ವಿಷಯಕ್ಕೆ ಹೋಗು

ಸದಸ್ಯ:Madan1710551/WEP 2018-19

ನಿರ್ದೇಶಾಂಕಗಳು: 16°12′N 77°22′E / 16.2°N 77.37°E / 16.2; 77.37
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಯಚೂರು
ನಗರ
ರಾಯಚೂರು ನಗರ
ರಾಯಚೂರು ನಗರ
ರಾಯಚೂರು is located in Karnataka
ರಾಯಚೂರು
ರಾಯಚೂರು
Location in Karnataka, India
ರಾಯಚೂರು is located in India
ರಾಯಚೂರು
ರಾಯಚೂರು
ರಾಯಚೂರು (India)
Coordinates: 16°12′N 77°22′E / 16.2°N 77.37°E / 16.2; 77.37
ದೇಶ India
Stateಕರ್ನಾಟಕ
Districtರಾಯಚೂರು
Government
 • Bodyಅರ ಮ್ ಸಿ
Elevation
೪೦೭ m (೧,೩೩೫ ft)
Population
 (2011)
 • Total೨,೩೨,೪೫೬
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)
PIN
೫೮೪೧೦೧-೧೦೩
ದೂರವಾಣಿ ಕೋಡ್೯೧ ೮೫೩೨
Vehicle registrationಕೆಏ - ೩೬
Websitewww.raichur.nic.in

ರಾಯಚೂರು

[ಬದಲಾಯಿಸಿ]
Tungabadra Dam

ರಾಯಚೂರು ಕರ್ನಾಟಕ ರಾಜ್ಯದಲ್ಲಿ ಆಡಳಿತಾತ್ಮಕ ಜಿಲ್ಲೆಯಾಗಿದೆ. ಇದು ರಾಜ್ಯದ ಈಶಾನ್ಯ ಭಾಗದಲ್ಲಿದೆ ಮತ್ತು ಉತ್ತರದಲ್ಲಿ ಯಾದ್ಗಿರ್ ಜಿಲ್ಲೆಯ ಮೂಲಕ, ವಾಯುವ್ಯದಲ್ಲಿ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ, ಪಶ್ಚಿಮದಲ್ಲಿ ಕೊಪ್ಪಳ ಜಿಲ್ಲೆ, ದಕ್ಷಿಣದಲ್ಲಿ ಬಳ್ಳಾರಿ ಜಿಲ್ಲೆ, ತೆಲಂಗಾಣದ ಮಹಾಬೂಬ್ನಗರ್ ಜಿಲ್ಲೆಯ ಪೂರ್ವದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿದೆ.

ಇತಿಹಾಸ

[ಬದಲಾಯಿಸಿ]

ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ಅಂಗಳವೂ ಆಗಿತ್ತೆನ್ನಬಹುದು.

ಭೌಗೋಳಿಕ ಲಕ್ಷಣಗಳು

[ಬದಲಾಯಿಸಿ]

ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ.

ಹವಾಗುಣ

[ಬದಲಾಯಿಸಿ]

ಜಿಲ್ಲೆಯ ಹವಾಗುಣವು ಬಹುತೇಕ ಒಣ ಹವೆ ಇರುತದೆ ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ.

ಜಿಲ್ಲೆಯ ಪ್ರಮುಖರು

[ಬದಲಾಯಿಸಿ]

ಶ್ರೀ ಚನ್ನಬಸವಪ್ಪ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು ಶ್ರೀ ಶಂಕರಗೌಡ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರು ಶ್ರೀ ಶಿವರಾಜ ಪಾಟೀಲ್ , ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಶ್ರೀ ಜೆ.ಎಚ್.ಪಾಟೀಲ್,ನಿವೃತ್ತ ಕಾನೂನು ಉಪಕುಲಪತಿಗಳು. ಮತ್ತು ಶಿವಲಿಂಗ ಸಿಂದನೂರು ಇವರು ಅತರಾ ಜಾಲ್ಲದಲ್ಲಿ ರಾಜಾದಲಿ ಮದಲಿಗರು ಶ್ರೀ ರಾಮ ರೆಡ್ಡಿ , ಜಿಲ್ಲಾಧಿಕಾರಿಗಳು. ಶ್ರೀ ಡಾ. ಪಂ. ನರಸಿಂಹಲು ವಡವಾಟಿ, ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರು, ಮಾಜಿ ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ. ಸೈಯದ್ ಯಾಸೀನ್ ಮಾಜಿ ಶಾಸಕರು ತಿಪ್ಪರಾಜು ಹವಾಲ್ದಾರ ಹಾಗೂ ಮುಂತಾದವರು. ವಡವಾಟಿ ಶಾರದಾ ಭರತ್, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು, ರಾಜ್ಯದ ಖ್ಯಾತ ವಚನ ಸಂಗೀತ ಗಾಯಕರು, ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ. ದಿವಂಗತ ವೆಂಕಟೇಶ್ ನಾಯಕ ಮಾಜಿ ಸಂಸದ ಶ್ರೀ ಹಂಪಯ್ಯನಾಯಕ ಶಾಸಕರು ಮಾನವಿ. ಶ್ರೀ ಗಂಗಾಧರ ನಾಯಕ ಮಾಜಿ ಶಾಸಕರು

ಪ್ರಾಮುಖ್ಯತೆ

[ಬದಲಾಯಿಸಿ]

ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಪ್ರಮುಖವಾಗಿದೆ. ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ದೇವನಾಂಪ್ರಿಯಸ ಅಸೋಕಸ ಎನ್ನುವ ಪ್ರಸಿದ್ಡ ಸಾಲಿದೆ. ಸಿಂಧನೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ. ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದ ಅಂಭಾಮಠದ ಅಂಭಾದೇವಿಯ ಜಾತ್ರೆ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಲಿಂಗಸೂಗೂರು ತಾಲ್ಲೂಕಿನ ಮುದುಗಲ್ ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ. ಜಲದುರ್ಗದಲ್ಲಿರುವ ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.ಜೊತೆಗೆ ಇಲ್ಲಿ ಕಂಡು ಬರುವ ರಕ್ಷಣಾ ವಾಸ್ತುಶಿಲ್ಪ ತುಂಬಾ ವಿಶೇಷ ವಾದದ್ದು. ಮಂತ್ರಾಲಯವು ರಾಯಚೂರಿನಿಂದ ಹತ್ತಿರದಲ್ಲಿದೆ. ಮಾನವಿಕೊನೆಯ ತಾಲೂಕು.ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.

ರಾಯಚೂರಿನ ಐತಿಹಾಸಿಕ ಕೋಟೆ ಅಭಿವೃದ್ಧಿಗಾಗಿ ರಾಜ್ಯ ಸರಕಾರ ನಾಲ್ಕು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಹೇಳಿದರು.

ದಸರಾ ಮಹೋತ್ಸವದ ಅಂಗವಾಗಿ ನಗರಸಭೆ ಮತ್ತು ಕೋಟೆ ಅಧ್ಯಯನ ಸಮಿತಿ ಆಶ್ರಯದಲ್ಲಿ ನಗರದ ಮಕ್ಕಾ ದರವಾಜ್ ಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.