ಸದಸ್ಯ:Mohammad zakariya zak/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಕ್ಸಾಂಡರ್:

ಅಲೆಕ್ಸಾಂಡರ್ ದಿ ಗ್ರೇಟ್(ಪ್ರ.ಶ.ಪೂ. 356-323.) ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜನಾದ ಇತ ಅರಿಸ್ಟಾಟಲ್ ಎಂಬ ತತ್ವಜ್ನ್ಯಾನಿಯ ಶಿಷ್ಯ.. ಈತ ಇತಿಹಾಸದ ಒಂದು ಬಹುದೋಡ್ಡ ಸಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು. ಇವನ ಸಾಮ್ರಾಜ್ಯ ಗ್ರೀಸಿನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು. ಪರ್ಷಿಯ ಸಾಮ್ರಾಜ್ಯವನ್ನು ಸೋಲಿಸಿ ಭಾರತದವರೆಗೂ ದಂಡೆತ್ತಿ ಬಂದ ಮಹಾನಾಯಕ.