ವಿಷಯಕ್ಕೆ ಹೋಗು

ಸದಸ್ಯ:NAMRATHA T M 12345/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಮ್ಮ ತಾಯಿ ದೇವಸ್ಥಾನ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಾಲಯವಿದೆ. ಅರಕಲಗೂಡಿನ ಬಸ್ ನಿಲ್ದಾಣದಿಂದ ಅತ್ಯಂತ ಸಮೀಪದಲ್ಲಿದ್ದು, ಇ ದೇವಾಲಯವು ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ದೊಡ್ಡಮ್ಮ ತಾಯಿಯ ದೇವಸ್ಥಾನ ಅತ್ಯಂತ ಸುಂದರವಾಗಿದ್ದು, ತಾಯಿಯು ತನ್ನ ಭಕ್ತರಿಗೆ ಪ್ರತಿ ದಿನವೂ ದರ್ಶನವನ್ನು ನೀಡುತ್ತಾಳೆ. ಹಾಗೆಯೇ ಪ್ರತಿ ಶುಕ್ರವಾರ ತಾಯಿಗೆ ಪುಷ್ಪಗಳ ಅಲಂಕಾರದಿಂದ ಶೃಂಗರಿಸಿ ವಿಶೇಷ ಪೂಜೆಯು ಸಹ ಇಲ್ಲಿ ನೆರವೇರುತ್ತದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಇಲ್ಲಿ ಬಹಳ ಅದ್ದೂರಿಯಾದ ಜಾತ್ರಾಮಹೋತ್ಸವವು ನೆರವೇರುತ್ತದೆ. ಆ ಸುಂದರವಾದ ಅದ್ಭುತವಾದ ಜಾತ್ರೆಯನ್ನು ಎಲ್ಲ ಭಕ್ತರು ಕಣ್ಣುತುಂಬಿಕೊಳ್ಳುತ್ತಾರೆ.