ಸದಸ್ಯ:Nikithagowdakalmanja/ನನ್ನ ಪ್ರಯೋಗಪುಟ 2
ಬೇರು ಹುಳ
[ಬದಲಾಯಿಸಿ]ಸಾಮಾನ್ಯವಾಗಿ ಮಳೆಗಾಲದ ಮೇ – ಜೂನ್ ತಿಂಗಳಿನಲ್ಲಿ ಅಡಕೆ ತೋಟಗಳಲ್ಲಿ ಈ ಬೇರು ಹುಳುಗಳ ಹಾವಳಿಯನ್ನ ನಾವು ಕಾಣಬಹುದು. ಅಡಕೆ ಗಿಡಗಳ ಬೇರುಗಳನ್ನೇ ತಿಂದು ಬದುಕುವ ಬೇರುಹುಳಗಳು ಬೆಂಬಿಡದೇ ಕಾಡುವ ಶತ್ರುಗಳೆಂದೇ ಹೇಳಬಹುದು. ಈ ಬೇರು ಹುಳಗಳಿಗೆ ರೂಟ್ ಗ್ರಬ್ ಎಂದೂ ಕರೆಯುತ್ತಾರೆ,ಯಾವ ಔಷಧ ಹಾಕಿದರೂ ನಿಯಂತ್ರಣಕ್ಕೆ ಬಾರದೆ ಬೆಳೆಗಾರರನ್ನು ಪರದಾಡುವಂತೆ ಮಾಡುವ ಕಾಯಿಲೆಯೇ ಈ ಬೇರು ಹುಳ . ಗಿಡಗಳ ಬುಡಗಳಲ್ಲಿ ಕಾಣಿಸಿಕೊಳ್ಳುವ ಈ ಬೇರುಹುಳಗಳಿಗೆ ‘ಲ್ಯೂಕೊಫೊಲಿಸ್ ಬರ್‍ಮೆಸ್ಟರಿ’ ಎಂಬ ವೈಜ್ಜಾನಿಕ ಹೆಸರು ಕೂಡ ಇದೆ..ಇದು ಕೊಲಿಯಾಫ್ಟರಾ ಎಂಬ ಕುಟುಂಬಕ್ಕೆ ಸೇರುತ್ತದೆ. ಅಡಕೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತೇವಾಂಶಯುಕ್ತ ಮಣ್ಣುಗಳಲ್ಲಿ ಹೆಚ್ಚಾಗಿ ಈ ಬೇರುಹುಳಗಳು ಹೆಚ್ಚಾಗಿ ಕಾಣಸಿಗುತ್ತದೆ. ಬೇರು ಹುಳಗಳು ಎಳೆಯ ಹಾಗೂ ಬಲಿತ ಅಡಿಕೆ ಗಿಡಗಳ ಬೇರು ಹಾಗೂ ಗಿಡದ ಬುಡಗಳನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಗಿಡಗಳಿಗೆ ಹಾನಿಯುಂಟು ಮಾಡುತ್ತದೆ.ಇದರ ಆಯಸ್ಸು ಎರಡೇ ವರ್ಷಗಳಾದರೂ ಮಾಡುವ ಹಾನಿ ಮಾತ್ರ ವರ್ಷಾಂತರಗಳದ್ದು.. ಈ ಹುಳಗಳು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಸಿಗಳಿಗೆ ಹೆಚ್ಚಾಗಿ ಆಕ್ರಮಣ ಮಾಡುತ್ತದೆ. ಇದು ಹೇಗೆ ಗಿಡಗಳಿಗೆ ಹಾನಿಮಾಡುತ್ತದೆ ಎಂದರೆ, ಇವು ನಿರಂತರವಾಗಿ ಗಿಡದ ಬೇರುಗಳನ್ನು ತಿನ್ನುವ ಕಾರಣ ಅಡಿಕೆ ಮರಗಳಿಗೆ ಸರಿಯಾದ ನೀರು ಮತ್ತು ಆಹಾರದ ಕೊರತೆ ಉಂಟಾಗುತ್ತದೆ. ಇದರಿಂದ ಬೆಳೆದ ಅಡಕೆ ಮರಗಳ ಎಲೆಗಳು ಹಳದಿಯಾಗಿ, ಒಣಗಿ ಬಾಗಿ ಕಾಂಡಗಳ ಸುತ್ತಳತೆ ಕುಗ್ಗಿ ಸಣ್ಣಗಾಗುತ್ತವೆ. ಜೊತೆಗೆ ಇಳುವರಿಯೂ ಇಳಿಮುಖವಾಗುತ್ತವೆ. ಬೇರುಹುಳಗಳು ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ.. ಇದರಿಂದ ಮೂರು ವಾರಗಳಲ್ಲಿ ಮರಿಗಳು ಹೊರಬರುತ್ತವೆ.ಮರಿಗಳು ಏಳರಿಂದ ಎಂಟು ತಿಂಗಳ ಕಾಲ ಕೋಶಾವಸ್ಥೆಗೆ ತೆರಳುತ್ತದೆ, ಕೋಶಗಳು ಮಣ್ಣಿನ ಗೂಡುಗಳಲ್ಲಿರುತ್ತವೆ, ಕಂದುಬಣ್ಣದ ಪೌಢ ಕೀಟಗಳು ತಿಂಗಳ ನಂತರ ಹೊರಬರುತ್ತದೆ. ಬೆಳೆಯುವ ಮೊದಲನೆ ಹಂತದಲ್ಲಿ ಮರಿಹುಳುಗಳು ಹುಲ್ಲಿನ ಬೇರು ಮತ್ತು ಚೆನ್ನಾಗಿ ಕೊಳೆತ ಸಾವಯವ ಗೊಬ್ಬರಗಳನ್ನು ತಿಂದು ಬೆಳೆಯುತ್ತವೆ, ಎರಡನೇ ಹಾಗೂ ಮೂರನೇ ಹಂತಗಳಲ್ಲಿ ಗಿಡಗಳಿಗೆ ಅಡಿಕೆ ಗಿಡದ ಬೇರುಗಳಿಗೆ ಹಾಗೂ ಗಿಡದ ಬುಡಗಳಿಗೆ ಹೆಚ್ಚಿನ ಪ್ರಮಾಣದ ಹಾನಿಮಾಡಲು ಶುರು ಮಾಡುತ್ತವೆ. ಬೇರುಹುಳುಗಳು ಕೇವಲ ಅಡಿಕೆ ಗಿಡಗಳಿಗೆ ಮಾತ್ರವಲ್ಲದೆ ತೆಂಗು, ಬಾಳೆ, ಕೋಕೋ, ಮರಗೆಣಸು, ಸುವರ್ಣಗೆಡ್ಡೆ, ಇತ್ಯಾದಿ ಬೆಳೆಗಳಲ್ಲೂ ಆಶ್ರಯ ಪಡೆದು ಅವುಗಳಿಗೂ ಹಾನಿಯುಂಟುಮಾಡುತ್ತವೆ,
ಬೇರುಹುಳಗಳ ನಿಯಂತ್ರಣ
[ಬದಲಾಯಿಸಿ]ಅಡಕೆ ತೋಟಗಳಲ್ಲಿ ಕೀಟಗಳ ಬಾಧೆಯನ್ನು ತಪ್ಪಿಸಲು ಕೆಲವೊಂದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಮೊದಲು ಅಡಿಕೆ ತೋಟವನ್ನು ಸ್ವಚ್ಛವಾಗಿಡಬೇಕು, ಗಿಡದ ಬುಡಗಳಲ್ಲಿ ನೀರು ನಿಲ್ಲದಂತೆ ಮತ್ತು ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಬುಡದಲ್ಲಿನ ಕಳೆಗಿಡಗಳನ್ನು ಸಮಯಕ್ಕೆ ಸರಿಯಾಗಿ ತಗೆಯುತ್ತಿರಬೇಕು.. ಮೊಟ್ಟೆಗಳು, ಮರಿಹುಳಗಳು ಕಂಡುಬಂದಲ್ಲಿ ಅದನ್ನು ನಾಶಪಡಿಸಬೇಕು. , ಅಡಿಕೆ ತೋಟದ ಮಣ್ಣನ್ನು ಆಗಾಗ ಸಡಿಲಗೊಳಿಸುವುದರಿಂದ, ಬೇರುಹುಳಗಳು ಮಣ್ಣಿನ ಮೇಲ್ಭಾಗಕ್ಕೆ ಬರುತ್ತದೆ, ಆಗ ಪಕ್ಷಿಗಳು ಅವನ್ನು ತಿಂದುಹಾಕುವುದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಡಿಕೆ ಬುಡದ ಮಣ್ಣನ್ನು ಸಡಿಲಗೊಳಿಸಿ ಹತ್ತರಿಂದ ಹದಿನೈದು ಸೆಂ.ಮೀ. ಆಳದವರೆಗೆ ಕ್ಲೋರೀಫೈರಿಫಾಸ್ ಅನ್ನು ಹಾಕಿ ನೆನೆಸಬೇಕು. ಈ ಕ್ರಮವನ್ನು ಕೀಟಬಾಧೆ ಸಂಪೂರ್ಣವಾಗಿ ಕಡಿಮೆಯಾಗುವವವರೆಗೂ ಎರಡು ಮೂರು ವರ್ಷ ಮುಂದುವರಿಸಬೇಕು.. ಈ ಕ್ರಮವನ್ನು ಬೇರೆ ಬೆಳೆಗಳಿಗೂ ಬಳಸಬಹುದಾಗಿದೆ. ಗಿಡದ ಬುಡಕ್ಕೆ ಫೋರೆಟ್ ಅನ್ನು ಹಾಕುವುದರಿಂದಲೂ ಈ ಕೀಟ ಬಾಧೆಯನ್ನು ನಿಯಂತ್ರಿಸಲು ಸಾಧ್ಯ.[೧]