ಸದಸ್ಯ:Monisha Kanchan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಲ್ಮೀಕಿ

ಕುಮಾರ ವಾಲ್ಮೀಕಿಯ ಕಾಲ ಸುಮಾರು ಕ್ರಿ.ಶ.೧೫೦೦, ಬಿಜಾಪುರ ಜಿಲ್ಲೆಯ ತೊರವೆಯಲ್ಲಿ ಜನಿಸಿದ ಈತನ ಆರಾಧ್ಯ ದೈವ ತೊರವೆಯ ನರಸಿಂಹ. ನರಹರಿ ಎಂಬುವುದು ಈತನ ನಿಜನಾಮ. ಸಂಸ್ಕೃತದಲ್ಲಿ ರಚಿತವಾದ ವಾಲ್ಮೀಕಿ ರಾಮಾಯಣವನ್ನು ಇವರು ಕನ್ನಡದಲ್ಲಿ ಕಾವ್ಯ ರೂಪಕ್ಕೆ ತಂದಿರುವುದರಿಂದ ಈತನನ್ನು ಕುಮಾರ ವಾಲ್ಮೀಕಿ ಎಂದು ಕರೆಯಲಾಗಿದೆ.

ಈತ ತೊರವೆ ನರಹರಿಯ ಅಂಕಿತದಲ್ಲಿ ಈ ರಾಮಾಯಣವನ್ನು ರಚಿಸಿರುವುದರಿಂದ ಈ ಕಾವ್ಯಕ್ಕೆ ತೊರೆವ ರಾಮಾಯಣ ಎಂಬ ಹೆಸರು ಬಂತು.

ಋಣತೃಯಗಳಲ್ಲಿ ಪಿತೃ ಋಣ ಎಂಬುವುದು ಒಂದು. ಪಿತೃ ಋಣ ಎಂದರೆ ತಾಯಿ ತಂದೆಯರು ನಮಗೆ ಜನ್ಮ ಕೊಟ್ಟು ಸಾಕಿ ಸಲಹಿರುವ ಕಾರಣಕ್ಕೆ ಇರುವ ಋಣ. ಈ ಋಣವನ್ನು ತೀರಿಸಬೇಕಾದುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಇದು ಭಾರತೀಯ ಸಂಸ್ಕೃತಿಯಲ್ಲಂತೂ ಅತ್ಯಂತ ಮಹತ್ವವಾದುದು.

ವ್ಯಾಸ ಭಾರತವನ್ನು ಕನ್ನಡದಲ್ಲಿ ಕಾವ್ಯರೂಪಕ್ಕೆ ತಂದ ನಾರಣಪ್ಪ ಕುಮಾರವ್ಯಾಸ ನಾದುದನ್ನು ಅದು ಗದಗಿನ ವೀರನಾರಾಯಣನ ಅಂಕಿತದಲ್ಲಿ ಇದ್ದುದರಿಂದ ಗದಗು ಭಾರತ ಆದುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.

ಕುಮಾರ ವಾಲ್ಮೀಕಿಗೆ ಕವಿರಾಜ ಹಂಸ ಎಂಬ ಬಿರುದು ಇದೆ.