ಸದಸ್ಯ:Manoj1997/ನನ್ನ ಪ್ರಯೋಗಪುಟ
ಮೈಟೋಕಾಂಡ್ರಿಯನ್
[ಬದಲಾಯಿಸಿ]ಸೆಲ್ ಬೈಯಲಾಜಿಯಲ್ಲಿ (ಜೀವಕೋಶಗಳ ಜೀವವಿಜ್ಞಾನ ಶಾಸ್ತ್ರ) ಮೈಟಕಾಂಡ್ರಿಯನ್ (ಬಹುವಚನ: ಮೈಟ್ರೊಕಾಂಡ್ರಿಯ )- ತಂತುಮಯ ಸಂಯೋಜಕ ಅಂಗಾಂಶಗಳ ಮೆಂಬರೇನ್‌ಗಳಿಂದ ಮುಚ್ಚಲ್ಪಟ್ಟಿರುವ ಒಂದು ಅಂಗಕ(ಆರ್ಗನೆಲ್) ಆಗಿದ್ದು, ಇದು ಬಹಳಷ್ಟು ಯೂಕರಿಯಾಟಿಕ್ ಜೀವಕೋಶಗಳಲ್ಲಿ ಸಿಗುತ್ತದೆ. ಈ ಅಂಗಕಗಳ ವ್ಯಾಸ 0.5 ರಿಂದ 10 ಮೈಕ್ರೊಮಿಟರ್ (μm) ಗಳಷ್ಟಿರುತ್ತದೆ. ಮೈಟಕಾಂಡ್ರಿಯಗಳನ್ನು ಕೆಲವೊಮ್ಮೆ "ಸೆಲುಲಾರ್ ಪವರ್ ಪ್ಲಾಂಟ್ಸ್" (ಜೀವಕೋಶದ ಶಕ್ತಿಯ ಮೂಲ) ಎಂದು ಕೆರೆಯಲಾಗುತ್ತದೆ, ಏಕೆಂದರೆ ಇದು ಜೀವಕೋಶಗಳು ಪೂರೈಸುವ ಕೆಮಿಕಲ್ ಎನರ್ಜಿಯ (ರಸಾಯನಿಕ ಶಕ್ತಿ) ಮೂಲವಾದ ಅಡಿನೊಸೀನ್ ಟ್ರೈಫಾಸ್ಫೇಟ್ (ATP), ಅನ್ನು ಉತ್ಪಾದಿಸುತ್ತದೆ.ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು(ಸೆಲುಲಾರ್ ಎನರ್ಜಿಯನ್ನು) ಪೂರೈಸುವುದರ ಜೊತೆಯಲ್ಲಿ ಮೈಟೊಕಾಂಡ್ರಿಯಾ ಇತರ ವಿವಿಧ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದೆ, ಅವು: ಸಿಗ್ನಲಿಂಗ್, ಸೆಲುಲಾರ್ ಡಿಫರೆನ್ಷಿಯೇಷನ್ (ಜೀವಕೋಶಗಳ ಭೇದಕರಣ), ಸೆಲ್ ಡೆತ್ (ಜೀವಕೋಶಗಳ ಮರಣ), ಇದಲ್ಲದೆ ಮೈಟೊಕಾಂಡ್ರಿಯ ಸೆಲ್ ಸೈಕಲ್(ಜೀವಕೋಶದ ಜೀವನಚಕ್ರ) ಮತ್ತು ಸೆಲ್ ಗ್ರೋತ್(ಜೀವಕೋಶದ ಬೆಳವಣಿಗೆ) ಅನ್ನು ಕೂಡ ನಿಯಂತ್ರಿಸುತ್ತದೆ.
ಮೈಟೊಕಾಂಡ್ರಿಯದ ಹಲವಾರು ವಿಶಿಷ್ಟ ಗುಣವಿಶೇಷಗಳು ಇದನ್ನು ಅನನ್ಯವಾಗಿಸುತ್ತದೆ. ಒಂದು ಜೀವಕೋಶದಲ್ಲಿ ಮೈಟೊಕಾಂಡ್ರಿಯದ ಸಂಖ್ಯೆಯು ಜೀವಿ ಮತ್ತು ಟಿಸ್ಯೂ (ಅಂಗಾಂಶ) ವಿಧದ ಮೇಲೆ ಅವಲಂಬಿತವಾಗಿರುತ್ತದೆ. ಆನೇಕ ಜೀವಕೋಶಗಳಲ್ಲಿ ಕೇವಲ ಒಂದು ಮೈಟೊಕಾಂಡ್ರಿಯವಿರಬಹುದು, ಹಾಗೆಯೆ ಮತ್ತೆ ಇನ್ನು ಕೆಲವು ಜೀವಕೋಶಗಳಲ್ಲಿ ಹಲವಾರು ಸಾವಿರ ಮೈಟೊಕಾಂಡ್ರಿಯಗಳಿರಬಹುದು. ಈ ಅಂಗಕವು(ಆರ್ಗೆನಲ್), ಅನೇಕ ವೈಶಿಷ್ಟ್ಯಪೂರ್ಣ ಕ್ರಿಯೆಗಳನ್ನು ನಿರ್ವಹಿಸುವ ಸಲುವಾಗಿ ವಿವಿಧ ಅಂಕಣಗಳಿಂದ (ಕಂಪಾರ್ಟ್‌ಮೆಂಟ್) ಕೂಡಿದ ರಚನೆಯಾಗಿರುತ್ತದೆ. ಈ ಅಂಕಣಗಳು (ಕಂಪಾರ್ಟ್‌ಮೆಂಟ್) ಅಥವಾ ಭಾಗಗಳೆಂದರೆ: ಹೊರ ಮೆಂಬರೇನ್(ಔಟರ್ ಮೆಂಬರೇನ್), ಇಂಟರ್‌ಮೆಂಬರೇನ್ ಸ್ಪೇಸ್ (ಮೇಂಬರೇನ್‌ಗಳ ನಡುವಿನ ಪ್ರದೇಶ), ಒಳ ಮೆಂಬರೇನ್ (ಇನ್ನರ್ ಮೆಂಬರೇನ್) ಹಾಗು ಕ್ರಿಸ್ಟೆ ಮತ್ತು ಮಾಟ್ರಿಕ್ಸ್. (ಮೆಂಬರೇನ್: ಪೊರೆ/ಪರೆ, ತಂತುಮಯ ಸಂಯೋಜಕ ಅಂಗಾಂಶ). ಮೈಟೊಕಾಂಡ್ರಿಯದ ಪ್ರೋಟೀನ್‌ಗಳು ಟಿಸ್ಯೂ ಮತ್ತು ಪ್ರಭೇದಕ್ಕೆ ತಕ್ಕ ಹಾಗೆ ವ್ಯತ್ಯಾಸವಾಗುತ್ತವೆ. ಮನುಷ್ಯರ ಕಾರ್ಡಿಯಾಕ್ ಮೈಟೊಕಾಂಡ್ರಿಯದಲ್ಲಿ (ಹೃದಯದ ಮೈಟೊಕಾಂಡ್ರಿಯ) 615 ವಿವಿಧ ಬಗೆಯ ಪ್ರೋಟೀನ್‌ಗಳನ್ನು ಗುರುತಿಸಲಾಗಿದೆ; ಅದಾಗ್ಯೂ, ಮ್ಯುಅರೈನ್‌ಗಳಲ್ಲಿ(ಇಲಿಗಳು), ಭಿನ್ನ ಜೀನ್‌ಗಳಿಂದ (ಜೀನ್: ವಂಶವಾಹಿ) ಎನ್‌ಕೋಡ್ ಮಾಡಲ್ಪಟಂತಹ 940 ಪ್ರೋಟೀನ್‌ಗಳಿವೆ, ಎಂದು ಅಧ್ಯಯನಗಳು ತಿಳಿಸಿದೆ. ಮೈಟ್ರೊಕಾಂಡ್ರಿಯದ ಪ್ರೋಟಿಒಮ್ ಸಮರ್ಥವಾಗಿ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಲಾಗಿದೆ. ಜೀವಕೋಶದ DNA ಯ ಬಹುಭಾಗವು ಸೆಲ್ ನ್ಯೂಕ್ಲಿಯಸ್‌ನಲ್ಲಿದೆ ಎಂದು ಹೇಳಲಾಗುತ್ತದೆ, ಅದರೂ ಮೈಟೊಕಾಂಡ್ರಿಯ ತನ್ನದೆ ಅದ ಸ್ವತಂತ್ರವಾದ ಜೀನೊಮ್ ಹೊಂದಿದೆ. ಇಷ್ಟಲ್ಲದೆ, ಇದರ DNAಯು ಬ್ಯಾಕ್ಟೀರೀಯದ ಜೀನೊಮ್‌ನೊಂದಿಗೆ ಸಾಮ್ಯತೆಯಿದೆ.