ಸದಸ್ಯ:Koushik rajesh/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಹ್ಮೋಸ್ ಕ್ಷಿಪಣಿ(BrahMos missile)[ಬದಲಾಯಿಸಿ]

ಬ್ರಹ್ಮೋಸ್

ಬ್ರಹ್ಮೋಸ್ ಒಂದು ಮಧ್ಯಮ ಶ್ರೇಣಿಯ ಕ್ಷಿಪಣಿ. ಬ್ರಹ್ಮೋಸ್ ಕ್ಷಿಪಣಿಯು ಧ್ವನಿಯ ವೇಗವನ್ನು ಮೀರಿಸುವ ವೇಗವಿರುವ ಕ್ಷಿಪಣಿ. ಇದನ್ನು ಜಲಾಂತರ್ಗಾಮಿ ನೌಕೆ ,ಹಡಗು ಮತ್ತು ವಿಮಾನದಿಂದ ಉಡಾಯಿಸಬಹುದು.ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತದ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಮತ್ತು ರಷ್ಯನ್ ಒಕ್ಕೂಟಗಳ ಎನ್.ಪಿ.ಓ ಮಶಿನೋಸ್ಟ್ರೋಯೇನಿಯದ ಜಂಟಿ ಉದ್ಯಮದಿಂದ ರೂಪುಗೊಳಿಸಲಾಗಿದೆ.

ಮೂಲ[ಬದಲಾಯಿಸಿ]

ಇದು ರಷ್ಯಾದ ಪಿ-೮೦೦ ಓನಿಕ್ಸ್ ಕ್ಷಿಪಣಿ ಮತ್ತು ಇತರ ರಷ್ಯಾದ ತಂತ್ರಜ್ನಾನದ ಮೇಲೆ ಅವಲಂಬಿತವಾಗಿದೆ.ಬ್ರಹ್ಮೋಸ್ ಎಂಬ ಹೆಸರನ್ನು ಭಾರತದ  ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋ ನದಿಯಿಂದ ಇಡಲಾಗಿದೆ. ಬ್ರಹ್ಮೋಸ್ ಕಾರ್ಯಾಚಣೆಯಲ್ಲಿರುವ ವಿಶ್ವದ ಅತ್ಯಂತ ವೇಗವಾದ ಕ್ಷಿಪಣಿ. ಈ ಕ್ಷಿಪಣಿ ೩.೦ ಮ್ಯಾಕ್ ವೇಗದಲ್ಲಿ ಚಲಿಸುತ್ತದೆ.(೧ ಮ್ಯಾಕ್ = ಗಂಟೆಗೆ ೧೧೯೫ ಕಿ.ಮೀ ವೇಗ) . ಈ ಕ್ಷಿಪಣಿ ಗರಿಷ್ಟ ೧೪೦೦೦ ಮೀಟರ್ ಎತ್ತರಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ.[೧]

ಬಿ.ಎ.ಟಿ.ಎಲ್ ಭಾರತದ ಸರ್ಕಾರಿ ಸಂಸ್ಥೆಯನ್ನು ೨೦೦೮ ರಲ್ಲಿ ಬ್ರಹ್ಮೋಸ್ ಕಾರ್ಪೊರೇಷನ್ ಸ್ವಾಧೀನಪಡಿಸಿಕೊಂಡಿತು. ಬ್ರಹ್ಮೋಸ್ ಘಟಕಗಳನ್ನು ತಯಾರಿಸಲು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಸಂಯೋಜಿಸಲು ಸುಮಾರು ೧೫ ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಲಾಗುತ್ತದೆ. ಭಾರತೀಯ ಸೇನೆ ಮತ್ತು ನೌಕಾಪಡೆಗೆ ಈ ಕ್ಷಿಪಣಿಯ ಅವಶ್ಯಕತೆ ಇದ್ದರಿಂದ ಅನಿವಾರ್ಯವಾಯಿತು. ರಷ್ಯಾ ದೇಶವು ಜೆಟ್ ಇಂಜಿನ್ ಮತ್ತು ರೇಡಾರ್ ವ್ಯವಸ್ಠೆ ಸೇರಿದಂತೆ ಬ್ರಹ್ಮೋಸ್ನ ೬೫% ಘಟಕಗಳನ್ನು ರಷ್ಯಾ ಸರಬರಾಜು ಮಾಡಿದೆ. ೬೫%ನಷ್ಟು ಕ್ಷಿಪಣಿಯನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ ಮತ್ತು ಇದನ್ನು ಭಾರತೀಯ ನಿರ್ಮಿತ ವಸ್ಥುಗಳಿಂದ ಬದಲಿಸುವ ಮೂಲಕ ೮೫% ಗೆ ಹೆಚ್ಚಿಸುವ ಯೋಜನೆಗಳಿವೆ.

ಅಭಿವೃದ್ದಿ[ಬದಲಾಯಿಸಿ]

  ಬ್ರಹ್ಮೋಸ್ ಕ್ಷಿಪಣಿಯನ್ನು ೧೨ ಜೂನ್ ೨೦೦೪ರಲ್ಲಿ ಚಂದಿಪುರದಲ್ಲಿನ ಸಂಯೋಜಿತವಾದ ಪರೀಕ್ಷಾ ಶ್ರೇಣಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ೫ ಮಾರ್ಚ್ ೨೦೦೮ರಲ್ಲಿ ಭೂ ದಾಳಿಯ ಆವೃತ್ತಿಯ ಕ್ಷಿಪಣಿಯನ್ನು ಐ.ಎನ್.ಎಸ್.ರಜಪೂತ ಹಡಗಿನಿಂದ ಪರೀಕ್ಷಿಸಲಾಯಿತು. ಬ್ರಹ್ಮೋಸ್ ಕ್ಷಿಪಣಿಯು ನಿರ್ದಿಷ್ಟ ಗುರಿಯನ್ನು ಶೇ ೧೦೦ ರಷ್ಟು ನಿಖರತೆಯಿಂದ ತಲುಪುವಲ್ಲಿ ಯಶಸ್ವಿಯಾಗಿದೆ. ಜಲಾಂತರ್ಗಾಮಿ ಆವೃತ್ತಿಯ ಕ್ಷಿಪಣಿಯನ್ನು ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಮೊದಲ ಬಾರಿಗೆ ಮಾರ್ಚ್ ೨೦ ೨೦೧೩ರಲ್ಲಿ ಮಾಡಲಾಯಿತು. ಕ್ಷಿಪಣಿವನ್ನು ೫೦ ಮೀಟರ್ ಆಳದಿಂದ ಉಡಾಯಿಸಬಹುದು. ಭವಿಷ್ಯದಲ್ಲಿ ನಿರ್ಮಿಸಲಾಗುವ ಭಾರತೀಯ ಜಲಾಂತರ್ಗಾಮಿ ನೌಕೆಗಳಲ್ಲಿ ಸಣ್ಣ ಕ್ಷಿಪಣಿಗಳನ್ನು ಹೊಂದಿರುವುದಾಗಿ ರಷ್ಯಾ ದೃಡಪಡಿಸಿದೆ. ನಂತರದ ದಿನಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಬ್ರಹ್ಮೋಸ್ ಎ, ಬ್ರಹ್ಮೋಸ್ ೨, ಬ್ರಹ್ಮೋಸ್ ಎನ್.ಜಿ ಎಂದು ಹೊಸ ರೂಪ ನೀಡುವುದರ ಮೂಲಕ ಮಾರ್ಪಡಿಸಲಾಯಿತು.[೨]

ಬ್ರಹ್ಮೋಸ್-೨ ಕ್ಷಿಪಣಿಯು ಪ್ರಸ್ತುತ ಅಭಿವೃದ್ಧಿಯ ಅಡಿಯಲ್ಲಿದ್ದು ೨೯೦ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವುದಾಗಿ ಅಂದಾಜಿಸಲಾಗಿದೆ.ಬ್ರಹ್ಮೋಸ್ನಂತೆ, ಬ್ರಹ್ಮೋಸ್ ೨ ರ ಶ್ರೇಣಿಯು ಎಂ.ಟಿ.ಸಿ.ಆರ್ಗೆ ಅನುಗುಣವಾಗಿ ೨೯೦ ಕಿ.ಮೀಗೆ ವ್ಯಾಪಿಸುವಷ್ಟು ಸೀಮಿತವಾಗಿದೆ. ಮ್ಯಾಕ್ ೭ ರ ವೇಗದಲ್ಲಿ ಇದು ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ವೇಗವನ್ನು ದ್ವಿಗುಣಗೊಳಿಸುತ್ತದೆ, ಬ್ರಹ್ಮೋಸ್ ಎನ್.ಜಿ ಬ್ರಹ್ಮೋಸ್-೨ ಕ್ಷಿಪಣಿಯನ್ನು ಬದಲಿಸುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.[೩]

ಬ್ರಹ್ಮೋಸ್ ಎನ್.ಜಿ[ಬದಲಾಯಿಸಿ]

ಬ್ರಹ್ಮೋಸ್ ಮತ್ತು ಬ್ರಹ್ಮೋಸ್-ಎನ್ಜಿ ನಡುವಿನ ಗಾತ್ರದ ಹೋಲಿಕೆ

ಬ್ರಹ್ಮೋಸ್ ಎನ್.ಜಿ ಅಸ್ತಿತ್ವದಲ್ಲಿರುವ ಬ್ರಹ್ಮೋಸ್ ಅನ್ನು ಆಧರಿಸಿದ ಮಿನಿ ಆವೃತ್ತಿಯಾಗಿದ್ದು ೨೯೦ ಕಿ.ಮೀ ವ್ಯಾಪ್ತಿ ಮತ್ತು ೩.೫ ಮ್ಯಾಕ್ ವೇಗವನ್ನು ಹೊಂದಿದೆ ಆದರೆ ಇದು ಸುಮಾರು ೧.೫ ಟನ್, ೫ ಮೀಟರ್ ಉದ್ದ ಮತ್ತು ೫೦ ಸೆಂಟಿಮೀಟರ್ ವ್ಯಾಸವನ್ನು ಹೊಂದಿದೆ,ಬ್ರಹ್ಮೋಸ್ ಎನ್.ಜಿ ಅದರ ಪೂರ್ವವರ್ತಿಯೊಂದಿಗೆ ಹೋಲಿಸಿದರೆ ಕಡಿಮೆ ರೇಡಾರ್ ಕ್ರಾಸ್ ವಿಭಾಗವನ್ನು ಹೊಂದಿದೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.ಈ ಕ್ಷಿಪಣಿ ಸುಖೋಯ್, ಹೆಚ್.ಏ.ಎಲ್ ತೇಜಸ್ ಮತ್ತು ರಫೆಲ್ ಯುದ್ಧ ವಿಮಾನಗಳಲ್ಲಿ ಶಸ್ತ್ರಸಜ್ಜಿತವಾಗಲಿದೆ. ಸುಖೋಯ್ ಯುದ್ಧ ವಿಮಾನ ಮೂರು ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರಲಿದೆ ಆದರೆ ಇತರ ಯುದ್ಧ ವಿಮಾನಗಳು ಒಂದೊಂದು ಕ್ಷಿಪಣಿಯನ್ನು ಹೊತ್ತೊಯ್ಯುತ್ತದೆ.[೪]

ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ[ಬದಲಾಯಿಸಿ]

ಬ್ರಹ್ಮೋಸ್ ಐದು ಮೀಟರ್ ಎತ್ತರದಲ್ಲಿ ಹಾರುವ ಮೂಲಕ ತನಗೆ ನಿಶ್ವಯಿಸಿದ ಗುರಿಯನ್ನು ಧ್ವಂಸ ಮಾಡುವ ಶಕ್ತಿಯನ್ನು ಹೊಂದಿದೆ. ರಷ್ಯಾದ ಕೆ.ಹೆಚ್ ೫೫೫ ಮತ್ತು ಕೆ.ಹೆಚ್ ೧೦೧ ಸುದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ಜಿಪಿಎಸ್ ಗ್ಲೋನಾಸ್ ತಂತ್ರಜ್ಞಾನವನ್ನು ಬ್ರಹ್ಮೋಸ್ ಕ್ಷಿಪಣಿಗೆ ೨೦೧೩ರಲ್ಲಿ ಆಳವಡಿಸಲಾಗಿತ್ತು. ಫೆಬ್ರವರಿ ೨೦೧೧ರಲ್ಲಿ ಭಾರತೀಯ ಸೈನ್ಯ ಬ್ರಹ್ಮೋಸ್ ಕ್ಷಿಪಣಿಗಳಿಗಾಗಿ ಬ್ರಹ್ಮೋಸ್ ಏರೋಸ್ಪೇಸ್ ೪ ಬಿಲಿಯನ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ೨೦೧೩ರ ಅನ್ವಯ ಬ್ರಹ್ಮೋಸ್ ಕ್ಷಿಪಣಿಗಳಿಗಾಗಿ ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯಿಂದ ಮಾಡಲ್ಪಟ್ಟ ಆದೇಶಗಳ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಬ್ರಹ್ಮೋಸ್ ಏರೋಸ್ಪೇಸ್, ಬ್ರಹ್ಮೋಸ್ ಎನ್ ೧ ಕ್ಷಿಪಣಿಗೆ ಲಾಂಚರ್ ಘಟಕವನ್ನು ಅಭಿವೃದ್ದಿಪಡಿಸಲಾಗಿದೆ. ಶತ್ರುಪಡೆಗಳ ಆಧುನಿಕ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಯುದ್ಧನೌಕೆಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಬ್ರಹ್ಮೋಸ್ ಹೊಂದಿದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. http://www.brahmos.com/content.php?id=1&sid=2
  2. http://articles.timesofindia.indiatimes.com/2010-09-06/india/28219118_1_brahmos-block-ii-cruise-missile-conventional-warhead
  3. https://web.archive.org/web/20150923213332/http://www.defencenow.com/news/858/drdo-private-industry-collaboration-creates-gps-receiving-module-g3om-for-military-operations.html
  4. https://www.ainonline.com/aviation-news/defense/2018-04-19/india-displays-big-missiles-defense-show
  5. http://www.navyrecognition.com/index.php?option=com_content&task=view&id=3512