ಸದಸ್ಯ:LULU MARJAN A/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾಜೀಕರಣದ ಒಂದು ದೃಶ್ಯ

ಸಾಮಾಜಿಕೀಕರಣ ಅಥವಾ ಸಮಾಜೀಕರಣ[ಬದಲಾಯಿಸಿ]

     ಸಮಾಜದ ರೂಢಿಗಳು ಹಾಗೂ ಸಿಧ್ದಾಂತಗಳನ್ನು ಆಂತರಿಕಗೊಳಿಸುವ ಪ್ರಕ್ರಿಯಯೇ ಸಾಮಾಜಿಕೀಕರಣ .ಸಾಮಾಜಿಕೀಕರಣ ಎಂಬುದು ದೈನಂದಿನ ಬದುಕಿನಲ್ಲಿ ಸದಾ ನಡೆಯುತ್ತಿರುವ ಒಂದು ಸಾಮಾಜಿಕ ವಿದ್ಯಮಾನ. ಒಂದು ನಾಡಿನ ಅಥವಾ ಸಮಾಜದ ಸಾಂಸ್ಕ್ರ್ತಿಕ ಹಾಗೂ ಸಾಮಾಜಿಕ ಮೂಲ್ಯಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಕೈಗೊಪ್ಪಿಸಲು ಸಾಮಾಜಿಕೀಕರಣ ಬಹು ಅಗತ್ಯವಾಗಿದೆ.ಮಾನವರು ತಮ್ಮ ಸಂಸ್ಕೃತಿಯನ್ನು ಕಲಿಯಲು ಮತ್ತು ಬದುಕಲು ಸಾಮಾಜಿಕ ಅನುಭವಗಳ ಅಗತ್ಯವಿದೆ;ಆ ಅನುಭವಗಳನ್ನು ಒದಗಿಸಿಕೊಡುವ ಪ್ರಕ್ರಿಯಕ್ಕೆ ಸಾಮಾಜಿಕಶಾಸ್ತ್ರದಲ್ಲಿ ಕರೆಯುವ ತಾಂತ್ರಿಕ ಹೆಸರೇ ಸಾಮಾಜಿಕೀಕರಣ.
   ತಾವು ಸೇರಿಕೊಂಡಿರುವ ಗುಂಪಿನ ಅಥವಾ ತಾವು ಬದುಕುತ್ತಿರುವ ಸಮುದಾಯದ ಜ್ಞಾನ, ಮೂಲ್ಯಗಳು ,ರೂಢಿಗಳು ಜನರು ಕಲಿಯುವ ರೀತಿಯೇ ಸಾಮಾಜಿಕೀಕರಣ.ಸಮಾಜೀಕರಣವನ್ನು ಸಮಾಜದ ಪ್ರಮುಖ ಕಾರ್ಯವಿಧಾನವೆಂದು ಪರಿಗಣಿಸಲಾಗಿದೆ ಏಕೆಂದರೆ ಒಂದು ಮಾಲಿಕನ ಅಥವಾ ಮನುಷ್ಯನ ಪಾತ್ರ ಮತ್ತು ವರ್ತನೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.ಸಮಾಜಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಒಬ್ಬ ವ್ಯಕ್ತಿಯ ಕ್ಷೇಮಕ್ಕೆ ಹಾಗೂ ಸಮಾಜದ ಉತ್ತಮ ಕಾರ್ಯನಿರ್ವಹಣೆಗೆ ಸಮಾಜೀಕರಣ ಒಂದು ಮೂಲಾಧಾರವಾಗಿದೆ- ಅದು ಸಮಾಜದ ಅವಿಭಾಜ್ಯ ಅಂಶವಾಗಿದೆ.ಸಾಮಾಜಿಕ ಜೀವನದಲ್ಲಿ ಮಾನವರನ್ನು ಕಾರ್ಯನಿರ್ವಹಿಸಲು ತಯಾರಿಸುವ ಪ್ರಕ್ರಿಯೆಯಾದ ಸಮಾಜೀಕರಣವು ಹಲವಾರು ಘಟಕಗಳು ಹೊಂದಿಕೊಂಡಿವೆ.
 ಸಮಾಜೀಕರಣದ ಒಂದು ಮುಖ್ಯ ಘಟಕವೇನೆಂದರೆ ,ಅದು ನಾವು ತಿಳಿಯದೆಯೇ , ನಮ್ಮ ಅರಿವಿಲ್ಲದೆಯೇ ಸದಾ ಆಗುತ್ತಿರುತ್ತದೆ.ಸಮಾಜೀಕರಣಕ್ಕೆ ಹೆಚ್ಚು ಗಮನಾರ್ಹವಾದ ಕೊಡುಗೆದಾರರು ತಂದೆ-ತಾಯಿಯರು,ಪೋಷಕರು, ಸ್ನೇಹಿತರು , ಒಡಹುಟ್ಟಿದವರು ,ಸಹ ಕೆಲಸಗಾರರು, ಸಾಮಾಜಿಕ ಮಾಧ್ಯಮ,  ಮುಂತಾದವರು. ಅದರಂತೆಯೇ ತಮ್ಮ ನಾಡಿನ ಸಂಸ್ಕೃತಿ- ಸಂಪ್ರದಾಯಗಳೂ ಮುಖ್ಯವಾದ ಪಾತ್ರ ವಹಿಸುತ್ತದೆ.

[[

]]

ದ್ವಿತೀಯ ಸಾಮಾಜಿಕೀಕರಣ

ಪ್ರಾಥಮಿಕ ಹಾಗೂ ದ್ವಿತೀಯ ಸಮಾಜೀಕರಣ[ಬದಲಾಯಿಸಿ]

      ಸಮಾಜೀಕರಣವು ಎರಡು ವರ್ಗಗಳಾಗಿ ಭಾಗಿಸಲಾಗಿದೆ-ಪ್ರಾಥಮಿಕ ಹಾಗೂ ದ್ವಿತೀಯ ಸಮಾಜೀಕರಣ.
ಪ್ರಾಥಮಿಕ  ಸಮಾಜೀಕರಣ : ಬದುಕಿನ ಪ್ರಾರಂಭಿಕ ಹಂತದಲ್ಲಿ ನಡೆಯುವ ಒಂದು ಪ್ರಕ್ರಿಯಯೇ ಪ್ರಾಥಮಿಕ  ಸಮಾಜೀಕರಣ. ಈ ರೀತಿಯ ಸಾಮಾಜಿಕೀಕರಣವು ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಹಾಗೂ ಹದಿವಯಸ್ಸಿನವ

ರಲ್ಲಿ ನಡೆಯುತ್ತದೆ.ಪ್ರಾಥಮಿಕ ಸಮಾಜೀಕರಣಕ್ಕೆ ಮಕ್ಕಳ ಜೈವಿಕ ಅಥವಾ ಶಾರೀರಿಕ ಬದಲಾವಣೆಗಳೂ ಒಂದು ಘಟಕವಾಗಿದೆ. ಆಗ ಸಂಬಂಧಗಳು ಹೆಚ್ಚಾಗಿ ವೈಕಾರಿಕ -ಮಾನಸಿಕ ಸ್ವಭಾವದಿಂದ ಕೂಡಿರುತ್ತದೆ.

'ದ್ವಿತೀಯ ಸಮಾಜೀಕರಣ : ಬದುಕಿನ ಉದ್ದಕ್ಕೂ ,ಎಲ್ಲಾ ಹಂತಗಳಲ್ಲೂ  ನಡೆಯುವ ವಿದ್ಯಮಾನವು ದ್ವಿತೀಯ ಸಮಾಜೀಕರಣ.ಒಂದು ಮಗುವಾದಾಗಲೂ ,ಬದುಕಿನ ಹಲವಾರು ಬೇರೆ ಹಂತಗಳಲ್ಲಿ ಅಥವಾ ಗುಂಪುಗಳಲ್ಲಿ ಸೇರುತ್ತಿರುವಾಗಲೂ ಈ ಸಮಾಜೀಕರ ಣ ನಡೆಯುತ್ತಲೇ ಇರುತ್ತದೆ.
  ಹಾಗೆಯೇ [[ಜೆಫ಼್ರಿ ಆರ್‍ನೆಟ್ಟ್ಎಂಬ ಪ್ರಸಿದ್ಧ ಮನಶ್ಶಾಸ್ತ್ರಜ್ಞ ಹಾಗೂ ಸಮಾಜಿಕಶ್ಶಾಸ್ತ್ರಜ್ಞರು, ಸಮಾಜೀಕರಣವನ್ನು ಮತ್ತೊಂದು ಕನ್ನಡಿಯಿಂದ ತೋರಲು ಪ್ರಯತ್ನಿಸುತ್ತಾರೆ. ಅವರು ಸಾಮಾಜಿಕೀಕರಣವನ್ನು ವಿಶಾಲ ಸಮಾಜಿಕೀಕರಣ ಮತ್ತು ಕಿರಿದಾದ ಸಮಾಜಿಕೀಕರಣ ಎಂದು ವರ್ಗೀಕರಿಸಲಾಗಿದೆ.

ವಿಶಾಲ ಸಮಾಜಿಕೀಕರಣ(ಬ್ರಾಡ್ ಸೋಶ್ಯಲೈಸಾಷನ್): ವಿಶಾಲ ಸಮಾಜಿಕೀಕರಣವು ವ್ಯಕ್ತಿ ಸ್ವಾತಂತ್ರ್ಯವನ್ನು, ಸ್ವಯಂ ಅಭಿವ್ಯಕ್ತಿಯನ್ನು ಪ್ರಚಾರ ಮಾಡುತ್ತದೆ.ವಿಶಾಲ ಫ಼ಲಿತಾಂಶವನ್ನು ಪಡೆಯಬಹುದು ಎಂಬ ಕಾರಣದಿಂದಾಗಿ ಇದಕ್ಕೆ ಈ ಹೆಸರು ಸಿಕ್ಕಲಾಗಿದೆ. ಕಿರಿದಾದ ಸಮಾಜಿಕೀಕರಣ(ನ್ಯಾರೋ ಸೋಶ್ಯಲೈಸಾಷನ್) : ಕಿರಿದಾದ ಸಮಾಜಿಕೀಕರಣವು ವಿಧೇಯತೆ - ಅನುಸರಣೆಯನ್ನು ಪ್ರಚಾರ ಮಾಡುತ್ತದೆ.ಆದರೂ ಸಾಮಾಜಿಕೀಕರಣವು ಬರೀ ಈ ಎರಡೇ ರೀತಿಯಲ್ಲಿ ಮಾತ್ರ ನಡೆಯುವುದು ಎಓದು ತಿಳಿಯುವುದು ಸರಿಯಲ್ಲ.ಹಲವಾರು ಸಲ ಇವೆರಡರ ಸಂಯೋಜನೆಯೇ ಸಮಾಜೀಕರಣದ ರೂಪವಾಗುತ್ತದೆ.

   ಆರ್‍ನೆಟ್ಟ್‌ರವರು ಸಮಾಜೀಕರಣವು ನಡೆಯುವ ವ್ಯತ್ಯಾಸಗಳ ಬಗ್ಗೆ ಹೇಳುವಾಗ, ಲಿಂಗ ವ್ಯತ್ಯಾಸವೂ ಒಂದು ಘಟಕವೆಂದು ವಾದಿಸುವರು.ಉದಾಹರಣೆಗೆ , ಅವರ ಪ್ರಕಾರ ಸ್ತ್ರೀಯ ಸಮಾಜೀಕರಣ್ವು ಪುರುಷನಿಗಿಂದ ಕಿರಿದಾದ ರೂಪವು ಹೋಂದುತ್ತದೆ.

ಸಾಮಾಜಿಕೀಕರಣ - ಸಮಾಜಶಾಸ್ತ್ರದ ಪರಿಕಲ್ಪನೆ[ಬದಲಾಯಿಸಿ]

   ಸಾಮಾಜಿಕೀಕಣವು ಕೇವಲ ಸಮಾಜಶಾಸ್ತ್ರದ ಕ್ಷೇತ್ರದಲ್ಲಿ ಮಾತ್ರ ಅಲ್ಲ, ಮನೋವಿಜ್ಞಾನದ ಕ್ಷೇತ್ರದಲ್ಲೂ ಅಧ್ಯಯನ ಮಾಡುತ್ತಿರುವ ಒಂದು ವಿಷಯವಾಗಿದೆ. ವಿಶೇಷವಾಗಿ ಸಮಾಜಶಾಸ್ತ್ರದ ದೃಷ್ಟಿಕೋನದಿಂದ ನೋಡಿದರೆ ಹಲವಾರು ಸಂಶೋಧಕರು ಇದರ ಬಗ್ಗೆ ಆಳವಾದ ಸಂಶೋಧನೆಗಳನ್ನು ಮಾಡಿದ್ದಾರೆ, ಇಂದಿಗೂ ಮಾಡುತ್ತಿದ್ದಾರೆ. ಹೀಗೆ ಸಂಶೋಧನೆಗಳನ್ನು ಮಾಡಿ ಸಮಾಜಶಾಸ್ತ್ರಕ್ಕೆ ಮಹಾನ್ ಕೊಡುಗೆ ನೀಡಿದವರು ಸಿಗ್ಮಂಡ್ ಫ್ರಾಯ್ಡ್, ಜೀನ್ ಪಿಯಾಗೆಟ್,ಲಾರೆನ್ಸ್ ಕೋಲ್ಬರ್ಗ್, ಕರೋಲ್ ಗಿಲ್ಲಿಗನ್ಸ್, ಜಾರ್ಜ್ ಹರ್ಬರ್ಟ್ ಮೀಡ್ ಮತ್ತು ಎರಿಕ್ ಹೆಚ್ ಎರಿಕ್ಸನ್.ಈ ಮಹಾನ್ ವ್ಯಕ್ತಿಗಳು ನೀಡಿದ ಕೋಡುಗೆಯಿಂದಾಗಿ ಮಾನವಿಕ ಅಭಿವೃಧ್ದಿಯ ಬಗ್ಗೆಯ ತಿಳುವಳಿಕೆಗೆ ಮುಖ್ಯ ಅಂಶವಾಗಿದೆ. ಇವರು ಸಾಮಾಜಿಕೀಕರಣ ಎಂಬ ಪ್ರಕ್ರಿಯೆಯು ಹಲವಾರು ಸಾಮಾಜಿಕ ಪ್ರಯೋಗಗಳ ಮೂಲಕ ಪರೀಕ್ಷಿಸಿ ಅಧ್ಯಯನ ಮಾಡುತ್ತಾರೆ. ಸಮಾಜದಲ್ಲಿನ ದೈನಂದಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ , ಹಲವಾರು ದೃಷ್ಟಿಕೋನಗಳಿಂದ ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಅನ್ವೇಷಿಸಿ , ಅದರಿಂದಾಗಿ ಪಡೆದ ಮಾಹಿತಿಯಂತೆ ಸಾಮಾನ್ಯೀಕರಿಸಿ ಸಮಾಜಶಾಸ್ತ್ರದ ಸಿಧ್ಡಾಂತಗಳನ್ನು ರೂಪಿಸುವರು.

ಸಾಮಾಜೀಕರಣದ ಕರ್ತರು[ಬದಲಾಯಿಸಿ]

             ಸಾಮಾಜಿಕೀಕರಣವು ಸಂಕೀರ್ಣ ಪ್ರಕ್ರಿಯೆ - ಸುಲಭವಾಗಿ ಅದರ ಕಾರ್ಯಗಳು ತಿಳಿಯುವುದು ಸಾಧ್ಯವಲ್ಲ.ಆದರೂ ಸಮಾಜೀಕರಣದ ಕರ್ತರು ಎಂದು ಸಮಾಜಶಾಸ್ತ್ರಜ್ಞರು ಕೆಲವನ್ನ ಉದ್ಧೇಶಿಸಿ ಹೇಳುವರು. ಅವುಗಳಲ್ಲಿ , ಕುಟುಂಬ , ಮಾಧ್ಯಮಗಳು , ಗೆಳೆತಿ - ಗೆಳೆಯರು , ಶಾಲೆಗಳು , ಆಯಾ ಧರ್ಮಗಳು ಮುಖ್ಯ ಘಟಕಗಳು ಆಗಿವೆ.ಅದರಂತೆಯೇ ದೈನಂದಿನ ಬದುಕಿನಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳೂ ಕೂಡ. ಪ್ರತಿ ಸಾಮಾಜಿಕ ಅನುಭವವವೂ ಕನಿಷ್ಠ ಒಂದು ಸಣ್ಣ ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತೇವೆ.
ಕುಟುಂಬ : ಶಿಶುಗಳು ಆರೈಕೆಗಾಗಿ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ .ಅವರಿಗೆ ಸುರಕ್ಷಿತ ಮತ್ತು ಕಾಳಜಿಯುಳ್ಳ ಪರಿಸರವನ್ನು ಒದಗಿಸುವ ಜವಾಬ್ದಾರಿಯು ಪೋಷಕರದು ಹಾಗೂ ಇತರ ಕುಟುಂಬ ಸದಸ್ಯರದಾಗಿದೆ.ಹಲವಾರು ವರ್ಷಗಳಿಗೆ -ಅಥವಾ ಮಕ್ಕಳು ಶಾಲೆಗೆ ಹೋಗುವ ತನಕವಾದರೂ ಅವರಿಗೆ ಕೌಶಲ್ಯ, ಮೌಲ್ಯಗಳು,ಮತ್ತು ನಂಬಿಕೆಗಳು ಕಲಿಸುವುದು ಕುಟುಂಬದ ಕರ್ತವ್ಯ.ಒಟ್ಟಾರೆಯಾಗಿ, ಒಂದು ಸಂತೋಷವಾನದ, ಸರಿಹೊಂದಿದ ಮಗುವನ್ನು ಸೃಷ್ಟಿಸಲು ಪ್ರೀತಿಸುವ ಕುಟುಂಬಕ್ಕಾಗುವುದಂತೆ ಬೇರೊಂದಿಗೂ ಸಾಧ್ಯವಲ್ಲ ಎಂದು ಸಂಶೋಧನೆಗಳು ಹೇಳುತ್ತಿವೆ(ಗಿಬ್ಸ್ ೨೦೦೧).
ಶಾಲೆ : ಶಾಲೆಯು ಮಕ್ಕಳ  ಸಾಮಾಜಿಕ ಜಗತ್ತನ್ನು ವಿಸ್ತರಿಸುತ್ತದೆ.ಅಲ್ಲಿ ಅವರು ವಿವಿಧ ಹಿನ್ನೆಲೆಗಳಿಂದ ಬರುವ ಜನರನ್ನು ಎದುರಿಸ ಬೇಕಾಗುತ್ತದೆ. ಹಾಗೆಯೇ ಬದುಕಿನ ಬಗ್ಗೆ ವಿಶಾಲವಾದ ತಿಳುವಳಿಕೆ ಉಂಟಾಗುತ್ತದೆ.ಮಕ್ಕಳು ತಮ್ಮದೇ ಆದ ಸಂಬಂಧವನ್ನು ಹೇಗೆ ರೂಪಿಸಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ.
   ಹೀಗೆಯೇ ಬದುಕಿನಲ್ಲಿ ನಾವು ಎದುರಿಸುವ ಪ್ರತಿಯೊಬ್ಬರೂ, ಪ್ರತಿ ಘಟನೆಯೂ ನಮ್ಮ ಸಾಮಾಜಿಕೀಕರಣಕ್ಕೆ ನಾವು ತಿಳಿಯದೆಯೇ ಭಾಗವಾಗುತ್ತದೆ.ಇವೆಲ್ಲವೂ ನಮ್ಮಲ್ಲಿ ಪ್ರಭಾವವನ್ನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೋಂದಿದೆ.

ಉಲ್ಲೇಖ

ಸಾಮಾಜಿಕ ಒಪ್ಪಂದ

ಸಮಾಜ

ಸಮಾಜಿಕೀಕರಣ (ಆಂಗ್ಲ ಭಾಷೆಯಲ್ಲಿ)

ಸಮಾಜಿಕ ಸಂಬಂಧಗಳು