ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:NAMRATHA T M 12345/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
        ದೊಡ್ಡಮ್ಮ ತಾಯಿಯ ದೇವಸ್ಥಾನ 
        
        

ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಸ್ಥಾನವಿದೆ. ಅರಕಲಗೂಡಿನ ಬಸ್ ನಿಲ್ದಾಣದಿಂದ ಅತ್ಯಂತ ಸಮೀಪದಲ್ಲಿ ಈ ದೇವಾಲಯವಿರುವದನ್ನು ನಾವು ಕಾಣಬವುದಾಗಿದೆ.ತಾಯಿಯ ದೇವಸ್ಥಾನವು ಬಹಳ ಪ್ರಸಿದ್ದಿಯನ್ನು ಪಡೆದುಕೊಂಡಿದೆ, ಈ ದೇವಾಲಯವು ತುಂಬಾ ಸುಂದರವಾಗಿದ್ದು,ದೊಡ್ಡಮ್ಮ ತಾಯಿಯು ತನ್ನ ಭಕ್ತರಿಗೆ ಪ್ರತಿದಿನವೂ ದರ್ಶನವನ್ನು ನೀಡುತ್ತಾಳೆ. ಹಾಗೆಯೇ ಪ್ರತಿ ಶುಕ್ರವಾರದಂದು ತಾಯಿಗೆ ವಿವಿಧ ಪುಷ್ಪಗಳಿಂದ ಅಲಂಕಾರಮಾಡಿ ನಿಂಬೆಹಣ್ಣಿನ ದೀಪಗಳಿಂದ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು.

ಇಲ್ಲಿನ ವಿಶೇಷವೇನೆಂದರೆ ಪ್ರತಿ ಐದು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಾದ ಜಾತ್ರಾಮಹೋತ್ಸವ ಆಚರಿಸಲಾಗುವುದು ಆ ಅದ್ಬುತವಾದ ಸಮಾರಂಭವನ್ನು ಭಕ್ತವೃಂದದವರು ಕಣ್ಮನ ತುಂಬಿಕೊಳ್ಳುತ್ತಾರೆ.