ಸದಸ್ಯ:Melroy D'souza (Mellu)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮೆಲ್ ರೊಯ್ ಡಿಸೋಜ. ನಾನು ಹುಟ್ಟಿ ಬೆಳೆದಿದ್ದು ಹಾಗೂ ನೆಲೆಸಿರುವುದು ನನ್ನ ಊರಾದ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಎಂಬ ಸುಂದರ ಪರಿಸರದ ಊರಿನಲ್ಲಿ. ನಾನು ಪ್ರಾಥಮಿಕ ಶಿಕ್ಷಣವನ್ನು ಊರಿನ ಸಂತ ಪೆಟ್ರಿಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ನಂತರ ಎಂಟನೇ ತರಗತಿಯನ್ನು ವಾಮಂಜೂರಿನ ಸಂತ ರೇಮಂಡ್ಸರ ಹೈಸ್ಕೂಲಿನಲ್ಲಿ ಹಾಗೂ ಒಂಬತ್ತು, ಹತ್ತನೇ ತರಗತಿಯನ್ನು ಮೂಡಬಿದ್ರೆ ಸಮೀಪದ ಅಲಂಗಾರಿನ ಸಂತ ತೋಮಸರ ಹೈಸ್ಕೂಲಿನಲ್ಲಿ ಮುಗಿಸಿದೆನು. ಪಿಯು ಶಿಕ್ಷಣವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜುನಲ್ಲಿ ವ್ಯಾಸಂಗ ನಡೆಸುತ್ತಿದ್ದೇನೆ.