ಸದಸ್ಯ:Manjunath Fakeerappa Uppar/ಆರ್. ಇಂದಿರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್. ಇಂದಿರಾ
ಜನನರಾಮರಾವ್ ಇಂದಿರಾ
22 April 1952
ಅಧ್ಯಯನ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ

ರಾಮರಾವ್ ಇಂದಿರಾ (ಜನನ ೨೨ ಏಪ್ರಿಲ್ ೧೯೫೨ ಮೈಸೂರು, ಕರ್ನಾಟಕ ) ಅವರು ಮೈಸೂರಿನಲ್ಲಿ ವಾಸಿಸುವ ಭಾರತೀಯ ಸಮಾಜಶಾಸ್ತ್ರಜ್ಞೆಯಾಗಿದ್ದಾರೆ. ೪೨ ವರ್ಷಗಳ ಕಾಲದ ವಿಶ್ವವಿದ್ಯಾನಿಲಯ ವೃತ್ತಿಜೀವನದಲ್ಲಿ, ಇವರು ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. [೧]

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಇಂದಿರಾ ಅವರು ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿಯೇ ಪಡೆದರು. ಇವರು ೧೯೭೨ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ೨೦೧೪ ರಲ್ಲಿ ತಾವು ನಿವೃತ್ತಿಯಾಗುವವರೆಗೂ ವಿಭಾಗದಲ್ಲಿ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿದ್ದರು. ಇವರು ತಮ್ಮ ಜನ-ಕೇಂದ್ರಿತ ಸಂಶೋಧನಾ ಯೋಜನೆಗಳ ಮೂಲಕ ವಿಭಾಗದಲ್ಲಿ ಸಂಶೋಧನಾ ಸಂಸ್ಕೃತಿಯನ್ನು ನಿರ್ಮಿಸಿದರು. ಸಾಮಾಜಿಕ ಪ್ರಸ್ತುತತೆಯ ವಿಷಯಗಳ ಕುರಿತು ಅಧ್ಯಯನಗಳನ್ನು ಕೈಗೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. ಅರಣ್ಯ ನಿರ್ವಹಣೆ, ಬಾಲಕಿಯರ ಶಿಕ್ಷಣ, ಸ್ಥಳೀಯ ಸ್ವ-ಆಡಳಿತದ ಸಂಸ್ಥೆಗಳಲ್ಲಿ ಮಹಿಳೆಯರ ಸಾಮರ್ಥ್ಯಗಳನ್ನು ನಿರ್ಮಿಸುವಲ್ಲಿ ಲಿಂಗ ಸಮಸ್ಯೆಗಳ ಕುರಿತಾದ ಕೆಲಸಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ವಿಷಯಗಳ ಕುರಿತು ಬರೆಯುತ್ತಿರುವ ಅಂಕಣಕಾರರು ಕೂಡಾ ಆಗಿದ್ದಾರೆ. ಇವರ ಪ್ರಮುಖ ಕೃತಿಗಳು ಶಿಕ್ಷಣ ಸಮಾಜಶಾಸ್ತ್ರದ ವಿಷಯಗಳು (ಭಾರತೀಯ ಸಮಾಜಶಾಸ್ತ್ರದ ಅಧ್ಯಯನಗಳು) ಮತ್ತು ಭಾರತದಲ್ಲಿ ಲಿಂಗ ಮತ್ತು ಸಮಾಜ (ಎರಡು ಸಂಪುಟಗಳು) ಸಂಪಾದಕರಾಗಿ, ಮತ್ತು ಸ್ತ್ರೀವಾದ, ಮಹಿಳೆಯರು ಮತ್ತು ಸಂಸ್ಕೃತಿ, ಸಂಶೋಧನಾ ವಿಧಾನಗಳು.ಇಂತಹ ವಿಷಯಗಳ ಕುರಿತು ಅನೇಕ ಕನ್ನಡ ಪುಸ್ತಕಗಳನ್ನು, [೨] 'ಸಮಾಜಶಾಸ್ತ್ರ' - ಇಂಗ್ಲೀಷ್ -ಕನ್ನಡ ಅನುವಾದದ ಕನ್ಸಲ್ಟಿಂಗ್ ಎಡಿಟರ್ ಆಗಿ. 'ಲಿಂಗ ಮತ್ತು ಮಹಿಳಾ ಅಧ್ಯಯನಗಳು'- ಇಂಗ್ಲೀಷ್ - ಕನ್ನಡ ಅನುವಾದದ ಮುಖ್ಯ ಸಂಪಾದಕರಾಗಿದ್ದರು..ಇವರು ಎನ್ಸೈಕ್ಲೋಪೀಡಿಯಾಗಳು, ನಿಘಂಟುಗಳು, ನಿಯತಕಾಲಿಕಗಳು, ವಿಷಯಾಧಾರಿತ ಪುಸ್ತಕಗಳು ಮತ್ತು ಅನುವಾದ ಯೋಜನೆಗಳಿಗೆ ಸಂಪಾದಕರಾಗಿ ಕೊಡುಗೆಯನ್ನು ನೀಡಿದ್ದಾರೆ.

ಸಂಶೋಧನೆ ಮತ್ತು ಬೋಧನೆ

ಇಂದಿರಾ ಅವರು ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಗೌರವ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರು ಆ ವಿಶ್ವವಿದ್ಯಾನಿಲಯದಲ್ಲಿ ಫುಲ್‌ಬ್ರೈಟ್ ಸಂದರ್ಶಕ ಉಪನ್ಯಾಸಕರಾಗಿ ಒಂದು ಸೆಮಿಸ್ಟರ್ ಅನ್ನು ಸಹ ಕಲಿಸಿದರು. ಈ ಹಿಂದೆ ಇವರು ಇಂಡಿಯಾನಾದ ವೆಸ್ಟ್ ಲಫಯೆಟ್ಟೆಯ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಫುಲ್‌ಬ್ರೈಟ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್‌ನಲ್ಲಿ ಅಮೇರಿಕನ್ ಮಹಿಳೆಯರು ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕೆಲಸ ಮಾಡಿದ್ದರು. ಇವರು ಐ‌ಸಿ‌ಎಸ್‌ಎಸ್‌ಆರ್ ಹಿರಿಯ ಸಂಶೋಧನಾ ಫೆಲೋ ಆಗಿದ್ದರು ಮತ್ತು ಶಾಸ್ತ್ರಿ ಇಂಡೋ ಕೆನಡಿಯನ್ ಇನ್‌ಸ್ಟಿಟ್ಯೂಟ್‌ನಿಂದ ನಾಲ್ಕು ಫೆಲೋಶಿಪ್‌ಗಳನ್ನು ಪಡೆದರು. ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ಸಮುದಾಯಗಳೊಂದಿಗೆ ವ್ಯಾಪಕವಾದ ಕೆಲಸವನ್ನು ಮಾಡಿದ್ದಾರೆ. ಇಂದಿರಾ ಅವರು ಯುನೈಟೆಡ್ ಸ್ಟೇಟ್ಸ್‌ನ ಪುಗೆಟ್ ಸೌಂಡ್, ಅಯೋವಾ, ಡೆಲವೇರ್, ಪ್ರಿನ್ಸ್‌ಟನ್, ಮಿಚಿಗನ್ ಮತ್ತು ಫ್ಲೋರಿಡಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಮತ್ತು ಕೆನಡಾದ ಮೌಂಟ್ ಅಲಿಸನ್, ಗ್ವೆಲ್ಫ್ ಮತ್ತು ಕಾನ್ಕಾರ್ಡಿಯಾ ವಿಶ್ವವಿದ್ಯಾಲಯಗಳ ಸ್ಟಡಿ ಇಂಡಿಯಾ ಕಾರ್ಯಕ್ರಮಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿದ್ದಾರೆ. ಇವರು ದೆಹಲಿ ವಿಶ್ವವಿದ್ಯಾನಿಲಯ ಮತ್ತು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಫೆಲೋ ಆಗಿ ಮತ್ತು ಕುವೆಂಪು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಸ್ಕಾಲರ್ ಇನ್ ರೆಸಿಡೆನ್ಸ್ ಆಗಿದ್ದಾರೆ.

ಪ್ರಸ್ತುತ ಜವಾಬ್ದಾರಿಗಳು

ಇವರು ಸಮೃದ್ಧಿ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಇದು ಮಹಿಳೆಯರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಮಾಜದ ಸದಸ್ಯರ ಸಾಮರ್ಥ್ಯವನ್ನು ನಿರ್ಮಿಸಲು ಇವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಾರಂಭಿಸಿದ ನಾಗರಿಕ ಸಮಾಜದ ಗುಂಪಾಗಿದೆ.

ಇಂದಿರಾ ಅವರು ಪ್ರಸ್ತುತ ಆಂಥೋನಿ ಗಿಡ್ಡೆನ್ಸ್ ಅವರ ಸಮಾಜಶಾಸ್ತ್ರವನ್ನು ಕನ್ನಡಕ್ಕೆ ಭಾಷಾಂತರಿಸುವ ತಂಡದ ಮುಖ್ಯಸ್ಥರಾಗಿದ್ದಾರೆ. ಇದರ ಜೊತೆಗೆ ಅನುವಾದ ಯೋಜನೆಗಳು ಮತ್ತು ಕರ್ನಾಟಕದಲ್ಲಿ ಅರಣ್ಯ ಕಾರ್ಯಕ್ರಮಗಳ ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ೨೦೧೪ ಮತ್ತು ೨೦೧೫ ರ ನಡುವೆ ಭಾರತೀಯ ಸಮಾಜಶಾಸ್ತ್ರೀಯ ಸೊಸೈಟಿಯ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ಹಳೆಯ ವಿದ್ಯಾರ್ಥಿಗಳ ಸಂಘ, ಸಮಾಜಶಾಸ್ತ್ರ ವಿಭಾಗ, ಮಾಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇದರ ಗೌರವಾಧ್ಯಕ್ಷರಾಗಿದ್ದರು.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Sociology - Visiting Scholars". www.uj.ac.za (in ಇಂಗ್ಲಿಷ್). Retrieved 2021-06-06.
  2. "NEP 2020 should reduce inequality and socio-educational gap: Dr R Indira – Mysuru Today" (in ಅಮೆರಿಕನ್ ಇಂಗ್ಲಿಷ್). Retrieved 2021-06-06.

ಬಾಹ್ಯ ಕೊಂಡಿಗಳು[ಬದಲಾಯಿಸಿ]