ಸದಸ್ಯ:Namita Gurudas/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Larry Page

ಜನನ[ಬದಲಾಯಿಸಿ]

ಲಾರೆಂಸ್ ಲ್ಯಾರಿ ಪೇಜ್ ಅವರು ಅಮೇರಿಕದಾ ವಿಶ್ವವಿಖ್ಯಾತ ಕಂಪ್ಯೂಟರ್ ವಿಜ್ಞಾನಿ ಮತ್ತು ಇಂಟರ್ನೆಟ್ ಉದ್ಯಮಿ.ಲ್ಯಾರಿ ಪೇಜ್ ೨೬.೩.೧೯೭೩ನಲ್ಲಿ ಈಸ್ಟ್ ಲ್ಯಾನ್ಸಿಂಗ್, ಮಿಶಿಗನ್ನಲ್ಲಿ ಜನಿಸಿದರು. ಅವರ ತಂದೆ ಕಾರ್ಲ್ ವಿನ್ಸೆಂಟ್ ಪೇಜ್ , ಮಿಶಿಗನ್ ಸ್ಟೇಟ್ ಯ್ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರು ಆಗಿದ್ದರು. ಅವರ ತಾಯಿ, ಗ್ಲೋರಿಯ , ಲಿಮಾನ್ ಬ್ರಿಗ್ಗಸ್ ಕಾಲೇಜಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬೋಧಕರಾಗಿದ್ದರು.

ಬಾಲ್ಯ[ಬದಲಾಯಿಸಿ]

ಪೇಜ್ ಅವರು ೬ ವಯಸ್ಸಿನಿಂದಲೇ ಕಂಪ್ಯೂರ್ಟ ಬಗ್ಗೆ ಬಹಳ ಕುತೂಹಲವಿತ್ತು.ಆಗಲೆ ಅವರು ಅದರ ಜೊತೆ ಆಡುತ್ತಿದ್ದರು.ಆ ಚಿಕ್ಕ ವಯಸ್ಸಿನಲ್ಲೇ, ಹೊಸ ವಿಷಯದಲ್ಲಿ ಆವಿಷ್ಕಾರ ಮಾಡುವ ಹಂಬಲವಿತ್ತು. ಆದುದರಿಂದ ಅವರಿಗೆ ತಂತ್ರಜ್ಞಾನ ಮತ್ತು ಬಿಸ್ನೆಸ್ ನಲ್ಲಿ ಆಸಕ್ತಿ ಹುಟ್ಟಿಸಿತ್ತು. ಅವರು ೧೨ ವರ್ಷ್ ವಿದ್ದಾಗಲೆ ಅವರದೆ ಆದ ಕಂಪನಿ ಶುರುಮಾಡುವ ಆಸಕ್ತಿ ಬೆಳೆಸಿಕೊಂಡಿದ್ದರು.

ವಿಧ್ಯಾಭ್ಯಾಸ[ಬದಲಾಯಿಸಿ]

ಪೇಜ್ ಒಕಿಮೋಸ್ ಮಾಂಟೆಸ್ಸರಿ ಶಾಲೆಯಲ್ಲಿ ೧೯೭೫ರಿಂದ ೧೯೭೯ವರೆಗೆ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೂಗಿಸಿದರು. ತಮ್ಮ ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಲ್ಯಾನ್ಸಿಂಗ್ ಪ್ರೌಢಶಾಲೆಯಲ್ಲಿ ೧೯೯೧ರಲ್ಲಿ ಮೂಗಿಸಿದರು. ಪೇಜ್ ಅವರು ಕಂಪ್ಯೂಟರ್ ಎಂಜಿನಿಯರಿಂಗ್ ವಿಜ್ಞಾನದ ಸ್ನಾತಕವನ್ನು ಯ್ಯೂನಿವರ್ಸಿಟಿ ಆಫ ಮಿಶಿಗನ್ ನಲ್ಲಿ ಪಡೆದರು. ಅದಾದ ಮೇಲೆ ಮಾಸ್ಟರ್ ಆಫ ಸೈನ್ಸ್ ಪದವಿಯನ್ನು ಕಂಪ್ಯೂರ್ಟ್ ಸೈನ್ಸ್ ನಲ್ಲಿ , ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಪಡೆದರು.ಪೇಜ್ ಅವರು ಬೆಳೆಯುವ ಸಮಯದಲ್ಲಿ ಸ್ಯಾಕ್ಸೋಫೋನ್ ಆಡಿದರು ಮತ್ತು ಸಂಗೀತ ರಚನೆಯ ಬಗ್ಗೆ ಓದಿದ್ದರು. ಪೇಜ್ ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್ಡಿ ಮಾಡಲು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲದಲ್ಲಿ ಧಾಖಲೆಯಾದರು, ಆದರೆ ಪೂರ್ಣಗೊಳಿಸಲಿಲ್ಲ. ಅದೇ ಸಮಯದಲ್ಲಿ ಸರ್ಜೆ ಬ್ರಿನ್ ಜೊತೆ ಕೂಡಿ "ಬ್ಯಾಕ್ ರಬ್" ಎಂಬ ಸಂಶೋಧನಾ ಯೋಜನೆಯನ್ನು ಮಾಡಿದರು. ಅವರಿಬ್ಬರು ಕೂಡಿ ಒಂದು ಸಂಶೋಧನಾ ಲೇಖನ "ಧಿ ಅನಾಟಮಿ ಆಫ ಎ ಲಾರ್ಜ್ ಸ್ಕೇಲ್ ಹೈರ್ಪ್ ಟೆಕ್ಶುಯಲ್ ವೆಬ್ ಸರ್ಚ್ ಇಂಜಿನ್" ಬರೆದರು. ಇದೇ ಆ ಸಮದಲ್ಲಿ ಇಂಟರ್ನೆಟ್ ಬಳಕೆಗೆ ಇದು ಒಂದು ಪ್ರಮುಖ ಡಾಕ್ಯುಮೆಂಟ್ ಆಯಿತು.ಇವರಿಬ್ಬರು ಸ್ಟಾನ್ಫರ್ಡ್ ನಲ್ಲಿ ಇದ್ದಾಗಲೆ ಗೂಗಲ್ ನನ್ನು ಕಂಡು ಹಿಡಿದರು.

ಗೂಗಲ್ ಜನನ[ಬದಲಾಯಿಸಿ]

ಲಾರೆಂಸ್ ಲ್ಯಾರಿ ಪೇಜ್ ಅವರು ಸರ್ಜೆ ಬ್ರಿನ್ ಅವರ ಜೊತೆ ಕೂಡಿ "ಗೂಗಲ್" ನನ್ನು ೧೯೯೮ನಲ್ಲಿ ಕಂಡು ಹಿಡಿದರು[೧].ಗೂಗಲ್ ಶುರುವಾಗಿದ್ದು ಮೆನ್ಲೊ ಪಾರ್ಕ್, ಕ್ಯಾಲಿಫೊರ್ನಿಯದ ಒಬ್ಬ ಸ್ನೇಹಿತನ ಗ್ಯಾರೇಜ್ ನಲ್ಲಿ. ಅವರು ಗೂಗಲ್ ನನ್ನು ೪ ಸೆಪ್ಟೆಂಬರ್ ೧೯೯೮ನಲ್ಲಿ ಖಾಸಗಿ ಸಂಸ್ಥೆಯಾಗಿ ನಿರ್ಮಾಣಮಾಡಿದರು. ಆಮೇಲೆ ಆಗಸ್ಟ್ ೧೯ನೇ ತಾರೀಕು ೨೦೦೪ರಲ್ಲಿ ಸಾರ್ವಜನಿಕ ಸಂಸ್ಥೆಯಾಗಿ ಸಂಘಟಿಸಿದರು. ೨೦೦೪ನಲ್ಲಿ ಗೂಗಲ್ ಮೌಂನ್ಟೇನ್ ವ್ಯೂ, ಕ್ಯಾಲಿಫೊರ್ನಿಯಗೆ ಸ್ಥಳಾಂತರಗೊಂಡಿತು. ಅದ್ದಕ್ಕೆ ಗೂಗಲ್ ಪ್ಲೆಕ್ಸ್ ಎಂಬ ಹೆಸರು ಇಟ್ಟರು. ಅವರ ಮುಖ್ಯ ಉದ್ದೇಶ "ಟು ಆರ್ಗನೈಸ್ ದ ವರ್ಡ್ಸ್ ಇಂಫ಼ರ್ಮೇಶನ್ ಅಂಡ್ ಮೇಕ್ ಇಟ್ ಯ್ಯುನಿವರ್ಸಲಿ ಆಕ್ಸೆಸಬಲ್ ಅಂಡ್ ಯ್ಯುಸ್ಫ಼ುಲ್" ಮತ್ತು ಅದರ ಅನಧಿಕೃತ ಘೋಷಣೆ "ಡೊಂಟ್ ಬಿ ಈವಿಲ್".ಲ್ಯಾರಿ ಪೇಜ್ ಅವರ ಗೂಗಲ್ ಪ್ರಪಂಚಕ್ಕೆ ಅಥಿದೊಡ್ಡ ಕೊಡುಗೆ.ಗೂಗಲ್ ಪ್ರಪಂಚದ ಯಾವುದೆ ಒಂದು ವಿಷಯದ ಬಗ್ಗೆ ತಿಳಿಸಿಕೊಡುವ ಒಂದು ದೊಡ್ಡ ಬಂಡಾರವಾಗಿದೆ.ಇದನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ಬಳಸುತ್ತಿದ್ದಾರೆ .ಲ್ಯಾರಿ ಪೇಜ್ ೧೯೯೬ರಿಂದ ೨೦೦೧ವರೆಗೆ ಗೂಗಲ್ ಸಿ.ಇ.ಒ ಆಗಿದ್ದರು.೨೦೧೧ ನಲ್ಲಿ ಮತ್ತೆ ಗೂಗಲ್ ಸಿ.ಇ.ಒ ಆಗಿ ನೇಮಕಗೊಂಡರು. ಜುಲೈ ೨೦೧೫ರಲ್ಲಿ , ಲ್ಯಾರಿ ಪೇಜ್ ಸಿ.ಇ.ಒ ಪದವಿಗೆ ರಾಜಿನಾಮೆ ಕೊಟ್ಟರು.

ಆಲ್ಫಾಬೆಟ್ ಇನ್ಕ್ ಸ್ಥಾಪನೆ[ಬದಲಾಯಿಸಿ]

ಆಗಸ್ಟ್ ೨೦೧೫ರಲ್ಲಿ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ "ಆಲ್ಫಾಬೆಟ್ ಇನ್ಕ್." ಎಂಬ ಕಂಪನಿಯನ್ನು ಶುರುಮಾಡಿದರು. ಲ್ಯಾರಿ ಪೇಜ್ ಈ ಕಂಪನಿಯ ಸಿ.ಇ.ಒಯಾಗಿ ನೇಮಕಗೊಂಡರು. ಈ ಆಲ್ಫಾಬೆಟ್ ಕಂಪನಿಯ ಕೆಳಗೆ ಗೂಗಲ್ ಕಂಪನಿ ಮತ್ತು ಅದರ ಸಹ ಕಂಪನಿಗಳನ್ನು ನಡೆಸಳು ಶುರುಮಾಡಿದರು.

ವಿವಾಹ[ಬದಲಾಯಿಸಿ]

೨೦೦೭ರಲ್ಲಿ ಪೇಜ್ ಅವರು ಲುಸಿಂಡ ಸೌತ್ವರ್ತ್ ಅವರನ್ನು ರಿಚರ್ಡ್ ಬ್ರಾನ್ಸನ್ ನ ದ್ವೀಪದ, ನೆಕ್ಕರ್ ಐಸ್ಲ್ಯಾಂಡ್, ಕೆರಿಬಿಯನ್ ಐಸ್ಲ್ಯಾಂಡ್ ನಲ್ಲಿ ಮೊದುವೆಯಾದರು. ಪೇಜ್ ಅವರ ಹೆಂಡತಿ, ಲುಸಿಂಡ ಸಂಶೋಧನಾ ವಿಜ್ಞಾನಿ. ಲುಸಿಂಡರವರು ಕ್ಯಾರಿ ಸೌತ್ವರ್ತ್, ನಟಿ ಮತ್ತು ರೂಪದರ್ಶಿ ಅವರ ಸಹೋದರಿ.

ಮಕ್ಕಳು[ಬದಲಾಯಿಸಿ]

ಪೇಜ್ ಮತ್ತು ಲುಸಿಂಡ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ದೊಡ್ಡವನಿಗೆ ೭ ವರ್ಷ ಮತ್ತು ಎರಡನೆಯವನು ೫ ವರ್ಷ. ಪೇಜ್ ಮತ್ತು ಲುಸಿಂಡ ಅವರ ಮಕ್ಕಳ ಜೊತೆ ಪ್ರಸ್ತುತ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ಜೀವಿಸುತ್ತಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

೨೦೦೩ನಲ್ಲಿ, ಪೇಜ್ ರವರು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಗೌರವದಿಂದ ಐಇ ಬಿಜಿನೆಸ್ ಸ್ಕೂಲ್ ನಿಂದ ಪಡೆದ್ದಿದ್ದಾರೆ. ೨೦೦೯ನಲ್ಲಿ, ಪೇಜ್ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಗೌರವದಿಂದ ಡಾಕ್ಟ್ರೇಟ್ ಪಡೆದರು. ಲ್ಯಾರಿ ಪೇಜ್ ನವರನ್ನು ಫೋರ್ಬ್ಸ್ ಉದ್ಯಮ ನಿಯತಕಾಲಿಕೆನಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ೨೦೧೫ರಲ್ಲಿ ಪ್ರಪಂಚದ ಪ್ರಮೂಖ ೧೦ ಜನರಲ್ಲಿ ಒಬ್ಬರಾಗ್ಗಿದ್ದಾರೆ. ೨೦೧೫ರಲ್ಲಿ ತಾಂತ್ರಿಕ ವರ್ಗದ ಶ್ರೀಮಂತ ವ್ಯಕ್ತಿಗಳ ದರ್ಜೆಯಲ್ಲಿ ೫ನೇಯವರಾಗಿದ್ದರು. ಫೋರ್ಬ್ಸ್ ಪತ್ರಿಕೆ ಪ್ರಕಾರ ೨೦೧೫ರಲ್ಲಿ , ಪೇಜ್ ಅವರು ೪೦೦ ಅತಿಮೂಖ್ಯ ಜನರ ಪೈಕಿ ೧೦ನೇಯ ಸ್ಥಾನದಲ್ಲಿ ಇದ್ದರು[೨] .ಅಮೇರಿಕದಲ್ಲಿ ಪೇಜ್ ರವರು ಶ್ರೀಮಂತ ವರ್ಗಕ್ಕೆ ಸೇರಿದ ಜನರಲ್ಲಿ ೯ನೇ ಸ್ಥಾನದಲ್ಲಿ ಇದ್ದಾರೆ. ೨೦೧೬ನಲ್ಲಿ ಬಿಲಿಯನೇರ್ ಪಟ್ಟಿಯಲ್ಲಿ ೧೨ಡನೇಯರಾಗ್ಗಿದ್ದಾರೆ. ಪೇಜ್ ಅವರು ೨೦೧೬ರ ಪ್ರಪಂಚದ ಪ್ರಮುಖ ಪರಿವರ್ತನೆಗೆ ಕಾರಣರಾಗ್ಗಿದ್ದಾರೆ. ಪೇಜ್ ರವರನ್ನು ಅವರ ಕಂಪನೀಯ ಕಾರ್ಮಿಕರು ಅವರನ್ನು ಅಮೀರಿಕಾದ ಪ್ರಮುಖ ಹೆಸರುವಾಸಿಯಾದ ಪ್ರಧಾನ ಕಾರ್ಯದರ್ಶಿ ಎಂದು ಘೋಶಿಸಿದ್ದಾರೆ.೨೦೦೨ ರಲ್ಲಿ ಪೇಜ್ ಮತ್ತು ಬ್ರಿನ್ ೩೫ ವರ್ಷದೊಳಗಿನ ವಿಶ್ವದ ಅಗ್ರ ೧೦೦ ಹೊಸ ತಾಂತ್ರಿಕ ಇನೊವೇಟರ್ಸ್ ನಲ್ಲಿ, ಎಮ್ಐಟಿ ಟೆಕ್ನಾಲಜಿ ರಿವ್ಯೂ ಪ್ರಕಾರ ಒಬ್ಬರಾಗಿದ್ದಾರೆ. ಪೇಜ್ ಮತ್ತು ಬ್ರಿನ್ ೨೦೦೪ರಲ್ಲಿ ಮಾರ್ಕೊಣಿ ಫೌಂಡೇಷನ್ ಪ್ರಶಸ್ತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪಡೆದಿದ್ದಾರೆ. ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಅವರನ್ನು ಮಾರ್ಕೊಣಿ ಫೌಂಡೇಷನ್ ಅಟ್ ಕೊಲಂಬಿಯ ಯ್ಯೂನಿವರ್ಸಿಟಿನಲ್ಲಿ ಫ಼ೆಲೊಯಾಗಿ ಆಯ್ಕೆ ಮಾಡಿದ್ದಾರೆ.

ಉಲ್ಲೇಖನಗಳು[ಬದಲಾಯಿಸಿ]