ಸದಸ್ಯ:Meghana. B. S/ನನ್ನ ಪ್ರಯೋಗಪುಟ
ಗೋಚರ
ಮೇಘನಾ ಬಿಎಫ್ | |
---|---|
ಜನನ | ಮೇಘನಾ ಬಿಎಸ್ 08/09/2000 ಬಾಗೇಪಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ |
ನನ್ನಪರಿಚಯ:'
ಇದು ನನ್ನ ಬಗ್ಗೆ ಚಿಕ್ಕ ಪರಿಚಯ.ನನ್ನ ಹೆಸರು ಮೇಘನ.ಬಿ.ಎಸ್. ನನ್ನ ತಂದೆಯ ಹೆಸರು ಬಿ. ಕೆ .ಸುಧಾಕರ್, ಅವರು ಜೋಳದ ವ್ಯಾಪಾರವನ್ನು ಮಾಡುತ್ತಾರೆ .ನನ್ನ ತಾಯಿಯವರ ಹೆಸರು ಬಿ.ಎಸ್ .ನಾಗಜ್ಯೋತಿ, ಅವರು ಗೃಹಿಣಿ. ನನಗೆ ಕಿರಿಯ ತಮ್ಮ ಇದ್ದಾನೆ. ಅವನ ಹೆಸರು ಬಿ.ಎಸ್. ಅಕ್ಷಯ್ ರಾಜ್, ಅವನು ಶಾಂತಿನಿಕೇತನ್ ಶಾಲೆಯಲ್ಲಿ ,ಹತ್ತನೇ ತರಗತಿಯನ್ನು ಓದುತಿದ್ದಾನೆ.
ವಿದ್ಯಾಭ್ಯಾಸ:
ನಾನು ನನ್ನ ಹತ್ತನೇ ತರಗತಿಯನ್ನು ಶಾಂತಿನಿಕೇತನ ಶಾಲೆಯಲ್ಲಿ ಓದಿದೆ, ಅಲ್ಲಿ ನನ್ನ ಸ್ನೇಹಿತರು :ರಮ್ಯಾ ರೆಡ್ಡಿ ,ಗೌತಮಿ, ಧರಣಿ ,ಪ್ರತಿಮಾ .ನಾನು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಸಂಗೀತ ,ಕ್ರೀಡೆಗಳು, ನೃತ್ಯ ಇತ್ಯಾದಿ .ನಾನು ಹತ್ತನೇ ತರಗತಿಯಲ್ಲಿದ್ದಾಗ ತ್ರೋಬಾಲ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ರಾಜ್ಯಮಟ್ಟ ದಲ್ಲಿ ಭಾಗವಹಿಸಿದ್ದೇನೆ. ನಾನು ಪ್ರತಿದಿನ ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದೆ ನಮ್ಮ ಮನೆಯಿಂದ ಶಾಲೆಗೆ ಒಂದು ಕಿಲೋಮೀಟರ್ ದೂರವಿತ್ತು. 10ನೇ ತರಗತಿಯಲ್ಲಿ ೯0 ಪರ್ಸೆಂಟ್ ಗಳಿಸಿದ್ದೇನೆ.ನಾನು ನನ್ನ ಪಿಯುಸಿ ಅನ್ನು ಬ್ಲೂಮ್ಸ್ ಪಿ .ಯು ಕಾಲೇಜಿನಲ್ಲಿ ಓದಿದೆ .ಕಾಲೇಜಿನಲ್ಲಿ ಆಗುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ .ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ . ಸಾಯಿ ಸಂಗೀತ, ಗೀತಾ, ಸಾಹಿತ್ಯ, ಸುಶ್ಮಿತಾ ನನ್ನ ಮಿತ್ರರಾಗಿದ್ದರು ,ಅವರು ನನ್ನನ್ನು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ಮಾಡುತ್ತಿದ್ದರು, ದುಃಖವನ್ನು ಪಡೆದಾಗ ಬೆಂಬಲವನ್ನು ನೀಡುತ್ತಿದ್ದರು. ಅವರು ನಂತೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಎಲ್ಲರೂ ಒಟ್ಟಿಗೆ ಖುಷಿಯಾಗಿದ್ದವು. ಸಿಂಧೂ ಮತ್ತು ಪ್ರಜ್ವಲ್ ಓದಿನಲ್ಲಿ ನನ್ನ ಸ್ಪರ್ಧೆ ಗಳಾಗಿದ್ದರು. ಶಿಕ್ಷಕರ ಜೊತೆ ಸ್ನೇಹಿತರಂತೆ ಇದ್ದೆವು, ಶಿಕ್ಷಕರು ನಮಗೆ ಎಲ್ಲಾ ಎಲ್ಲಾ ವಿಷಯಗಳನ್ನು ಅರ್ಥವಾಗುವಂತೆ ಮಾಡುತ್ತಿದ್ದರು ನಾವು ಬಹಳ ಚೆನ್ನಾಗಿ ಓದುತ್ತಿದ್ದೆವು.ಎಲ್ಲಾ ಶಿಕ್ಷಕರು ನಮ್ಮ ತರಗತಿಯನ್ನು ಮೆಚ್ಚಿಕೊಳ್ಳುತ್ತಿದ್ದರು. ಕಾಲೇಜಿನಲ್ಲಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದೆ ,ಆಸಕ್ತಿ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ನೋಡಿ ಮೆಚ್ಚುತ್ತಿದ್ದರು,ಅವರು ನನಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ನಾನು ತರಗತಿಯಲ್ಲಿ ಬಹಳ ಚೆನ್ನಾಗಿ ಓದುತ್ತಿದ್ದೇನೆ ,ಎಲ್ಲಾ ಶಿಕ್ಷಕರು ನನಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಬರಲು ಬಹಳ ಸಹಾಯವನ್ನು ಮಾಡುತ್ತಿದ್ದರು ,ಹಿಂದಿನ ವರ್ಷದ ಪ್ರಶ್ನೆ ಪತ್ರಗಳನ್ನು ನೀಡುತ್ತಿದ್ದರು ಪ್ರತಿಯೊಬ್ಬ ಶಿಕ್ಷಕರು ಅವರ ವಿಷಯದಲ್ಲಿ ನಾನು ಒಳ್ಳೆಯ ಅಂಕಗಳನ್ನು ಗಳಿಸಬೇಕೆಂದು ಬೇರೆ ಬೇರೆ ಜಿಲ್ಲೆಯ ಪ್ರಶ್ನೆ ಪತ್ರಿಕೆಗಳನ್ನು ನೀಡುತ್ತಿದ್ದರು .ನಮ್ಮ ಕಾಲೇಜಿನ ಡಿನ್ ನಾದ ಮಹೇಶ್ ಸರ್ ನನ್ನನ್ನು ಪ್ರತಿ ಸಂಜೆ ಕರೆದು ಇಂದಿನ ದಿನ ಯಾವ ವಿಷಯವನ್ನು ಅಭ್ಯಾಸ ಮಾಡಿದ್ದೇನೆ ಎಂದು ಕೇಳುತ್ತಿದ್ದರು .ಪ್ರತಿಯೊಂದು ವಿಷಯದಲ್ಲಿ ಬಹಳ ಸಹಾಯವನ್ನು ಮಾಡುತ್ತಿದ್ದರು.ನಮ್ಮ ಕಾಲೇಜಿನಲ್ಲಿ ನಡೆಯುವ ಬ್ಲೂ ಸ್ತರ್ ಎಂಬ ಕಾರ್ಯಕ್ರಮದಲ್ಲಿ, ನಾನು ಆಂಕರಿಂಗ್ ಅನ್ನು ಮಾಡಿದೆ ,ಅದನ್ನು ಹಲವಾರು ಜನ ಮೆಚ್ಚಿಕೊಂಡರು. ಆ ಕಾರ್ಯಕ್ರಮದಲ್ಲಿ ನಾನು ನೃತ್ಯವನ್ನು ಪ್ರದರ್ಶಿಸಿದೆ ಎಲ್ಲರೂ ಬಹಳ ಚೆನ್ನಾಗಿದೆ ಎಂದರು ನೃತ್ಯದಲ್ಲಿ ನಿನ್ನ ಭವಿಷ್ಯ ಮುಂದುವರಿಸಬಹುದು ಎಂದು ಸಹ ಪ್ರೋತ್ಸಾಹಿಸಿದರು .ನಾನು ಪ್ರತಿದಿನ 9 ಗಂಟೆಗೆ ಕಾಲೇಜಿಗೆ ಹೋಗುತ್ತಿದ್ದೇನೆ 4 ಗಂಟೆಗೆ ಮನೆಗೆ ಬರುತ್ತಿದ್ದೇನೆ 6 ಗಂಟೆಯವರೆಗೆ ಚಲನಚಿತ್ರವನ್ನು ನೋಡುತ್ತಿದ್ದೇನೆ ಆರೂವರೆಯಿಂದ 10 ಗಂಟೆವರೆಗೂ ಓದುತ್ತಿದ್ದೆ ಆ ದಿನದ ಪಾಠವನ್ನು ಅದೇ ದಿನ ಓದುತ್ತಿದ್ದೆ .ಬೆಳಗ್ಗೆ 6 ಗಂಟೆಗೆ ಕಷ್ಟವಾದ ವಿಷಯಗಳನ್ನು ಅಭ್ಯಾಸ ಮಾಡುತ್ತಿದ್ದೆ 8 ಗಂಟೆಗೆ ಟಿಫನ್ ಮಾಡಿ ೮:೪೫ಗೆ ಕಾಲೇಜಿಗೆ ಹೊರಡುತ್ತಿದ್ದೆ .ನಮಗೆ ಶಾಲೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.ಹಳೆಬೀಡು,ಉಡುಪಿ,ಹಂಪಿ,ತಿರುಪತಿ.
ಸಾಧನೆ: ದ್ವಿತೀಯ ಪಿಯುಸಿ ನಲ್ಲಿ ಶೇಕಡ 98 % ಗಳಿಸಿದ್ದೇನೆ ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಮತ್ತು ರಾಜ್ಯದಲ್ಲಿ 8 ನೇ ಸ್ಥಾನವನ್ನು ಪಡೆದಿದ್ದೇನೆ .ನನ್ನ ಅಂಕಗಳನ್ನು ನೋಡಿ ಎಲ್ಲರೂ ನನ್ನನ್ನು ಪ್ರಶಂಸಿಸಿದರು ಎಲ್ಲರೂ ಬಹಳ ಖುಷಿಪಟ್ಟರು ಅದನ್ನು ನೋಡಿ ನನಗೆ ಬಹಳ ಆನಂದವಾಯಿತು. ನಮ್ಮ ಅಕ್ಕ ಪಕ್ಕ ಮನೆಯವರೆಲ್ಲರಿಗೂ ಸಿಹಿ ಅಂಚಿದೆ. ನಮ್ಮ ಬಂಧು ಬಳಗ ಬಹಳ ಆನಂದಪಟ್ಟರು ,ನನಗೆ ಅಷ್ಟು ಅಂಕಗಳನು ಪಡೆದಿದ್ದರಿಂದ ಕಾಲೇಜಿನವರು ಪತ್ರಿಕೆಯಲ್ಲಿ ಪ್ರಕಟಿಸಿದ್ದರು .ನಮ್ಮ ಊರಿನ ಎಲ್ಲಾ ಜನರು ಅದನ್ನು ನೋಡಿ ನಮ್ಮ ತಂದೆಯವರಿಗೆ ತಿಳಿಸುತ್ತಿದ್ದಾರು ,ಆ ಸಂತೋಷವನ್ನು ಅಪ್ಪ ಮನೆಗೆ ಬಂದು ನಮ್ಮ ಜೊತೆ ಹಂಚಿ ಕೊಳ್ಳುತ್ತಿದ್ದರು, ಮನಸ್ಸಿಗೆ ಬಹಳ ಸಂತೋಷವಾಗುತ್ತಿತ್ತು . ನನಗೆ 98 ಶೇಕಡಾವಾರನ್ನು ಬಂದಿರುವುದು ತಿಳಿದ ನಮ್ಮ ಜಾತಿಯವರು ನನಗೆ ಗೌರವವನ್ನು ಮತ್ತು ಪುರಸ್ಕಾರ ವನ್ನು ನೀಡಿದರು, ನಮ್ಮ ಆರ್ಯವೈಶ್ಯ ಸಂಘದಿಂದ ನನೆಗೆ ಬಂಗಾರದ ಕಿವಿ ಓಲೆಯನ್ನು ನೀಡಿದರು ಮತ್ತು ಮಲ್ಲೇಶ್ವರಂ ಫಾರ್ಟಿ ಪ್ಲಸ್ ಎಂಬ ಸಂಘದಿಂದ ಎರಡು ಸಾವಿರ ರೂಪಾಯಿಗಳ ಬಹುಮಾನ ಮತ್ತು ಒಂದು ಪ್ರಮಾಣ ಪತ್ರವನ್ನು ನೀಡಿದರು, ರಾಯಚೂರಿನ ಆರ್ಯವೈಶ್ಯ ಮಹಾಸಭಾ ಎಂಬ ಕಾರ್ಯಕ್ರಮದಲ್ಲಿ ನನ್ನನ್ನು ಪುರಸ್ಕರಿಸಿದರು. ನಮ್ಮ ಬಂಧು-ಬಳಗ ಎಲ್ಲರೂ ನನಗೆ ಓದಿನಲ್ಲಿ ಆಸಕ್ತಿಯನ್ನು ಕಂಡು ಬಹಳ ಸಂತೋಷ ಪಟ್ಟರು .
ಸ್ನೇಹಿತರ ಪರಿಚಯ:
ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿ ಕಾಂ ತೆಗೆದುಕೊಳ್ಳಲು ನಮ್ಮ ಅಣ್ಣ ಅವರ ಸಹಾಯಮಾಡಿದರು . ಅವರ ಸಹಾಯದಿಂದ ಯುನಿವರ್ಸಿಟಿ ನಲ್ಲಿ ಓದುತ್ತಿದ್ದೇನೆ. ಅವರು ನನಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಅಪ್ಪ ಅಮ್ಮ ಅವರನ್ನು ಬಿಟ್ಟು ಮೊದಲ ಬಾರಿ ಓದುತ್ತಿದ್ದೇನೆ, ಮೊದಮೊದಲು ತುಂಬಾ ದುಃಖವಾಗುತ್ತಿದೆ .ಆದರೆ ಕಾಲೇಜಿನಲ್ಲಿ ಎಲ್ಲರೂ ಪರಿಚಯವಾದ ನಂತರ ಖುಷಿಯಾಯಿತು. ಮಲಾರಾಣಿ, ಚೈತ್ರ ,ಪುಷ್ಪ, ಸುಜಿತ, ವೆನ್ನೆಲ, ಹರ್ಷಿತ ,ಕೃಷಿಕರು ನನ್ನ ಗೆಳತಿಯರು. ಯಾವುದೇ ಒಂದು ವಿಷಯದಲ್ಲಿ ಏನಾದರೂ ಸಂದೇಹವಿದ್ದರೆ ಅವರು ಅದನ್ನು ತಿಳಿಸುತ್ತಾರೆ ಮತ್ತು ಅರ್ಥ ಮಾಡಿಸುತ್ತಾರೆ .ನಾನು ಹಳ್ಳಿಯ ದರಿಂದ ಬಂದಿರುವುದರಿಂದ ತುಂಬಾ ಭಯವಾಗುತ್ತಿತ್ತು .ಇಂಗ್ಲೀಷ್ ನಲ್ಲಿ ಮಾತನಾಡಲು ಸ್ವಲ್ಪ ಕಷ್ಟವಾಗುತ್ತಿತ್ತು, ಎಲ್ಲರ ಜೊತೆ ಸೇರಲು ಸ್ವಲ್ಪ ಹಿಂದೆ ಹೋಗುತ್ತಿದ್ದೆ, ಮೊದಲನೆಯ ಸೆಮಿಸ್ಟರ್ ನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ . ದ್ವಿತೀಯ ಸೆಮಿಸ್ಟರ್ ನಲ್ಲಿ ನನಗೆ ಬರುವ ಎಲ್ಲಾ ಕಲೆಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇನೆ ಮತ್ತು ಶಿಕ್ಷಕರ ಜೊತೆ ನನಗೆ ಸಂದೇಹ ವಿರುವ ವಿಚಾರಗಳನ್ನು ಕೇಳುತ್ತಿದ್ದೇನೆ. ಕಾಲೇಜಿಗೆ ಬರುವ ಮುನ್ನ ಮತ್ತು ಕಾಲೇಜ್ ಬಳಿ ತಂದೆ-ತಾಯಿಯರಿಗೆ ಕರೆ ಮಾಡುತ್ತೇನೆ, ದಿನದಲ್ಲಿ ಆಗಿರುವ ಎಲ್ಲಾ ವಿಚಾರಗಳನ್ನು ಅವರ ಜೊತೆ ಹಂಚಿಕೊಳ್ಳುತ್ತೇನೆ. ಅವರಿಗೆ ರಾತ್ರಿ ಮಲಗುವ ಮುನ್ನ ಕರೆ ಮಾಡುತ್ತೇನೆ.ನಾನು ನನ್ನ ಕಿರಿಯ ತಮ್ಮನಿಗೆ ಆದರ್ಶವಾಗಿರಬೇಕು ಎಂದು ಯಾವಾಗಲೂ ಪ್ರಯತ್ನಿಸುತ್ತೇನೆ ನನ್ನ ಎಂಟನೇ ತರಗತಿಯಲ್ಲಿ ನಾನು 1 ಗುಂಪಿನ ವಿದ್ಯಾರ್ಥಿಗಳಿಗೆ ಕ್ಯಾಪ್ಟನ್ ಆಗಿ ಅವರನ್ನು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡುತ್ತಿದೆ ನಾನು ಬಹಳ ರಂಗೋಲಿ ಕ್ರೀಡೆಗಳು ನೃತ್ಯ ಚಿತ್ರ ಲೇಖನ ಸ್ಪರ್ಧೆಗಳಲಿ ಭಾಗವಹಿಸುತ್ತೇನೆ ಹಲವಾರು ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದ್ದೇನೆ.