ಸದಸ್ಯರ ಚರ್ಚೆಪುಟ:Lakkappana Harshitha/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಕೃತಿಕ ವಿಕೋಪ :

      ಪ್ರಕೃತಿಯು ದೇವರ ಅನಂತ ಸೃಷ್ಠಿಯಲ್ಲಿ ಪ್ರಮುಖವಾದುದು.  ಪ್ರಕೃತಿಯು ದೇವರ ವರದಾನವೆ ಹೊರತು ಮಾನವ ಸೃಷ್ಠಿಯಲ್ಲ.  ಲೋಕದ ಸರ್ವ ಚರಾಚರಗಳನ್ನು ಸೃಷ್ಠಿಸಿರುವ ಭಗವಂತ ಅವುಗಳನ್ನು ಪ್ರಕೃತಿಯ ಮಡಿಲಲ್ಲಿ ಸೇರಿಸಿ ಬಿಟ್ಟಿದ್ದಾನೆ.  ಅದರಿಂದ ಪ್ರತಿಯೊಂದು ಜೀವಕ್ಕು ಪ್ರಕೃತಿಯಲ್ಲಿ ತನ್ನದೆಯಾದ ಶೈಲಿಯಲ್ಲಿ ಬದುಕುವ ಸಂಪೂರ್ಣ ಹಕ್ಕಿದೆ.  ಆದರೆ ಆ ಹಕ್ಕನ್ನು ದುರುಪಯೋಗ ಪದಿಸಿಕೊಂಡರೆ ಅದರಿಂದ ಸಂಭವಿಸುವುದು ಅನಾಹುತ.  ಪ್ರಕೃತಿಯ ಮುನಿಸಿನಿಂದ ನಡೆಯಲ್ಪಡುವ ವಿಕೋಪವೆ ಪ್ರಾಕೃತಿಕ ವಿಕೋಪ.
      ಪ್ರಾಕೃತಿಕ ವಿಕೋಪ ನಡೆಯಲು ಹಲವಾರು ಕಾರಣಗಳಿವೆ ಆದರೆ ಅವರಲ್ಲಿ ಎತ್ತಿದ ಕೈಯೆಂದರೆ ಬುದ್ಧಿವಂತ ಜೀವಿಯಾದ ಮಾನವನದ್ದು.  ಪ್ರಕೃತಿಯನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಂಡು, ಕೇವಲ ತನ್ನ ಸ್ವಾರ್ಥಕ್ಕಾಗಿಯೆ ಬಾಳುವ ಮಾನವನಿಂದು ಪ್ರಕೃತಿಯ ಸರ್ವನಾಶದಲ್ಲಿ ತೊಡಗಿದ್ದಾನೆ.  ವಾಯು, ಜಲ, ಶಬ್ಧ ಮುಂತಾದ ಮಾಲಿನ್ಯಗಳಿಂದ ಪ್ರಕೃತಿಯ ಸೊಬಗನ್ನುಕಂಗೆದಿಸಿದ್ದಾನೆ.  ಪ್ರಕೃತಿಯಲ್ಲಿ ನೆಮ್ಮದಿಯ ಬದುಕು ಇಲ್ಲಂತಹ ವಾತವರಣ ಉಂಟುಮಾಡಿದ್ದೆ ಮಾನವನ ದೊಡ್ಡ ಸಾಧನೆ.
      ಪ್ರಕೃತಿಕ ವಿಕೋಪಗಳು ನಡೆದಕೂಡಲೆ ಎಚ್ಚೆತ್ತುಕೊಳ್ಳುವ ಮನುಷ್ಯ ನಂತರ ಅಲವತ್ತುಕೊಂಡರು ಅದರಿಂದ ನಡೆಯುವ ಪ್ರಯೋಜನ ಶುನ್ಯ.  ಆದ್ದರಿಂದ ಮಾನವನು ಕೇವಲ ತನ್ನ ಸ್ವಾರ್ಥಕಲ್ಲದೆ ಇತರ ಜೀವರಾಶಿಗಳ ಉಳಿತಿಗಾಗಿ ಪ್ರಕೃತಿಯ ಸಂರಕ್ಷಣೆಯನ್ನು ನಡೆಸುತ್ತ ದೇವರು ಕೊಟ್ಟಿರುವ ಸುಂದರ ಪ್ರಕೃಯಲ್ಲಿ ತನ್ನ ಜೀವನವನ್ನು ನಿರ್ವಹಿಸಬೇಕು.