ಸದಸ್ಯ:MANOJ KUMAR JUNE/ನನ್ನ ಪ್ರಯೋಗಪುಟ
ಪೂಜೆ
[ಬದಲಾಯಿಸಿ]ಪೂಜೆಯು ಒಂದು ಅಥವಾ ಹೆಚ್ಚು ದೇವತೆಗಳನ್ನು ಸತ್ಕರಿಸಲು, ಗೌರವಿಸಲು ಮತ್ತು ಆರಾಧಿಸಲು, ಅಥವಾ ಒಂದು ಘಟನೆಯನ್ನು ಆಧ್ಯಾತ್ಮಿಕವಾಗಿ ನೆರವೇರಿಸಲು ಹಿಂದೂಗಳಿಂದ ಆಚರಿಸಲಾಗುವ ಒಂದು ಪ್ರಾರ್ಥನಾ ಕ್ರಿಯಾವಿಧಿ. ಅದು ವಿಶೇಷ ಅತಿಥಿಯ(ಗಳ) ಹಾಜರಿ, ಅಥವಾ ಅವರ ಮರಣದ ನಂತರ ಅವರ ನೆನಪುಗಳನ್ನು ಗೌರವಿಸಬಹುದು ಅಥವಾ ಆಚರಿಸಬಹುದು. ಪೂಜೆ ಶಬ್ದ ಸಂಸ್ಕೃತದಿಂದ ಬರುತ್ತದೆ, ಮತ್ತು ಇದರರ್ಥ ಪೂಜ್ಯಭಾವ, ಗೌರವ, ಗೌರವಾರ್ಪಣೆ, ಮೆಚ್ಚುಗೆ, ಮತ್ತು ಆರಾಧನೆ.
ಭಾರತೀಯ ಪರಂಪರೆಯಲ್ಲಿ ದೇವರಿಗೆ ವಿಶೇಶವಾದ ಸ್ತಾನಮಾನವಿದೆ ದೇವರೆಂದರೆ ಅದೊಂದು ವಿಶೇಶವಾದ ಶಕ್ತಿ,ಆ ದೇವರಿಗೆ ಸಲ್ಲಿಸುವ ಭಕ್ತಿ ಗೌರವವೇ ಪೂಜೆ.
ಇದು ಮಾನವನು ಆನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿರು ವಿದಿವಿದಾನವಾಗಿದೆ.ಆದರೆ ನಮ್ಮ ಹಿಂದು ಧರ್ಮದಲ್ಲಿ ದೇವರಿಗೆ ಬಹಳಷ್ಟು ಪ್ರಾಶಸ್ಯವನ್ನು ನೀಡುತ್ತಾ ಬಂದಿದ್ದೇವೆ. ಇಲ್ಲಿನ ಪೂಜಾವಿದಾನಗಳು,ಮಾಡುವ ರೀತಿ ನೀತಿಗಳು,ಎಲ್ಲವೂ ಸಹ ಬೇರೆಯದ್ದೇ ಆಗಿವೆ. ಯಾಕೆಂದರೆ ಪೂರಾಣದ ಪ್ರಕಾರ ಹಿಂದೂ ಧರ್ಮದಲ್ಲಿ ಮೂರು ಸಾವಿರ ದೆವರುಗಳಿದ್ದಾರಲ್ಲವೇ ? ಒಂದೊಂದು ದೇವರಿಗೆ ಒಂದೊಂದು ದೇವರಿಗೆ ಒಂದೊಂದು ಪೂಜಾ ವಿಧಾನ ಆಗಲೇಬೇಕಲ್ಲವೇ ?
ಪೂಜೆ ಎಂದರೆ ದೇವರಿಗೆ ಹಲವಾರು ವಿಧಿ-ವಿಧಾನಗಳಿಂದ ಮಾಡುವ ಸತ್ಕಾರ. ಈ ಸತ್ಕಾರವನ್ನು ನಮ್ಮ ಸಂಕಲ್ಪ ಬಲದಿಂದ ಮನಸನ್ನು ಕೇಂದ್ರಿಕರಿಸಿಕೊಂಡು ನಮಗೆ ಇಷ್ಥ ದೇವರಲ್ಲಿ ಭಕ್ತಿಯಿಂದ ಸತ್ಕಾರವನ್ನು ಮಾಡುವುದು ಎಂದರ್ಥ. ಈ ರೀತಿ ಭಕ್ತಿಯಿಂದ ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದೇ ಪೂಜಾ ಪದ್ದತಿಯ ವಿಧಾನ ಹಾಗೂ ಧ್ಯೇಯ.
ನಮಗೆ ಇಷ್ಥವಾದ ದೇವರನ್ನು ಒಳ್ಳೆ ಮನಸ್ಸಿನಿಂದ ಸಂವತ್ಸರ, ಋತು, ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರಗಳನ್ನು ಹೆಸರಿಸುತ್ತ ದೇವರ ಕಾರ್ಯ ಮಾಡುವುದೆ ಪೂಜ ವಿಧಾನ. ಒಂದು ಉತ್ತಮ ಪೂಜ ವಿಧಾನ ಸಾಮಾನ್ಯವಾಗಿ ಹದಿನಾರು ಬಗೆಯಿಂದ ಕೂಡಿರುತ್ತದೆ.
ಆ ಹದಿನಾರು ಬಗೆಯ ವಿವರಗಳೆಂದರೆ:
೧. ಆವಾಹನೆ: ದೇವರನ್ನು ಪೂಜೆ ಮಾಡುತ್ತಿರುವ ಸ್ಥಳ.
೨. ಆಸನ: ದೇವರನ್ನು ಪ್ರತಿಷ್ಠಾಪನೆ ಮಾಡಿದ ವೇದಿಕೆ.
೩. ವಾದ್ಯ: ಕಾಲು ತೊಳೆಯಲು ನೀರು ಕೊಡುವುದು.
೪. ಆಘ್ಯರ: ಕೈ ತೊಳೆಯಲು ನೀರು ಕೊಡುವುದು.
೫. ಆಚಮನ: ಕುಡಿಯುವುದಕ್ಕೆ ನೀರು ಕೊಡುವುದು.
೬. ಸ್ನಾನ: ಪಂಚಾಮೃತದಿಂದ ಸ್ನಾನ ಮಾಡಿಸುವುದು.
೭. ವಸ್ತ್ರ: ದೇವರಿಗೆ ವಸ್ತ್ರ ಧರಿಸುವುದು.
೮. ಹರಿದ್ರ, ಕುಂಕುಮ, ಗಂಧ, ಅಕ್ಷತೆ: ದೇವರಿಗೆ ಅರ್ಪಿಸುವುದು.
೯. ಪುಷ್ಪಮಾಲ: ದೇವರಿಗೆ ಹೂಗಳಿಂದ ಸಿಂಗರಿಸುವುದು.
೧೦. ಅರ್ಚನೆ, ಅಷ್ಟೋತ್ತರ: ನೂರೆಂಟು ನಾಮಗಳಿಂದ ದೇವರನ್ನು ಸ್ಮರಿಸುವುದು.
೧೧. ಧೂಪ: ಪರಿಮಳವಾದ ಧೂಪವನ್ನು ದೇವರಿಗೆ ಅರ್ಪಿಸುವುದು.
೧೨. ದೀಪ: ದೀಪವನ್ನು ದೇವರಿಗೆ ಅರ್ಪಿಸುವುದು.
೧೩. ನೈವೇದ್ಯ, ತಾಂಬೂಲ: ದೇವರಿಗೆ ವಿವಿಧ ರೀತಿಯ ಅಡಿಕೆ, ತೆಂಗಿನಕಾಯಿ, ವೀಳ್ಯದ ಎಲೆ ಮುಂತಾದವುಗಳನ್ನು ಅರ್ಪಿಸುವುದು.
೧೪. ನೀರಾಜನ: ಕರ್ಪೂರದಿಂದ ಮಂಗಳಾರತಿ ಮಾಡುವುದು.
೧೫. ನಮಸ್ಕಾರ: ಪ್ರದಕ್ಷಿಣೆ ಮಾಡಿ ದೇವರಿಗೆ ನಮಸ್ಕಾರ ಮಾಡುವುದು.
೧೬. ಪ್ರಾರ್ಥನೆ: ನಮಗೆ ಬೇಕಾದ ವಿಚಾರಗಳನ್ನು ದೇವರಲ್ಲಿ ಕೇಳಿಕೊಳ್ಳುವುದು. ಇದೇ ಪೂಜಾ ಪದ್ದತಿಯ ವಿಧಾನಗಳು.
ಭಾರತದಲ್ಲಿ ವೈಭವದಿಂಡದ ಆಚರಿಸಲು ಪಡುವ ಒಂದು ಹಬ್ಬ.ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ.ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ . ಈ ಹಬ್ಬದಲ್ಲಿ ಗಣಪತಿಯನ್ನು ಪೊಜಿಸಲಾಗುತ್ತದೆ.ಬೆಳ್ಳಿ ಅಥವಾ ಮಣ್ಣಿನಿಂದ ಮಾದಿದ ಗಣಪತಿಯ ಮೂರ್ತಿಯನ್ನು ವಿದ್ಯುಕ್ತವಾಗಿ ಪೂಜಿಸಿ,ವ್ರತವೆಂದು ಆಚರಿಸಲಾಗುತ್ತದೆ.ಹಬ್ಬದ ದಿನ ಮೋದಕ,ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಗಣೇಶ ಹಬ್ಬ ಹಿಂದುಸಾಂಪ್ರಾದಯದ ಹಬ್ಬ ಅದನ್ನು ಬಹಳ ಉತ್ಸಹಾದಿಂದ ಆಚರಿಸುತ್ತಾರೆ.ಪುರಣದಪ್ರಕಾರದಲ್ಲಿ ಶಿವಪುರಣದಲ್ಲಿ ಹೇಳಿರುವಂತ್ತೆ ಗಣಪತಿಯನ್ನು ತುಳಸಿಯದಳದಲ್ಲಿ ಪೂಜಿಸಬಾರದು.ಉ ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವು ಗಣೇಶನ ಉಪಾಸನೆಗೆ ಪ್ರತಿ ಬಂದಕವಾಗಿದೆ.