ಸದಸ್ಯ:Nihar.d.fernandes/ನನ್ನ ಪ್ರಯೋಗಪುಟ/2
ಜೆರಾರ್ಡ್ ಮ್ಯಾನ್ಲಿ ಹಾಪ್‌ಕಿನ್ಸ್
[ಬದಲಾಯಿಸಿ]ಜೆರಾರ್ಡ್ ಮ್ಯಾನ್ಲಿ ಹಾಪ್‌ಕಿನ್ಸ್‌ರವರು ಪ್ರಸಿದ್ಧರಾದ ಬ್ರಿಟಿಷ್ ಕವಿ. ಇವರು ವಿಕ್ಟೋರಿಯ ರಾಣಿಯ ಕಾಲದಲ್ಲಿ ಪ್ರಸಿದ್ಧರಾದ ಕವಿಯಾಗಿದ್ದರು. ಇವರು ಕ್ರ.ಶ. ೧೮೪೪ರಲ್ಲಿ ಜನಿಸಿದರು. ಇವರು ಕ್ರ.ಶ. ೧೮೮೯ ತನಕ ಜೀವಿಸಿದರು. ಇವರು ಸ್ಟ್ರಾಟ್‌ಫರ್ಡ್, ಎಸ್ಸೆಕ್ಸ್ ಎಂಬ ಸ್ಥಳದಲ್ಲಿ ಜನಿಸಿದರು. ಇವರು ಒಂಬತ್ತು ಮಕ್ಕಳಲ್ಲಿ ಹಿರಿಯರು. ಇವರು ತುಂಬಾ ಉತ್ತಮವಾದ ಆಂಗ್ಲಿಕನ್ ಕುಟುಂಬದಲ್ಲಿ ಜನಿಸಿದರು. ಇವರ ತಾಯಿಯ ಹೆಸರು ಕೇಟ್ ಹಾಪ್‌ಕಿನ್ಸ್. ತಂದೆಯ ಹೆಸರು ಮ್ಯಾನ್ಲಿ ಹಾಪ್‌ಕಿನ್ಸ್.
ಜೀವನ ಚರಿತ್ರೆ
[ಬದಲಾಯಿಸಿ]ಜೆರಾರ್ಡ್ ಮ್ಯಾನ್ಲಿ ಹಾಪ್‌ಕಿನ್ಸ್‌ರವರು ಹೈಗೇಟ್ ಎಂಬ ಶಾಲೆಯಲ್ಲಿ ಕಲಿತರು. ಇವರು ಇಲ್ಲಿ ತಮ್ಮ ಶೈಕ್ಷಣಿಕ ಹಾಗೂ ಕಲೆಯ ಉತ್ತೀರ್ಣತೆಯನ್ನು ಪಡೆದರು. ಇವರು ಹಿರಿಯ ಮಗರಾದುದರಿಂದ ಸ್ವಯಂರಾಗಿ ಜೀವಿಸಿದರು. ಕ್ರಿ.ಶ. ೧೮೬೩ರಲ್ಲಿ ಬ್ಯಾಲಿಯಲ್ ಕಾಲೇಜ್, ಆಕ್ಸ್‌ಫರ್ಡ್ ಎಂಬಲ್ಲಿ ಪ್ರದರ್ಶಕರಾಗಿ ಹೋದರು. ಅಲ್ಲಿ ಅವರಿಗೆ 'ಸ್ಟಾರ್ ಆಫ್ ಬ್ಯಾಲಿಯಲ್' ಎಂಬ ಹೆಸರಿನಲ್ಲಿ ಕರೆಯಲಾಯಿತು. ಬಿ. ಜೊವೆಟ್, ಟಿ. ಎಚ್. ಗ್ರೀನ್ ಮತ್ತು ಪೇಟರ್ ಎಂಬ ಶಿಕ್ಷಕರು ಇವರಿಗೆ ವಿದ್ಯಾಭ್ಯಾಸ ಕಲಿಸಿಕೊಟ್ಟರು. ಪೇಟರ್ ಶಿಕ್ಷಕನು ಅತೀ ಹೆಚ್ಚು ವಿದ್ಯಾಭ್ಯಾಸಕ್ಕೆ ಹೆಚ್ಚು ಮಾಹಿತಿ ಕೊಟ್ಟರು ಮತ್ತು 'ಗ್ರೇಟ್ಸ್' ಪರೀಕ್ಷೆಗೆ ತಯಾರಿಸಿದ್ದರು. ಹಾಪ್‌ಕಿನ್ಸ್‌ರವರು ಆರ್. ಬ್ರಿಡ್ಜಸ್‌ರವರ ಒಳ್ಳೆಯ ಮಿತ್ರರಾಗಿದ್ದರು. 'ಆಕ್ಸ್‌ಫರ್ಡ್ ಮೂವ್‌ಮೆಂಟ್' ಎಂಬ ಸಮಯದಲ್ಲಿ ಜಾನ್ ಹೆನ್ರಿ ನ್ಯೂಮೆನ್ ಎಂಬ ವ್ಯಕ್ತಿಯ ಆಧಾರದಿಂದ ತನ್ನ ಆಂಗ್ಲಿಕನ್ ನಂಬಿಕೆಯಿಂದ ಕಥೋಲಿಕ ಧರ್ಮಕ್ಕೆ ಸೇರಿದರು. ಕ್ರಿ.ಶ. ೧೮೬೬ರಲ್ಲಿ ರೋಮನ್ ಕಥೋಲಿಕ ಧರ್ಮಕ್ಕೆ ಸೇರಿದರು. ಕ್ರಿ.ಶ. ೧೮೬೮ರಲ್ಲಿ 'ಸೊಸೈಟಿ ಆಫ್ ಜೀಜಸ್' ಎಂಬ ಸಭೆಗೆ ಕ್ರೈಸ್ತ ಪುರೋಹಿತರಾಗಲು ಸೇರಿದರು. ಕ್ರಿ.ಶ. ೧೮೭೭ರಲ್ಲಿ ಕ್ರೈಸ್ತ ಪುರೋಹಿತರ ದೀಕ್ಷೆ ಪಡೆದರು. ಕ್ರಿ.ಶ. ೧೮೮೪ರಲ್ಲಿ ಐರ್ಲೆಂಡ್ ದೇಶದ ಡಬ್ಲಿನ್ ಎಂಬ ಸ್ಥಳದ ಯೂನಿವರ್ಸಿಟಿ ಕಾಲೇಜಿನಲ್ಲಿ ಗ್ರೀಕ್ ಹಾಗೂ ಲ್ಯಾಟಿನ್ ಭಾಷೆ ಕಲಿಕೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕ್ರಿ.ಶ. ೧೮೮೯ರ ಜೂನ್‌ನಲ್ಲಿ ಟೈಫಾಯಿಡ್ ಜ್ವರದಿಂದ ಮರಣ ಹೊಂದಿದರು.
ಲೇಖನಗಳು
[ಬದಲಾಯಿಸಿ]ಇವರು ಹಲವಾರು ಕವನಗಳನ್ನು ಬರೆದಿದ್ದರು. ಇವುಗಳಲ್ಲಿ 'ಇನ್‌ವರ್‌ಸ್ನೇಡ್' ಮತ್ತು 'ದಿ ವಿಂಡ್‌ಹೌವರ್' ತುಂಬಾ ಪ್ರಸಿದ್ಧವಾದ ಕವನಗಳು. ಇವರು ಬರೆದಿರುವ ಕೆಲವು ಪದ್ಯಗಳು: ಪೈಡ್ ಬ್ಯೂಟಿ, ಬಿನ್ಸಿ ಪೊಪ್ಲಾರ್ಸ್ ಮತ್ತು ದಿ ರೆಕ್ ಆಫ್ ಡೊಯ್ಷ್‌ಲ್ಯಾನ್ಡ್. [೧]
ಡನ್ಸ್ ಸ್ಕೋಟಸ್‌ರವರ ಸ್ಪೂತಿಯಿಂದ 'ಸ್ಪ್ರಂಗ್ ರಿದಮ್', 'ಇನ್‌ಸ್ಕೇಪ್' ಹಾಗೂ 'ಇನ್‌ಸ್ಟ್ರೆಸ್' ಎಂಬುದನ್ನು ಕಂಡುಹಿಡಿದರು. [೨]