ಸದಸ್ಯ:Monisha Kanchan/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್. ಚಂದ್ರಶೇಖರ ವೆಂಕಟರಾಮನ್

ಡಾ.ಸರ್.ಸಿ.ವಿ ರಾಮನ್ ಎಂದೇ ತಮ್ಮ ಆಪ್ತ ಗೆಳೆಯರು ಹಾಗೂ ಶಿಕ್ಷಣವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ರಲ್ಲಿ ಅವರದೇ ಹೆಸರಿನಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು. ಚಂದ್ರಶೇಖರ ವೆಂಕಟರಾಮನ್ ನವೆಂಬರ್ ೭, ೧೮೮೮ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿ ಎಂಬಲ್ಲಿ ಜನಿಸಿದರು. ಅವರ ತಂದೆ ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿ ಪಾರ್ವತಿ ಅಮ್ಮಾಳ್.

ತಮ್ಮ ೧೨ನೇ ವಯಸ್ಸಿಗೆ ಮೆಟ್ರಿಕ್ಯುಲೇಷನ್ ಮುಗಿಸಿದರು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿದರು (೧೯೦೪). ಎಂಎಸ್ಸಿ ಪದವಿಯನ್ನು ಗಳಿಸಿದರು (೧೯೦೭).

ನವೆಂಬರ್ ೨೧, ೧೯೭೦ ರಲ್ಲಿ ಮರಣವನ್ನು ಹೊಂದಿದ್ದರು. ಆಗ ಅವರ ವಯಸ್ಸು ೮೨.