ಸದಸ್ಯ:Malve Savi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಕ್ರಿ ಬೊಮ್ಮು ಗೌಡ ಅಥವಾ ಸುಕ್ರಜ್ಜಿ ಓರ್ವ ಜಾನಪದ ಸಂಗೀತ ಸಾಧಕಿ. ಮೂಲತಹ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರಾದ ಇವರು ಸುಕ್ರಜ್ಜಿಯೆಂದೇ ಖ್ಯಾತರು. ೮೦ ವರ್ಷ ವಯಸ್ಸಿನ ಸುಕ್ರಜ್ಜಿಯು ಜಾನಪದ ಹಾಲಕ್ಕಿ ಹಾಡನ್ನು ಹಾಡುವಲ್ಲಿ ಪ್ರಸಿದ್ಧಿಗೊಂಡವರು. ಸುಕ್ರಜ್ಜಿಯ ನೆನಪಿನಲ್ಲಿ ಸುಮಾರು ೫೦೦೦ ಹಾಲಕ್ಕಿ ಹಾಡುಗಳಿವ ಮತ್ತು ಅದರಲ್ಲಿ ಹಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ. ಸಾವಿರಾರು ಹಾಲಕ್ಕಿ ಹಾಡುಗಳನ್ನು ಹೇಳುವ ಇವರು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಖ್ಯಾತಗೊಂಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಸುಕ್ರಜ್ಜಿಯವರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದೆ. ಅಲ್ಲದೇ ಕಾರವಾರದಲ್ಲಿನ ಅಖಿಲ ಭಾರತ ರೇಡಿಯೋ ಕೂಡಾ ಅವರ ಹಾಡುಗಳನ್ನು ಧ್ವನಿಮುದ್ರಣ ಮಾಡಿದೆ ಮತ್ತು ಅವುಗಳನ್ನು ಅದರ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.[೧]

ಜೀವನ[ಬದಲಾಯಿಸಿ]

ಸುಕ್ರಜ್ಜಿಗೆ ೧೪ ವರ್ಷ ವಯಸ್ಸಿನಲ್ಲಿದ್ದಾಗ ೪೨ ವರ್ಷದ ಬೊಮ್ಮು ಗೌಡರ ಜೊತೆ ವಿವಾಹವಾಗುತ್ತದೆ. ಕುಡಿತದ ವ್ಯಸನದಿಂದ ಸಂಭವಿಸಿದ ಗಂಡನ ಸಾವಿನಿಂದ ಧೃತಿಗೆಡದ ಸುಕ್ರಜ್ಜಿಯು ೧೯೯೦ರ ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ನಡೆಸಿದರು. ಈ ಆಂದೋಲನವು ಹಲಕೆಲವು ಸ್ಥಳೀಯ ಸಾರಾಯಿ ಮಳಿಗೆಗಳ ಮುಚ್ಚುವಿಕೆಗೆ ಕಾರಣವಾಯಿತು.[೨]

೧೯೮೦ ರ ದಶಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಮತ್ತು ಮಾಜಿ ಉಪಕುಲಪತಿ ಎಚ್. ಸಿ. ಬೋರಲಿಂಗಯ್ಯ ಅವರು ಬಡಗೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ, ಅವರ ಪ್ರತಿಭೆಯನ್ನು ಗಮನಿಸಿ ಧಾರವಾಡ ಆಕಾಶವಾಣಿ ಕೇಂದ್ರದ ಬನಂದೂರು ಕೆಂಪಯ್ಯರಿಗೆ ತಿಳಿಸಿದರು. ಹೀಗೆ ಹಾಲಾಕ್ಕಿ ಸಮುದಾಯದ ಕೋಗಿಲೆಯ ಸಂಗೀತದ ಜೀವನವು ಪ್ರಾರಂಭವಾಯಿತು.[೩]

ಪ್ರಶಸ್ತಿಗಳು[ಬದಲಾಯಿಸಿ]

ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕ್ಕೆನ್ನುವ ಹೋರಾಟ, ಮದ್ಯ ವಿರೋಧಿ ಆಂದೋಲನ ಮತ್ತು ಸಾವಿರಾರು ಜಾನಪದ ಗೀತೆಗಳ ಹಾಡುವಿಕೆಯು ಸುಕ್ರಜ್ಜಿಗೆ ಜನಪ್ರಿಯತೆಯನ್ನು ಮಾತ್ರವಲ್ಲದೇ, ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ೨೦೧೭ರಲ್ಲಿ ತಂದುಕೊಟ್ಟಿದೆ.[೪]

ಉಲ್ಲೇಖ[ಬದಲಾಯಿಸಿ]

  1. TNN. "Padma for these pearls of Karnataka". THE TIMES OF INDIA. Bennett, Coleman & Co. Ltd. Retrieved 6 May 2018.
  2. TNN. "Padma for these pearls of Karnataka". THE TIMES OF INDIA. Bennett, Coleman & Co. Ltd. Retrieved 6 May 2018.
  3. "This Nightingale sings to fight social evils". THE NEW INDIAN EXPRESS. newindianexpress.com. Retrieved 6 May 2018.
  4. "Sukri Bommagowda recieves Padma Shri award at New Delhi". SAHIL ONLINE. Sahil Media and Publishing Society. Retrieved 6 May 2018.