ವಿಷಯಕ್ಕೆ ಹೋಗು

ಸದಸ್ಯ:Naveenavitla/ನನ್ನ ಪ್ರಯೋಗಪುಟ4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೃಹ ಪತ್ರಿಕೆ

[ಬದಲಾಯಿಸಿ]

ಪತ್ರಿಕಾ ಪ್ರಕಟಣೆಗಳು, ಲೆಖನಗಳು ಜಾಹಿರಾತುಗಳು ಇವೇ ಮೊದಲಾದವುಗಳನ್ನು ಪತ್ರಿಕೆಗಳಿಗಾಗಿ ಸಿದ್ಧಪಡಿಸುವುದು ಸಾರ್ವಜನಿಕ ಸಂಪರ್ಕಾಧಿಕಾರಿಯ ಕೆಲಸ. ಇದರ ಜೊತೆಗೆ ಇನ್ನೊಂದು ಮುಖ್ಯ ಕೆಲಸವೆಂದರೆ ಗೃಹ ಪತ್ರಿಕೆಗಳು ಹಾಗೂ ವಾಣಿಜ್ಯ ಪತ್ರಿಕೆಗಳನ್ನು ಹೊರತರುವುದು. ಗೃಹ ಪತ್ರಿಕೆಗಳೆಂದರೆ ಹೌಸ್ ಜರ್ನಲ್ಸ್, [[ವಾಣಿಜ್ಯ ಪತ್ರಿಕೆಗಳೆಂದರೆ ಟ್ರೇಡ್ ಜರ್ನಲ್ಸ್. ಈ ಎರಡೂ ಪತ್ರಿಕೆಗಳ ಸಂಪಾದಕೀಯ ಹಾಗೂ ಪ್ರಕಟಣೆಯ ಹೊಣೆ ಸಾರ್ವಜನಿಕ ಸಂಪರ್ಕಾಧಿಕಾರಿಯದು.[]

ಉದ್ದೇಶ ಮತ್ತು ಕರ್ತವ್ಯ

[ಬದಲಾಯಿಸಿ]

ಸಂಸ್ಥೆಯ ಮೂರ್ತ ಸ್ವರೂಪವನ್ನು ಒಳಗೆ ಮತ್ತು ಬಾಹ್ಯ ಪ್ರಪಂಚಕ್ಕೆ ಬಿಂಬಿಸುವುದು ಗೃಹ ಪತ್ರಿಕೆಯ ಮುಖ್ಯ ಉದ್ದೇಶ ಮತ್ತು ಕರ್ತವ್ಯ. ಸಂಸ್ಥೆಯ ಒಳಗಡೆ, ಕಾರ್ಮಿಕರು ಮತ್ತು ಇತರ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ, ದುಡಿಮೆ ಹೆಚ್ಚಿನ ಉತ್ಪಾದನೆಗೆ ಸಹಾಯಕವಾಗುವಂಥ ಸೌಹಾರ್ದಯುತ ವಾತಾವರಣ ಉಂಟು ಮಾಡುವುದು ಗೃಹ ಪತ್ರಿಕೆಯ ಆಂತರಿಕ ಕೆಲಸ. ಜೊತೆಗೆ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದ ಸೃಜನಶೀಲ ಅಭಿವ್ಯಕ್ತಿಗೆ ಅವಕಾಶಗಳನ್ನು ಒದಗಿಸುವುದು, ವೇದಿಕೆಯಾಗುವುದು ಗೃಹ ಪತ್ರಿಕೆಗಳ ಕೆಲಸ.

ಗೃಹ ಪತ್ರಿಕೆಗಳ ವಿಧ

[ಬದಲಾಯಿಸಿ]

ಗೃಹ ಪತ್ರಿಕೆಗಳಲ್ಲೂ ಎರಡು ವಿಧ. ಒಂದು ಸಂಸ್ಥೆಯ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದಲ್ಲಿ ಮಾತ್ರ ಪ್ರಸಾರಕ್ಕೆ ಸೀಮಿತವಾದದ್ದು. ಎರಡನೆಯದು ಬಾಹ್ಯ ಪ್ರಸಾರಕ್ಕೂ ವಿಸ್ತರಿಸಿದ್ದು. ಅಂದರೆ ಮಾರಾಟಗಾರರು, ವಿತರಕರು, ಗ್ರಾಹಕರು, ಶೆರುದಾರರು ಮೊದಲದವರಿಗೂ ವಿತರಣೆಯಾಗುವಂಥ ಗೃಹ ಪತ್ರಿಕೆಗಳು. ಗೃಹ ಪತ್ರಿಕೆಗಳು ಸಾಮಾನ್ಯವಾಗಿ, ನಿಯತಕಾಲಿಕೆಗಳಂತೆ 81/2” * 11” ಅಳತೆ ಮತ್ತು ಆಕಾರದಲ್ಲಿರುತ್ತದೆ. ಗ್ರಾಹಕರು ಮತ್ತು ಕಾರ್ಮಿಕರಲ್ಲಿ ಸೌಹಾರ್ಧ ಭಾವ ಉಂಟು ಮಾಡುವುದು ಗೃಹ ಪತ್ರಿಕೆಗಳ ಮುಖ್ಯ ಉದ್ದೇಶ. ವಾಣಿಜ್ಯ ಪ್ರಸಾರ ಇವುಗಳ ಉದ್ದೇಶವಲ್ಲ ಗೃಹ ಪತ್ರಿಕೆಗಳಲ್ಲಿ ಸಂಸ್ಥೆಯ ಸುದ್ದಿಗಳು, ಸಾಧನೆಗಳ ಪರಿಚಯ, ಕಾರ್ಮಿಕರ ಕಲ್ಯಾಣದ ಕುರಿತು ಮಾಹಿತಿ ನೀಡುವ ಲೇಖನಗಳು, ಕಾರ್ಮಿಕರ ಸಾಧನೆಗಳ ಸುದ್ದಿಗಳು ಇರುತ್ತವೆ. ಸಾಮಾನ್ಯವಾಗಿ ಗೃಹ ಪತ್ರಿಕೆಗಳು ಮಾರಾಟಕ್ಕಿರುವುದಿಲ್ಲ ಎಂದು ಬೆಲೆ ನಮೂದಿಸಿರುವುದಿಲ್ಲ, ಗೃಹ ಪತ್ರಿಕೆಗಳು ಸಾಮಾನ್ಯವಾಗಿ ಮಾಸಿಕ, ತ್ರೈಮಾಸಿಕ, ಷಾಣ್ಮಾಸಿಕ ಪತ್ರಿಕೆಗಳಾಗಿರುತ್ತವೆ. ಪ್ರೆಸ್ ಆಂಡ್ ರಿಜಿಸ್ಟ್ರೇಷನ್ ಆಫ್ ಬುಕ್ಸ್(1867) ಕಾಯಿದೆಯನ್ವಯ ಗೃಹ ಪತ್ರಿಕೆಗಳು ಮತ್ತು ವಾಣಿಜ್ಯ ಪತ್ರಿಕೆಗಳ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು ಸಂಬಂಧ ಪಟ್ಟ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೆಟರ ಸಮ್ಮುಖ ಪತ್ರಿಕೆಯ ಪ್ರಕಟಣೆ ಕುರಿತಂತೆ ಘೋಷಣಾ ಪತ್ರ ಸಲ್ಲಿಸಬೆಕು. ಪತ್ರಿಕೆಯ ಹೆಸರು, ಭಾಷೆ , ಪ್ರಕಣೆಯ ಕಾಲಾವಧಿ, ಪತ್ರಿಕೆಯ ಮಾರಾಟ ಬೆಲೆ, ಪ್ರಕಾಶಕರ ಹೆಸರು, ಸಂಪಾದಕನ ಹೆಸರುಮೊದಲಾದ ವಿವರಗಳನ್ನು ಈ ಘೋಷಣಾ ಪತ್ರದಲ್ಲಿ ತಿಳಿಸಬೇಕು. ಘೋಷಣಾ ಪತ್ರಾರು ಪತ್ರಿಕೆಗಳಲ್ಲಿರಬೇಕು. ಗೃಹ ಪತ್ರಿಕಗಳು ಸರಕಾರಿ ಪ್ರಕಟಣೆಯಾಗಿದ್ದಲ್ಲಿ ಘೋಷಣಾ ಪತ್ರ ಸಲ್ಲಿಸಬೇಕಾದ ಅಗತ್ಯವಿಲ್ಲ. ಘೋಷಣಾ ಪತ್ರ ಸಲ್ಲಿಕೆಗೆ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟರ್ ಮೂಲಕ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೆಪರ್ಸ್ ಅವರಿಂಧ ಪತ್ರಿಕೆಯ ಹೆಸರಿಗೆ ಅನುಮತಿ ಪಡೆಯಬೇಕು. ಸೂಚಿತ ಹೆಸರಿನ ಪತ್ರಿಕೆಯೊಂದು ಈ ವೇಳೆಗಾಗಲೇ ಪ್ರಕಟವಾಗುತ್ತಿದ್ದರೆ ಅನುಮತಿ ಸಿಗುವುದಿಲ್ಲ. ಆಗ ಬೇರೊಂದು ಹೆಸರನ್ನು ಸೂಚಿಸಬೆಕಾಗುತ್ತದೆ. ಪತ್ರಿಕೆಯ ಪ್ರತಿ ಸಂಚಿಕೆಯ ಪ್ರತಿಯನ್ನು ನವದೆಹಲಿಯಲ್ಲಿರುವ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೆಪರ್ ಕಚೇರಿಗೆ ಕಡ್ಡಾಯವಾಗಿ ಕಳುಹಿಸಬೇಕು. ಗೃಹ ಪತ್ರಿಕೆಗಳು ಮತ್ತು ವಾಣಿಜ್ಯ ಪತ್ರಿಕೆಗಳನ್ನು ಸಾಮಾನ್ಯವಾಗಿ ಹಾಲು ಬಿಳುಪಿನ ನಯವಾದ ಹೊಳಪಿನ ಕಾಗದದಲ್ಲಿ ಮುದ್ರಿಸಲಾಗುವುದು. ಗೃಹ ಪತ್ರಿಕೆಗಳು ಕಾರ್ಮಿಕರಿಗೆ ಮತ್ತು ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸುವುದಕ್ಕೆ ಮೀಸಲಾಗಿದ್ದಲ್ಲಿ ಮಾರಾಟ ತೆರಿಗೆ ಕಾಯಿದೆಯಿಂದ ವಿನಾಯಿತಿ ಉಂಟು. ಗೃಹ ಪತ್ರಿಕೆಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧವಾದವು. ಅಮೇರಿಕ, ಬ್ರಿಟನ್, ಜಪಾನ್ ದೇಶಗಳಲ್ಲಿ ಈ ಪತ್ರಿಕೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೃಹ ಪತ್ರಿಕೆಳು ಪ್ರಕಟವಾಗುತ್ತಿವೆ.[] ಒಟ್ಟಾರೆಯಾಗಿ ಸಂಸ್ಥೆಯ ಬಗ್ಗೆ ಗ್ರಾಹಕರು, ವಿತರಕರು, ಶೆರುದಾರರಲ್ಲಿ ವಿಶ್ವಾಸ ಸೌಹಾರ್ಧತೆಗಳನ್ನು ಮೂಡಿಸುವುದ ಹಾಗೂ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದಲ್ಲಿ ಕೌಟುಂಬಿಕ ಭಾವನೆ ಮೂಡಿಸುವುದು ಗೃಹ ಪತಯ್ರಿಕೆಗಳ ಮುಖ್ಯ ಉದ್ದೇಶ. ಕಂಪೆನಿಯ ಹೊಸ ಉತ್ಪನ್ನ, ಸಂಶೋಧನೆ ಇತ್ಯಾದಿ ಸಾಧನೆಗಳಿಗೂ ಇದು ದರ್ಪಣ.

ಉಲ್ಲೇಖ

[ಬದಲಾಯಿಸಿ]
     ಪತ್ರಿಕೋದ್ಯಮ ಪರಿಷ್ಕøತ ಸಮಗ್ರ ಸಂಪುಟ- ಜಿ. ಎನ್ ರಂಗನಾಥ ರಾವ್
  1. http://www.ehow.com/facts_4855692_what-is-advertising.html?ref=Track2&utm_source=IACB2B
  2. https://www.sanmar.com/Brands/District/c/bra-district