹರಡಲು ಅವಕಾಶ ಮಾಡಿಕೊಟ್ಟ ಕಾರಣದಿಂದಾಗಿ ಬದಲಾಗಬಹುದು ಎಂದು ಗುರುತಿಸಲಾಗಿದೆ. ವ್ಯಾಕ್ಸಿನೇಷನ್ ಬಗ್ಗೆ ಉದಯೋನ್ಮುಖ ಅಥವಾ ನಡೆಯುತ್ತಿರುವ ಆತಂಕಗಳು ಮತ್ತು ವಿವಾದಗಳು ಕೆಲವು ಸಮುದಾಯಗಳಲ್ಲಿ ಸಮುದಾಯ ರೋಗರಕ್ಷಣೆಯನ್ನು ಕಡಿಮೆ ಮಾಡಿವೆ ಅಥವಾ ತೆಗೆದುಹಾಕಿದೆ. ಸುಲಭವಾಗಿ ತಡೆಗಟ್ಟಬಹುದಾದ ರೋಗಗಳು ಈ ಸಮುದಾಯಗಳಲ್ಲಿ ಮುಂದುವರಿಯಲು ಅಥವಾ ಮರಳಲು ಅನುವು ಮಾಡಿಕೊಡುತ್ತದೆ.

ಹೆಚ್ಚಿನ ಓದು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]