ಸದಸ್ಯ:PALLAVI NAGESH/ನನ್ನ ಪ್ರಯೋಗಪುಟ-H

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಿಂದ,

     ಲಕ್ಷ್ಮೀ 
     w/o ದಿ.ನರಸಿಂಹ
     ಲಕ್ಷ್ಮೀ ನಿವಾಸ 
     #3-2F
     ಮೂರುಕಟ್ಟೆ ಕುಂಪಲ 
     ಮಂಗಳೂರು.ದ.ಕ.

ರಿಗೆ,

     ಪಂಚಾಯಿತ್ ಅಭಿವ್ರುದ್ದಿ ಪ್ರಾಧಿಕಾರ
     ಸೋಮೆಶ್ವರ ಗ್ರಾಮ ಪಂಚಾಯತ್
     ಮಂಗಳೂರು.ದ.ಕ.

ಮಾನ್ಯರೇ,

      ವಿಷಯ: ಕೊಳಚೆ ನೀರು ನಮ್ಮ ಮನೆಯ ಹಿತ್ತಲಿಗೆ ಬಂದು ಮಲೀನಗೊಂಡಿರುವ ಬಗ್ಗೆ.
      ಈ ಮೇಲಿನ ವಿಳಾಸದಲ್ಲಿ ವಾಸವಾಗಿರುವ ನಾನು ತಿಳಿಸುವುದೇನೆಂದರೆ ಮೊದಲು ಮಾರ್ಗದ ಬದಿಯಿಂದ ಮಳೆ ನೀರು ಹಾದುಹೋಗುತ್ತಿತ್ತು ಈಗ ಮಾರ್ಗದ ಮೇಲ್ಗಡೆ ಹೊಸತಾಗಿ ದೊಡ್ದ ದೊಡ್ದ ಮನೆಗಳನ್ನು ಕಟ್ಟಿ ಅದರ ಬಚ್ಚಲು ನೀರು,ಪಾತ್ರೆಗಳನ್ನು ತೊಳೆದ ನೀರು,ಹಾಗು ಬಟ್ಟೆಗಳನ್ನು ಒಗೆದ ನೀರು ಎಲ್ಲವನ್ನು ಚರಂಡಿಯಲ್ಲಿ ಬಿಟ್ಟು ಮಾರ್ಗದ ಕೆಳಗಡೆಯಿಂದ ನನ್ನ ಹಿತ್ತಲಿಗೆ ಬಂದು ಕೆಸರಿನಿಂದ ಅವ್ರುತ್ತಗೊಂಡಿರುವ ಚರಂಡಿಯಲ್ಲಿ ಪಾಮಾಜಿಗೊಂಡಿರುತ್ತದೆ ಅದನ್ನು  

ನೋಡಲಾಗದೇ ವಾಸನೆಯನ್ನು ಸಹಿಸಲಾಗದೇ ತಿಂಗಳಿಗೊಮ್ಮೆ ಕೂಲಿಯವರಿಂದ ಕೆಲಸ ಮಾಡಿಸಿರುತ್ತೇನೆ. ಈಗ ನನಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಹಾಗೂ ಪ್ರಾಯವಾಗಿರುವುದರಿಂದ ತುಂಬಾ ಕಷ್ಟವಾಗುತ್ತದೆ. ಈ ಕೆಸರಿನ ತೋಡನ್ನು ತಾವು ಬಂದು ಪರಿಶೀಲಿಸಿ ಅದಕ್ಕೆ ಸೂಕ್ತ ಕ್ರಮವನ್ನು ಕಗೊಂಡು ಸೊಳ್ಳೆಯನ್ನು ಉತ್ಪತ್ತಿಗೊಳ್ಳುವ ಈ ಚರಂಡಿಯ ಕೊಳಚೆ ನೀರಿಗೆ ತಾವು ಕ್ರಮಗೊಳ್ಳುವಂತೆ ಈ ಮನವಿಯನ್ನು ಸಲ್ಲಿಸುತ್ತಿದೇನೆ. ಈ ಬೇಸಿಗೆಯಲ್ಲಿ ಈ ಪರಿಸ್ಥಿತಿಗೆ ಒಳಗಾದ ನಾನು ತಿಳಿಸುವುದೇನೆಂದರೆ ಶ್ರೀಘ್ರದಲ್ಲಿಯೇ ಈ ಕಾರ್ಯವನ್ನು ಜರಗಿಸುವಂತೆ ತಮ್ಮಲ್ಲಿ ವಿನಂತಿ.

                                                                                                                                  ಇತೀ ತಮ್ಮ ವಿಶ್ವಸಿ


                                                                                                                                       ಲಕ್ಷ್ಮೀ 
  ಸ್ಥಳ   :ಚಿತ್ರಾಂಜಲಿನಗರ
  ದಿನಾಂಕ:  /  /2017