ಸದಸ್ಯ:Mythri. C/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


 ಜೂಲಿಯ ಕ್ರಿಸ್ಟೇವ[ಬದಲಾಯಿಸಿ]

ಜೂಲಿಯ ಕ್ರಿಸ್ಟೇವ ಎನ್ನುವವರು‌ ಮುಖ್ಯವಾಗಿ ಬಲ್ಗೇರಿಯಾ ಹಾಗೂ ಫ್ರಾಂಸ್ ದೇಶಗಳ ತತ್ವಜ್ಞಾನಿಯಾಗಿದ್ದಾರೆ. ಇವರು ಸಾಹಿತ್ಯ ವಿಮರ್ಶಕರಾಗಿ[೧], ಸಂಕೇತ ವಿಜ್ಞಾನಿಗಳಾಗಿ[೨], ಮನೋವಿಶ್ಲೇಷಕರಾಗಿ, ಸ್ತ್ರೀವಾದಿಯಾಗಿ[೩] ಮತ್ತು ಕಾದಂಬರಿಕಾರರಾಗಿ ಖ್ಯಾತಿ ಪಡೆದಿದ್ದಾರೆ.

ಬಾಲ್ಯ ಹಾಗೂ ವಿಧ್ಯಾಭ್ಯಾಸ[ಬದಲಾಯಿಸಿ]

ಇವರು ೩೪ ಜೂನ್ ೧೮೪೧ರಲ್ಲಿ ಫ್ರಾನ್ಸ್ ನಲ್ಲಿ ಚರ್ಚಿನ ಲೆಕ್ಕಿಗನ ಮಗಳಾಗಿ ಜನಿಸಿದರು. ೧೯೬೦ರಲ್ಲಿ ಫ್ರಾನ್ಸ್ ದೇಶದಲ್ಲಿ ನೆಲೆಸಿದ್ದರು. ಯೂನಿವರ್ಸಿಟಿ ಆಫ್ ಸೋಫಿಯಾದಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಫ್ರಾನ್ಸಿನ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಮುಗಿಸಿದರು. ಇವರು ಮುಖ್ಯವಾಗಿ ಮನೋವಿಶ್ಲೇಷಣೆಯಲ್ಲಿ ಪದವಿಯನ್ನು ಪಡೆದು ಉತ್ತೀರ್ಣರಾದರು.

೧೯೬೮ರಲ್ಲಿ  ಫಿಲಿಪ್ ಸೋಲ್ಲೆರ್ಸ್[೪] ಎಂಬ ಕಾದಂಬರಿಕಾರರನ್ನು ಮದುವೆಯಾದರು. ಪ್ರಸ್ತುತ ಇವರು ಯೂನಿವರ್ಸಿಟಿ ಪ್ಯಾರಿಸ್ ಡೈಡೆರೊಟ್ನ[೫]ಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪುಸ್ತಕಗಳು ಹಾಗು ಸಂದೇಶಗಳು[ಬದಲಾಯಿಸಿ]

ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಹೆಗ್ಗಳಿಕೆ ಇವರದ್ದು. ಪವರ್ಸ್ ಆಫ್ ಹಾರರ್[೬], ಟೇಲ್ಸ್ ಆಫ್ ಲವ್, ಬ್ಲಾಕ್ ಸನ್: ಡಿಪ್ರೆಶನ್ ಅಂಡ್ ಮೆಲಂಖೋಲಿಯ[೭], ಫೀಮೇಲ್ ಜೀನಿಯಸ್ ಸೇರಿದಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಅಂತಾರಾಷ್ಟ್ರೀಯ ವಿಮರ್ಶಾ ವಿಶ್ಲೇಷಣೆ, ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸ್ತ್ರೀವಾದದಲ್ಲಿ ಪ್ರಭಾವಿತರಾಗಿದ್ದರು. ಇವರ ಪುಸ್ತಕಗಳು ಮತ್ತು ಪ್ರಬಂಧಗಳಲ್ಲಿ ಮುಖ್ಯವಾಗಿ ಭಾಷಾಶಾಸ್ತ್ರ, ಸಾಹಿತ್ಯ ಸಿದ್ಧಾಂತ, ಮನೋವಿಶ್ಲೇಷಣೆ, ಜೀವನ ಚರಿತ್ರೆ ಹಾಗೂ ಆತ್ಮಚರಿತ್ರೆ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಶ್ಲೇಷಣೆ, ಕಲೆ ಹಾಗೂ ಕಲೆಯ ಇತಿಹಾಸಗಳ ಬಗ್ಗೆ ಕುರಿತು ಅಂತರ ಗ್ರಂಥೀಯ ಸಂಬಂಧ, ಸಂಕೇತ ವಿಜ್ಞಾನ ಮತ್ತು ಆಕ್ಷೇಪಣೆ ಕುರಿತು ವಿಶ್ಲೇಷಿಸುತ್ತಾರೆ. ಇವರು ಮನೋವಿಶ್ಲೇಷಣ ಮಾದರಿಯನ್ನು ಪೋಸ್ಟ್ಸ್ಟ್ರಕ್ಚರಲಿಸ್ಟ್ ವಿಮರ್ಶೆಗೆ ಬಳಸಿಕೊಂಡರು. ಇವರಿಗೆ ವಿಷಯದ ಬಗ್ಗೆ ಇರುವ ಚಿಂತನೆಗಳು ಸಿಗ್ಮಂಡ್ ಫ್ರಾಯ್ಡ್ರವರ ಚಿಂತನೆಗಳೊಂದಿಗೆ ಹೊಂದಿಕೊಳ್ಳುತ್ತವೆ. ಇವರಿಗೆ  ಕಮಾಂಡರ್‌ ಆಫ್ ದಿ ಲೀಜಿಯನ್ ಆಫ್ ದಿ ಹಾನರ್, ಕಮಾಂಡರ್ ಆಫ್ ದಿ ಆರ್ಡರ್ ಅಫ್ ಮೇರಿಟ್, ದಿ ಹಾಲ್ಬರ್ಗ್ ಇಂಟರ್ನ್ಯಾಷನಲ್ ಮೆಮೋರಿಯಲ್ ಪ್ರೈಸ್‌ ಹಾಗೂ ವಿಷನ್ 97 ಫೌಂಡೇಶನ್ ಪ್ರೈಸ್ ಹಾವೆಲ್ ಫೌಂಡೇಶನ್ ಇಂದ ದೊರಕಿದೆ. ಇವರು ೧೮೭೦ರಲ್ಲಿ ಚೈನಾಗೆ ಪ್ರಯಾಣಿಸಿ ೧೯೭೭ ರಲ್ಲಿ ಅಬೌಟ್ ಚೈನೀಸ್ ವುಮೆನ್ ಎಂಬ ಪುಸ್ತಕವನ್ನು ಬರೆದರು. ಇವರು ಸಾಂಕೇತಿಕ ಹಾಗೂ ಸಂಕೇತ ವಿಜ್ಞಾನಕ್ಕೆ ಅತ್ಯಂತ ಹೆಚ್ಚು ಒತ್ತು ನೀಡಿ ಅವರ ಬರಹಗಳಲ್ಲಿ ವಿಶ್ಲೇಷಿಸುತ್ತಿದ್ದರು.

ಚಿಂತನೆಗಳು[ಬದಲಾಯಿಸಿ]

ಇವರು ಮಾನವಶಾಸ್ತ್ರ ಹಾಗೂ ಮನೋವಿಜ್ಞಾನ ಒಂದರಲ್ಲೊಂದು ಪ್ರತಿನಿಧಿಸುತ್ತವೆ ಎಂಬುವುದನ್ನು ನಂಬುವುದಿಲ್ಲ ಬದಲಿಗೆ ಈ ಎರಡು ವಿಷಯಗಳು ಒಂದೇ ತರ್ಕವನ್ನು ಉಪಯೋಗಿಸುತ್ತವೆ ಎಂದು ಬಲವಾಗಿ ನಂಬುತ್ತಾರೆ. ಫ್ರೆಂಚಿನ ಸ್ತ್ರೀವಾದದಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸ್ತ್ರೀವಾದದ ಬಗ್ಗೆ ಇವರ ಬರಹಗಳು ಅನೇಕ ಬಾರಿ ವಿವಾದಕ್ಕೆ ಒಳಗಾಗಿವೆ. ಅಮೆರಿಕ ಸೇರಿದಂತೆ ಇನ್ನೂ ಹಲವಾರು ದೇಶಗಳು ಅವರ ಬರಹಗಳನ್ನು ವಿರೋಧಿಸಿದ್ದವು. ಕೆಲವೊಮ್ಮೆ ಇವರ ಬರಹಗಳು ಸ್ತ್ರೀವಾದವನ್ನು ವಿರೋಧಿಸುತ್ತವೆ ಎಂಬ ಭಾವನೆ ಜನರಲ್ಲಿ ಮೂಡುತ್ತಿತ್ತು. ಈ ರೀತಿ ವಿವಾದಕ್ಕೆ ಒಳಗಾದ ಇವರ ಬರಹಗಳು ಪ್ರಪಂಚದಾದ್ಯಂತ ಪ್ರಖ್ಯಾತವಾಗಿವೆ. ಇವರ ಕಾದಂಬರಿಗಳು ಪ್ರಮುಖವಾಗಿ ರಹಸ್ಯಮಯ[೮] ಕಥೆಗಳಿಂದ ಕೂಡಿರುತ್ತವೆ. ಇವರ ಕತೆಗಳಲ್ಲಿನ ಚಿಂತನೆಗಳು ಇವರ ಚಿಂತನೆಗಳೊಂದಿಗೆ ಹೊಂದಿಕೊಳ್ಳುತ್ತವೆ. ಅನೇಕ ಬಾರಿ ಇವರ ಕಾದಂಬರಿಗಳಲ್ಲಿ ಅವರ ಚಿಂತನೆಯು ಪ್ರತಿಬಿಂಬಿಸುವುದನ್ನು ನಾವು ಕಾಣಬಹುದು. ತತ್ವಜ್ಞಾನಿ ಹಾಗೂ ಮನೋ ವಿಜ್ಞಾನಿಯಾದ ಸಿಗ್ಮಂಡ್ ಫ್ರಾಯ್ಡ್ ಹಾಗೂ ಇನ್ನಿತರ ಪ್ರಮುಖ ವ್ಯಕ್ತಿಗಳ ಚಿಂತನೆಗಳನ್ನು ಒಂದುಗೂಡಿಸಿ ಇವರು ಇವರದೇ ಆದ ವಿಷಯಗಳನ್ನು ಪ್ರಪಂಚಕ್ಕೆ ಪರಿಚಯಿಸಿಕೊಟ್ಟರು. ಇವರ ನಿಲುವು ಬಹಳಷ್ಟು ಬಾರಿ ವಿವಾದಕ್ಕೆ ಒಳಗಾಗಿದ್ದರೂ ಆಗಿನ ಕಾಲದಲ್ಲಿ ಒಂದು ಹೊಸ ಅಡಿಪಾಯವನ್ನು ಹಾಕಿತು. ಆಂಗ್ಲಭಾಷೆಯ ತತ್ವಜ್ಞಾನದಲ್ಲಿ ಇವರ ಕೊಡುಗೆಯು ಅಪಾರವಾದದ್ದು. ಸಾಂಕೇತಿಕ ಹಾಗೂ ಸಂಕೇತ ವಿಜ್ಞಾನದ ವ್ಯತ್ಯಾಸವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸಿ ತತ್ವಜ್ಞಾನದ ಈ ವಿಭಾಗಕ್ಕೆ ಹೊಸ ಬುನಾದಿಯನ್ನು ಹಾಕಿದರು.

ಉಲ್ಲೇಖಗಳು[ಬದಲಾಯಿಸಿ]

  1. https://en.m.wikipedia.org/wiki/Literary_criticism
  2. https://en.m.wikipedia.org/wiki/Semiotics
  3. https://en.m.wikipedia.org/wiki/Feminism
  4. https://en.m.wikipedia.org/wiki/Philippe_Sollers
  5. https://en.m.wikipedia.org/wiki/Paris_Diderot_University
  6. https://en.m.wikipedia.org/wiki/Powers_of_Horror
  7. https://en.m.wikipedia.org/wiki/Black_Sun_(Kristeva_book)
  8. https://en.m.wikipedia.org/wiki/Mystery_fiction