ಆಮೇರಿಕ ಮತ್ತು ವಿಯೆಟ್ನಾಂ ನಡುವೆ ೧ ನವೆಂಬರ್ ೧೯೫೫ ರಿಂದ ೩೦ ಏಪ್ರೀಲ್ ೧೯೭೫ ರ ವರೆಗೆ ನಡೆದ ಯುದ್ಧವಿದು.[೧] ದಕ್ಷಿಣ ವಿಯೆಟ್ನಂ ಮತ್ತು ಉತ್ತರ ವಿಯೆಟ್ನಂ ನಡುವೆ ಆರಂಭವಾಗಿದ್ದ ಆಂತರಿಕ ಯುದ್ಧಕ್ಕೆ ಅಮೇರಿಕ ಮಧ್ಯ ಪ್ರವೇಶಿಸಿಸುತ್ತದೆ. ಈ ಸಂಧರ್ಭದಲ್ಲಿ ಉತ್ತರ ವಿಯೆಟ್ನಂ ಜೊತೆಗೆ ಸೋವಿಯತ್ ಒಕ್ಕೂಟ ಚೀನಾ ಇನ್ನಿತರ ಕಮ್ಯೂನಿಷ್ಟ್ ರಾಷ್ಟ್ರಗಳು ಬಣಗಳಾದರೆ,ದಕ್ಷಿಣ ವಿಯೆಟ್ನಂ ಜೊತೆಗೆ ಅಮೇರಿಕ, ದಕ್ಷಿಣ ಕೋರಿಯ, ಆಸ್ಟ್ರೇಲಿಯ,ಫಿಲಿಪೈನ್,ಮೊದಲಾದ ದೇಶಗಳು ಬಣಗಳನ್ನು ರಚಿಸಿತ್ತು. ಹತ್ತೊಂಬತ್ತು ವರ್ಷಗಳಷ್ಟು ಕಾಲ ಈ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಅಮೇರಿಕಕ್ಕೆ ಸೋಲಾಗಿ ಉತ್ತರ ವಿಯೆಟ್ನಂನಲ್ಲಿ ಕಮ್ಯೂನಿಸ್ಟ್ ಆಡಳಿತ ಜಾರಿಯಾಗುತ್ತದೆ.ಇದರೊಂದಿಗೆ ಕಾಂಬೋಡಿಯ ಮತ್ತು ಲಾವೋಸ್ನಲ್ಲೂ ಕೂಡ ಕಮ್ಯೂನಿಸ್ಟ್ ಆಡಳಿತ ಆರಂಭವಾಗುತ್ತದೆ. ಈ ಯುದ್ಧದಲ್ಲಿ ಅಮೇರಿಕ ಅಪಾರ ಪ್ರಮಾಣದ ಬಾಂಬ್ ಹಾಗೂ 'ಏಜೆಂಟ್ ಆರೆಂಜ್' ಎಂಬ ರಾಸಾಯನಿಕವನ್ನು ವಿಯೆಟ್ನಂನ ಕೃಷಿ ಭೂಮಿಗಳ ಮೇಲೆ ಸುರಿಯುವ ಮೂಲಕ ವಿಯೆಟ್ನಂಗೆ ಆಹಾರ ಮೂಲಗಳನ್ನು ಕಲುಷಿತಗೊಳಿಸುವ ಪ್ರಯತ್ನ ಮಾಡಿತು. ಈ ಯುದ್ದದಲ್ಲಿ ಹೋ ಚಿ ಮಿನ್[೨] ಅವರು ಉತ್ತರ ವಿಯೆಟ್ನಂ ಮಿಲಿಟರಿ ಪಡೆಯ ನಾಯಕತ್ವ ವಹಿಸಿದ್ದರು. ಗೆರಿಲ್ಲಾ ಯುದ್ಧ ತಂತ್ರಗಳ ಮೂಲಕವೇ ಅಮೇರಿಕ ಸೇನೆಯನ್ನು ವಿಯೆಟ್ನಮಿಯರು ಯುದ್ಧ ತಂತ್ರವನ್ನು ರಚಿಸಿದರು.
ಯುದ್ಧದ ಕಾಲಾವಧಿ
೧ ನವೆಂಬರ್ ೧೯೫೫ - ೩೦ ಏಪ್ರೀಲ್ ೧೯೭೫
ಯುದ್ಧ ನಡೆದ ಸ್ಥಳಗಳು
ಉತ್ತರ ವಿಯೆಟ್ನಂ, ದಕ್ಷಿಣ ವಿಯೆಟ್ನಂ, ಕಾಂಬೋಡಿಯ, ಲಾವೋಸ್, ದಕ್ಷಿಣ ಚೀನಾದ ಸಮುದ್ರ ವಲಯ, ಥಾಯ್ಲೆಂಡ್ ಕೊಲ್ಲಿ,
ಪರಿಣಾಮಗಳು
ಉತ್ತರ ವಿಯೆಟ್ನಂ ಗೆ ಜಯ, ಆಮೇರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡಿತು,