ವಿಷಯಕ್ಕೆ ಹೋಗು

ಸದಸ್ಯ:Meghana.L/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರೆಡರಿಕ್ ಡೌಗ್ಲಾಸ್

ಫ್ರೆಡರಿಕ್ ಡೌಗ್ಲಾಸ್ ಅಮೆರಿಕದ ಒಬ್ಬ ಬರಹಗಾರರು, ವಾಗ್ಮಿ, ಸಂಪಾದಕರು, ಸಮಾಜ ಸುಧಾರಕರು, ನಿರ್ಮೂಲನಾವಾದಿಗಳು. ಡೌಗ್ಲಾಸ್ ಮೇರಿಲ್ಯಾಂಡ್ನ ಟಕಾಹೊ ಎಂಬ ಸ್ಥಳದಲ್ಲಿ ಜನಿಸಿದರು. ಹುಟ್ಟಿದ ದಿನಾಂಕದ ಸರಿಯಾದ ಮಾಹಿತಿ ಇಲ್ಲ. ತಾಯಿ ಹ್ಯಾರಿಯಟ್ ಬೇಯಲಿ. ಅವರ ತಂದೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವರ ತಾಯಿ ಕೆಲಸ ಮಾಡುತ್ತಿದ್ದ ತೋಟದ ಯಜಮಾನನೇ ಅವರ ತಂದೆ ಎಂಬ ಒಂದು ಮಾತು ಕೇಳಿ ಪಟ್ಟಿತು. ಸಣ್ಣ ವಯಸ್ಸಿನಲ್ಲೇ, ತಾಯಿಯಿಂದ ಭೇರ್ಪಟ್ಟರು. ಇವರೊಬ್ಬರೆ ಅಲ್ಲದೆ ಅಲ್ಲಿ ಗುಲಾಮರಾಗಿ ದುಡಿಯುತ್ತಿದ್ದ ಎಲ್ಲರ ಮಕ್ಕಳನ್ನು ಅವರ ತಾಯಿಯರಿಂದ ದೂರ ಮಾಡಿ ಬೇರೆ ಕಡೆಗೆ ಸಾಗಿಸಿ ಅಲ್ಲಿ ಅವರಿಂದ ಕೆಲಸ ಮಾಡಿಸುತ್ತಿದ್ದರು. ಫ್ರೆಡರಿಕ್ ಅವರಿಗೆ ತಮ್ಮ ತಾಯಿಯ ಮುಖ ಸಹ ಗೊತ್ತಿರಲಿಲ್ಲ. ಅವರು ಏಳು ವರ್ಷದ ಹುಡುಗನಾಗಿದ್ದಾಗ ತಾಯಿ ತೀರಿಕೊಂಡರು.

ಬಾಲ್ಯ

ಸಣ್ಣ ವಯಸ್ಸಿನಲ್ಲಿಯೇ ಬಾಲ್ಟಿಮೋರ್ ಎಂಬ ಸ್ಥಳಕ್ಕೆ ಮನೆಯ ಕೆಲಸದ ಆಳಗಿ ಕಳುಹಿಸಲ್ಪಟ್ಟರು. ಅಲ್ಲಿಯೇ ಅವರು ಯಾಜಮಾನನ ಪತ್ನಿಯಿಂದ ಓದು ಬರಹ ಕಲಿತರು. 1838 ರಲ್ಲಿ ಗುಲಾಮಗಿರಿಯಿಂದ ತಪ್ಪಿಸಿಕೊಂಡು ನ್ಯೂಯಾರ್ಕ್ ಪಟ್ಟಣ ಸೇರಿದರು. ಅಲ್ಲಿ ಅನ್ನ ಮುರ್ರೆ ಅವರನ್ನು  ಮದುವೆಯಾದರು. ಫ್ರೆಡರಿಕ್ ಅಗಸ್ಟಸ್ ವಾಷಿಂಗ್ಟನ್ ಬೆಯಲಿ ಎಂದು ಇದ್ದ ಹೆಸರನ್ನು ಫ್ರೆಡರಿಕ್ ಡೌಗ್ಲಾಸ್ ಎಂದು ಬದಲಿಸಿಕೊಂಡರು.ಅನ್ನ ಮುರ್ರೆಯಿಂದ ಐದು ಜನ ಮಕ್ಕಳನ್ನು ಪಡೆದರು. ಮುರ್ರೆ ತನ್ನ ಗಂಡನಿಗೆ ಎಲ್ಲ ಕಾರ್ಯಗಳಲ್ಲಿಯಾ ಸಹಾಯಕಳಾಗಿದ್ದಳು. 1882 ರಲ್ಲಿ ಅನ್ನ ತೀರಿಕೊಂಡರು. 1884 ರಲ್ಲಿ ಫ್ರೆಡರಿಕ್ ಹೆಲೆನ್ ಪಿಟ್ಸ್, ತನಗಿಂತ ಇಪ್ಪತ್ತು ವರ್ಷ ಚಿಕ್ಕವಳನ್ನು ಮದುವೆಯಾದರು. ಅವಳು ನಿರ್ಮೂಲನವಾದಿ ಗಿಡೆನ್ ಪಿಟ್ಸ್ ಜೂ. ಮಗಳು ಹಾಗೂ ಗುಲಾಮಗಿರಿಯ ನಿರ್ಮೂಲನೆಗಾಗಿ ಶ್ರಮಿಸಿದರು.

ವೃತ್ತಿ ಜೀವನ 1838 ರಲ್ಲಿ ನ್ಯೂ ಬೆಡ್ ಪೋರ್ಡ್, ಮೆಸ್ಸಾಚೂಸೆಟ್ಸ್ ನಲ್ಲಿ ಸ್ಥಿರಗೊಂಡರು. 1841ರಲ್ಲಿ ಡೌಗ್ಲಾಸ್ ಬಿಳಿಯರ ಮೆಥೊಡಿಸ್ಟ್ ಚರ್ಚ್ ನಲ್ಲಿ ಸೇರಿದರು. ಆದರೆ ಬಿಳಿಯರು ಸೇರಿಸಲಿಲ್ಲ. ಹಾಗಾಗಿ ನಂತರ ಆಫ್ರಿಕನ್ ಮೆಥೊಡಿಸ್ಟ್ ಎಪಿಸ್ ಕೋಪಲ್ ಜಿಯನ್ ಚರ್ಚಿನಲ್ಲಿ ಸೇರಿದರು. ನಂತರ ಅವರು ಒಳ್ಳೆಯ ಪ್ರಚಾರಕರಾಗಿ, ವಾಗ್ಮಿಳಾಗಿ ಪರಿಚಿತರಾದರು.ನ್ಯೂಯಾರ್ಕ್ ನಗರದಲ್ಲಿ ಮೊದಲ ಭಾಷಣವನ್ನು ಮಾಡಿದರು. ಡೌಗ್ಲಾಸ್ ಅನೇಕ ಸಂಸ್ಥೆಗಳಲ್ಲಿ ಪರಿಚಿತರಾದರು. ಕ್ರಮವಾಗಿ ನಿರ್ಮೂಲನವಾದಿಗಳಾದರು ಹಾಗೂ ಅನೇಕ ಕಾರ್ಯಕ್ರಮಗಳಿಗೆ ಹಾಜರಾದರು. ವಿಲಿಯಮ್ ಲಾಯಡ್ ಗ್ಯಾರಿಸನ್ ಅವರ ವಾರ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಗ್ಯಾರಿಸನ್ ಅವರು ಡೌಗ್ಲಾಸ್ ಮೇಲೆ ತುಂಬಾ ಪ್ರಭಾವ ಬೀರಿದರು. ಅವರ ಕೊನೆಯ ಆತ್ಮಕಥನದಲ್ಲಿ ಅವರು ಗ್ಯಾರಿಸನ್ ಪತ್ರಿಕೆ ಬೈಬಲ್ ನಂತರ ತನ್ನ ಹೃದಯಲ್ಲಿ ಎರಡನೆಯ ಸ್ಥಾನದಲ್ಲಿ ನಿಂತಿದೆ ಎಂದು ಹೇಳಿದ್ದಾರೆ. ಗ್ಯಾರಿಸನ್ ಸಹ ತಮ್ಮ ಪತ್ರಿಕೆಯಲ್ಲಿ ಗುಲಾಮಗಿರಿಯ ನಿರ್ಮೂಲನೆಗಾಗಿ ಸಂಚಿಕೆಗಳನ್ನು ಹಾಗೂ ಪ್ರಬಂಧಗಳನ್ನು ಬರೆಯುತ್ತಿದ್ದರು. ಆಕಸ್ಮಿಕವಾಗಿ ಡೌಗ್ಲಾಸ್ ಅವರಿಗೆ ಒಂದು ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಆಮಂತ್ರಣ ಬಂದಿತು. ಅಲ್ಲಿ ಅವರು ತಮ್ಮ ಗುಲಾಮಗಿರಿಯ ಜೀವನಗಾಥೆಯನ್ನು ಜನರಿಗೆ ತಿಳಿಸಿದರು. ಅಲ್ಲಿಂದ ಜನರು ಅವರನ್ನು ಒಬ್ಬ ನಿರ್ಮೂಲನವಾದಿ ಎಂದು ಗುರುತಿಸಿದರು.  

ಪ್ರವಾಸ

ಲಿನ್ ನಲ್ಲಿ ವಾಸಿಸುತ್ತಾ ಅನೇಕ ಧರಣಿಗಳನ್ನು ಕೈಗೊಂಡರು. 1841ರಲ್ಲಿ ಲಿನ್ ಸೆಂಟ್ರಲ್ ಸ್ಕ್ವೆರ್ ಸ್ಟೇಷನ್ ನಲ್ಲಿ ಅವರನ್ನು ಮತ್ತು ಸ್ನೇಹಿತ ಜೇಮ್ಸ್ ಬಪೂಮ್ ಹೊರ ತಳ್ಳಿದರು. 1843ರಲ್ಲಿ ಬೇರೆ ಮುಖಂಡರ ಜೊತೆಗೂಡಿ ಆರು ತಿಂಗಳ ಕಾಲ ಪೂರ್ವ, ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ಸುತ್ತಿದರು. ಆಗ ಪೆಂಡಲೆಟನ್, ಇಂಡಿಯನ್ ಎಂಬಲ್ಲಿ ಒಂದು ಕುವೆತ್ ಗುಂಪು ಇವರ ಮೇಲೆ ಆಕ್ರಮಣ ಮಾಡಿದರು. ಆ ಘಟನೆಯಲಿ ಅವರ ಕೈ ಮುರಿಯಿತು.

ಬರವಣಿಗೆ

ಅವರ ಮೊದಲ ಆತ್ಮಕಥೆ  “Narrative of the Life of Frederick Douglass, an American Slave “, 1845ರಲ್ಲಿ ಮುದ್ರಿಸಲಾಯಿತು. ಪುಸ್ತಕಕ್ಕೆ ಒಳ್ಳೆಯ ಬೇಡಿಕೆ ಇತ್ತು. ಮೂರು ವರ್ಷದಲ್ಲಿ ಒಂಬತ್ತು ಸಲ ಮುದ್ರಿಸಲ್ಪಟ್ಟಿತ್ತು. ಆಮೇರಿಕದಲ್ಲಿ 11000 ಪ್ರತಿಗಳು ಮಾರಾಟಗೊಂಡವು. ಯುರೋಪ್ ನಲ್ಲಿ ಫ್ರೆಂಚ್ ಮತ್ತು ಡಚ್ ಭಾಷೆಗಳಿಗೆ ಅನುವಾದ ಮಾಡಲಾಯಿತು. 1855ರಲ್ಲಿ “My Bondage and My Freedom" ಎಂಬ ಪುಸ್ತಕ ಬರೆದರು. 1881ರಲ್ಲಿ “Life and Times of Frederick Douglass” ಬರೆದರು.

ಕೊನೆಯ ದಿನಗಳು

ಡೌಗ್ಲಾಸ್ ಸ್ನೇಹಿತರ ಸಲಹೆಯ ಮೇರೆಗೆ ಐರ್ಲ್ಯಾಂಡ್ ಹೋದರು. ಐರ್ಲ್ಯಾಂಡ್ ಮತ್ತು ಬ್ರಿಟನ್ ನಲ್ಲಿ ಎರಡು ವರ್ಷ ಕಳೆದರು. ಅಲ್ಲಿ ಅವರು ಅನೇಕ ಚರ್ಚೆಗಳಲ್ಲಿ  ಉಪನ್ಯಾಸ ಕೊಟ್ಟರು. ಉಪನ್ಯಾಸದಿಂದ ಜನ ತುಂಬಾ ಪ್ರಭಾವಿತಗೊಂಡರು. ಅನೇಕ ಅನುಚರರು ಅವರನ್ನು ಅಲ್ಲೇ ಉಳಿಯುವಂತೆ ಒತ್ತಾಯಪಡಿಸಿದರು, ಆದರೆ ಅವರು ಸ್ನೇಹಿತ ಡ್ಯಾನಿಯಲ್ ಓ ಕೊನ್ನೆಲ್ ಸತ್ತ ನಂತರ ಅಮೇರಿಕಕ್ಕೆ ಹಿಂದಿರುಗಿದರು. 1847ರಲ್ಲಿ ಅಮೇರಿಕಾಗೆ ಬಂದು ನಿರ್ಮೂಲನವಾದಿ ಪತ್ರಿಕೆ ‘North star' ಪ್ರಾರಂಭಿಸಿದರು. ಈಗೆ ಹಂತ ಹಂತವಾಗಿ ಅವರು ಪ್ರಸಿದ್ದಿಗೊಂಡರು. ಫೆಬ್ರುವರಿ 20, 1895ರಲ್ಲಿ ವಾಷಿಂಗಟನ್ ಡಿ. ಸಿ ಯಲ್ಲಿ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದರು. ಮನೆಗೆ ಬಂದ ಮೇಲೆ ಹೃಧಾಯಘಾತಕ್ಕೀಡಾದರು. ಅವರ ಅಂತ್ಯಕ್ರಿಯೆ ಮೆಟ್ರೊಪಾಲಿಟನ್ ಆಪ್ರಿಕನ್ ವಿಲಥೊಡಿಸ್ಟ ಎಪಿಸ್ ಕೊಪಲ್ ಚರ್ಚ್ ನಲ್ಲಿ ನೆರವೇರಿತು. ಅವರ ಮೃತದೇಹವನ್ನು 25 ವರ್ಷ ಬಾಳಿ ಬದುಕಿದ ಸ್ಥಳ ನ್ಯೂಯಾರ್ಕ್ ಸಾಗಿಸಿದರು. ಅನ್ನ ಮುರ್ರೆ ಸಮಾಧಿಯ ಪಕ್ಕದಲ್ಲಿಯೇ ಡೌಗ್ಲಾಸ್ ಅವರನ್ನು ಸಮಾಧಿ ಮಾಡಲಾಯಿತು.