ಸದಸ್ಯ:NISHA SUBBU/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿತ್ತನಕೆರೆ ಬಗ್ಗೆ ಮಾಹಿತಿ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಕಿತ್ತನಕೆರೆ ಕಣಕಟ್ಟೆ (ಹೊ ) ಅರಸೀಕೆರೆ (ತಾ ) ಹಾಸನ ಜಿಲ್ಲೆಯಲ್ಲಿದೆ. ಹಾಸನದಿಂದ ಸುಮಾರು 73 km ದೂರ ಮತ್ತು ಅರಸೀಕೆರೆಯಿಂದ 26 km ದೂರದಲ್ಲಿದೆ. ಊರಿನಲ್ಲಿ ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯತ್ ಇದೆ. ಹಿಂದೆ ಕಿಟ್ಟಪ್ಪನಾಯಕ ಎಂಬುವನು ಈ ಊರನ್ನು ಆಳ್ಳುತ್ತಿದ್ದುದ್ದರಿಂದ ಕಿತ್ತ ನಕೆರೆ ಎಂಬ ಹೆಸರು ಬಂದಿದೆ. ಹಿಂದೆ ಈ ಊರು ಹೊಯ್ಸಳರ ರಾಜ ವೀರಬಲ್ಲಾಳ ಆಳುತ್ತಿದ್ದುದ್ದರಿಂದ ಬಲ್ಲ್ಲಾಳ ಪುರ ಎಂಬ ಹೆಸರು ಸಹ ಇತ್ತು ಎಂದು 11, 12, 13, ನೇ ಶತಮಾನದ ಶಾಸನ ಗಳಿಂದ ತಿಳಿದು ಬರುತ್ತದೆ.

ಭೌಗೋಳಿಕ ಹಿನ್ನಲೆ[ಬದಲಾಯಿಸಿ]

ಬಯಲು ಸೀಮೆ ಪ್ರದೇಶವಾಗಿದೆ, ಇಲ್ಲಿನ ಕೃಷಿ ಚಟುವಟಿಕೆಗಳು ಮಳೆಯನ್ನು ಅವಲಂಬಿಸಿವೆ.

ಇಲ್ಲಿನ ಪ್ರಮುಖ ಬೆಳೆಗಳೆಂದರೆ

1. ತೆಂಗು

2. ರಾಗಿ

3. ದಾಳಿಂಬೆ

4. ಜೋಳ

ಜನಸಂಖ್ಯೆ[ಬದಲಾಯಿಸಿ]

ಸುಮಾರು 200 ಮನೆಗಳಿದ್ದು 2000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. 1500ರ ಕ್ಕಿಂತ ಮತಗಳನ್ನು ಹೊಂದಿದೆ.

ಊರಿನ ಪ್ರಮುಖ ದೇವಾಲಯಗಳು[ಬದಲಾಯಿಸಿ]

1. ಆಂಜೆನೇಯ ದೇವಾಲಯ

2. ಕರಿಯಮ್ಮ ದೇವಾಲಯ

3. ದುರ್ಗಮ್ಮ ದೇವಾಲಯ

4.ನರಸಿಂಹ ದೇವಾಲಯ

5.ಬಸವಣ್ಣ ದೇವಾಲಯ.

ಶಾಸನ[ಬದಲಾಯಿಸಿ]

ಈ ಊರಿನಲ್ಲಿ ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಸಾಮಂತ ಬೆನವಯ್ಯನ ಮಗ ಚೊಳಯ್ಯ ಶಿವ ದೇವಾಲಯ ಪ್ರತಿಷ್ಠಾಪಿಸಿದ ಇದು ಸುಮಾರು A.C.1132ರಲ್ಲಿ ಸ್ಥಾಪನೆಗೊಂಡಿತೆಂದು ಶಾಸನದಲ್ಲಿ ಉಲ್ಲೇಖವಿದೆ

ವಿಶೇಷತೆ[ಬದಲಾಯಿಸಿ]

ಊರಿನ ಪಕ್ಕದ ಮಾಡಾಳು ಗೌರಮ್ಮ ಜಾತ್ರೆ ವಿಶೇಷ.