ಸದಸ್ಯ:Nagarajakaraya/ನರಸಿಂಗನವರ್ ಕುಟುಂಬ
ಭಾರತದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಲೋಕೂರು ಗ್ರಾಮದಲ್ಲಿನ ನರಸಿಂಗನವರ್ ಕುಟುಂಬವು ಸುಮಾರು 206 ಸದಸ್ಯರಿರುವ ಪಿತೃಪ್ರಧಾನ ಜೈನ ಕುಟುಂಬವಾಗಿದ್ದು, ಅವರೆಲ್ಲರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಕುಟುಂಬದ ಎಲ್ಲಾ ವ್ಯಕ್ತಿಗಳು ಸಾಮಾನ್ಯವಾಗಿ ಒಂದೇ ಪೂರ್ವಜರನ್ನು ಹೊಂದಿದ್ದಾರೆ ಮತ್ತು ಈ ಕುಟುಂಬವು ವಿಶ್ವದ ಅತಿದೊಡ್ಡ ಅವಿಭಜಿತ (ಅವಿಭಕ್ತ) ಕುಟುಂಬಗಳಲ್ಲಿ ಒಂದಾಗಿದೆ [೧].ಲೋಕೂರು ಗ್ರಾಮದ ನೆರೆಹೊರೆಯ ಮನೆಗಳಲ್ಲಿ ವಾಸಿಸುತ್ತಿರುವ ಈ ಕುಟುಂಬದ ಸದಸ್ಯರು ಐದು ತಲೆಮಾರುಗಳಲ್ಲಿ ವ್ಯಾಪಿಸಿದ್ದಾರೆ. ಭೀಮಣ್ಣ ಜಿನಪ್ಪ ನರಸಿಂಗನವರ್ ಈ ಕುಟುಂಬದ ಹಿರಿಯರಾಗಿದ್ದು ಅಪರಾಹ್ನದ ಊಟೋಪಚಾರಗಳನ್ನು ತಮ್ಮ ಕುಟುಂಬಸ್ಥರೊಂದಿಗೆ ಒಟ್ಟಿಗೆ ಸ್ವೀಕರಿಸುತ್ತಾರೆ. ಭಾರತದಲ್ಲಿ ಪ್ರಚಲಿತವಿರುವ
ಅವಿಭಕ್ತ ಕುಟುಂಬ ವ್ಯವಸ್ಥೆಗೆ ಇದೊಂದು ಅಪರೂಪದ ಉದಾಹರಣೆಯಾಗಿದೆ.
ಮೂಲ
[ಬದಲಾಯಿಸಿ]ನರಸಿಂಗನವರ್, ಪಾಟರ್ ಕುಟುಂಬದ ಯಜಮಾನರಾಗಿದ್ದು ಇವರು ಮೂಲತಃ ಮಹಾರಾಷ್ಟ್ರದ ಮೀರಜ್ ಬಳಿಯ 'ಹತ್ಕಲ್ ಅಂಗಡಿ' ಗ್ರಾಮಕ್ಕೆ ಸೇರಿದವರು. [೨] ಕುಸ್ತಿಪಟುವಾಗಿದ್ದ ಇವರು ಲೋಕೂರ್ನ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೇಲ್ನೋಟಕ್ಕೆ ತೋರುವಂತೆ ದುರ್ಗಾ ದೇವಿಯೇ ಅವನಿಗೆ ತನ್ನ ನೆಲೆಯನ್ನು ಲೋಕೂರ್‌ಗೆ ಬದಲಾಯಿಸಲು ಸೂಚಿಸಿದಳು. ಅವರು ಲೋಕೂರ್ ನಲ್ಲಿ ಒಂದು ಸಣ್ಣ ತುಂಡು ಭೂಮಿಯನ್ನು ಖರೀದಿಸಿ ಕೃಷಿಯನ್ನು ಪ್ರಾರಂಭಿಸಿದರು.ಅಂತೆಯೇ ಅಲ್ಲಿನ ಸ್ಥಳೀಯ ಹುಡುಗಿಯನ್ನು ವಿವಾಹವಾದರು.ಈ ದಂಪತಿಗಳು ಏಳು ಮಕ್ಕಳನ್ನು ಹೊಂದಿದ್ದು ತಮ್ಮ ಕುಟುಂಬವನ್ನು ದೈತ್ಯ ಕುಟುಂಬವಾಗಿಸಲು ಅಗತ್ಯವಾದ ಮುಂದಿನ ಪೀಳಿಗೆಯ ಜನರ ಆರಂಭಿಕ ಗುಂಪನ್ನು ಈ ಮೂಲಕ
ರಚಿಸಿದರು.
ಕುಟುಂಬದ ರಚನೆ
[ಬದಲಾಯಿಸಿ]ಸುಮಾರು 90 ವರ್ಷ ವಯಸ್ಸಿನ ತಮ್ಮಣ್ಣ ಕುಟುಂಬದ ಅತ್ಯಂತ ಹಿರಿಯ ಪುರುಷ ವ್ಯಕ್ತಿಯಾಗಿದ್ದಾರೆ. [೧] ಈ ಕುಟುಂಬದ ಮುಖ್ಯಸ್ಥ ಭೀಮಣ್ಣ ಅವರಿಗೆ 74 ವರ್ಷವಯಸ್ಸಿನವರಾಗಿದ್ದು ತನ್ನ ತಲೆಮಾರಿನವರಲ್ಲೇ ಅತ್ಯಂತ ವಿದ್ಯಾವಂತ ವ್ಯಕ್ತಿಯಾಗಿದ್ದವರು. ಒಟ್ಟಿನಲ್ಲಿ ಸುಮಾರು 70 ಪುರುಷರು, 50ಮಹಿಳೆಯರು ಮತ್ತು 60 ಮಕ್ಕಳು ಈ ಕುಟುಂಬದಲ್ಲಿ ಇದ್ದರು. "ಒಟ್ಟಿಗೆ ಕುಳಿತು ಆಹಾರ ಸೇವಿಸುವ ಜನರು ಒಟ್ಟಿಗೆ ಇರುತ್ತಾರೆ" ಎಂದು ಭಾವಿಸುವುದರಿಂದ ಕುಟುಂಬದ ಎಲ್ಲಾ ಸದಸ್ಯರು ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಟ್ಟಿಗೆ ಕುಳಿತು ಸೇವಿಸಬೇಕು ಎಂಬ ನಿಯಮವನ್ನುಈ ಕುಟುಂಬವು ಅನುಸರಿಸುತ್ತದೆ. ಈ ಕುಟುಂಬದ ಸದಸ್ಯರು ಒಟ್ಟು 50 ಕೆಜಿ ಅನ್ನ ಜೋಳ, 20ಕೆಜಿ ಗೋಧಿ ಹಿಟ್ಟು ಮತ್ತು 40ದಿನಕ್ಕೆ ಲೀಟರ್ ಹಾಲು ಸೇವಿಸುತ್ತಾರೆ. ಕುಟುಂಬವು ಪುರುಷ ಪ್ರಾಧಾನ್ಯ ಹೊಂದಿದ್ದು ಮಹಿಳೆಯರಿಗೆ ಕಡಿಮೆ ಸ್ವಾತಂತ್ರ್ಯವನ್ನು ಸೂಚಿಸುತ್ತದೆ.ಹೆಚ್ಚಿನ ಶಿಕ್ಷಣವನ್ನು ಹೊಂದಿರುವ ಹುಡುಗಿಯರು ತಮ್ಮ ನಡುವೆ ಅಸಂಗತತೆಯನ್ನು ತರಬಹುದು.[೩] ಎಂಬ ನಂಬಿಕೆಯಿಂದಾಗಿ ಕುಟುಂಬದಲ್ಲಿ ಪುರುಷರು ಕಡಿಮೆ ಶಿಕ್ಷಣ ಪಡೆದ ಹುಡುಗಿಯರನ್ನು ಆದ್ಯತೆ ನೀಡುತ್ತಾರೆ. ಬಹುತೇಕ ವಿವಾಹಗಳನ್ನು ಸಾಮೂಹಿಕವಾಗಿ ನಡೆಸಲಾಗುತ್ತದೆ ವಿವಾಹದ ನಂತರ ದಂಪತಿಗಳು ಪೂರ್ವಜರ ಮನೆಯಲ್ಲಿ ಮತ್ತು ಸುತ್ತಮುತ್ತ ನೆಲೆಸುತ್ತಾರೆ. ಕುಟುಂಬದ ವಾರ್ಷಿಕ ಆಯವ್ಯಯವು ಸುಮಾರು 1.2 ಮಿಲಿಯನ್ ರೂಪಾಯಿಗಳು ಆಗಿದ್ದು ಇದರಲ್ಲಿ 300 ಸಾವಿರ ರೂಗಳು ಬಟ್ಟೆ, ಔಷಧಿ ಮತ್ತು ಕೃಷಿಗೆ ಖರ್ಚಾಗುತ್ತದೆ.ಈ ಕುಟುಂಬವು 270 acres (1.1 km2) ಎಕರೆಯಷ್ಟು ಕೃಷಿ ಭೂಮಿ ಹೊಂದಿದ್ದು ತನ್ನ ಬಳಕೆಗೆ ಬೇಕಾದ ಎಲ್ಲಾ ತರಕಾರಿಗಳು ಮತ್ತು ಧಾನ್ಯಗಳನ್ನು ಬೆಳೆಯುತ್ತದೆ. ಕೃಷಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಪದ್ಮಣ್ಣ, ಅಡುಗೆಮನೆಗೆ ಸಾಮಗ್ರಿಗಳ ಪೂರೈಕೆಯನ್ನು ನೋಡಿಕೊಳ್ಳುವ ಮಹಾವೀರ್ , ಡೈರಿಯನ್ನು ನೋಡಿಕೊಳ್ಳುವ ಧರಣೇಂದ್ರ ಮತ್ತು ಕುಟುಂಬ ಹೊಂದಿರುವ ವಾಹನಗಳು ಮತ್ತು ಬೋರ್‌ವೆಲ್‌ಗಳನ್ನು ನಿರ್ವಹಿಸುವ ದೇವೇಂದ್ರ [೧] -ಇವರು ಕುಟುಂಬದ ಇತರ ಪ್ರಮುಖ ಸದಸ್ಯರಾಗಿದ್ದಾರೆ. ಕುಟುಂಬದಲ್ಲಿನ ಮಹಿಳೆಯರು ಹೆಚ್ಚಾಗಿ ಅಡುಗೆಮನೆಯ ಕೆಲಸ ಮಾಡುತ್ತಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ ಮತ್ತು ಮನೆಯ ಶುಚಿತ್ವದೆಡೆಗೆ ಗಮನವಹಿಸುತ್ತಾರೆ. ಕುಟುಂಬದಲ್ಲಿನ ಹುಡುಗಿಯರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ವಿವಾಹವಾಗುತ್ತಾರೆ.
ಗುರುತಿಸುವಿಕೆ
[ಬದಲಾಯಿಸಿ]1992 ರಲ್ಲಿ, ಹಿಂದಿ ಚಲನಚಿತ್ರ ನಿರ್ದೇಶಕ ಕೇತನ್ ಮೆಹ್ತಾ ನರಸಿಂಗನವರ್ಸ್ ಕುರಿತು 'ಆಲ್ ಇನ್ ದಿ ಫ್ಯಾಮಿಲಿ'ಎಂಬ ಸಾಕ್ಷ್ಯಚಿತ್ರವನ್ನು ಪೂರ್ಣಗೊಳಿಸಿದರು. [೪] 2007ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಛಾಯಾಗ್ರಾಹಕ ಕೆ.ವೆಂಕಟೇಶ್ ಅವರು ಈ ಕುಟುಂಬದ ವಿವಿಧ ಮುಖಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು. [೨]
ಟಿಪ್ಪಣಿಗಳು
[ಬದಲಾಯಿಸಿ]
- ↑ ೧.೦ ೧.೧ ೧.೨ Girish S. Pattanashetti (2006-10-14). "Making over 1,000 `rotis' a day for a family". The Hindu. Chennai, India. Archived from the original on 2007-09-30. Retrieved 2007-07-09. ಉಲ್ಲೇಖ ದೋಷ: Invalid
<ref>
tag; name "hind" defined multiple times with different content - ↑ ೨.೦ ೨.೧ "The great banyan's spread". The Hindu. Chennai, India. 2007-03-21. Archived from the original on 2007-03-31. Retrieved 2007-07-09. ಉಲ್ಲೇಖ ದೋಷ: Invalid
<ref>
tag; name "origin" defined multiple times with different content - ↑ ಉಲ್ಲೇಖ ದೋಷ: Invalid
<ref>
tag; no text was provided for refs namedtele
- ↑ "ONE FAMILY: ALL IN THE FAMILY". Sigmer Technologies. Archived from the original on 2007-11-15. Retrieved 2007-07-09.