ಸದಸ್ಯ:Leesha kamala/sandbox 8

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್.ಎನ್.ಎ

ಏಡ್ಸ್[ಬದಲಾಯಿಸಿ]

ಏಡ್ಸ್ ಎಂದರೆ ಆಕ್ವೈರ್ಡ್ ಇಮ್ಯುನೋ ಡಿಫೀಷಿಯೆನ್ಸಿ ಸಿಂಡ್ರೋಮ್. ಹ್ಯುಮನ್ ಇಮ್ಯುನೋ ಡಿಫೀಷಿಯೆನ್ಸಿ ವೈರಸ್(ಹೆಚ್.ಐ.ವಿ) ಎಂಬ ವೈರಾಣವು ಏಡ್ಸ್ ಎಂಬ ಭಯಾನಕ ರೋಗಕ್ಕೆ ಕಾರಣವಾಗಿದೆ.ಏಡ್ಸ್ ಎನ್ನುವುದು ಒಂದು ರೋಗ ಎನ್ನುವುದಕ್ಕಿಂತ,ರೋಗಗಳ ಸರಮಾಲೆ ಎನ್ನಬಹುದು.ಏಡ್ಸ್ ರೋಗಗಳಲ್ಲಿ ಹತ್ತು ಹಲವು ರೋಗಗಳ ನಿರ್ಧಿಷ್ಟ ಲಕ್ಷಣಗಳು ಒಮ್ಮೆಗೆ ಕಾಣಿಸಿಕೊಳ್ಳುತ್ತದೆ. ಏಡ್ಸ್ ರೋಗವು ಬಹಳ ಹಿಂದಿನಿಂದಲೂ ಇದ್ದು, ಕೇವಲ ೮೦ರ ದಶಕದಲ್ಲಿ ಬಂದಿರಬಹುದು ಎಂದು ನಂಬಿದೆ.ಮೊಟ್ಟ ಮೊದಲ ಬಾರಿಗೆ ಏಡ್ಸ್ ಅನ್ನು ಅಮೆರಿಕದಲ್ಲಿ 1981ರಲ್ಲಿ ಗುರುತಿಸಲಾಯಿತು.ಪ್ರಮುಖವಾಗಿ ಇದನ್ನು ನ್ಯುಮೋನಿಯ ಮತ್ತು ಚರ್ಮದ ಕ್ಯಾನ್ಸ್ರ್ರ್ ರಿನ ಜೊತೆಗೆ ಗುರುತಿಸಲಾಗುತ್ತಿತ್ತು.ನಂತರ ಈ ರೋಗವನ್ನು ಚಕ್ಕ ವಯಸ್ಸಿನ ಸಲಿಂಗಿಗಳಲ್ಲಿ ಹಾಗು ಮಾದಕದ್ರವ್ಯ ವ್ಯಸನಿಗಳಲ್ಲಿ ಪತ್ತೆ ಹಚ್ಚಲಾಯಿತು.ಮುಂದೆ ರಕ್ತ ದಾನ ಪಡೆದಿದ್ದವರಲ್ಲಿ ಕಂಡು ಬಂದಿತು. ಏಡ್ಸ್ ವೈರಸ್ ಅನ್ನು1983ರಲ್ಲಿ ಮೊದಲಿಗೆ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು.1984 ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ಗ ಗೆ ಕಾರಣವಾಗುವ ವೈರಸ್ ಬಗ್ಗೆ ಮಾಹಿತಿ ನೀಡಿದರು.ವೈರಸ್ ಗಳನ್ನು ಹೆಸರಿಸುವ ಅಂತರಾಷ್ಡೀಯ ಸಂಸ್ಥೆಯು ,ಹೆಚ್.ಐ.ವಿ ಎಂದು ಹೆಸರನ್ನು ಸೂಚಿಸಿತು.ಭಾರತದಲ್ಲಿ ಈ ರೋಗ ಮೊದಲಿಗೆ 1987ರಲ್ಲಿ ಚೆನೈ ನಲ್ಲಿ ಪತ್ತೆಯಾಯಿತು.ಈ ರೋಗವನ್ನು ತರುವ ವೈರಸ್ ಬೇರೆ ಪ್ರಾಣಿಗಳಿಂದ ಅದರಲ್ಲೂ ಮುಖ್ಯವಾಗಿ ಕೋತಿಗಳಿಂದ ಮಾನವನಿಗೆ ತಗುಲಿರಬಹುದು ಎಂದು ಭಾವಿಸಲಾಗಿದೆ.

ಹೆಚ್.ಐ.ವಿ ರಚನೆ[ಬದಲಾಯಿಸಿ]

ಹೆಚ್.ಐ.ವಿ ರಚನೆ

ಹೆಚ್.ಐ.ವಿ ಎಂದರೆ ಹ್ಯುಮನ್ ಇಮ್ಯುನೋ ಡಿಫೀಷಿಯೆನ್ಸಿ ವೈರಸ್. ಈ ವೈರಾಣುವು ದುಂಡಾಕಾರವಾಗಿದ್ದು, ಆರ್.ಎನ್.ಎ.ಯನ್ನು ಅನುವಂಶೀಯ ವಸ್ತವಾಗಿ ಹೊಂದಿದೆ.ಕೊಬ್ಬಿನ ಪದಾರ್ಥದಿಂದ ಇಪ್ಪದರದ ಪೊರೆಯಿಂದ ಇದು ಆವೃತವಾಗಿದೆ.ಈ ಪೊರೆಯ ಒಳಗೆ ಪ್ರೋಟಿನ್ ನಿಂದ ಉಂಟಾದ ಕೋಶವೊಂದಿದೆ.ಇದರ ಮಧ್ಯೆ ವೈರಸ್ ನ ಆರ್.ಎನ್.ಎ ಹಾಗು ರಿವರ್ಸ್ ಟ್ರಾನ್ಸ್ ಕ್ರಿಪ್ಟೆಸ್ ಕಿಣ್ವಗಳಿವೆ.ಈ ಕಿಣ್ವವು ವೈರಸ್ ನ ಆರ್.ಎನ್.ಎಯನ್ನು ಪೋಷಕ ಜೀವಕೋಶದಲ್ಲಿ ಡಿ.ಎನ್.ಎ ಸಂಶ್ಲೇಷಣೆ ಆಗುವುದಕ್ಕೆ ಸಹಾಯಕವಾಗಿದೆ. ರೆಟ್ರೋ ವೈರಸ್ ಗುಂಪಿಗೆ ಸೇರುವ ಹೆಚ್.ಐ.ವಿ,ಡಿ.ಎನ್.ಎ ಅನ್ನು ಸಂಶ್ಲೇಷಿಸುವ ಶಕ್ತಿ ಹೊಂದಿದೆ.ಪೋಷಕ ಜೀವಕೋಶ ಇದು ಡಿ.ಎನ್.ಎ ಸಂಶ್ಲೇಷಣೆಯಲ್ಲಿ ತೊಡಗಿದಂತೆಲ್ಲಾ ಈ ವೈರಸ್ ನಿಯಂತ್ರಿಸುವ ಲಸಿಕೆಯನ್ನು ಅಭಿವೃದ್ದಿ ಪಡಿಸುವುದು ದುಸ್ತರವಾಗುತ್ತಲೇ ಹೋಗುತ್ತದೆ.

ಏಡ್ಸ್ ನ ಲಕ್ಷಣಗಳು[ಬದಲಾಯಿಸಿ]

ಹೆಚ್.ಐ.ವಿ ವೈರಾಣುಗಳು ವ್ಯಕ್ತಿಯ ರಕ್ತವನ್ನು ಪ್ರವೇಶಿಸಿದ ಎರಡು ಅಥವಾ ಮೂರು ವಾರಗಳ ನಂತರ ಜ್ವರ, ಕೀಲುಗಳಲ್ಲಿ ನೋವು ಮತ್ತು ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ದುಗ್ದಗಂಥ್ರಿಗಳು ಊದಿಕೊಳ್ಳುವ ಜೊತೆಗೆ ಚರ್ಮದ ತುರಿಕೆ ಪ್ರಾರಂಭವಾಗುತ್ತದೆ.ಕೆಲವೊಮ್ಮೆ ಯಾವುದೆ ರೋಗಲಕ್ಷಂಗಳು ಕಾಣಿಸಿಕೊಳ್ಳದಿರಬಹುದು ಆದರೆ ವೈರಾಣುಗಳು ಅಭವೃಧ್ಧಿ ಹೊಂದುತ್ತಾ ಹೋಗುತ್ತದೆ.ದಿನ ಕಳೆದಂತೆ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ.ಏಡ್ಸ್ ರೋಗ ಪೂರ್ತಿ ಪ್ರಕಟವಾಗುವ ಮೊದಲು ದುಗ್ದಗಂಥ್ರಿಗಳು ಊದಿಕೊಳ್ಳುತ್ತದೆ,ಅದರಲ್ಲಿಯೂ ಕತ್ತಿನ ಭಾಗದ ಸುತ್ತಲು ಈ ಊತ ಕಂಡು ಬರುತ್ತದೆ.ಇದು ಏಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುವುದನ್ನು ಸೂಚಿಸುತ್ತದೆ.ಈ ಹಂತದಲ್ಲಿ ರೋಗಿಯಲ್ಲಿ ಈ ಕೆಳಗಿನ ರೋಗ ಲಕ್ಷಣಗಳು ಕಂಡು ಬರುತ್ತದೆ.

ದ್ವೀತಿಯ ಹಂತದ ಲಕ್ಷಣಗಳು[ಬದಲಾಯಿಸಿ]

  1. ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ಕುಂದಿರುತ್ತದೆ.
  2. ಪ್ರತಿ ತಿಂಗಳು ತೂಕ ಕಡಿಮೆಯಾಗುತ್ತದೆ.
  3. ಚರ್ಮದಲ್ಲಿ ತುರಿಕೆ, ಉರ್ಸಿನಾಳದಲ್ಲಿ ಉರಿಯೂತ,ಕೆಮ್ಮು ಹಾಗು ಕಫ ಉಂಟಾಗುವಿಕೆ.
  4. ನಿರಂತರವಾಗಿ ತೀವ್ರವಾಗಿ ದಣಿವಾಗುವುದು.
  5. ಒಂದು ತಿಂಗಳು ದೀರ್ಘಕಾಲ ಉಳಿಯುವ ಜ್ವರ ಬರುವುದು.
  6. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳತ್ತದೆ.
  7. ಒಂದು ತಿಂಗಳಿಗೂ ದೀರ್ಘಕಾಲ ಅತಿಸಾರ ಭೇದಿಯಾಗುವುದು.
  8. ವ್ಯಕ್ತಿಯ ನೆನೆಪಿನ ಶಕ್ತಿ ಕುಂದುವುದು.
  9. ತಲೆ ಸುತ್ತುವುದು, ತಲೆನೋವು,ಆಮಶಂಕೆ,ನಿರ್ನಾಳ ಗ್ರಂಥಿಗಳಲ್ಲಿ ಉರಿಯುತ ಕಂಡು ಬರುತ್ತದೆ.

ದ್ವೀತಿಯ ಹಂತದ ಸೋಂಕುಗಳು[ಬದಲಾಯಿಸಿ]

  1. ಕ್ಷಯ
  2. ನ್ಯುಮೋನಿಯ
  3. ಸರ್ಪಸುತ್ತು
  4. ಮಿದುಳು ಜ್ವರ
  5. ಚರ್ಮದ ಕ್ಯಾನ್ಸ್ರ್ರ್ ರ್