ಸದಸ್ಯ:Pavanaja/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡೊಳ್ಳು ಕುಣಿತ

ಒಂದು ಜಾನಪದ ಕುಣಿತ[೧]

ಡೊಳ್ಳು ಕುಣಿತ

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ.[೨] ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ- ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.

ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತೀಕ) ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೇ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಭಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರೀತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ.

ಇತ್ತೀಚೆಗೆ ಮಹಿಳೆಯರೂ ಡೊಳ್ಳು ಕುಣಿತ ಮಾಡುತ್ತಾರೆ.[೩]

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಮಾಹಿತಿ ಇದೆ.

ಉಲ್ಲೇಖ[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ, ಸಂ.ಡಾ. ಹಿ.ಚಿ. ಬೋರಲಿಂಗಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಎರಡನೆಯ ಮುದ್ರಣ, ೨೦೧೫, ಪು.೩೫೧
  2. ಸಂ: ಗೊ. ರು., ಚನ್ನಬಸಪ್ಪ. "ಡೊಳ್ಳು ಕುಣಿತ". ವಿಶ್ವ ಕನ್ನಡ. ವಿಶ್ವ ಕನ್ನಡ. Retrieved 3 May 2020.
  3. ಎಸ್., ಗುರುರಾಜ. "ಗಂಡು ಕಲೆ ಡೊಳ್ಳು ಕುಣಿತ ಕರಗತ ಮಾಡಿಕೊಂಡ ಯುವತಿಯರು". ವನ್ ಇಂಡಿಯಾ ಕನ್ನಡ. ವನ್ ಇಂಡಿಯಾ ಕನ್ನಡ. Retrieved 3 May 2020.