ವಿಷಯಕ್ಕೆ ಹೋಗು

ಸದಸ್ಯ:Manojv3351/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, ೧೯೬೧ರಲ್ಲಿ ಜಯಗಳಿಸಿದರು.

ನೆಲ್ಸನ್ ಮ೦ಡೆಲಾ

ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದ

ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ವೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ. ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ವೊದಲ ಹೆಂಡತಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯವರು. ಇವಳು ವೊಟ್ಟ ವೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ ಸುಮಾರು ೧೩ ವರ್ಷಗಳ ದಾಂಪತ್ಯದ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದು ಕೊಳ್ಳಲಿಲ್ಲ. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರೇ ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ವೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ. ಕಪ್ಪು ವರ್ಣೀಯ ಸಾಮಾಜಿಕ ಕಾರ್ಯಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ವೊದಲು ಜೋಹಾನ್ಸ್‌ಬರ್ಗ್ ನಗರದ ವೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದರಿಂದ ಈ ವೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಅಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾರ ಮಧ್ಯೆ ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದೆ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯ ಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು , ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆಂನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದವಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವಳನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ.

ಮಂಡೇಲಾರ ಬಗ್ಗೆ ಮಾಹಿತಿ

[ಬದಲಾಯಿಸಿ]
   ದಕ್ಷಿಣ ಆಫ್ರಿಕಾದ ಸ್ಥಳೀಯ ಕರಿಯರ ಕೋಸ್ಸಾ ಭಾಷೆಯಲ್ಲಿ ಮಂಡೇಲಾ ಹೆಸರು ರೋಲಿಹ್ ಲಾಹ್ಲಾ ಎಂದು. ರೋಲಿಹ್ ಲಾಹ್ಲಾ ಎಂದರೆ ಕಷ್ಟಗಳನ್ನು ಕೆದಕುವವ ಎಂದರ್ಥ.
   ೧೯೫೭ರಲ್ಲಿ ವೈದ್ಯಕೀಯ ಸಮಾಜ ಸೇವಕಿಯಾಗಿದ್ದ ೨೦ ಹರೆಯದ ಕಪ್ಪು ಸುಂದರಿ ವಿನ್ನಿ ನೋಮ್ ಜಾಮೊ ಮಡಿಕಿಜೆಲಾ ಅವರನ್ನು ಮಂಡೇಲಾ ವರಿಸಿದರು. ಆಗ ವಿನ್ನಿ ತಂದೆ, ನೆನಪಿಡು ಮಗಳೇ, ನೀನು ಮದುವೆಯಾಗುತ್ತಿರುವುದು ವ್ಯಕ್ತಿಯನ್ನಲ್ಲ, ಹೋರಾಟವನ್ನು, ಎಂದಿದ್ದರು.
   ಮಂಡೇಲಾ ಅವರು ಬಹುವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ರಾಬ್ಬೆನ್ ನಡುಗಡ್ಡೆ ಜೈಲಿಗೆ ಜನ ಅಭಿಮಾನದಿಂದ ಮಂಡೇಲಾ ವಿಶ್ವವಿದ್ಯಾನಿಲಯ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಯುವ ಕೈದಿಗಳು ವ್ಯಾಸಂಗ ಮುಂದುವರಿಸಿ ಪದವಿ ಪಡೆಯುವಂತೆ ಮಂಡೇಲಾ ಉತ್ತೇಜಿಸುತ್ತಿದ್ದರಂತೆ. ಅವರಿಗೆ ಸ್ವತಃ ಮಾಸ್ತರಾಗಿ ಪಾಠ ಮಾಡುತ್ತಿದ್ದರಂತೆ.
   ೧೯೮೦ರ ಮಾರ್ಚ್‌ನಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ಮಂಡೇಲಾರ ಬಿಡುಗಡೆ ಕುರಿತು ಅಭಿಪ್ರಾಯ ಸಂಗ್ರಹಿಸಿದಾಗ ಶೇ.58ರಷ್ಟು ಬಿಳಿಯರು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.

ಉಲ್ಲೆಖಗಳು

[ಬದಲಾಯಿಸಿ]

https://kn.wikipedia.org/s/1mp

https://commons.wikimedia.org/wiki/File:Nelson_Mandela-2008_%28edit%29.jpg