ವಿಷಯಕ್ಕೆ ಹೋಗು

ಸದಸ್ಯ:Lakkappana Harshitha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಕ್ಷರತೆ :

      ಸಾಕ್ಷರತೆ ಎಂದರೆ ಅಕ್ಷರ ಜ್ಞಾನ.  ಶಿಕ್ಷಣ ಅಥವಾ ಅಕ್ಷರ ಜ್ಞಾನವಿಲ್ಲದ ಅರಿವು ಅಪೂರ್ಣ, ಶಿಕ್ಷಣ ಎಲ್ಲಾ ನಾಗರಿಕರ ಹಕ್ಕು ದೇಶದ ಅಭಿವೃದ್ಧಿ ಸಾಕ್ಷರತೆಯನ್ನು ಅವಲಂಬಿಸಿದೆ.  ನಮ್ಮ ದೇಶದಲ್ಲಿ ದುಡಿಯುವ ಅನಕ್ಷರಸ್ತರು ಒಂದು ಕಡೆ ಸೋಮಾರಿಗಳಾದ ಅನಕ್ಷರಸ್ತರು ಮತ್ತೊಂದು ಕಡೆ ಇದ್ದಾರೆ.  ವಿದ್ಯೆ ಜ್ಞಾನವನ್ನು ನೀಡುತ್ತದೆ.  ಕತ್ತಲಿನಿಂದ ಬೆಳಕಿನೆಡೆಗೆ ಅವನತಿಯಿಂದ ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ.  ನಮ್ಮ ದೇಶದ ರಾಜ್ಯಾಂಗದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ.  ಆದರೂ ನಮ್ಮ ದೇಶದಲ್ಲಿ ಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಿಲ್ಲ ಅನಕ್ಷರಸ್ತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ.
      
      ಕ್ರಮಬದ್ಧ ಶಿಕ್ಷಣದಿಂದ ವಂಚಿತರಾದ ವಯಸ್ಕರಿಗೆ ಅವರ ಬಿಡುವಿನ ವೇಳೆಯಲ್ಲಿ ಶಿಕ್ಷಣ ಕೊಡುವ ವ್ಯವಸ್ಥೆ ನಮ್ಮ ದೇಶದಲ್ಲಿ ೧೯೭೮ರಿಂದಲೆ ಪ್ರಾರಂಭವಾಯಿತು.  ಹಳ್ಳಿ ನಗರಗಳಲ್ಲಿ ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲಾಯಿತು.  ಇದು ಪರಿನಾಮಕಾರಿಯಾಗದಿರುವುದರಿಂದ ದೇಶದಾದ್ಯಂತ ಈಗ ಸಾಕ್ಷರತ ಆಂದೋಲನ ಹಮ್ಮಿಕೊಳ್ಳಲಾಗಿದೆ.  ಇದರಿಂದ ಅನಕ್ಷರಸ್ತರು ಅನುಕೂಲಕರ ಸ್ಥಳ ಸಮಯದಲ್ಲಿ ಓದು ಬರಹ ಕಲಿಯಬಹುದು ತುಂಬ ದೂರ ಹೋಗಬೇಕಿಲ್ಲ.  ಓದು ಬರಹದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು.  ತರಬೇತಿ ಪಡೆದ ಸ್ವಯಂಸೇವಕರು ಕಲಿಸುವ ಜವಾಬ್ದಾರಿ ಹೊತ್ತಿದ್ದಾರೆ.
      
      ಸಾಕ್ಷರತ ಆಂದೋಲನದ ಉದ್ಧೆಶಗಳು ಹಲವಾರು ಅಕ್ಷರ ಜ್ಞಾನ ಕೊಡುವುದು.  ಕ್ರಿಯಾಶೀಲತೆಯನ್ನು ಬೆಳೆಸುವುದು, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿದ ಶಿಕ್ಷಣದ ಮಹತ್ಮವನ್ನು ಮನಗಾಣಿಸುವುದು ನಾಗರಿಕ ಹಕ್ಕು ಮತ್ತು ಕರ್ತವ್ಯವನ್ನು ತಿಳಿಸುವುದು, ಮೋಸ ವಂಚನೆ ಶೋಷಣೆಯಿಂದ ಮುಕ್ತಗೊಳಿಸುವುದು.  ಆರೋಗ್ಯ, ಕುಟುಂಬ ಕಲ್ಯಾಣ ಉಳಿತಾಯ ಇತ್ಯಾದಿ ಬಗ್ಗೆ ವಿವರ ತಿಳಿಸುವುದು.  ಸ್ವತಂತ್ರ್ಯ ನಿರ್ಧಾರ ತೆಗೆದುಕೊಳ್ಳಲು ಅಣಿಗೊಳಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸಿ ಮೂಢನಂಬಿಕೆಗಳಿಂದ ದೂರವಿಡುವುದು.  ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು.  ಸಾಕ್ಷರತ ಆಂದೋಲನ ಯಶಸ್ವಿಯಾಗಬೇಕಾದರೆ ಸರ್ವರು ಪ್ರಾಮಾಣಿಕವಾಗಿ ಸಹಕರಿಸಬೇಕು.