ವಿಷಯಕ್ಕೆ ಹೋಗು

ಸದಸ್ಯ:Manappa y Bhajantri/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿಂಜಾಲ ದವೆ (ಗುಜರಾತಿ ಗಾಯಕಿ)


ಕಿಂಜಾಲ ದವೆ (ಜನನ ೨೪ ನವೆಂಬರ್ ೧೯೯೯)ವಾಲಿ ಗಾಡಿ" ಇವರು ಭಾರತದ ಶ್ರೇಷ್ಠ ಜಾನಪದ ಗಾಯಕಿ ಮತ್ತು ಗುಜರಾತ ರಾಜ್ಯದ ನಟಿ.ಇವರು ೨೦೧೫ ರಲ್ಲಿ ತಮ್ಮ "ಚಾರ್ ಚಾರ್ ಬಂಗಡಿ ಹಾಡಿನ ಮೊಲಕ ದೇಶದಲ್ಲಿ ಪ್ರಸಿದ್ದರಾದರು


ಜೀವನಚರಿತ್ರೆ[ಬದಲಾಯಿಸಿ]

ಇವರು ೨೪ ನವೆಂಬರ್,೧೯೯೯ ಗುಜರಾತ ರಾಜ್ಯದ ಪಾಟ್ನ ನಗರದ ಹತ್ತಿರ ಇರುವ ಜೆಸಂಗಪಾರ ಹಳ್ಳಿಯಲ್ಲಿ ಅಧ್ವೈತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಇವರು ಸಂಗೀತದ ಸಾಮ್ರಾಜ್ಯಕ್ಕೆ ಗುಜರಾತಿ ಭಾಷೆಯ "ಜೊನಡಿಯೊ" ಎಂಬ ಹಾಡನ್ನು ಹಾಡುವದರ ಮೂಲಕ ಯಶಸ್ವಿಯಾಗಿ ತಮ್ಮ ಗಾಯಕ ವೃತ್ತಿಯನ್ನು ಆರಂಭಿಸಿದರು.ದವೆ ಅವರು ೨೦೧೬ ರಲ್ಲಿ ಹಾಡಿದ ಚಾರ್ ಚಾರ್ ಬಂಗಾಡಿವಾಲಿ ಗಾಡಿ ಹಾಡಿನ ಮೂಲಕ ಭಾರತದ ಜಾನಪದ ಗಾಯಕರಲ್ಲಿ ವಿಶೇಷವಾದ ಸ್ಥಾನ ಪಡೆದರು.ಇವರ ಎಲ್ಲ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದ ಆರ್.ಡಿ.ಸಿ. ಮೀಡಿಯಾ ಮತ್ತು ಸರಸ್ವತಿ ಸ್ಟುಡಿಯೊ ವಿರುದ್ದ ರೆಡ್ ರಿಬ್ಬನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮತ್ತು ಕಾರ್ತಿಕ್ ಪಟೇಲ್ (ಇದನ್ನು ಕಥಿಯವಾಡಿ ಕಿಂಗ್ ಎಂದೂ ಕರೆಯಲಾಗುತ್ತದೆ), ಆಸ್ಟ್ರೇಲಿಯಾದ ಗುಜರಾತಿ ಗಾಯಕ, ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೊಡಿದರು ಈ ಹಾಡಿನ ಮೊಲ ಗಾಯಕ ತಾನಾಗಿದ್ದು ಇವರು ಸಣ್ಣ ಬದಲಾವನೆಗಳೊಂದಿಗೆ ನನ್ನ ಹಾಡನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ.ನಾನು ಈ ಹಾಡನ್ನು ಇವರ ಹಾಡು ಬಿಡುಗಡೆಯಾಗುವ ಮೂರು ತಿಂಗಳು ಮುಂಚೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನ್ಯಾಯಲಯಕ್ಕೆ ತಿಳಿಸಿದರು. ಆದರೆ ದವೆ ಅವರು ಈ ಹಾಡು 2014 ರಲ್ಲಿ ಮನುಭಾಯ್ ರಾಬರಿ ಬರೆದ ಮೂಲ ಹಾಡು ಎಂದು ನ್ಯಾಯಲಯದಲ್ಲಿ ಪ್ರತಿಪಾದಿಸಿದರು.ಅಹಮದಾಬಾದ್ ವಾಣಿಜ್ಯ ನ್ಯಾಯಾಲಯವು ಜನವರಿ 2019 ರಲ್ಲಿ, ಪ್ರಕರಣವು ಇತ್ಯರ್ಥವಾಗುವವರೆಗೆ ಹಾಡನ್ನು ಬಳಸದಂತೆ ದವೆ ಅವರನ್ನು ನಿರ್ಬಂಧಿಸಿತು. ದವೆ ಅವರ ಸತತ ಹೋರಾಟದ ಫಲವಾಗಿ ಒಂದು ತಿಂಗಳ ನಂತರ ಗುಜರಾತ್ ಹೈಕೋರ್ಟ್ ಈ ಆದೇಶವನ್ನು ರದ್ದುಮಾಡಿತು.ಅಹಮದಾಬಾದ್ ವಾಣಿಜ್ಯ ನ್ಯಾಯಾಲಯವು ಎಪ್ರಿಲ್ ೨೦೧೯ರಲ್ಲಿ ಈ ಕೇಸ್ ಅನ್ನು ಕೂಲಂಕೂಶವಾಗಿ ಪರೀಶಿಲಿಸಿ ಪ್ರಕರಣವನ್ನು ವಜಾಗೊಳಿಸಿತು. ಆದರೆ ರೆಡ್ ರಿಬ್ಬನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮತ್ತು ಕಾರ್ತಿಕ್ ಪಟೇಲ್ ಪಟ್ಟು ಬಿಡದೆ ಅಹಮದಾಬಾದ್ ಸಿವಿಲ್ ಕೋರ್ಟ್‌ ಮೂಲಕ ಸೆಪ್ಟೆಂಬರ್ ೨೦೧೯ ರಲ್ಲಿ ಹೊಸ ಹಕ್ಕುಸ್ವಾಮ್ಯ ಉಲ್ಲಂಘನೆಯ ನೋಟಿಸ್ ಅನ್ನು ನೀಡಲಾಯಿತು. ದವೆ ಅವರ ಪ್ರಕಾಶಕರಾದ RDC ಮೀಡಿಯಾ ಮತ್ತು ಸರಸ್ವತಿ ಸ್ಟುಡಿಯೋ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಒಪ್ಪಿಕೊಂಡಿತು ಮತ್ತು ಹಾಡನ್ನು ತಮ್ಮ ವೇದಿಕೆಗಳಿಂದ ತೆಗೆದುಹಾಕಿತು.ಆದರೆ ದವೆ ಅವರು ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡರು.

"ಚಾರ್ ಚಾರ್ ಬಂಗ್ಡಿ ವಾಲಿ ಗಾಡಿ", "ಅಮೆ ಗುಜರಾತಿ ಲೇರಿ ಲಾಲಾ", "ಚೋಟೆ ರಾಜಾ", "ಘಟೆ ತೋ ಘಾಟೆ ಜಿಂದಗಿ", "ಜಯ್ ಅಧ್ಯಶಕ್ತಿ ಆರತಿ" ಮತ್ತು "ಧನ್ ಚೆ ಗುಜರಾತ್" ಮತ್ತು "ಮಖಾನ್ ಚೋರ್" ಇವು ಅವರು ಗುಜರಾತಿಯಲ್ಲಿ ಹಾಡಿದ ಇತರ ಹಾಡುಗಳು   
ಇವರು ಮೊದಲೆ ತಿಳಿಸಿದಂತೆ ಗಾಯಕಿ ಅಷ್ಟೆ ಅಲ್ಲದೆ ಅದ್ಬುತ ನಟಿ ಕೊಡಾ ಹೌದು ೨೦೧೮ರಲ್ಲಿ ಬಿಡುಗಡೆಗೊಂಡ ಗುಜರಾತಿ ಚಲನಚಿತ್ರ ದಾದಾ ಹೋ ದಿಕ್ರಿ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು.ಇವರು ೨೦೧೯ರಲ್ಲಿ ರಾಜಕೀಯಕ್ಕೆ ಸೇರಿಕೊಂಡಿದ್ದು ಸದ್ಯ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯರಾಗಿದ್ದಾರೆ

ಪ್ರಶಸ್ತಿಗಳು[ಬದಲಾಯಿಸಿ]

ಇವರು ೨೦೧೯ರಲ್ಲಿ ಗುಜರಾತಿನ ೧೨ನೇ ಗೌರವಶಾಲಿ ಗುಜರಾತಿ ಪ್ರಶಸ್ತಿಯನ್ನು ಪಡೆದರು ಜೊತೆಗೆ ೨೦೨೦ರಲ್ಲಿ ಸಂಗೀತ ವಿಭಾಗದಲ್ಲಿ ಫೀಲಿಂಗ್ಸ್ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಪಡೆದರು

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ೨೦೧೮ರಲ್ಲಿ ಪ್ರಸಿದ್ದ ಉದ್ಯಮಿ ಪವನ ಜೋಶಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.ಇವರು ವಿವಿಧ ರೀತಿಯ ಜಾನಪದ ಹಾಡುಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ದ್ವನಿಮುದ್ರಿಕೆಗಳು[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

೧)ಜೊನಾಡಿಯೊ (2016) ೨)ಕನಯ್ಯ (2017) ೩)ಗಣೇಶ (2017) ೪)ಛೋಟೆ ರಾಜಾ (2017) ೫)ಲೆರಿ ಲಾಲಾ (2017) ೬)ಮೌಜ್ ಮಾ (2018) ೭)ಕಿಂಜಾಲ್ ಕನೆಕ್ಷನ್ (2018) ೮)ನವರಾತ್ (2019) ೯)ಜೈ ಅಧ್ಯಶಕ್ತಿ ಆರತಿ (2019) ೧೦)ಧನ್ ಛೆ ಗುಜರಾತ್ (2019) ೧೧)ಶಂಭು ಧುನ್ ಲಾಗಿ (2019) ೧೨)ಪೈಸಾ ಛೆ ತೊ ಪ್ರೇಮ್ ಛೆ (2019) ೧೩)ರೂಟ್ ಬವಾರಿ (2019 ೧೪)ಮಖಂಚೋರ್ (2019) ೧೫)ಭೈಲು ಹಲ್ಯಾ ಜಾನ್ ಮಾ (2020) ೧೬)ಕಿಲೋಲ್ (2020) ೧೭)ಶಿವ ಭೋಲಾ (2020) ೧೮)ಮೊನೊ ಟು ಮಾತಾ ಸೆ (2020) ೧೯)ವ್ರಜ್ ಮಾ ವೆಲೋ ಆಯ್ (2020) ೨೦)ಭಾಯಿ ನೋ ಮೆಲ್ ಪಾಡಿ ಗಯೋ (2020) ೨೧)ವಾಗ್ಯೋ ರೆ ಧೋಲ್ (2020) ೨೨)ಮಹಾಕಲ್ (2020) ೨೩)ರಾಣಾಜಿ (2020) ೨೪)ಖಮ್ಮ ಖೋಡಲ್ (2021) ೨೫)ಪರ್ನೆ ಮಾರೊ ವಿರೊ (2021) ೨೬)ಏ ಮಾ (2021) ೨೭)ಕಿಂಜಾಲ್ ಸಂಪರ್ಕ - 2 (2021) ೨೮)ಜೀವಿ ಲೆ (2021)

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]