ವಿಷಯಕ್ಕೆ ಹೋಗು

ಸದಸ್ಯ:Nanditha97/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂತರಗಂಗೆ ಬೆಟ್ಟ
Antharagange
ಅಂತರಗಂಗೆ ಬೆಟ್ಟ

ಪರಿಚಯ

[ಬದಲಾಯಿಸಿ]

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ.ಕೋಲಾರ ಜಿಲ್ಲೆಯು ರಾಜ್ಯದ ದಕ್ಷಿಣ ಭಾಗದಲ್ಲಿದೆ ಹಾಗು ರಾಜ್ಯದ ಪೂರ್ವ ಜಿಲ್ಲೆಯಾಗಿದೆ.ಮುಂದೆ ಕೋಲಾರ ಜಿಲ್ಲೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದರು.ಕೋಲಾಹಲ,ಕುವಲಾಲ,ಕೋಲಾಲ,ಇತ್ಯಾದಿ.ಮಧ್ಯಮ ಅವಧಿಯಲ್ಲಿ ಕೋಲಾರನ್ನು ಕೋಲಾಹಲಪುರ ಎಂದು ಕರೆಯುತ್ತಿದ್ದರು,ಇದರ ಅರ್ಥ ಹಿಂಸಾತ್ಮಕ ನಗರ.ಕೋಲಾರ ಜಿಲ್ಲೆಯು ಅರೆ ಹೊಣ ಹಾಗು ಬರ ಪೀಡಿತ ಪ್ರದೇಶ.ಕೋಲಾರನ್ನು ಚಿನ್ನದ ಗಣಿ ಎಂದು ಕರೆಯುತ್ತಾರೆ.ಕೋಲಾರ ರೇಷ್ಮೆ,ಹಾಲು ಹಾಗು ಬಂಗಾರಕ್ಕೆ ಹೆಸರುವಾಸಿಯಾಗಿದೆ.ಕರಗ ಹಾಗು ತೆಪ್ಪೋತ್ಸವವನ್ನು ತುಂಬ ಚೆನ್ನಾಗಿ ಆಚರಿಸುತ್ತಾರೆ.ಕೋಲಾರದ ಪ್ರವಾಸದ ಸ್ಥಳಗಳೆಂದರೆ:ಅಂತರಗಂಗೆ,ಕೋಲಾರಮ್ಮ ದೇವಸ್ಥಾನ,ಸೋಮೇಶ್ವರ ದೇವಸ್ಥಾನ,ಮಾರ್ಕಂಡೇಯ ದೇವಸ್ಥಾನ,ತೇರಹಳ್ಳಿ.ಕೋಟಿಲಿಂಗೇಶ್ವರ,ಇತ್ಯಾದಿ.ಅಂತರಗಂಗೆ ಬೆಟ್ಟ ಕೋಲಾರದ ಮೊದಲ ಪ್ರವಾಸ ಸ್ಥಳವಾಗಿದೆ.ಅಂತರಗಂಗೆ ಬೆಟ್ಟವು ಶತಶ್ರುಂಗ ಪರ್ವತ ಶ್ರೇಣಿಯಲ್ಲಿದೆ.ಈ ಬೆಟ್ಟವು ಕೋಲಾರಿನಿಂದ ಮೂರು ಕಿ.ಮೀ. ದೂರದಲ್ಲಿದೆ.ಇದು ದೇವಸ್ಥಾನವಿರುವ ಪವಿತ್ರ ಸ್ಥಳವಾಗಿದೆ.ಅಂತರಗಂಗೆ ಬೆಟ್ಟವು ಅನನ್ಯ ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಲಾಗಿದೆ.[]

ಭೌಗೋಳಿಕ

[ಬದಲಾಯಿಸಿ]

ಇದು ಸುಮಾರು ೭೦ ಕಿ.ಮೀ. ಬೆಂಗಳೂರು ಹಾಗು ೩೨ ಕಿ.ಮೀ.ಕೋಲಾರ್ ಗೋಲ್ಡ್ ಫೀಲ್ಡ್ಇಂದ ದೂರವಿದೆ.ನಗರವು ಕರ್ನಾಟಕ ದಕ್ಷಿಣ ಮೈದಾನ ಪ್ರದೇಶದಲ್ಲಿ ಇದೆ.ಉತ್ತರ ಕೊಡಿಕನ್ನೂರ್ ಟ್ಯಾಂಕ್ ನಗರದ ನೀರು ಸರಬರಾಜು ಮುಖ್ಯ ಮೂಲವಾಗಿದೆ. ಈ ಬೆಟ್ಟವು ನದಿಯಿಂದ ೧೨೨೯ ಮೀಟರ್ ಎತ್ತರದಲ್ಲಿದೆ ಹಾಗು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿದೆ.ಈ ಬೆಟ್ಟವನ್ನು ಟ್ರೆಕ್ಕಿಂಗ್ ಹಾಗು ಸಾಹಸ ಮಾಡುವವರಿಗೆ ಸ್ವರ್ಗದಂತೆ ಕಾಣುತ್ತದೆ.ಅಂತರಗಂಗೆ ಒಂದು ಅನನ್ಯವಾದ ಬೆಟ್ಟವಾಗಿದೆ.ದಟ್ಟವಾದ ಕಾಡುಗಳಿಂದ ಮುಚ್ಚಲಾಗಿದೆ.ಇಲ್ಲಿನ ಗುಹೆಗಳು ಪ್ರಯಾಣಿಕರನ್ನು ಆಕರ್ಷಿಸುತ್ತದೆ ಹಾಗು ವಿವಿಧ ಗಾತ್ರಗಳಲ್ಲಿವೆ.ಅಲ್ಲಿನ ಆಹ್ಲಾದಕರ ಹವಾಮಾನ ಜನರ ಮನಸೆಲೆಯುತ್ತದೆ.ಪ್ರವಾಸಿಗರ ನೆಚ್ಚಿನ ಸ್ಥಳವಾಗಿದ್ದು ಮನಸನ್ನು ಉಲ್ಲಾಸಮಯವಾಗಿಸುತ್ತದೆ.

ಇತಿಹಾಸ

[ಬದಲಾಯಿಸಿ]

ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ.ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ.ಪರ್ವತದ ಮೇಲಕ್ಕೆ ಕಡಿದಾದ, ಇಕ್ಕಟ್ಟಾದ ಹಾದಿ ಇಲ್ಲ.ಈ ಪರ್ವತದ ಸುತ್ತ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು ಹಳ್ಳಿಗಳಿವೆ.ಹುಣ್ಣಿಮೆಯ ದಿನದ ಸಂದರ್ಭದಲ್ಲಿ ಸಾಂಸ್ಕ್ರುತಿಕ ಸಂಘದವರು ಸಾಂಸ್ಕ್ರುತಿಕ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ.ಕರ್ನಾಟಕ ಹಳ್ಳಿಗರು ಸಾರಿಗೆ ಸೌಲಭ್ಯ ಬೆಟ್ಟದ ಹಳ್ಳಿಗಳಲ್ಲಿ ಮತ್ತು ಪ್ರವಾಸಿಗರಿಗೆ ವಾಸಿಸಲು ಒದಗಿಸಲು ಒಂದು ರಸ್ತೆ ಹಾಕಿತು.ಇಲ್ಲಿ ದರ್ಗ ಸಹ ಕಾಣಬಹುದು.[]

ಪರಿಸರ ಹಾಗು ವಿಶೇಷತೆ

[ಬದಲಾಯಿಸಿ]

ಹಸಿರು ಬಣ್ಣದ ಸೀರೆಯನ್ನುಟಿರುವಂತೆ ಕಾಣುವ ಈ ಪ್ರದೇಶ ಪೈರು ಪಚ್ಚೆಗಳು ಮತ್ತು ಮರ ಗಿಡಗಳಿಂದ ಕೂಡಿ ಕಂಗೊಳಿಸತ್ತದೆ.ಇಲ್ಲಿ ಅನೇಕ ನಿಗೂಢಗಳನ್ನು ಹೊಂದಿರುವ ಈ ಪುಣ್ಯ ಕ್ಷೇತ್ರ ನಮ್ಮ ನಾಡಿನ್ನಲ್ಲಿರುವುದು ಹೆಮ್ಮೆಯ ಮಾತು.ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ಈ ಐತಿಹಾಸಿಕ ಸ್ಥಳದ ಬಗ್ಗೆ ನಾವು ತಿಳಿದುಕೊಳ್ಳುವುದೆಂದರೆ ಹೆಮ್ಮೆಯ ವಿಷಯ.ವಿಗ್ನಾನಿಗಳಿಗೆ ಸವಾಲಾಗಿ ನಿಂತಿರುವ ವಿಷಯವೇನೆಂದರೆ ನಂದಿಯ ಬಾಯಿಂದ ಬರುವ ತೀರ್ಥದ ಮೂಲ ಕಂಡುಹಿಡಿಯಲು ಯಾರಿಂದಲೂ ಆಗಿಲ್ಲ.ಇದು ನಿಗೂಢವಾಗಿಯೇ ಉಳಿದಿದೆ.ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಲಕ್ಷ ದೀಪೊತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.ಆ ದಿವಸ ಭಕ್ತಾಧಿಗಳು ತಮ್ಮ ಬದುಕಿಗೆ ಬೆಳಕು ನೀಡಿದ ದೇವರನ್ನು ಪ್ರಾರ್ಥಿಸಲು ಸಾವಿರ ಲಕ್ಷ ಸಂಖ್ಯೆಗಳಲ್ಲಿ ಜನರು ಬರುತ್ತಾರೆ ಹಾಗೂ ಈ ದಿನ ಎಲ್ಲಾ ಹೆಣ್ಣು ಮಕ್ಕಳು ಮಡಿ ಕಟ್ಟಿ ಬೆಳಗಿನ ಜಾವದಲ್ಲಿ ಸ್ನಾನ ಮಾಡಿ ಡಂಬರವಿಲ್ಲದೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ.ಶಿವನನ್ನು ನಮಗೆ ತಿಳಿದಿರುವ ಹಾಗೆ ಅಭಿಷೇಕ ಪ್ರಿಯನೆನ್ನುತ್ತಾರೆ.ಆ ದಿನ ಫಲ-ಪುಷ್ಪಗಳನ್ನು ದೇವರಿಗೆ ಅರ್ಪಿಸಿ ಸುಖವನ್ನು ನೀಡಲು ಪ್ರಾರ್ಥಿಸುತ್ತಾರೆ.ಹಬ್ಬದ ವಾತಾವರನ ಅಲ್ಲಿ ಏರ್ಪಡಿಸುತ್ತದೆ.ಎಲ್ಲಾ ಮಕ್ಕಳು,ದೊಡ್ದವರು ಆ ದಿವಸ ದೇವರ ದರ್ಶನಕ್ಕಾಗಿ ಬಂದು ಖುಷಿ ಪಡುತ್ತಾರೆ.ದೇವಾಸ್ಥಾನವು ದೀಪಗಳಿಂದ ಕೂಡಿದ್ದು ಜನರಿಗೆ ಆಶಾಕಿರಣವಾಗಿ ಕಾಣಿಸುತ್ತದೆ.ಜಾತ್ರೆಯ ಪರಿಸ ನಾವು ಕಾಣಬಹುದು.ಸಿಹಿ ತಿಂಡಿಗಳ ಅಂಗಡಿಗಳು,ಗೊಂಬೆಯ ಅಂಗಡಿಗಳು ಹೀಗೆ ಹಲವಾರು ಕೂಡಿ ಹೆಚ್ಚು ಸಂತೋಷ ಕೊಡುತ್ತದೆ.ದೇವಾಲಯದ ಹಿಂಭಾಗದಲ್ಲಿ ಅರಣ್ಯಕ್ಕೆ ಹೋಗುವ ಮಾರ್ಗವಿದೆ.ಅಂತರಗಂಗೆ ಬೆಟ್ಟವು ಚಾರಣ,ಪರ್ವತಾರೋಹಣ,ರಾತ್ರಿ ಸಂಚರಣೆ ಹಾಗು ಸಾಹಸ ಚಟುವಟಿಕೆಗಳನ್ನು ಮಾಡಲು ಪರಿಪೂರ್ಣ ಸ್ಥಳವಾಗಿದೆ.ಅಂತರಗಂಗೆ ಎಂದರೆ ಆಳದಿಂದ ಗಂಗ ಎಂಬರ್ಥ.ಇಲ್ಲಿನ ಮುಖ್ಯವಾದ ಆಕರ್ಷಣೆ ಕಾಶಿ ವಿಶ್ವೇಶ್ವರ ದೇವಾಲಯ.ಈ ಜಾಗವನ್ನು ದಕ್ಷಿಣ ಕಾಶಿಯೆಂದು ಸಹ ಕರೆಯುತ್ತಾರೆ.ಬೆಟ್ತದ ಸುತ್ತ ಅನೇಕ ಅಗ್ನಿ ಪರ್ವತದ ಶಿಲೆಗಳು ಹಾಗು ನೇಸರ್ಗಿಕವಾಗಿ ಕೊರೆಯಲಾದ ಗುಹೆಗಳು ಇದೆ.ಈ ಬೆಟ್ತದ ಮೇಲ್ಭಾಗದಿಂದ ಕೋಲಾರದ ಪರಿಪೂರ್ಣ ಚಿತ್ರಣವನ್ನು ನೋಡಬಹುದು.ಈ ದೇವಾಲಯದ ಪ್ರಧಾನ ದೇವರು ಕಾಶಿ ವಿಶ್ವೇಶ್ವರ.ದೇವಸ್ಥಾನದಲ್ಲಿ ಮುಖ್ಯವಾಗಿ ಶಿವಲಿಂಗವಿದೆಹಾಗು ಮುಖ್ಯ ಮಂಟಪದ ಕಡೆ ನಾಲ್ಕು ಬೇರೆ ಲಿಂಗಗಳಿವೆ.ಭಕ್ತರು ಇಲ್ಲಿಯ ನೀರನ್ನು ಶಿವನ ತಲೆಯಿಂದ ಬೀಳುವ ಪವಿತ್ರವಾದ ಗಂಗ ಜಲವೆಂದು ನಂಬುತ್ತಾರೆ.ಭಕ್ತರು ಈ ನೀರನ್ನು ಕುಡಿಯುತ್ತಾರೆ ಹಾಗು ಕೆಲವರು ಪ್ರತಿ ದಿನ ಹಾಗು ಪುಣ್ಯ ದಿನಗಳಾದ ಶಿವರಾತ್ರಿ ಮುಂತಾದ ದಿನಗಳಂದು ಸ್ನಾನ ಮಾಡುತ್ತಾರೆ.ಇಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗಾಗಳು ವಾಸಿಯಾಗುತ್ತದೆ.

ದಂತ ಕಥೆ

[ಬದಲಾಯಿಸಿ]

ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸಂಬಂಧಿಸಿದೆ.ಹಿಂದು ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದಿದ್ದಾನೆ,ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ. ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ.ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ನಂಬಿಕೆ.

ತೀರ್ಮಾನ

[ಬದಲಾಯಿಸಿ]

ಕೋಲಾರ ಚಿಕ್ಕ ಜಿಲ್ಲೆಯಾಗಿದ್ದರು ಇಲ್ಲಿರುವ ಪ್ರವಾಸ ಸ್ಥಳಗಳ ಸೌಂದರ್ಯ ಹೇಳಲಾಗದು.ಇದರಿಂದ ಹಳೆಯ ಇತಿಹಾಸವನ್ನು ನೋಡಬಹುದು ಹಾಗು ಆ ಕಾಲದ ಶಾಸನಗಳು,ಅರಸರ ಬಗ್ಗೆ ಸಹ ತಿಳಿಯಬಹುದು.ಇಂತಹ ಪುಣ್ಯ ಕ್ಷೇತ್ರವು ನಮ್ಮ ನಾದೀನಲ್ಲಿ ನೆಲೆಸಿ,ನಮ್ಮ ನಾಡಿನ ಸಂಪತ್ತನ್ನು ಹೆಚ್ಚಿಸಿದೆ.ಕೋಲಾರ ಚಿನ್ನದ ಗಣಿ ಎಂದು ಹೆಸರುವಾಸಿಯಾಗಿದೆ ಹಾಗು ಈ ಜಿಲ್ಲೆಯಲ್ಲಿ ಅಂತರಗಂಗೆ ಬೆಟ್ಟ ಇರುವುದರಿಂದ ಹಾಗು ಕೋಲಾರಮ್ಮ ದೇವಸ್ಥಾನ, ಸೋಮನಾಥೇಶ್ವರ ದೇವಸ್ಥಾನ ಗಳಿಂದ ಅನೇಕ ವಿದೇಶಿ ಜನರು ಬರುತ್ತಾರೆ ಹಾಗು ಕೋಲಾರ ಒಂದು ಪ್ರವಾಸ ಸ್ಥಾನವಾಗಿದೆ.ಈ ಬೆಟ್ಟದಿಂದ ಕೋಲಾರದ ವಾತಾವರಣವು ವಿಶಾಲವಾಗಿ, ಅದ್ಭುತವಾಗಿದೆ.

ಉಲ್ಲೇಖನಗಳು

[ಬದಲಾಯಿಸಿ]
  1. Falling Rain Genomics, Inc - Kolar
  2. "Antaragange"